Breaking News
Home / LOCAL NEWS (page 36)

LOCAL NEWS

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಆರು, ಅಂತಸ್ಥಿನ ಭವ್ಯ ಸರಕಾರಿ ಕಟ್ಟಡ…!!

ಬೆಳಗಾವಿ: 145×71 ಅಳತೆಯ 6 ಅಂತಸ್ಥಿನ ಭವ್ಯ ಸರಕಾರಿ ಕಟ್ಟಡ…ಕಟ್ಟಡದ ಸುತ್ತ ನಾಲ್ಕೂ ಕಡೆ ದ್ವಿಪಥ ರಸ್ತೆ… ಪ್ರವೇಶ ದ್ವಾರದ ಮುಂದೆ ಸುಂದರ ಉದ್ಯಾನವನ…ನೂರಾರು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ…! ಇದು ಯಾವುದೋ ದೆಹಲಿ, ಬೆಂಗಳೂರಿನಲ್ಲಿನ ಸರಕಾರಿ ಕಟ್ಟಡ ವರ್ಣನೆಯಲ್ಲ. ನಮ್ಮ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಲೆ ಎತ್ತಲಿರುವ ಸರಕಾರಿ ಕಚೇರಿಗಳ ಸಂಕೀರ್ಣ. ಹೌದು, ಹೃದಯಭಾಗದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರು ಅಂತಸ್ತಿನ ಭವ್ಯ ಹೆಟೆಕ್ ಕಟ್ಟಡ ತಲೆ ಎತ್ತಲಿದೆ. …

Read More »

ಬೆಳಗಾವಿಯಲ್ಲಿ ಮೋಡ ಬಿತ್ತನೆಗೆ ಮಾಡಿಸಿದ ಸತೀಶ್ ಜಾರಕಿಹೊಳಿ

  ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಬರಸ್ಥಿತಿಯ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹುದಲಿಯ ಬೆಳಗಾಂ ಶುಗರ್ಸ್ ಪ್ರೈ.ಲಿಮಿಟಡ್ ಮೋಡ ಬಿತ್ತನೆಗೆ ಮುಂದಾಗಿದ್ದು, ಮೋಡ ಬಿತ್ತನೆ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ(ಸೆ.29) ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು.ಮೋಡ ಬಿತ್ತನೆ ಕಾರ್ಯಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರ(ಡಿಜಿಸಿಎ) ಕಚೇರಿಯು ಗ್ರೀನ್ ಸಿಗ್ನಲ್ ನೀಡಿದೆ. ಸೆ.29 ಹಾಗೂ 30 …

Read More »

ಕರ್ನಾಟಕ ಬಂದ್, ಬೆಳಗಾವಿಯಲ್ಲಿ ಪ್ರತಿಭಟನೆಗೆ ಸೀಮಿತ…

ಬೆಳಗಾವಿ- ಇಂದು ವಿವಿಧ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು ಬೆಳಗಾವಿಯಲ್ಲಿ ಬಂದ್ ಬಿಸಿ ತಟ್ಟಿಲ್ಲ,ಇಲ್ಲಿ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದುಕೊಂಡಿದ್ದು ಬಂದ್ ಪ್ರತಿಭಟನೆಗೆ ಸೀಮಿತವಾಗಿದೆ. ಇಂದು ಬೆಳ್ಳಂ ಬೆಳಗ್ಗೆ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲಿ ಕಾವೇರಿ ನಮ್ಮದು,ಎಂದು ಬಿತ್ತಿಪತ್ರ ಹಿಡಿದು ಪ್ರತಿಭಟನೆ ಮಾಡುವ ಮೂಲಕ ತಮಿಳುನಾಡಿಗೆ ನೀರು ಬಿಟ್ಡಿರುವ ರಾಜ್ಯ ಸರ್ಕಾರದ ರಾಜ್ಯವಿರೋಧಿ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು …

Read More »

ಇಂದು ಬೆಳಗಾವಿಯಲ್ಲಿ ವಿನಾಯಕನಿಗೆ ಅದ್ಧೂರಿ ವಿದಾಯ….!!

ಶಾಂತಿ ಕದಡುವ, ಕಿಡಗೇಡಿಗಳ ಕಿವಿ ಹಿಂಡಲು ಸಜ್ಜಾದ ಖಾಕಿ ಪಡೆ….!! ಬೆಳಗಾವಿ- ಮಹಾರಾಷ್ಟ್ರದ. ಮುಂಬಯಿ ,ಪೂನಾ ಹೊರತು ಪಡೆಸಿದರೆ, ರಾಷ್ಟ್ರದಲ್ಲಿಯೇ ಅತ್ಯಂತ ಅದ್ಧೂರಿಯಾಗಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸುವದು ಬೆಳಗಾವಿಯಲ್ಲಿ ,ರಾಜ್ಯದಲ್ಲಿಯೇ ಅತ್ಯಂತ ವಿಭಿನ್ನವಾಗಿ ಗಡಿ ಭಾಗದ ಬೆಳಗಾವಿಯಲ್ಲಿ ಗಣೇಶ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಹಿನ್ನಲೆ ಮತ್ತು ಇತಿಹಾಸ ಹೊಂದಿರುವ ಸಾರ್ವಜನಿಕ ಶ್ರೀಗಣೇಶ ಪ್ರತಿಷ್ಠಾಪನೆ ವಿಚಾರದಲ್ಲಿ ಬೆಳಗಾವಿ ಮಹಾನಗರದ ಜನತೆ ಹೊಸ ಇತಿಹಾಸ …

Read More »

DCM ಮಾಡಲು ಬೆಳಗಾವಿಯಿಂದ ಪತ್ರ ಅಭಿಯಾನ…!!

ಬೆಳಗಾವಿ- ಲೋಕೋಪಯೋಗಿ ಇಲಾಖೆ ಸಚಿವ,ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ,ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಅವರನ್ನು ಉಪ ಮುಖ್ಯಮಂತ್ರಿ ಮಾಡುವಂತೆ ಬೆಳಗಾವಿ ಜಿಲ್ಲೆಯಲ್ಲಿ ಅವರ ಅಭಿಮಾನಿಗಳು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆಯುವ ಅಭಿಯಾನ ಆರಂಭಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು,ಅಭಿಮಾನಿಗಳು, ಹಾಗೂ ಹಲವಾರು ಜನ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ,ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಹಾಗು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ …

Read More »

ಬೆಳಗಾವಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗೋಕಾವಿ

ಬೆಳಗಾವಿ- ಬೆಳಗಾವಿ ಸರ್ಕಾರಿ ನೌಕರರ ಸಂಘದ ಪ್ರಭಾರಿ ಅಧ್ಯಕ್ಷರನ್ನಾಗಿ ಶಂಕರ ಗೋಕಾವಿ ಅವರನ್ನು ನೇಮಕ ಮಾಡಿ,ರಾಜ್ಯ ಅಧ್ಯಕ್ಷ ಷಡಕ್ಷರಿ ಅವರು ಆದೇಶ ಹೊರಡಿಸಿದ್ದಾರೆ‌. ಬೆಳಗಾವಿ ಜಿಲ್ಲಾ ನೌಕರರ ಸಂಘದ ಪ್ರಭಾರಿ ಅಧ್ಯಕ್ಷರಾಗಿದ್ದ ಬಸವರಾಜ್ ರಾಯವ್ವಗೋಳ ಅವರು ರಾಜಿನಾಮೆ ನೀಡಿರುವ ಕಾರಣ ಶಂಕರ ಗೋಕಾವಿ ಅವರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶಂಕರ ಗೋಕಾವಿ ಅವರು ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಶಾಖೆಯ ನೌಕರರ ಸಂಘದ ನಿರ್ದೇಶಕರಾಗಿದ್ದರು ಅವರನ್ನು ಬೆಳಗಾವಿ ಜಿಲ್ಲಾ ನೌಕರರ …

Read More »

ನಾಲ್ವರು ಬಾಲಕರು ಸೇರಿಕೊಂಡು ಓರ್ವ ಬಾಲಕನ ಕೊಲೆ ಮಾಡಿದ್ರು…

ಬೆಳಗಾವಿ- ನಾಲ್ವರು ಬಾಲಕರು ಸೇರಿಕೊಂಡು ಓರ್ವ ಬಾಲಕನನ್ನು ತಲವಾರ್ ನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಕ್ಕದ ಮಲ್ಲಾಪೂರ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಗೆಳೆಯರ ಮದ್ಯೆ ವಾಗ್ವಾದ ಆಗಿದೆ.ಇದು ವಿಕೋಪಕ್ಕೆ ಹೋಗಿ ನಾಲ್ಚರು ಬಾಲಕರು ಸೇರಿಕೊಂಡು ಮಲ್ಲಾಪೂರ ಗ್ರಾಮದ 16 ವರ್ಷದ ಪ್ರಜ್ವಲ್ ಸುಂಕದ ಎಂಬಾತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಪ್ರಜ್ವಲ್ ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಆದ್ರೆ ಕೊನೆಗೂ …

Read More »

ಬಸ್ ನಿಲ್ಲಿಸು..ನಿಲ್ಲಿಸು..ಅಂತಾ ಚೀರಾಡಿದ್ರೂ ಆ ಚಾಲಕ ಕೇಳಲೇ ಇಲ್ಲ…!!

ಬೆಳಗಾವಿ- ನಿನ್ನೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ರಸ್ತೆ ಜಲಾವೃತಗೊಂಡು ರಸ್ತೆ ಹಳ್ಳವಾಗಿದೆ,ಶಾಲಾ ಮಕ್ಕಳ ಬಸ್ ಚಾಲಕ ಈ ರಸ್ತೆಯಲ್ಲಿ ಬಸ್ ಚಲಾಯಿಸಿ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಲಾ ಬಸ್ ಜಲಾವೃತಗೊಂಡ ರಸ್ತೆ ಸಮೀಪ ಬಂದಾಗ,ಅಲ್ಲಿದ್ದ ಸಾರ್ವಜನಿಕರು ಬಸ್ ನಿಲ್ಲಿಸುವಂತೆ ಚೀರಾಡಿದ್ರೂ ಇದನ್ನು ಲೆಕ್ಕಿಸದೇ ಬಸ್ ಜಲಾವೃತ ರಸ್ತೆಯಲ್ಲೇ ಚಲಾಯಿಸಿದ್ದಾನೆ.ಬಸ್ ನೀರಿನಲ್ಲಿ ಸಿಲುಕಿ ಪಲ್ಟಿಯಾಗುವ ಪರಿಸ್ಥಿತಿಗೆ …

Read More »

ಜಿತೋ ಮಹಿಳಾ ಅಧ್ಯಕ್ಷರಾಗಿ ಮಾಯಾ ಜೈನ್‌ ಆಯ್ಕೆ

ಬೆಳಗಾವಿ: ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್‌ (ಜಿತೋ) ಮಹಿಳಾ ಘಟಕದ 2023-24ನೇ ಅವಧಿ ಅಧ್ಯಕ್ಷರಾಗಿ ಮಾಯಾ ಜೈನ್‌ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು ಇಂತಿದ್ದಾರೆ. ಮಮತಾ ಜೈನ್‌ (ಪ್ರಧಾನ ಕಾರ್ಯದರ್ಶಿ), ಶಿಲ್ಪಾ ಶಹಾ (ಖಜಾಂಚಿ), ಸಾರಿಕಾ ಗಾದಿಯಾ (ಉಪಾಧ್ಯಕ್ಷೆ), ಲೀನಾ ಶಹಾ ಮತ್ತು ಮಯೂರಾ ಪಾಟೀಲ (ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ. ಪದಗ್ರಹಣ ಸಮಾರಂಭ ಅಕ್ಟೊಬರ್ 2ರಂದು ಬೆಳಿಗ್ಗೆ 10.30 ಗಂಟೆಗೆ ಫೌಂಡ್ರಿ ಕ್ಲಸ್ಟರ್ ಸಭಾಗೃಹದಲ್ಲಿ ನಡೆಯಲಿದ್ದು, ಸಂಸದೆ ಮಂಗಲಾ ಅಂಗಡಿ , ಶಾಸಕ …

Read More »

ಹಣಕಾಸಿನ ವ್ಯವಹಾರ ಓರ್ವನ ಮೇಲೆ ಫೈರೀಂಗ್…

.ಬೆಳಗಾವಿ: ಹಣಕಾಸಿನ ವ್ಯವಹಾರಕ್ಕೆ ಯೋಧರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ರಿವಾಲ್ವರ್ ನಿಂದ ಹಾರಿಸಿದ ಗುಂಡು ಯೋಧನ ಹೊಟ್ಟೆಗೆ ತಗುಲಿ ಗಂಭೀರ ಗಾಯಗೊಂಡ ಘಟನೆ ಗೋಕಾಕ ತಾಲೂಕಿನ ಅಂಕಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಗೋಕಾಕ ತಾಲೂಕಿನ ರಾಜನಕುಟ್ಟೆ ಗ್ರಾಮದ ನಂಜುಂಡಿ ಲಕ್ಷ್ಮಣ ಬೂದಿಹಾಳ(32) ಗುಂಡು ಹಾರಿಸಿದ್ದು, ಅದೇ ಗ್ರಾಮದ ಬಸಪ್ಪ ಮೈಲಪ್ಪ ಬಂಬರಗಾ(32) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಭಾರತೀಯ ಸೇನೆಯಲ್ಲಿ …

Read More »