Breaking News
Home / Breaking News (page 563)

Breaking News

ಜಿ ಪಂ ಸಭೆಯಲ್ಲಿ ಶೂ ಹಗರಣ ಪ್ರತಿಧ್ವನಿ ವರದಿ ನೀಡಲು ಸೂಚನೆ

ಬೆಳಗಾವಿ-ಸೋಮವಾರ ಬೆಳಗಾವಿ ಜಿಲ್ಲಾ ಪಂಚಾಯತಿ ಸಭೆ ನಡೆಯಿತು ಪ್ರಥಮ ಸಭೆಯಲ್ಲಿಯೇ ಶಿಕ್ಷಣ ಇಲಾಖೆಯ ಶೂ ಹಗರಣ ಪ್ರತಿಧ್ವನಿಸಿತು ಈ ಹಗರಣದಲ್ಲಿ 25 ಕೋಟಿ ಆವ್ಯೆವಹಾರ ನಡೆದಿದೆ ಎಂದು ಸದಸ್ಯರು ಗಂಭಿರ ಾರೋಪ ಮಾಡಿದರು ಈ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಶಂಕರ ಮಾಡಲಗಿ ಬೆಳಗಾವಿ ಜಿಲ್ಲೆಯಲ್ಲಿ ಶೂ ಖರಿದಿಗೆ ಶಿಕ್ಷಣ ಿಲಾಖೆ 30 ಕೋಟಿ ಖರ್ಚು ಮಾಡಿದೆ ಶೂ ಬೆಲೆ 80 ರೂ ಇದೆ ಆದರೆ ಒಂದು ಜೋಡಿ ಶೂ …

Read More »

ಬೆಳಗಾವಿ ಜಿ ಪಂ ಸಾಮಾನ್ಯ ಸಭೆಯಲ್ಲಿ ಎಂ ಈ ಎಸ್ ಸದಸ್ಯರ ಪುಂಡಾಟಿಕೆ

ಬೆಳಗಾವಿ-ಸೋಮವಾರ ಬೆಳಗಾವಿ ಜಿಲ್ಲಾ ಪಂಚಾಯತಿಯ ಸಭಾ ಭವನದಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಎಂಇಎಸ್ ಸದಸ್ಯರು ಮರಾಠಿ ಭಾಷೆಯಲ್ಲಿ ಕಾಗದ ಪತ್ರಗಳನ್ನ ನೀಡುವಂತೆ ಆಗ್ರಹಿ ತಗಾದೆ ತಗೆದು ಪುಂಡಾಟಿಕೆ ನಡೆಸಿದಾಗ ಕನ್ನಡದ ಸದಸ್ಯರು ಒಗ್ಗಟ್ಟಾಗಿ ಎಂಇಎಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು ಸಭೆಯ ಕಲಾಪ ಾರಂಭವಾಗುತ್ತಿದ್ದಂತೆಯೇ ಎಂಇಎಸ್ ಸದಸ್ಯೆ ಸರಸ್ವತಿ ಪಾಟೀಲ ಮರಾಠಿ ಭಾಷೆಯಲ್ಲಿ ಕಾಗದ ಪತ್ರಗಳನ್ನು ನೀಡುವಂತೆ ಒತ್ತಾಯಿಸಿದಾಗ ಸದಸ್ಯ ಶಂಕರ ಮಾಡಲಗಿ ಅದಕ್ಕೆ ತೀವ್ರ ವಿರೋಧ …

Read More »

ಫ್ರೆಂಡಶಿಪ್ ಡೇ ಶಾಕ್ ಮಾಸ್ತಮರ್ಡಿಗ್ರಾಮದಲ್ಲಿ ಲವ್ ಮ್ಯಾರೇಜ್ ಫೇಲ್ ಬಾವಿಗೆ ಹಾರಿ ತಾಯಿ ಮಗ ಆತ್ಮ ಹತ್ಯೆ

ಬೆಳಗಾವಿ-ಬೆಳಗಾವಿ ತಾಲುಕಿನ ಮಾಸ್ತಮರ್ಡಿ ಗ್ರಾಮದಲ್ಲಿ ಪತಿಯ ಕಿರುಕಳದಿಂದ ಬೆಸತ್ತ ಮಹಿಳೆಯೊಬ್ಬಳು ತನ್ನ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟಣೆ ನಡೆದಿದೆ ಶುಕ್ರವಾರ ತನ್ನ ಮಗನ ಜೊತೆ ಮನೆ ಬಿಟ್ಟ ಮಾಸ್ತಮರ್ಡಿ ಗ್ರಾಮದ ರೇಖಾ ಬಸವರಾಜ ಕುರಂಗಿ ಗ್ರಾಮದ ಹೊರವಲಯದಲ್ಲಿರುವ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ವಿಷಯ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ ಮಾಸ್ತಮರ್ಡಿ ಗ್ರಾಮದ ಬಸವರಾಜ ಕುರಂಗಿ ಮತ್ತು ರೇಖಾ ಜೊತೆ ನಾಲ್ಕು …

Read More »

ಮಳೆ ಹೊಡೆತಕ್ಕೆ ಬೆಳಗಾವಿ ರಸ್ತೆಗಳು ಚಿಂದಿ……… ಚಿಂದಿ……… ಸಂಚರಿಸಿದರೇ ಹೆರಿಗೆ ಗ್ಯಾರಂಟಿ

ಬೆಳಗಾವಿ: ಕಳೆದ ಮೂರು ವಾರಗಳಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ನಗರದ ಜನಜೀವನ ಅಸ್ತವ್ಯಸ್ಥವಾಗಿದೆ. ಜೊತೆಗೆ ನಗರದ ರಸ್ತೆಗಳು ಮಳೆ ಹೊಡೆತಕ್ಕೆ ಚಿಂದಿ ಚಿಂದಿಯಾಗಿ ಸ್ವರೂಪವನ್ನೇ ಕಳೆದುಕೊಂಡಿವೆ. ಬೆಳಗಾವಿ ನಗರದ ಕಾಲೇಜು ರಸ್ತೆ, ಬೋಗಾರವೇಸ್, ಪಿಶ್ ಮಾರ್ಕೆಟ್ ರಸ್ತೆ ಸೇರಿದಂತೆ ನಗರದ ಹಲವಾರು ಪ್ರಮುಖ ರಸ್ತೆಗಳು ಚಿದ್ರ ಚಿದ್ರವಾಗಿದ್ದು, ಈ ರಸ್ತೆಗಳಲ್ಲಿ ಗುಂಡಿಗಳು ತುಂಬಿಕೊಂಡಿವೆ. ಬೆಳಗಾವಿ ನಗರದ ಹಲವಾರು ಪ್ರಮುಖ ರಸ್ತೆಗಳನ್ನು ಗಮನಿಸಿದರೆ ಗುಂಡಿಗಳಲ್ಲಿ ರಸ್ತೆ ಇದೆಯೋ ಅಥವಾ …

Read More »

ಚ.ಕಿತ್ತೂರ ಅನಧಿಕೃತ ಕಟ್ಟಡಗಳ ತೆರವಿಗೆ ಸಚಿವರ ಸೂಚನೆ ಕಿತ್ತೂರ ಪ್ರಾಧಿಕಾರ ಸಭೆಗೆ ಶಾಸಕ ಇನಾಮದಾರ್ ಗೈರು

ಬೆಳಗಾವಿ: ಐತಿಹಾಸಿಕ ಚನ್ನಮ್ಮನ ಕಿತ್ತೂರು ಕೋಟೆಯ ನೂರು ಮೀಟರ್ ವ್ಯಾಪ್ತಿ ಪ್ರದೇಶದ ಒಳಗಡೆ ಇರುವ ಎಲ್ಲ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಕಿತ್ತೂರು ಪಟ್ಟಣ ಪಂಚಾಯಿತಿಗೆ ಸೂಚನೆ ನೀಡಿದ್ದಾರೆ. ಶನಿವಾರ ಚನ್ನಮ್ಮನ ಕಿತ್ತೂರಿನಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ ಅವರು, ಕಿತ್ತೂರು ಕೋಟೆ ಐತಿಹಾಸಿಕ ಸ್ಮಾರಕವಾಗಿದೆ. ಈ ಕೋಟೆ ಸುತ್ತಲೂ ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ. ಇದರಿಂದ ಕಿತ್ತೂರು ಕೋಟೆ …

Read More »

ಕೃಷ್ಣಾ ನದಿಗೆ ಇಂದು ಕೋಯ್ನಾ ನೀರು ಒಂಬತ್ತು ಸೇತುವೆಗಳ ಮುಳುಗಡೆ, ಜಮಖಂಡಿ ಮಿರಜ ಹೆದ್ದಾರಿ ಬಂದ್

ಬೆಳಗಾವಿ-ಸಹ್ಯಾದ್ರಿಯ ಮಡಿಲಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ನೆರೆಯ ಮಹಾರಾಷ್ಟ್ರದ ನದಿಗಳು ಊಕ್ಕಿ ಹರಿಯುತ್ತಿವೆ.ಮಹಾರಾಷ್ಟ್ರದ ಕೋಯ್ನಾ ಜಲಾಶಯ ಭರ್ತಿಯಾಗಿದ್ದು ಶನಿವಾರ ಮಧ್ಯಾಹ್ನದವರೆ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವ ಸಾಧ್ಯತೆಗಳಿವೆ.ಎಂದು ನಂಬಲರ್ಹ ಮೂಲಗಳು ತಿಳಿಸಿವೆ ಬೆಳಗಾವಿ ಜಿಲ್ಲೆಯ ಕೃಷ್ಣಾ,ವೇದಗಂಗಾ,ದೂದಗಂಗಾ, ನದಿಗಳ ಒಳ ಹರಿವು ಹೆಚ್ಚಾಗಿದೆ.ಕೃಷ್ಣಾ ನದಿಯಲ್ಲಿ 1ಲಕ್ಷ 52 ಸಾವಿರ ಕ್ಯುಸೆಕ್ಸ ನೀರು ಹರಿದು ಬರುತ್ತಿದೆ.ಹೀಗಾಗಿ ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಹಾಗು ರಾಯಬಾಗ ತಾಲೂಕಿನ ಎರಡು ಸೇತುವೆಗಳು …

Read More »

ಕಸದ ತೊಟ್ಟಿಯಾದ ರಾಣಿ ಚನ್ನಮ್ಮಾಜಿಯ ಸಮಾಧಿ

ಮೆಹಬೂಬ ಮಕಾನದಾರ ಬೆಳಗಾವಿ: ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಸಮಾದಿ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿರುವ ಐತಿಹಾಸಿಕ ಸಮಾದಿ ಹಂದಿ ನಾಯಿಗಳ ತಾಣವಾಗಿದ್ದು, ದೇಶ ರಕ್ಷಣೆಗಾಗಿ ಹೋರಾಡಿದ ವೀರ ಮಹಿಳೆಯ ಸಮಾಧಿ ಅನಾಥವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಸಮರ ಸಾರಿ ನಿನನಗೇಕೆ ಕೊಡಬೇಕು ಕಪ್ಪ ಎಂದು ಕೆಂಪ ಮುಂಗೋಸಿಗಳಿಗೆ ಪ್ರಶ್ನಿಸಿ ಹೋರಾಟದ ಇತಿಹಾಸವನ್ನು ನಿರ್ಮಿಸಿದ್ದ ವೀರ ರಾಣಿಯ ಸಮಾಧಿ …

Read More »

ಶಾಸಕ ಸೇಠ ಅವರಿಂದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಪರಶೀಲನೆ ಕಣಬರ್ಗಿ ಕನ್ನಡ ಶಾಲೆಯ ಅಬಿವೃದ್ಧಿಗೆ ೩೫ ಲಕ್ಷ ರೂ.

ಬೆಳಗಾವಿ- ಬೆಳಗಾವಿ ಊತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಸೇಠ ಅವರು ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಬೇಟಿ ನೀಡಿ ಶಾಲೆಗಳ ಪರಿಸ್ಥಿತಿಯನ್ನು ಪರಶೀಲಿಸಿದರು ಬೆಳಗಾವಿ ಊತ್ತರ ಮತಕ್ಷೇತ್ರದ ಕಣಬರ್ಗಿ ಕನ್ನಡ ಶಾಲೆ,ಕಾಕತಿವೇಸ್ ಊರ್ದು ಶಾಲೆ,ಪುಲಬಾಗ್ ಗಲ್ಲಿ, ಮಾಳಿಗಲ್ಲಿ ಸೇರಿದಂತೆ ಅನೇಕ ಶಾಲೆಗಳಿಗೆ ಬೇಟಿ ನೀಡಿದ ಶಾಸಕ ಸೇಠ ಪರಿಸ್ಥಿತಿಯನ್ನು ಪರಶೀಲಿಸಿದರು ಕಣಬರ್ಗಿ ಕನ್ನಡ ಶಾಲೆಗೆ ೩೫ಲಕ್ಷ,ಕಾಕತಿವೇಸ್ ಶಾಲೆಗೆ ೫ಲಕ್ಷ, ಮಾಳಿಗಲ್ಲಿ ಶಾಲೆಗೆ ೩ಲಕ್ಷ, ಅನುದಾನ ನೀಡಿ ಶಾಲಾ ಕೊಠಡಿ ನಿರ್ಮಾಣ …

Read More »

ಸಿಎಂ ಭೇಟಿಯಾದ ಕಲ್ಲಪ್ಪ ಕುಟುಂಬ, ಡಿವೈಎಸ್ಪಿ ಸಾವಿಗೆ ಕಾರಣರಾದವರನ್ನು ಶಿಕ್ಷಿಸಿ ಎಂದು ಆಗ್ರಹ

ಬೆಂಗಳೂರು: ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರ ಕುಟುಂಬ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದರು. ಕಲ್ಲಪ್ಪ ಹಂಡಿಭಾಗ್ ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಶೀಘ್ರ ಕ್ರಮಕೈಗೊಳ್ಳಿ ಎಂದು ಮೃತ ಪೊಲೀಸ್ ಅಧಿಕಾರಿ ಕುಟುಂಬ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ನಮ್ಮ ಮಗ ಅಮಾಯಕನಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಅತ್ಯಂತ ನಿಷ್ಠಾವಂತನಾಗಿ ಕಾರ್ಯನಿರ್ವಹಿಸಿದ್ದಾನೆ. ಆತನ ಆತ್ಮಹತ್ಯೆ ಹಿಂದಿನ …

Read More »

ಕೊಚ್ಚಿ ಹೋದ ರಸ್ತೆ…! ರೊಚಿಗೆದ್ದ ರೈತರು ರಸ್ತೆ ದುರಸ್ತಿಗೆ ಆಗ್ರಹಿಸಿ ಸಾಂಬ್ರಾ ರೈತರಿಂದ ರಸ್ತೆ ತಡೆ

ಬೆಳಗಾವಿ- 53 ಲಕ್ಷ ರುಪಾಯಿ ಖರ್ಚುಮಾಡಿ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾದ ರಸ್ತೆಯು ಆರು ತಿಂಗಳಲ್ಲಿ ಕೊಚ್ಚಿ ಹೋಗಿದ್ದು ರಸ್ತೆ ದುರಸ್ತಿಗೆ ಆಗ್ರಹಿಸಿ ಸಾಂಬ್ರಾ ಗ್ರಾಮದ ರೈತರು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು ಸಾಂಬ್ರಾ ವಿಮಾಣ ನಿಲ್ದಾಣದ ಬಳಿ ರೈತರಿಗೆ ಹೊಲಗದ್ದೆಗಳಿಗೆ ಹೋಗಲು ಅನಕೂಲವಾಗುವಂತೆ 53 ಲಕ್ಷ ರುಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸಲಾಗಿತ್ತು ಆದರೆ ಈ ರಸ್ತೆ ಆರು ತಿಂಗಳಲ್ಲಿಯೇ ಮಳೆ ನೀರಿನಲ್ಲಿ …

Read More »