ಬೆಳಗಾವಿ :ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿಸಿದ್ದು ಸೋಮವಾರ ಬೆಳಗಾವಿ ಜಿಲ್ಲೆಯ ರಾಮದುರ್ಗಕ್ಕೆ ಆಗಮಿಸಲಿದ್ದಾರೆ. ರಾಮದುರ್ಗದಲ್ಲಿ ಅವರು ಕಬ್ಬು ಬೆಳೆಗಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ರಾಹುಲ್ ಗಾಂಧಿ ಇಂದು ಕೂಡಲಸಂಗಮಕ್ಕೆ ಆಗಮಿಸಿದ್ದು ಅಲ್ಲಿಂದ ವಿವಿಧ ಕಾರ್ಯಕ್ರಮ ಮುಗಿಸಿ ಸೋಮವಾರ ಮಧ್ಯಾನ 12ಕ್ಕೆ ರಾಮದುರ್ಗ ಮತ ಕ್ಷೇತ್ರದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸುವರು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಾಜಿ …
Read More »ಜಾಹೀರಾತು, ಪೇಡ್ ನ್ಯೂಸ್ ಮೇಲೆ ನಿಗಾ ಇಡ್ರಿ!
ಬೆಳಗಾವಿ, ): ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಾರ್ತಾಭವನದಲ್ಲಿ ಆರಂಭಿಸಲಾಗಿರುವ ಮಾಧ್ಯಮ ಕಣ್ಗಾವಲು ಘಟಕಕ್ಕೆ ಗೋಕಾಕ ಹಾಗೂ ಯಮಕನಮರಡಿ ವಿಧಾನಸಭಾ ಮತಕ್ಷೇತ್ರಗಳ ಸಾಮಾನ್ಯ ವೀಕ್ಷಕರಾದ ಹಿರಿಯ ಐ.ಎ.ಎಸ್. ಅಧಿಕಾರಿ ಎಸ್.ಮಾಲಾರವಿಙ್ಞ ಅವರು ಭೇಟಿ ಪರಿಶೀಲಿಸಿದರು. ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಮೇಲೆ ನಿಗಾ ವಹಿಸಬೇಕು. ಪೇಡ್ ನ್ಯೂಸ್ ಅಥವಾ ಜಾಹೀರಾತು ಕಂಡುಬಂದರೆ ಅದಕ್ಕೆ ಸಂಬಂಧಿಸಿದ ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂದು ನಿರ್ದೇಶನ ನೀಡಿದರು. ಇದಲ್ಲದೇ …
Read More »ಆಕ್ಷೇಪಣೆಗಳ,ಸುಧೀರ್ಘ ವಿಚಾರಣೆ, ರತ್ನಾ ಮಾಮನಿ ನಾಮಪತ್ರ ಅಂಗೀಕಾರ!
ಬೆಳಗಾವಿ- ಸವದತ್ತಿ ಯಲ್ಲಮ್ಮನ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರತ್ನಾ ಮಾಮನಿಯವರ ನಾಮಪತ್ರ ತಿಸ್ಕರಿಸಬೇಕು ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರಿಂದ ನಿನ್ನೆಯಿಂದ ಎಲ್ಲರ ಗಮನ ಸೆಳೆದಿದ್ದ ಈ ವಿಚಾರ,ಇವತ್ತು ವಿಚಾರಣೆಯಾಗಿ ರತ್ನಾ ಮಾಮನಿ ನಾಮಪತ್ರ ಇವತ್ತು ಅಂಗೀಕಾರಾಗಿದ್ದುಸವದತ್ತಿ ಬಿಜೆಪಿ ಅಭ್ಯರ್ಥಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರು ಸಲ್ಲಿಸಿದ್ದ ನಾಮಪತ್ರವನ್ನು ಅಸಿಂಧು ಎಂದು ಘೋಷಿಸಬೇಕು ಅಂತ ವಿಪಕ್ಷಗಳಿಗೆ ಹಿನ್ನೆಡೆಯಾಗಿದೆ. ಫಾರ್ಮ್ ನಂಬರ್ ೨೬ …
Read More »1992 ರ ಆಪರೇಷನ್ ಬ್ಲೂ ಸ್ಟಾರ್ ಬೆಳಗಾವಿಯ ಕ್ಯಾಪ್ಟನ್ ಇನ್ನಿಲ್ಲ.
*ವೀರಯೋಧ ಕ್ಯಾಪ್ಟನ್ ರಾಮಪ್ಪ ಕೊಳ್ಳಿ ಇನ್ನಿಲ್ಲ.* 1992 ರ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ, 1999 ಕಾರ್ಗಿಲ್ ಯುದ್ಧ ಸೇರಿದಂತೆ ದೇಶದ ಅನೇಕ ಸೈನಿಕ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತೀಯ ಸೇನೆಯಲ್ಲಿ ಅಮೋಘ 30 ವರ್ಷಗಳ ಸೇವೆ ಸಲ್ಲಿಸಿದ ಇವರು ನಿವೃತ್ತಿ ನಂತರದ ಜೀವನವನ್ನು ಸ್ವಗ್ರಾಮ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಕಳೆಯುತ್ತಿದ್ದರು. ಇಂದು ಕೊನೆಯುಸಿರೆಳೆದರು. ರಾಮಪ್ಪ ಬಿ.ಕೊಳ್ಳಿಯವರು ಹುಟ್ಟೂರು ಹಿರೇಕುಂಬಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಭಾರತೀಯ ಸೇನೆಗೆ …
Read More »ಮಾಜಿ ಶಿಷ್ಯನ, ಗೋಕಾಕ್ ಕ್ಷೇತ್ರದಿಂದಲೇ ಟಗರು ಘರ್ಜನೆ !
ಬೆಳಗಾವಿ :ಒಂದು ಕಾಲದಲ್ಲಿ ತಮ್ಮ ಪರಮಶಿಷ್ಯರಾಗಿದ್ದ ರಮೇಶ ಜಾರಕಿಹೊಳಿ ಅವರು ಪ್ರತಿನಿಧಿಸುವ ಗೋಕಾಕ ಮತಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಬೆಳಗಾವಿ ಜಿಲ್ಲೆಯ ಚುನಾವಣೆಯ ರಣಕಹಳೆ ಮೊಳಗಿಸಲಿದ್ದಾರೆ. ಏಪ್ರಿಲ್ 24 ಹಾಗೂ 25 ರಂದು ಬೆಳಗಾವಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಿದ್ದರಾಮಯ್ಯ ಭರ್ಜರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 24 ರಂದು ಬೆಳಗ್ಗೆ 11ಕ್ಕೆ ಗೋಕಾಕನಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ …
Read More »ಬೆಳಗಾವಿ ಕುವರಿಯ ಅಪೂರ್ವ ಸಾಧನೆ, ಬೆಳಗಾವಿಗೆ ಎರಡನೇಯ ರ್ಯಾಂಕ್!
ಬೆಳಗಾವಿ- ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕುಂದಾನಗರಿ ಕುವರಿಯ ಅಪೂರ್ವ ಸಾಧನೆ ಮಾಡಿದ್ದಾಳೆ.ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದ ಪ್ರಿಯಂಕಾ ಕುಲಕರ್ಣಿ ಬೆಳಗಾವಿಗೆ ಕೀರ್ತಿ ತಂದಿದ್ದಾಳೆ. ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಪ್ರಿಯಂಕಾ, ಲಶೇ. 98.6 ಅಂಕ ಪಡೆದು ರಾಜ್ಯಕ್ಕೆ ಎರಡನೇ ರ್ಯಾಂಕ್ ಗಳಿಸಿರುವ ಪ್ರಿಯಂಕಾ ಕುಲಕರ್ಣಿ ಸಾಧನೆಗೈದಿದ್ದಾಳೆ. ಭೂಗೋಳಶಾಸ್ತ್ರದಲ್ಲಿ 100 ಕ್ಕೆ ನೂರು ಅಂಕ ಪಡೆದಿರುವ ಪ್ರಿಯಂಕಾ ಒಟ್ಟು 592 ಅಂಕ ತಮ್ಮದಾಗಿಸಿಕೊಂಡಿದ್ದಾರೆ. ತನ್ನ …
Read More »ಡಾ.ಸೋನಾಲಿ ಸರ್ನೋಬತ್ ಪಕ್ಷ ನಿಷ್ಠೆ, ಬಿಜೆಪಿ ಕಾರ್ಯಕರ್ತರಿಂದ ಅಪಾರ ಮೆಚ್ಚುಗೆ..!!
ಡಾ.ಸೋನಾಲಿ ಸರ್ನೋಬತ್ ಅವರು ಕಳೆದ ಐದು ವರ್ಷಗಳಿಂದ ಖಾನಾಪೂರ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯ ಬಲವರ್ದನೆಗೆ ಶ್ರಮಿಸುವ ಜೊತೆಗೆ,ವಯಕ್ತಿಕವಾಗಿ ಖಾನಾಪೂರ ಕ್ಷೇತ್ರದ ಜನರಿಗೆ ಸಹಾಯ ಮಾಡಿ,ಈ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ,ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಹಲವಾರು ಯೋಜನೆಗಳನ್ನು ಮಂಜೂರು ಮಾಡಿಸಿ ಕ್ಷೇತ್ರದಲ್ಲಿ ಅಪಾರ ಜನಮೆಚ್ವುಗೆ ಗಳಿಸಿದ್ದ ಡಾ.ಸೋನಾಲಿ, ಖಾನಾಪೂರ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷ ವಿಠ್ಠಲ ಹಲಗೇಕರ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದ …
Read More »ರಾಜಕೀಯ ಕಡು ವೈರಿಗಳಾದ್ರೂ, ಮುಖಾ ಮುಖಿ ಆದಾಗ ಕೈಮುಗಿದ್ರು!!
ಬೆಳಗಾವಿ- ಬಾಲಚಂದ್ರ ಜಾರಕಿಹೊಳಿ ಅವರ ರಾಜಕಾರಣ ಬಿಟ್ಟು ಅವರ ಸದ್ಗುಣಗಳ ಬಗ್ಗೆ ಬರೆಯುತ್ತಾ ಹೋದಲ್ಲಿ ಒಂದು ದೊಡ್ಡ ಕಾದಂಬರಿ ಆಗುತ್ತೆ, ಅದರ ಹೆಸರು ಸದ್ಗುಣಿ ಎಂದೇ ಇಡಬೇಕಾಗುತ್ತದೆ. ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಅರಭಾವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಬಲ ಎದುರಾಳಿ,ರಾಜಕೀಯ ಕಡುವೈರಿ ಆದ್ರೆ ನಿನ್ನೆ ಬುಧವಾರ ಬಾಲಚಂದ್ರ ಜಾರಕಿಹೊಳಿ ಮತ್ತು ಭೀಮಪ್ಪಾ ಗಡಾದ್ ಇಬ್ಬರೂ ಏಕಕಾಲಕ್ಕೆ ಮೂಡಲಗಿ ತಹಶಿಲ್ದಾರ ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದಾಗ,ಆಕಸ್ಮಿಕವಾಗಿ ಇಬ್ಬರೂ ನಾಯಕರು …
Read More »ಇವತ್ತು ಘಟಾನುಘಟಿ ನಾಯಕರಿಂದ ನಾಮಿನೇಶನ್!!
ಬೆಳಗಾವಿ- ನಾಮಪತ್ರ ಸಲ್ಲಿಸಲು ಇವತ್ತು ಕೊನೆಯ ದಿನವಾಗಿದ್ದು ಕೊನೆಯ ದಿನ ಅಮವಾಸ್ಯೆ ಮತ್ತು ಗ್ರಹಣ ಇದ್ದರೂ ಸಹ ಈ ದಿನ ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸುತ್ತಿದ್ದಾರೆ. ಯಮನಕರ್ಡಿ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಅವರು ಹುಕ್ಕೇರಿ ತಹಶೀಲ್ದಾರ ಕಚೇರಿಯಲ್ಲಿ ,ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ,ಬೆಳಗಾವಿ ಉತ್ತರದ ಕಾಂಗ್ರೆಸ್ ಅಭ್ಯರ್ಥಿ ರಾಜು ಸೇಠ, ಅವರು ಇಂದು …
Read More »ನಾಳೆ ಬೆಳಗಾವಿಗೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್.
ಬೆಳಗಾವಿ-ನಾಳೆ ಗುರುವಾರ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಹಾಗೂ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಅವರು ನಾಮಪತ್ರ ಸಲ್ಲಿಸುತ್ತಿದ್ದು, ಈ ಸಂಧರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭಾಗವಹಿಸಲಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ತಮ್ಮ ಮತಕ್ಷೇತ್ರದ ಶಿವಚರಿತ್ರೆ ಹತ್ತಿರದಿಂದ ನಾಮಪತ್ರ ಸಲ್ಲಿಸುವ ಮೆರವಣಿಗೆ ಬೆಳಗ್ಗೆ 10-00 ಗಂಟೆಗೆ ಆರಂಭಿಸಲಿದ್ದಾರೆ. ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ …
Read More »