ಬೆಳಗಾವಿ-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಎಂಇಎಸ್ ಬೆಳಗಾವಿಯಲ್ಲಿ ಹೊಸ ವರಸೆ ಆರಂಭಿಸಿದೆ.ಮನೆಯ ಅಂಗಳದಲ್ಲಿ ಏಕ್ ಮರಾಠಾ ಲಾಕ್ ಮರಾಠಾ ಎಂದು ರಂಗೋಲಿ ಹಾಕಿಸಿ ಮರಾಠಿ ಭಾಷಿಕರನ್ನು ಕೆರಳಿಸಿ ಎಂಇಎಸ್ ಸಂಘಟನೆಯನ್ನು ಬಲಿಷ್ಢಗೊಳಿಸಲು ಹೊಸ ಪ್ಲ್ಯಾನ್ ಮಾಡಿಕೊಂಡಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದ ದೇಸೂರು ಗ್ರಾಮದಲ್ಲಿ ಹತ್ತು ಹಲವು ಮನೆಗಳ ಎದುರು ಜೈ ಮಹಾರಾಷ್ಟ್ರ ಎಂದು ರಂಗೋಲಿಯಲ್ಲಿ ಬಿಡಿಸಿ ನಾಡದ್ರೋಹಿ ಕೆಲಸ ಮಾಡುತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಮ್ಮ …
Read More »ಗೆದ್ದವರಿಗೆ ಐದು ಲಕ್ಷ ₹ ಕೊಡ್ತಾರೆ,ಅಲ್ಲಿ ಸಾವಿರಾರು ಜನ ಸೇರ್ತಾರೆ,ಗಣ್ಯರೂ ಬರ್ತಾರೆ..!!
ಬೆಳಗಾವಿ- ಕಳೆದ ಹತ್ತು ದಿನಗಳಿಂದ ಬೆಳಗಾವಿ ಮಹಾನಗರದ ಸರ್ದಾರ್ ಮೈದಾನದಲ್ಲಿ ಧೂಳೆಬ್ಬಿಸಿರುವ MLA ಅನೀಲ ಬೆನಕೆ ಕ್ರಿಕೆಟ್ ಟ್ರೋಫಿಯ, ಫೈನಲ್ ಮ್ಯಾಚ್ ಮೋರೆ ಎಲೆವನ್ ಹಾಗೂ ಝಿಯಾನ್ ಸ್ಪೋರ್ಟ್ಸ್ ಬಲಾಡ್ಯ ತಂಡಗಳ ನಡುವೆ ಇಂದು ಬೆಳಗ್ಗೆ 10-00 ಗಂಟೆಗೆ ಅಂತಿಮ ಸೆಣಸಾಟ ನಡೆಯಲಿದೆ.. ಹತ್ತು ದಿನಗಳಿಂದ ಬೆಳಗಾವಿಯಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಠಿ ಮಾಡಿರುವ ಅನೀಲ ಬೆನಕೆ ಟ್ರೋಫಿಯಲ್ಲಿ,ಮುಂಬಯಿ, ಗೋವಾ,ಜಮ್ಮು ಕಾಶ್ಮೀರ್ ಸೇರಿದಂತೆ ನಲವತ್ತಕ್ಕೂ ಹೆಚ್ಚು ದಿಗ್ಗಜ ಕ್ರಿಕೆಟ್ …
Read More »ರವಿ ಕೋಕೀತ್ಕರ್ ಫೈರೀಂಗ್ ಕೇಸ್ ಗೆ ಹೊಸ ಟ್ವಿಸ್ಟ್….!!
ಬೆಳಗಾವಿ-ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಮೇಲೆ ಗುಂಡಿನ ದಾಳಿ ಪ್ರಕರಣ ಹೊಸ ಟ್ವೀಸ್ಟ್ ಪಡೆದಿದೆ.ದಾಳಿಗೊಳಗಾದ ಬುಲೆರೋ ವಾಹನದಲ್ಲಿ ಇಂದು ಮತ್ತೊಂದು ಬುಲೇಟ್ ಪತ್ತೆಯಾಗಿದ್ದು,ಕೇವಲ ಒಂದು ಸುತ್ತಿನ ಗುಂಡು ಹಾರಿಸಲಾಗಿದೆ ಎಂದು ದೂರು ದಾಖಲು ಮಾಡಿದ್ದ ಪೋಲಿಸರುಇಂದು ಪೋಲಿಸ್ ಠಾಣೆ ಮುಂಭಾಗ ವಾಹನ ಓಪನ್ ಮಾಡಿದ್ದಾಗ ಮತ್ತೊಂದು ಬುಲೆಟ್ ಪತ್ತೆಯಾಗಿದೆ. ಒಂದು ಗುಂಡು ಚಾಲಕನ ಕೈ ಹೊಕ್ಕಿರುವ ಗುಂಡು, ಆದ್ರೆ ಅದೇ ವಾಹನದಲ್ಲಿ ಮತ್ತೊಂದು ಗುಂಡು ಪತ್ತೆಯಾಗಿದೆ.ಪೋಲಿಸರ ನಿರ್ಲಷ್ಯದ ವಿರುದ್ಧ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ …
Read More »ಎಂಎಲ್‌ಎ ಅನಿಲ್ ಬೆನಕೆ, ಕೇರ್ ಆಪ್ ಸರ್ದಾರ್ ಗ್ರೌಂಡ್..!!
ಬೆಳಗಾವಿ: ಬೆಳಗಾವಿಯ ಕಾಲೇಜು ರಸ್ತೆಯ ಸರ್ಕಾರಿ ಸರ್ದಾರ ಪ್ರೌಢಶಾಲೆಯ ಮೈದಾನದಲ್ಲಿ ನಡೆಯುತ್ತಿರುವ ಎಂಎಲ್‌ಎ ಶ್ರೀ ಅನಿಲ್ ಎಸ್.ಬೆನಕೆ ಟ್ರೋಫಿ- ೨೦೨೩ ಅಂತಾರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ ಒಂದೆಡೆ ರಾಷ್ಟ್ರ ಮಟ್ಟದ ಗಮನ ಸೆಳೆಯುತ್ತಿದ್ದರೆ, ಇನ್ನೊಂದೆಡೆ ಕ್ರಿಕೆಟ್ ಆಟ ಆಡಿಸುತ್ತಲೇ ತಮ್ಮ ರಾಜಕೀಯ ಕಾರ್ಯವೈಖರಿ ಮೂಲಕ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಅವರು ಕ್ಷೇತ್ರದ ಮತದಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಅಂತಾರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ ಆಯೋಜಿಸಿದ್ದೇನೆ ಎಂದು ಶಾಸಕ …
Read More »ಕನ್ಹೇರಿ ಸಿದ್ದಗಿರಿಯ ಪಂಚಮಹಾಭೂತ ಲೋಕೋತ್ಸವಕ್ಕೆ ಪ್ರದಾನಿ ಮೋದಿ ಬರ್ತಾರೆ.
ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ಹೇರಿ ಸಿದ್ದಗಿರಿ ಮಹಾಸಂಸ್ಥಾನದ ಕಾಡಸಿದ್ದೇಶ್ವರ ಮಠದ ಬಳಿ ಮುಂಬರುವ ಫೆಬ್ರವರಿ ೨೦ರಿಂದ ೨೬ರವರೆಗೆ ೬೫೦ ಎಕರೆ ಭವ್ಯ ಪ್ರದೇಶದಲ್ಲಿ ಸುಮಂಗಲಮ್ ಪಂಚಮಹಾಭೂತ ಲೋಕೋತ್ಸವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರ ಕಾರ್ಯಕ್ರಮದ ಕುರಿತು ಇನ್ನೂ ದಿನಾಂಕ …
Read More »ಬೆಳಗಾವಿಯ ಸಾಂಬ್ರಾ ವಿನಾನ ನಿಲ್ಧಾಣ international Airport ಆಗಲಿ- ಟೋಪಣ್ಣವರ.
ಬೆಳಗಾವಿ- ಕರ್ನಾಟಕ,ಮಹಾರಾಷ್ಟ್ರ ಮತ್ತು ಗೋವಾ ಮೂರು ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣ ಅಂತರಾಷ್ಟ್ರೀಯ ವಿಮಾನ ನಿಲ್ಧಾಣವಾಗಲು ಅರ್ಹವಾಗಿದ್ದು,ಇದನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವನ್ನಾಗಿ ಮೇಲ್ದರ್ಜೆಗೆರಿಸುವಂತೆ ಆಪ್ ಮುಖಂಡ ರಾಜೀವ ಟೋಪಣ್ಣವರ ಒತ್ತಾಯಿಸಿದ್ದಾರೆ. ಬೆಳಗಾವಿ ವಿಮಾನ ನಿಲ್ಧಾಣ ಪ್ರಯಾಣಿಕರ ಓಡಾಟದ ವಿಚಾರದಲ್ಲಿ ರಾಜ್ಯದಲ್ಲೇ ಎರಡನೇಯ ಸ್ಥಾನ ಪಡೆದಿತ್ತು,ಇದನ್ನು ಸಹಿಸಲಾಗದ ಹುಬ್ಬಳ್ಳಿಯ ಬಿಜೆಪಿ ನಾಯಕರು ಖಾಸಗಿ ವಿಮಾನ ಸಂಸ್ಥೆಗಳ ಮೇಲೆ ಒತ್ತಡ ಹೇರಿ, ಬೆಳಗಾವಿಯ 12 ವಿಮಾನ ಸೇವೆಗಳನ್ನು …
Read More »ರಾತ್ರೋರಾತ್ರಿ ನಾಡದ್ರೋಹಿ ಎಂಇಎಸ್‌ಗೆ ಬಿಗ್ ಶಾಕ್ ಕೊಟ್ಟ ಬೆಳಗಾವಿ ಡಿಸಿ
ಬೆಳಗಾವಿ- ಚುನಾವಣೆ ಸಮೀಪ ಬಂದಾಗ ಕಾಲು ಕೆದರಿ ಕ್ಯಾತೆ ತೆಗೆಯುವ ನಾಡದ್ರೋಹಿ ಎಂಇಎಸ್ ಗೆ ಬೆಳಗಾವಿ ಡಿಸಿ ನಿತೇಶ್ ಪಾಟೀಲ ಲಗಾಮು ಹಾಕಿದ್ದಾರೆ. ರಾತ್ರೋರಾತ್ರಿ ನಾಡದ್ರೋಹಿ ಎಂಇಎಸ್‌ಗೆಬಿಗ್ ಶಾಕ್ ಕೊಟ್ಟ ಬೆಳಗಾವಿ ಡಿಸಿ,ಶಿವಸೇನೆ ಸಂಸದ ಧೈರ್ಯಶೀಲ್ ಮಾನೆಗೆ ಬೆಳಗಾವಿ ಗಡಿ ಪ್ರವೇಶ ನಿರ್ಬಂಧ ಹೇರಿ ನಿನ್ನೆ ರಾತ್ರಿ ಆದೇಶ ಹೊರಡಿಸಿದ್ದಾರೆ. ಜ. 17 ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿ ಡಿಸಿ ನಿತೇಶ ಪಾಟೀಲ ಆದೇಶ ಹೊರಡಿಸುವ ಮೂಲಕ …
Read More »ಬಂಪರ್ ಲಾಟರಿ ಹೊಡೆದ ಶಾಸಕ ಅಭಯ ಪಾಟೀಲ…!!!
ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ,ವಿಜಯಪೂರ ಮಹಾನಗರ ಪಾಲಿಕೆ,ಗೋವಾ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಹಗಲು ರಾತ್ರಿ ಶ್ರಮಸಿ ರಾಜ್ಯದ ಬಿಜೆಪಿ ನಾಯಕರ ಹಾಗೂ ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರೀತಿಗೆ ಪಾತ್ರರಾಗಿ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿರುವ ಶಾಸಕ ಅಭಯ ಪಾಟೀಲ ಬಂಪರ್ ಲಾಟರಿ ಹೊಡೆದಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕ್ಷೇತ್ರದ ಜನತೆಯಿಂದ ಮೀಸ್ಟರ್ …
Read More »ಬೆಳಗಾವಿ ಮೇಯರ್ ಉಪ ಮೇಯರ್, ಖುರ್ಚಿಗೆ ಜಾತಿ ಆಧಾರಿತ ಕಸರತ್ತು ….!!!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ,ಭಾಷಾ ಆಧಾರಿತ ಚುನಾವಣೆ ಕೈಬಿಟ್ಟು, ಪಕ್ಷ ಆಧಾರಿತ ಚುನಾವಣೆ ನಡೆದು 58 ರಲ್ಲಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ. ಅನೇಕ ತಾಂತ್ರಿಕ,ಮತ್ತು ಕಾನೂನಾತ್ಮಕ ತೊಡಕುಗಳಿಂದಾಗಿ ಒಂದು ವರ್ಷದ ನಂತರ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.ಫೆಬ್ರುವರಿ 6 ರಂದು ಬೆಳಗಾವಿ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಇಲೆಕ್ಷನ್ ನಡೆಯಲಿದೆ. ಮೇಯರ್ ಸ್ಥಾನ …
Read More »ಅಥಣಿ ಕಾಂಗ್ರೆಸ್ಸಿಗೆ ಹೊಸ ಶಕ್ತಿ ತುಂಬಿದ ಧರೆಪ್ಪ ಠಕ್ಕಣ್ಣವರ
ಬೆಳಗಾವಿ :ಅಥಣಿ ಮತ ವಿಧಾನಸಭಾ ಮತಕ್ಷೇತ್ರದಲ್ಲಿ ಯುವ ನಾಯಕ ಧರೆಪ್ಪ ಠಕ್ಕಣ್ಣವರ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಸಾಮಾಜಿಕ ಸೇವಾ ಕಾರ್ಯಗಳಿಂದ ಹಳ್ಳ-ಹಳ್ಳಿಗೂ ಚಿರಪರಿಚಿತರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಮಹೇಶ ಕುಮಠಳ್ಳಿ ಅವರು ಪಕ್ಷಾಂತರ ನಡೆಸಿದ್ದರಿಂದ ಅಥಣಿಯಲ್ಲಿ ಕಾಂಗ್ರೆಸ್ ಶೂನ್ಯಕ್ಕೆ ತಲುಪಿತ್ತು. ಈ ನಿಟ್ಟಿನಲ್ಲಿ ಅವರು ಪಕ್ಷ ಸಂಘಟನೆ ಜೊತೆ ಮತ್ತೆ ಹಿಂದಿನ ವರ್ಚಸ್ಸು ತರಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇಡೀ ಜಗತ್ತು …
Read More »