Breaking News

LOCAL NEWS

ಬೆಳಗಾವಿಯಲ್ಲಿ ಬೀದಿ ಕಾಮಣ್ಣನಿಗೆ ಧರ್ಮದೇಟು….!!!

ಬೆಳಗಾವಿ – ಯುವತಿಯನ್ನ ಚೂಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಹಿಗ್ಗಾ ಮಗ್ಗಾ ಥಳಿಸಿದ ಘಟನೆ ಬೆಳಗಾವಿಯ ಶಿವಾಜಿ ನಗರದಲ್ಲಿ ನಡೆದಿದೆ. ರಸ್ತೆಯಲ್ಲಿ ಓಡಾಡುವಾಗ ಯುವತಿಯನ್ನ ಚೂಡಾಯಿಸುತ್ತಿದ್ದ ದೆಹಲಿ ಮೂಲದ ಫೀರೋಜ್ ಎಂಬಾತ ಯುವತಿಯರನ್ನು ಚುಡಾಯಿಸುತ್ತಿರುವಾಗ ಇಂದು ಬೆಳಗ್ಗೆ ಸ್ಥಳೀಯ ಯುವಕರು ಗಮನಿಸಿದ್ದಾರೆ ಫೀರೋಜ್ ಗೆ ಹಿಡಿದು ಯುವತಿಯ ಕಾಲಿಗೆ ಬೀಳಿಸಿ ಧರ್ಮದೇಟು ನೀಡಿದ ಸ್ಥಳೀಯರು ಹಿಗ್ಗಾ ಮಗ್ಗಾ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ …

Read More »

ಉಮೇಶ್ ಕತ್ತಿ,ಬಾಲಚಂದ್ರ ಜಾರಕಿಹೊಳಿ ಸಾಥ್ ಸಾಥ್ ಹೈ….!!!!

ಮಂತ್ರಿಗಿರಿಗೆ ಜೋರ್ ದಾರ್ ಲಾಬಿ,ಉಮೇಶ್ ಕತ್ತಿ ಬೆನ್ನಿಗೆ ನಿಂತಿರುವ ಬಾಲಚಂದ್ರ ಜಾರಕಿಹೊಳಿ…!!!! ಬೆಳಗಾವಿ-ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಚಿವ ಸಂಪುಟದ ವಿಸ್ತರಣೆ ಕುರಿತು ಬಿಜೆಪಿ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಪಡೆಯಲು ಇಂದು ಅಥವಾ ನಾಳೆ ದೆಹಲಿಗೆ ತೆರಳಲಿರುವ ಹಿನ್ನಲೆಯಲ್ಲಿ ಮಂತ್ರಿ ಪಟ್ಟಕ್ಕಾಗಿ ಜೋರ್ ದಾರ್ ಲಾಭಿ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯಿಂದ ಅಥಣಿ ಶಾಸಕ ಮಹೇಶ್ ಕುಮಟೊಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಪ್ರಬಲ ನಿಗಮ ಮಂಡಳಿಗಳನ್ನು …

Read More »

ಬೆಳಗಾವಿ ಯುನಿವರ್ಸಿಟಿಗೆ ಬೆಂಗಳೂರಿನ ಸಿಂಡಿಕೇಟ್ ಸದಸ್ಯ…ಬೆಳಗಾವಿ ಜಿಲ್ಲೆಗೆ ಅನ್ಯಾಯ

ಚೆನ್ನಮ್ಮ ಯನಿವರ್ಸಿಟಿ ಸಿಂಡಿಕೇಟ್ ಸದಸ್ಯರ ನೇಮಕ ಬೆಳಗಾವಿ ಜಿಲ್ಲೆಗೆ ಕೇವಲ ಒಂದು ಸ್ಥಾನ ಬೆಳಗಾವಿ- ರಾಜ್ಯದಲ್ಲಿರುವ ಎಲ್ಲ ವಿಶ್ವ ವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿ ಮಾನ್ಯ ರಾಜ್ಯಪಾಲರು ಆದೇಶ ಹೊರಡಿಸಿದ್ದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಬೆಳಗಾವಿ ಜಿಲ್ಲೆಯ ಏಕೈಕ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದ್ದು ಉಳಿದ ಎಲ್ಲ ಸಿಂಡಿಕೇಟ್ ಸದಸ್ಯರು ಹೊರ ಜಿಲ್ಲೆಯವರಾಗಿದ್ದು ಈ ವಿಷಯದಲ್ಲಿ ಬೆಳಗಾವಿ ಜಿಲ್ಲೆಗೆ ಸರ್ಕಾರ ಮತ್ತು ರಾಜ್ಯಪಾಲರು ಭಾರೀ ಅನ್ಯಾಯ …

Read More »

ಬೆಳಗಾವಿಯಲ್ಲಿ ತ್ರಿವಳಿ ತಲಾಕ್…ಮಕ್ಕಳೊಂದಿ ಗಂಡನ ಮನೆ ಎದುರು ಅಹೋ ರಾತ್ರಿ ಧರಣಿ….!!

ಬೆಳಗಾವಿಯಲ್ಲಿ ತ್ರಿವಳಿ ತಲಾಕ್…ಮಕ್ಕಳೊಂದಿ ಗಂಡನ ಮನೆ ಎದುರು ಅಹೋ ರಾತ್ರಿ ಧರಣಿ….!! ಬೆಳಗಾವಿ- ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ನಿಷೇಧಿಸಿದ ಬಳಿಕ ಬೆಳಗಾವಿಯ ವೀರಭದ್ರ ನಗರದಲ್ಲಿ ತಲಾಕ್ ಪ್ರಕರಣ ಸದ್ದು ಮಾಡಿದೆ. ಗಂಡನಿಂದ ತಲಾಕ್ ಪಡೆದಿರುವ ಮಹಿಳೆಯೊಬ್ಬಳು ತನ್ನ ಮೂರು ಮಕ್ಕಳೊಂದಿಗೆ ತಲಾಕ್ ಕೊಟ್ಟ ಗಂಡನ ಮನೆಯ ಎದುರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾಳೆ ಧರಣಿ ನಡೆಸುತ್ತಿರುವ ಮಹಿಳೆಗೆ ಪೋಲೀಸರು ರಕ್ಷಣೆ ಕೊಟ್ಟರೂ ಸಹ ಭಂಡ ಗಂಡ ಮಾತ್ರ ಬಾಗಿಲು …

Read More »

ಸುಲಿಗೆಕೋರರ ಅರೆಸ್ಟ …ಬೈಕ್ ಚಿನ್ನಾಭರಣ ಅಟೋ ಜಪ್ತಿ ಮಾರಿಹಾಳ ಪೋಲೀಸರಿಂದ ಭರ್ಜರಿ ಬೇಟೆ

ಬೆಳಗಾವಿ- ಮಾರಿಹಾಳ ಪೋಲೀಸ್ ಠಾಣೆಯ ಹದ್ದಿಯಲ್ಲಿ,ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಸುಲಿಗೆ,ಕಳ್ಳತನಾಡುತ್ತಿದ್ದ ಸುಲಿಗೆಕೋರರ ಗ್ಯಾಂಗ್ ಮಾರಿಹಾಳ ಪೋಲೀಸರ ಬಲೆಗೆ ಬಿದ್ದಿದೆ. ಸುಲಿಗೆ,ಮನೆಗಳ್ಳತನ,ಬೈಕ್ ಕಳ್ಳತನ,ಅಟೋ ಕಳುವು ಮಾಡಿದ್ದ ಸುಲಿಗೆಕೋರರು ಬೆಳಗಾವಿ – ಗೋಕಾಕ್ ರಸ್ತೆಯಲ್ಲಿ,ಸಾರ್ವಜನಿಕರಿಂದ ಆಭರಣ,ಹಣ ಸುಲಿಗೆ ಮಾಡುತ್ತಿದ್ದ ಆರೋಪಿತರಾದ ರಾಮಪ್ಪಾ ಹುಲೆಪ್ಪಾ ಕರಿಹಾಳ(,20,) ಉದ್ಯಮಬಾಗ ವಾಲ್ಮೀಕಿ ನಗರ,,ವಾಂಡ ಬಸ್ಯಾ ಉರ್ಪ ಬಸಪ್ಪ ಹುಲೆಪ್ಪ ಕರೀಹಾಳ,(21) ಉದ್ಯಮಬಾಗ ವಾಲ್ಮೀಕಿ ನಗರ ,ಸಂತೋಷ ಉರ್ಪ ಸಂತ್ಯಾ ಮನೋಹರ ಕಾಂಬಳೆ,(22) ಜೈತುನ ಮಾಳ ಉದ್ಯಮಬಾಗ ,ಸನೀಲ …

Read More »

ನಾನಾಗಲಿ ನನ್ನ ಅಳಿಯಂದಿರಾಗಲಿ ಬ್ರಷ್ಟಾಚಾರ ಮಾಡಿಲ್ಲ-ರಮೇಶ್ ಜಾರಕಿಹೊಳಿ

ಬೆಳಗಾವಿ -ನಾನಾಗಲಿ ನನ್ನ ಅಳಿಯಂದರಾಗಲಿ ಗೋಕಾಕಿನ ನಗರಸಭೆಯಲ್ಲಿ ಬ್ರಷ್ಟಾಚಾರ ಮಾಡಿಲ್ಲ ಈ ಬಗ್ಗೆ ಬೇಕಾದ್ರೆ ತನಿಖೆ ಆಗಲಿ ಎಂದು ಗೋಕಾಕ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಗೋಕಾಕ್‌ನಲ್ಲಿ ಒತ್ತಾಯಿಸಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ‌ ಇಂದು ಗೋಕಾಕಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಇಂದು ಸಂಜೆ ಬೆಂಗಳೂರಿಗೆ ತೆರಳಲಿದ್ದು ಎಲ್ಲಾ ನೂತನ ಬಿಜೆಪಿ ಶಾಸಕರು ಮತ್ತು ಸೋತ ಬಿಜೆಪಿ ಅಭ್ಯರ್ಥಿಗಳು ಸೇರಿ ಚರ್ಚಿಸುತ್ತೇವೆ ಕಳೆದ ಒಂದೂವರೆ ತಿಂಗಳಿಂದ ನಾವು ಸೇರಿರಲಿಲ್ಲ ಹೀಗಾಗಿ …

Read More »

ಗುಂಡುರಾವ್ ,ಸಿದ್ರಾಮಯ್ಯನವರ ರಾಜೀನಾಮೆ ಅಂಗೀಕರಿಸಬೇಡಿ ಇಬ್ಬರಿಗೂ ಹೆಚ್ವಿನ ಜವಾಬ್ದಾರಿ ಕೊಡಿ

ಬೆಳಗಾವಿ- ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಕುರಿತು ಪರಾಮರ್ಶೆ ನಡೆಯಬೇಕು ,ಕೆಪಿಸಿಸಿ ಅಧ್ಯಕ್ಷ್ಯ ದಿನೇಶ್ ಗುಂಡುರಾವ್ ಮತ್ತು ಸಿದ್ರಾಮಯ್ಯನವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಾರಣಕ್ಕೂ ಇಬ್ಬರ ರಾಜೀನಾಮೆ ಅಂಗೀಕರಿಸಬಾರದು ಎಂದು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾದ ವಿನಯ ನಾವಲಗಟ್ಟಿ,ರಾಜು ಸೇಠ,ಚಿಂಗಳೆ ಒತ್ತಾಯಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಜಂಟೀ ಪತ್ರಿಕಾಗೋಷ್ಠಿ ನಡೆಸಿದ ಮೂವರು ಜಿಲ್ಲಾದ್ಯಕ್ಷರುಗಳು ಇಬ್ಬರು ಕಾಂಗ್ರೆಸ್ ನಾಯಕರ ರಾಜೀನಾಮೆಯಿಂದ ಕಾರ್ಯಕರ್ತರು ಆತ್ಮ …

Read More »

ಬೆಳಗಾವಿಗೂ ಬಂತು ಸಪ್ನಾ ಬುಕ್ ಸ್ಟಾಲ್…

ಬೆಳಗಾವಿ: ಸಪ್ನಾ ಬುಕ್ ಹೌಸ್ ನ 19 ನೇ ಶಾಖೆ ಬೆಳಗಾವಿಯಲ್ಲಿ ಆರಂಭಗೊಂಡಿದ್ದು , ಡಿ 12 ರಂದು ನಗರದ ಕೊಲ್ಲಾಪುರ ವೃತ್ತದ ಬಳಿ ಉದ್ಘಾಟನೆ ನಡೆಯಲಿದೆ ಎಂದು ಸಪ್ನಾ ವ್ಯವಸ್ಥಾಪಕ ನಿರ್ದೇಶಕ ದೊಡ್ಡೇಗೌಡ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ತೋಂಟದ ಡಾ. ಸಿದ್ದರಾಮ ಸ್ವಾಮೀಜಿ ಉದ್ಘಾಟನೆ ಮಾಡುವರು ಎಂದು ಹೇಳಿದರು. ಬೆಳಗಾವಿ ಯಲ್ಲಿ 11 ಸಾವಿರ ಚದರ ಅಡಿಗಳಲ್ಲಿ ಹವಾನಿಯಂತ್ರಿತ ಪುಸ್ತಕ …

Read More »

ಅಥಣಿಯಲ್ಲಿ ಡ್ಯಾಶ್ ..ಡ್ಯಾಶ್ ಗೆ ಡಿಶ್ಯುಂ..ಡಿಶ್ಯುಂ…!!

ಅಥಣಿಯಲ್ಲಿ ಡ್ಯಾಶ್ ..ಡ್ಯಾಶ್ …ಮಟ್ಯಾಶ್ …!! ಬೆಳಗಾವಿ- ಅಥಣಿಯಲ್ಲಿ ಡ್ಯಾಶ್ ..ಡ್ಯಾಶ್ ಎಂದು ಒಬ್ಬ ಸಭ್ಯಸ್ಥನ ಗಂಡಸ್ತನವನ್ನು ಪ್ರಶ್ನೆ ಮಾಡಿದವರಿಗೆ ಅಥಣಿಯ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಅಥಣಿಯ ಶಾಸಕ ಸಭ್ಯ ಮತ್ತು ಸರಳವಾಗಿದ್ದರೂ ಕುಮಟೊಳ್ಳಿ ಮಳ್ಳ… ಕೊಟ್ಟ ಕುದುರೆಯನ್ನು ಏರದ ಗಂಡಸ ಅಲ್ಲ ಎಂದು ಡ್ಯಾಶ್ ಡ್ಯಾಶ್ ಎಂದು ಕುಮಟೊಳ್ಳಿಯ ಗಂಡಸತನವನ್ನು ಪ್ರಶ್ನೆ ಮಾಡಿದ್ದು ಒಬ್ಬ ಹೆಣ್ಣು.ಆದರೂ ಕುಮಟೊಳ್ಳಿ ಅದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದರೂ ಅಥಣಿಯ ಮತದಾರ ಅಥಣಿಯ …

Read More »

ಲಕ್ಷ್ಮೀ ಯಿಂದಲೇ ಕಾಂಗ್ರೆಸ್ ಹಾಳಾಗಿದೆ ,ಲಖನ್ ಇಂದಿನಿಂದ ನನ್ನ ತಮ್ಮ- ರಮೇಶ್ ಜಾರಕಿಹೊಳಿ

ಲಕ್ಷ್ಮೀ ಯಿಂದಲೇ ಕಾಂಗ್ರೆಸ್ ಹಾಳಾಗಿದೆ ,ಲಖನ್ ಇಂದಿನಿಂದ ನನ್ನ ತಮ್ಮ- ರಮೇಶ್ ಜಾರಕಿಹೊಳಿ ಬೆಳಗಾವಿ- ಗೋಕಾಕ್ ಕ್ಷೇತ್ರದ ಅರ್ಹ ಶಾಸಕ ರಮೇಶ ಜಾರಕಿಹೊಳಿ  ಕ್ಷೇತ್ರದ ಮತದಾರರಿಗೆ ಧನ್ಯವಾದ ಹೇಳುವ ಜೊತೆಗೆ ಮಾಜಿ ಸ್ಪೀಕರ್ ರಮೇಶ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ಈ ಫಲಿತಾಂಶ ಅವರ ಮುಖಕ್ಕೆ ಹೊಡೆದ ಹಾಗೆ ಹಾಗೇ ಆಗಿದೆ. ಎಂದು ಪ್ರತಿಕ್ರಿಯೆ ನೀಡಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ಕಾನೂನು ಬಾಹಿರವಾಗಿ ಅನರ್ಹಗೊಳಿಸಿದ್ದರು ಪ್ರವಾಹ ಸಂದರ್ಭದಲ್ಲಿ …

Read More »

ಮ್ಯಾಜಿಕ್ ಮಾಡದ ಪೂಜಾರಿ ಜೋಳಿಗೆ,ರಮೇಶ್ ಸಾಹುಕಾರ್ ಬಾಯಿಗೆ ಹೋಳಿಗೆ….!!!

ಮ್ಯಾಜಿಕ್ ಮಾಡದ ಜೋಳಿಗೆ,ರಮೇಶ್ ಸಾಹುಕಾರ್ ಬಾಯಿಗೆ ಹೋಳಿಗೆ….!!! ಬೆಳಗಾವಿ- ಬೆಳಗಾವಿ ಜಿಲ್ಲೆಯ ಉಪ ಸಮರದಲ್ಲಿ ಕಮಲ ತನ್ನ ಕರಾಮತ್ತು ತೋರಿಸಿದ್ದು ಜಿಲ್ಲೆಯ ಗೋಕಾಕ್,ಅಥಣಿ,ಕಾಗವಾಡ ಕ್ಷೇತ್ರಗಳೂ ಬಿಜೆಪಿ ಪಾಲಾಗಿದ್ದು ಕಾಂಗ್ರೆಸ್ ಮತ್ತೆ ಜಿಲ್ಲೆಯಲ್ಲಿ ಸಮಾಪ್ತಿಯಾಗಿದೆ. ಗೋಕಾಕ್ ಕ್ಷೇತ್ರದಲ್ಲಿ ಜಿಡೆಎಸ್ ಪಕ್ಷದ ಜೋಳಿಗೆ ಮ್ಯಾಜಿಕ್ ಮಾಡುವಲ್ಲಿ ವಿಫಲ ವಾಗಿದ್ದು ಗೋಕಾಕಿನ ಹೋಳಿಗೆ ಬಿಜೆಪಿಯ ರಮೇಶ್ ಜಾರಕಿಹೊಳಿ ಅವರ ಬಾಯಿಗೆ ಬಿದ್ದಿದೆ .ಲಖನ್ ಜಾರಕಿಹೊಳಿ ಗೆಲುವು ಸಾಧಿಸದಿದ್ದರೂ ಗೋಲಾಕಿನಲ್ಲಿ ಕಾಂಗ್ರೆಸ್ ಪಕ್ಷದ ಮಾನ ಉಳಿಸಿದ್ದಾರೆ. …

Read More »

ರಜೆ ನೀಡದ ಮಾಲೀಕನನ್ನೇ ಮಟ್ಯಾಶ್ ಮಾಡಿದ ಕಿರಾತಕರು….

ರಜೆ ನೀಡದ ಮಾಲೀಕನ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಕಾರ್ಮಿಕರು ಬೆಳಗಾವಿ-:ಬೈಲಹೊಂಗಲ ತಾಲ್ಲೂಕಿನಲ್ಲಿ ಕಲ್ಟಿವೇಟರ್ ಯಂತ್ರದ ಮೂಲಕ ಕಬ್ಬಿನ ಕಟಾವ್ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಚೂರಿಯಿಂದ ತಮ್ಮ ಮಾಲೀಕನ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಘಟನೆ ಬೈಲಹೊಂಗಲ ತಾಲ್ಲೂಕಿನ ಕೋರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಕೊಲ್ಹಾಪೂರ ಜಿಲ್ಲೆಯ ಪನ್ಹಾಳ ತಾಲ್ಲೂಕು ಮಜಗಾಂವ ಗ್ರಾಮದ ಪ್ರಕಾಶ ರಾಮಚಂದ್ರ ಮಗದುಮ್ (40) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮಹಾರಾಷ್ಟ್ರದ ದತ್ತಾ ಪಾಟಕರ ಮತ್ತು …

Read More »

ಬೆಳಗಾವಿಗೆ ಬಂದಿದ್ರು…ಸರ್ಕಾರದ ವಿರುದ್ಧ ಗುಡುಗಿದ್ರು…ಹೌದ್ದೋ ಹುಲಿಯಾ….!!!

ಬೆಳಗಾವಿ- ಬೆಳಗಾವಿಯಲ್ಲಿ ಮಾನಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ ಬಾದಾಮಿಗೆ ತೆರಳುವ ಮುನ್ನ ಮಾದ್ಯಮ ಮತ್ರರ ಜೊತೆ ಸಿದ್ರಾಮಯ್ಯ ಹಲವಾರು ವಿಷಯಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ ಉಪಚುನಾವಣೆ ಸಮೀಕ್ಷೆಗಳನ್ನು ನಾನು ನಂಬುದಿಲ್ಲ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ‌ ಸಮೀಕ್ಷೆಗಳು ಎನಾಗಿವೆ ಅಂದಾಜು ಮೇಲೆ ಸಮೀಕ್ಷೆ ಮಾಡಿರುತ್ತಾರೆ ಎಂದರು ಮಾಜಿ ಸಿಎಂ ಸಿದ್ರಾಮಯ್ಯ ಪರಿಹಾರದ ಬಗ್ಗೆ ಸರ್ಕಾರ ಇಂದಿನವರೆಗೂ ತಲೆಕೆಡಸಿಕೊಂಡಿಲ್ಲ. ಹತ್ತು ಸಾವಿರ ಮತ್ತು ಒಂದು ಲಕ್ಷ ಕೊಟ್ಟು ಕೈತೊಳೆದುಕೊಂಡಿದ್ದಾರೆ …

Read More »

ನಾಳೆ ರಿಸಲ್ಟಗೆ ಎಲ್ಲಾ ತಯಾರಿ ಆಗೈತ್ರಿಪ್ಪೋ….ಹೊಡಿ ಒಂಬತ್ತ್…!!!

ಮತ ಎಣಿಕೆಗೆ ಸಿದ್ಧತೆ ಪೂರ್ಣ; ಬಿಗಿ ಭದ್ರತೆ- ಡಾ.ಬೊಮ್ಮನಹಳ್ಳಿ ಬೆಳಗಾವಿ, : ಜಿಲ್ಲೆಯ ಮೂರು ಮತಕ್ಷೇತ್ರಗಳ ಮತ ಎಣಿಕೆ ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ಸೋಮವಾರ(ಡಿ.೯) ನಡೆಯಲಿದ್ದು, ಭದ್ರತೆ ಸೇರಿದಂತೆ ಮತ ಎಣಿಕೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು. ಮತ ಎಣಿಕೆ ಸಿದ್ಧತೆ ಕುರಿತು ಭಾನುವಾರ (ಡಿ.೮) ಬೆಳಿಗ್ಗೆ ಮತ ಎಣಿಕೆ ಕೇಂದ್ರದ ಆವರಣದ ಮಾಧ್ಯಮ ಕೇಂದ್ರದಲ್ಲಿ ನಡೆದ ಎಲ್ಲ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ …

Read More »

ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿದ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ,…

ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿದ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ,… ಬೆಳಗಾವಿ- ಶಿವಸೇನೆಯ ಉದ್ಧವ ಠಾಖ್ರೆ ಮಹಾರಾಷ್ಟ್ರ ರಾಜ್ಯದ ಮುಖ್ಯ ಮಂತ್ರಿಯಾಗುತ್ತಲೇ ಬೆಳಗಾವಿ ಗಡಿ ವಿವಾದವನ್ನು ಕೆಣಕಿ ಮತ್ತೆ ಕಾಲು ಕೆದರಿ ಜಗಳ ತೆಗೆಯುವ ಪ್ರಯತ್ನದಲ್ಲಿದ್ದು ಬೆಳಗಾವಿ ಗಡಿ ವಿವಾದದ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ನಾಯಕರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಾರೆ ಮುಂಬಯಿ ಸಹ್ಯಾದ್ರಿ ಗೆಸ್ಟ ಹೌಸ್ ನಲ್ಲಿ ಬೆಳಗಾವಿ ಗಡಿ ವಿವಾದದ ಕುರಿತು ಮಹತ್ವದ ಸಭೆ …

Read More »