Breaking News
Home / Breaking News (page 27)

Breaking News

ಹಳ್ಳಿಯಲ್ಲಿ ಸರಣಿ ಸಾವು, ಇದು ದೇವಿಯ ಶಾಪವೆಂದು ನಂಬಿದ ಗ್ರಾಮಸ್ಥರು..!!

ಬೆಳಗಾವಿ-ಬೆಳಗಾವಿಯಲ್ಲಿ ದುರ್ಗೆ ಶಾಪಕ್ಕೆ 30ಜನ ಬಲಿ? ಆಗಿದ್ದಾರೆ ಎಂದು ಈ ಹಳ್ಳಿಯ ಜನ ನಂಬಿದ್ದಾರೆ.ದುರ್ಗಾದೇವಿಯ ಭಯಾನಕ ಶಾಪಕ್ಕೆ ಗುರಿಯಾದ್ರಾ ತುರನೂರ ಗ್ರಾಮದ ಜನ! ಅನ್ನೋದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಕೇವಲ ಒಂದೂವರೆ ತಿಂಗಳಲ್ಲಿಯೇ 30ಕ್ಕೂ ಅಧಿಕ ಜನರ ಬಲಿ ಪಡೀತಾ ದೇವಿಯ ಶಾಪ? ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿದೆ.ಪೂಜೆ ಸಲ್ಲಿಸುವ ಅರ್ಚಕನಿಂದ ದುರ್ಗಾದೇವಿ ಮೂರ್ತಿ ವಿರೂಪ ಹಿನ್ನೆಲೆ ಗ್ರಾಮದಲ್ಲಿ ಜನರ ಸಾವು …

Read More »

ಈ ಅವಮಾನ ಸಹಿಸಲು ಸಾಧ್ಯವೇ ಇಲ್ಲ.ಇದಕ್ಕೆ ಕತ್ತರಿ ಬೀಳಲೇ ಬೇಕು…!!

ಬೆಳಗಾವಿ- ಕನ್ನಡದ ಸೂಪರ್ ಸ್ಟಾರ್ ಅಪಹರಣ ಆದಾಗ ಅವರ ಬಿಡುಗಡೆಗೆ ಕರೀಂ ತೆಲಗಿ ಹಣ ಕೊಟ್ಟಿದ್ದರು. ಇಂತಹ ಒಂದು ವಿವಾದಾತ್ಮಕ ಅಂಶ ಈಗ Sony LIV ನ #Scam2003OnSonyLIV ನಲ್ಲಿ ಪ್ರಸ್ತಾಪ ಆಗಿದೆ..ಇದು ತೆಲಗಿ ಛಾಪಾ‌ಕಾಗದ ಹಗರಣ ಆಧರಿಸಿದ ಸತ್ಯ ಘಟನೆಯ ವೆಬ್ ಸಿರೀಸ್. ಇದರಲ್ಲಿ ಕನ್ನಡ ಚಿತ್ರರಂಗ ಹಾಗೂ ಸಂಬಂಧಿಸಿದವರ ಅನುಮತಿ ಪಡೆದು ಈ ಸನ್ನಿವೇಶ ಮಾಡಿದ್ರಾ? ಅನ್ನೋ ಪ್ರಶ್ನೆ ‌ಮೂಡಿದೆ.ಯಾಕಂದ್ರೆ ಈಗ ಬಿಡುಗಡೆ ಆಗಿರೋ ಭಾಗ ಎರಡರ …

Read More »

ಗ್ರಾಹಕರ ಸೋಗಿನಲ್ಲಿ ದೋಚಿದ್ದು ಗೊತ್ತಾಗಲಿಲ್ಲ..!!

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಇತ್ತೀಚಿಗೆ ಅಂಗಡಿಗಳ ಕೀಲಿ ಮುರಿದು ಕಳ್ಳತನ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿರುವ ಬೆನ್ನಲ್ಲಿಯೇ ಗ್ರಾಹಕರ ಸೋಗಿನಲ್ಲಿ ಬಂದ ಚಾಲಾಕಿಗಳು ಲಕ್ಷ ಲಕ್ಷ ಬೆಲೆಬಾಳುವ ಸೀರೆಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ಮೌಲ್ಯದ ಸೀರೆ ಕಳ್ಳತನ ಮಾಡಲಾಗಿದೆ.ಬೆಳಗಾವಿ ಖಡೇ ಬಜಾರ್ ವಿರೂಪಾಕ್ಷ ಬಟ್ಟೆ ಅಂಗಡಿಯಲ್ಲಿ ಕಳ್ಳತನ ನಡೆದಿದೆ.2ಲಕ್ಷ ಮೌಲದ್ಯ 8 ಕಾಂಚಿಪುರಂ ಸೀರೆ, 1 ಇಳಕಲ್, ರೇಷ್ಮೆ ಸೀರೆಗಳ …

Read More »

450 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಸಲಕರಣೆಗಳ ಖರೀದಿಗೆ ಅನುದಾನ ಬಿಡುಗಡೆ: ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಭರವಸೆ ಬೆಳಗಾವಿ, – ನಗರದಲ್ಲಿ ನಿರ್ಮಾಣವಾದ 250 ಬೆಡ್ ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಹಾಗೂ ಪೀಠೋಪಕರಣ, ಇನ್ನಿತರ ವೈದಕೀಯ ಸಕರಣೆಗಳ ಖರೀದಿಗೆ ಸದ್ಯದಲ್ಲೇ ಅನುದಾನ ಬಿಡುಗಡೆಗೆ ಸೂಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. …

Read More »

ದೀಪಾವಳಿ ಹಬ್ಬಕ್ಕೆ ವಾಯವ್ಯ ಸಾರಿಗೆ ಸಂಸ್ಥೆಯಿಂದ 500ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ

ಹುಬ್ಬಳ್ಳಿ : ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ರಾಜ್ಯದ ಹಾಗೂ ಹೊರ ರಾಜ್ಯಗಳ ವಿವಿಧ ಸ್ಥಳಗಳಿಂದ ಆಗಮಿಸುವ ಹಾಗೂ ಹಬ್ಬ ಮುಗಿಸಿಕೊಂಡು ಹಿಂದಿರುಗುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 500ಕ್ಕೂ ಹೆಚ್ಚು ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 11ರಂದು ವಾರಾಂತ್ಯ ಶನಿವಾರ, 12 ರಂದು ಭಾನುವಾರ,ನರಕ ಚತುರ್ದಶಿ, 13 ರಂದು ಸೋಮವಾರ ಅಮವಾಸೆ,ಲಕ್ಷ್ಮೀ ಪೂಜೆ ಹಾಗೂ 14ರಂದು ಮಂಗಳವಾರ ಬಲಿಪಾಡ್ಯಮಿ ಇದೆ. …

Read More »

ಸಿಎಂ ನೇತೃತ್ವದ ಸಚಿವರ ಬ್ರೇಕ್‌ಫಾಸ್ಟ್ ಸಭೆಗೆ ನನಗೆ ಆಹ್ವಾನವೇ ಬಂದಿಲ್ಲ.

ಬೆಳಗಾವಿ: ಸಿಎಂ ನೇತೃತ್ವದ ಸಚಿವರ ಬ್ರೇಕ್‌ಫಾಸ್ಟ್ ಸಭೆಗೆ ನನಗೆ ಆಹ್ವಾನವೇ ಬಂದಿಲ್ಲ ಎಂದು ಬೆಳಗಾವಿಯಲ್ಲಿ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಸ್ಪಷ್ಟನೆ ನೀಡಿದರು‌. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭೆಗೆ ನನಗೆ ಆಹ್ವಾನ ಇರಲಿಲ್ಲ, ಹುಷಾರೂ ಇರಲಿಲ್ಲ.ಹೀಗಾಗಿ ಸಿಎಂ ಕರೆದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ನಾನು ಭಾಗಿಯಾಗಿಲ್ಲ ಎಂದು ಸಿಎಂ ಬ್ರೇಕ್‌ಫಾಸ್ಟ್ ಸಭೆಗೆ ಗೈರಾಗಿದಕ್ಕೆ ಡಾ. ಶರಣಪ್ರಕಾಶ ಪಾಟೀಲ ಸ್ಪಷ್ಟನೆ ಕೊಟ್ಟರು‌. ಅವಕಾಶ ಕೊಟ್ಟರೆ ನಾನೂ ಸಿಎಂ ಆಗ್ತಿನಿ ಎಂಬ …

Read More »

ಸಿಎಂ ಮಾದ್ಯಮ ಸಲಹೆಗಾರ ಪ್ರಭಾಕರ ಬೆಳಗಾವಿಗೆ ಬರ್ತಾರೆ…!!

ಬೆಳಗಾವಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನ. 11 ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ತಿಳಿಸಿದರು. ನಗರದಲ್ಲಿ ಶುಕ್ರವಾರ ಕೆಯುಡಬ್ಲ್ಯುಜೆ ಜಿಲ್ಲಾ ಘಟಕದ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ವೇಳೆ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಮಹನೀಯರನ್ನು ಕೂಡ ಸನ್ಮಾನಿಸಲಾಗುವುದು ಎಂದು ಹೇಳಿದರು. ಇಡೀ …

Read More »

ಬೆಳಗಾವಿ: ಹಾಸಿಗೆಯಲ್ಲೇ ಗಂಡ ಖಲ್ಲಾಸ್ …..!!!

ಬೆಳಗಾವಿ-ರಾತ್ರಿ ಮಲಗಿದ್ದಾಗ ಪಕ್ಕದಲ್ಲೇ ಮಲಗಿದ್ದ ಗಂಡನ ಕತ್ತು ಹಿಸುಕಿ .ಕೊಲೆ ಮಾಡಿದ ಹೆಂಡತಿ ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾಳೆ. ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಬಳಿಕ ಕತ್ತು ಹಿಸುಕಿ ಗಂಡನ ಕೊಲೆ ಮಾಡಿಬಳಿಕ ಸಹಜ ಸಾವು ಎಂದು ಕಥೆ ಕಟ್ಟಿದ್ದ ಐನಾತಿ ಹೆಂಡತಿಯ ಬಣ್ಣ ಬಯಲಾಗಿದೆ.ಬಾಬು ಕಲ್ಲಪ್ಪ ಕರ್ಕಿ(೪೮) ಮೃತ ದುರ್ದೈವಿಯಾಗಿದ್ದಾನೆ. ಮಹಾದೇವಿ ಬಾಬು ಕರ್ಕಿ ಗಂಡನನ್ನ ಕೊಲೆ ಮಾಡಿದ ಹೆಂಡತಿ.ಈ ಘಟನೆ ನಡೆದಿದ್ದುಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ …

Read More »

ಎಂಇಎಸ್ ನಾಯಕರ ವಿರುದ್ಧ ಕೇಸ್….

ಬೆಳಗಾವಿ-ಕರಾಳ‌ ದಿನ ಆಚರಿಸಿದ ನಾಡದ್ರೋಹಿ ‌ಎಂಇಎಸ್‌ ನಾಯಕರಿಗೆ ಬೆಳಗಾವಿ ಪೊಲೀಸರ ‌ಶಾಕ್ ಕೊಟ್ಟಿದ್ದಾರೆ.ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ‌ ದಿನ ಆಚರಿಸಿ ಉದ್ಧಟತನ ಪ್ರದರ್ಶಿಸಿದ್ದ ಎಂಇಎಸ್‌ ನಾಯಕರ ವಿರುದ್ಧ ಕೇಸ್ ಹಾಕಿದ್ದಾರೆ. ಕರಾಳ ದಿನ ಆಚರಿಸಿದ 18 ಎಂಇಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಿರುವ ಬೆಳಗಾವಿ ಪೋಲೀಸರು.ಅನುಮತಿ ಇಲ್ಲದೇ ಕರಾಳ ದಿನ ಆಚರಿಸಿದ ಪುಂಡರ ವಿರುದ್ಧ.ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ. ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಮೆರೆದಿದ್ದ ನಾಡದ್ರೋಹಿಗಳು,ಅನುಮತಿ …

Read More »

ಮನೆ ಮುಂದೆ ಕನ್ನಡಜ್ಯೋತಿ ಬೆಳಗಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ

ಬೆಳಗಾವಿ, : ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಸಾರ್ವಜನಿಕರು ಮನೆಗಳ ಮುಂದೆ ರಂಗೋಲಿ ಹಾಕಿ, ಗಾಳಿಪಟಗಳನ್ನು ಹಾರಿಸಿ, ಹಣತೆ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸುವುದರೊಂದಿಗೆ ಸಂಭ್ರಮವನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿಕೊಂಡಿದ್ದಾರೆ. ನವೆಂಬರ್ 1 ರಂದು ಜಿಲ್ಲೆಯ ಎಲ್ಲರೂ ತಮ್ಮ ಮನೆಗಳ ಮುಂದೆ ಕೆಂಪು ಮತ್ತು …

Read More »