Breaking News

LOCAL NEWS

ಶುಕ್ರವಾರ ಬೆಳಗಾವಿ ಜಿಲ್ಲೆಯ ಮೂರು ಲಕ್ಷ ಜನರಿಗೆ ಡೋಸ್…

ಸೆ.17 ರಂದು ಲಸಿಕಾಮೇಳ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆಗೆ ಕ್ರಮ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೆಳಗಾವಿ, –  ಇದೇ ಶುಕ್ರವಾರ (ಸೆ.17) ನಡೆಯಲಿರುವ ಲಸಿಕಾ ಮೇಳದ ಸಂದರ್ಭದಲ್ಲಿ ಸರಕಾರದಿಂದ ಪೂರೈಸುವ ಲಸಿಕೆಗಳನ್ನು ನಗರದ ಎಲ್ಲ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಲಸಿಕಾ ಮೇಳದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಸೆ.15) ನಡೆದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು. …

Read More »

ಬೆಳಗಾವಿ, ಜಿಲ್ಲಾ ಆಸ್ಪತ್ರೆಯಿಂದ ಆರೋಪಿ ಪರಾರಿ,ಕೇವಲ ಒಂದು ತಾಸಿನಲ್ಲಿ ಮತ್ತೇ ಸರೆಸ್ಟ್…

ಬೆಳಗಾವಿ-ಪೋಸ್ಕೋ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿ ಮೆಡಿಕಲ್ ಟೆಸ್ಟ್‌ ಗಾಗಿ ಜಿಲ್ಲಾ ಆಸ್ಪತ್ರೆಗೆ ತರಲಾಗಿದ್ದ ಆರೋಪಿಯೊಬ್ನ ಪರಾರಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪೋಸ್ಕೋ ಪ್ರಕರಣಕ್ಕೆ ಸಮಂಧಿಸಿದಂತೆ ….ಎಂಬ ಆರೋಪಿಯನ್ನು ಕಾಕತಿ ಪೋಲೀಸರು ಬಂಧಿಸಿ ಮೆಡಿಕಲ್ ಟೆಸ್ಟ್ ಮಾಡಲು ಆತನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ತರಲಾಗಿತ್ತು,ಆದ್ರೆ ಈ ಆರೋಪಿ ಪೋಲೀಸರ ಕಣ್ಣುತಪ್ಪಸಿ ಆಸ್ಪತ್ರೆಯಿಂದ ಪರಾರಿ ಆಗಿದ್ದಾನೆ. ಆರೋಪಿಯ ಪತ್ತೆಗೆ ಪೋಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.ಪರಾರಿಯಾದ ಆರೋಪಿ ಪೋಸ್ಕೋ ಪ್ರಕರಣದ ಆರೋಪಿ ಆಗಿರುವದರಿಂದ ಆರೋಪಿಯ ಹೆಸರು …

Read More »

ಬೆಳಗಾವಿಯಲ್ಲಿ ಎರಡು ದಿನ ಸಿಎಂ ಬೊಮ್ಮಾಯಿ..

ಬೆಳಗಾವಿ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆಪ್ಟೆಂಬರ್ 25,ಹಾಗೂ 26 ರಂದು ಎರಡು ದಿನ ಬೆಳಗಾವಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ,ಶಾಸಕರು ಸಿಎಂ ಬೊಮ್ಮಾಯಿ ಅವರನ್ನು ಅಭಿನಂದಿಸಲು ಬೆಂಗಳೂರಿಗೆ ಹೋದ ಸಂಧರ್ಭದಲ್ಲಿ 25,ಹಾಗೂ26 ರಂದು ಎರಡು ದಿನ ಬೆಳಗಾವಿಯಲ್ಲೇ ಇರುತ್ತೇನೆ,ಬೆಳಗಾವಿ ಅಭಿವೃದ್ಧಿಗೆ ಸಮಂಧಿಸಿದ. ವಿಚಾರವನ್ನು ಅಲ್ಲೇ ಚರ್ಚೆ ಮಾಡೋಣ ಎಂದು ಸಿಎಂ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಆದ ಬಳಿಕ ಎರಡನೇಯ ಬಾರಿಗೆ ಬೆಳಗಾವಿಗೆ ಬರುತ್ತಿರುವ ಬಸವರಾಜ ಬೊಮ್ಮಾಯಿ …

Read More »

ಗುಟಕಾ ಉದ್ರಿ ಕೊಡಲಿಲ್ಲ ಎಂದು ಕೊಚ್ಚಿ ಕೊಲೆ ಮಾಡಿದ‌….

ಬೆಳಗಾವಿ- ನಿನ್ನೆ ಮದ್ಯರಾತ್ರಿ ಬೆಳಗಾವಿಯ ವಡಗಾವಿ ಪ್ರದೇಶದ ಲಕ್ಷ್ಮೀ ನಗರದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪಾನ್ ಅಂಗಡಿ ಮಾಲೀಕನ ಕೊಲೆಯಾದ ಅಂಶ ಬೆಳಕಿಗೆ ಬಂದಿದೆ. ಕಳೆದ 25 ವರ್ಷಗಳಿಂದ ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ಪಾನ್ ಅಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದ ಬಾಳಕೃಷ್ಣ ಶೆಟ್ಟಿ ಎಂಬಾತನನ್ನ ಕ್ಷುಲ್ಲಕ ಕಾರಣಕ್ಕಾಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಡಗಾವಿ ಪ್ರದೇಶದ ದತ್ತಾ ಜತ್ತಿನಕಟ್ಟಿ, ಎಂಬಾತ ದಿನನಿತ್ಯ ರಾತ್ರಿ ಹೊತ್ತ ಬಾಳಕೃಷ್ಣನ ಅಂಗಡಿಗೆ ಬಂದು ಗುಟಕಾ ಸಿಗರೇಟ್ ಉದ್ರಿ …

Read More »

ಬೆಳಗಾವಿಯಲ್ಲಿ ಪಾನ್ ಅಂಗಡಿ ಮಾಲೀಕನ ಮರ್ಡರ್….

ಬೆಳಗಾವಿ-ಪಾನ್ ಅಂಗಡಿ ಮಾಲೀಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ,ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿ ನಗರದ ವಡಗಾವಿ ಪ್ರದೇಶದಲ್ಲಿರುವ ಲಕ್ಷ್ಮೀ ನಗರದಲ್ಲಿ ನಡೆದಿದೆ. ಬೆಳಗಾವಿಯ ಶಹಾಪೂರ ಠಾಣೆ ವ್ಯಾಪ್ತಿಯಲ್ಲಿ ಬರುವ ವಡಗಾವಿ ಪ್ರದೇಶದ ಲಕ್ಷ್ಮೀ ನಗರದ ನಿವಾಸಿ ಪಾನ್ ಅಂಗಡಿ ನಡೆಸುತ್ತಿದ್ದ ಬಾಳಕೃಷ್ಣ ಶೆಟ್ಟಿ (50) ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ರಾತ್ರಿ 11-00 ಗಂಟೆಗೆ ನಡೆದಿದೆ. ಬಾಳಕೃಷ್ಣ ಶೆಟ್ಟಿ ಹಲವಾರು ವರ್ಷಗಳಿಂದ ಲಕ್ಷ್ಮೀ ನಗರದಲ್ಲಿ ಪಾನ್ ಅಂಗಡಿ …

Read More »

ಮೈ ಬೆಳಗಾವಿ” ಸಿಟಿಜನ್ ಮೊಬೈಲ್ ಆ್ಯಪ್

ಸ್ಮಾರ್ಟ್ ಸಿಟಿ: ಇಂಟಿಗ್ರೇಟೆಡ್ ಕಮಾಂಡ್‌ ಆ್ಯಂಡ್ ಕಂಟ್ರೋಲ್ ಸೆಂಟರ್: ಸಮನ್ವಯ ಸಭೆ ಅತ್ಯಾಧುನಿಕ ಸೌಲಭ್ಯಗಳ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ಬೆಳಗಾವಿ,): ಬೆಳಗಾವಿ ಮಹಾನಗರದಲ್ಲಿ ಈಗಾಗಲೇ 1,12,669 ಮನೆ/ಆಸ್ತಿಗಳಿಗೆ ಆರ್.ಎಫ್.ಐ.ಡಿ. ಟ್ಯಾಗ್ ಅಳವಡಿಸಲಾಗಿದೆ. ಕಸ ಸಂಗ್ರಹಕ್ಕೆ ಹೋದಾಗ ಕಡ್ಡಾಯವಾಗಿ ಟ್ಯಾಗ್ ರೀಡರ್ ಬಳಸಿದರೆ ಮಾತ್ರ ಆಯಾ ಮನೆಯ ಕಸ ಸಂಗ್ರಹದ ಖಚಿತ ಮಾಹಿತಿಯು ಲಭ್ಯವಾಗಲಿದೆ. ಆದ್ದರಿಂದ ಕಸ ಸಂಗ್ರಹಿಸುವಾಗ ಕಡ್ಡಾಯವಾಗಿ ಟ್ಯಾಗ್ ರೀಡರ್ ಬಳಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ …

Read More »

ಪಾಲಿಕೆ ಗದ್ದುಗೆ ಏರುವ ಮೊದಲೇ ಜನರ ಬಳಿಗೆ ಧಾವಿಸಿದ ಅಭಯ್..!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಹುಮತ ಪಡೆದುಕೊಂಡಿದೆ,ಪಕ್ಷದ 35 ಜನ ನಗರ ಸೇವಕರು ಚುನಾಯಿತ ರಾಗಿದ್ದು ಅವರು ಪ್ರತಿಜ್ಞಾವಿಧಿ ಸ್ವೀಕರಿಸುವ ಮೊದಲೇ ಈ ನಗರ ಸೇವಕರು ಜನರ ಬಳಿಗೆ ಧಾವಿಸುವ,ಎಲ್ಲರ ಸಮಸ್ಯೆ , ಆಲಿಸುವ,ವಿಭಿನ್ನವಾದ,ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಶಾಸಕ ಅಭಯ ಪಾಟೀಲ ಆಯೋಜಿಸಿದ್ದಾರೆ. ರವಿವಾರ, ದಿನಾಂಕ:12-09-2021 ಮುಂಜಾನೆ: 09:00 ಗಂಟೆಗೆ ಮಿಲೇನಿಯಮ್ ಉದ್ಯಾನದಲ್ಲಿ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಎಲ್ಲ ನಗರಸೇವಕರು ಭಾಗವಹಿಸಿ,ಸಂಘ ಸಂಸ್ಥೆಗಳ,ಬೀದಿ ವ್ಯಾಪಾರಿಗಳ,ವಿವಿಧ ಕಸುಬು ಮಾಡುತ್ತಿರುವ ಕಾರ್ಮಿಕರನ್ನು,ಬೆಳಗಾವಿಯಲ್ಲಿ ಇರುವ …

Read More »

ಬೆಳಗಾವಿ ಜಿಲ್ಲೆಯಲ್ಲಿ, ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ,ಹುಷಾರ್..!!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಇಂದು ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಶಾಕ್ ಕೊಟ್ಟಿದೆ,ಇಂದು ಏಕಾಏಕಿ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗಿದ್ದು ಇವತ್ತು ಬೆಳಗಾವಿ ಜಿಲ್ಲೆಯಲ್ಲಿ 93 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ತಾಲ್ಲೂಕಿನಲ್ಲಿ ಅತೀ ಹೆಚ್ಚು 45 ಸೊಂಕತರು ಪತ್ತೆಯಾಗಿದ್ದು ಅಥಣಿ ತಾಲ್ಲೂಕಿನಲ್ಲಿ 6,ಚಿಕ್ಕೋಡಿ ತಾಲ್ಲೂಕಿನಲ್ಲಿ 17,ಬೈಲಹೊಂಗಲದಲ್ಲಿ 6,ಹುಕ್ಕೇರಿ 4,ಗೋಕಾಕ್ 1,ಖಾನಾಪೂರ 3,ರಾಮದುರ್ಗ 2,ರಾಯಬಾಗ 4,ಸವದತ್ತಿಯಲ್ಲಿ 0, ಇತರೆ 5 ಒಟ್ಟು ಬೆಳಗಾವಿ ಜಿಲ್ಲೆಯಲ್ಲಿ 93 ಸೊಂಕಿತರು ಪತ್ತೆಯಾಗಿದ್ದಾರೆ. ಕಳೆದ ಎರಡು ವಾರಗಳಿಂದ ಬೆಳಗಾವಿ …

Read More »

ಅಭಯ ಪಾಟೀಲ ಸವಾರಿ…ಗುಪ್ತ ಸ್ಥಳಕ್ಕೆ ಉಸ್ತುವಾರಿ….!!!

ಬೆಳಗಾವಿ- ಇಂದು ಬೆಳಿಗ್ಗೆ ಬೆಳಗಾವಿ ನಗರದ ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೆಳಗಾವಿ ಜಿಲ್ಲಾ ಉಸ್ತುವಾರಿ,ಹಾಗೂ ಜಲಸಂಪನ್ಮೂಲ ಸಚಿವ ಗೋವೀಂದ್ ಕಾರಜೋಳ ಅವರು ಶಾಸಕ ಅಭಯ ಪಾಟೀಲ ಅವರೊಂದಿಗೆ ಆಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಗನ್ ಮ್ಯಾನ್ ,ಪಿಎ ಗಳನ್ನು ಸರ್ಕ್ಯುಟ್ ಹೌಸ್ ನಲ್ಲೇ ಬಿಟ್ಟು, ಎಸ್ಕಾಟ್ ಇಲ್ಲದೇ ಶಾಸಕ ಅಭಯ ಪಾಟೀಲ ಅವರ ಕಾರಿನಲ್ಲಿ ತೆರಳಿದ ಸಚಿವ ಗೋವೀಂದ್ ಕಾರಜೋಳ ಶಾಸಕ ಅಭಯ ಪಾಟೀಲರ ಜೊತೆ ಹೋಗಿದ್ದಾದರೂ ಎಲ್ಲಿ? …

Read More »

ಹೂವು ಖರೀದಿಗೆ ಫ್ಲಾವರ್ ಮಾರುಕಟ್ಟೆಗೆ ಮುಗಿಬಿದ್ದ ಜನರು

ಬೆಳಗಾವಿ: ಗಣೇಶ ಚತುರ್ಥಿ ಮುನ್ನಾ ದಿನವಾದ ಗುರುವಾರ ಜನರು, ವ್ಯಾಪಾಸ್ಥರು ನಗರದ ಹೂವು ಮಾರುಕಟ್ಟೆಗೆ ಹೂವು ಖರೀದಿಗೆ ಮುಗಿಬಿದ್ದ ಪರಿಣಾಮ ಜನಜಂಗು ಉಂಟಾಗಿತ್ತು. ಬೆಳಗ್ಗೆ 6 ಗಂಟೆಗೆ ವ್ಯಾಪಾರಸ್ಥರು, ಸಾರ್ವಜನಿಕರು ಮಾರುಕಟ್ಟೆಯತ್ತ ದೌಡಾಯಿಸಿದರು. ಮಧ್ಯಾಹ್ನ 12 ಗಂಟೆಯವರೆಗೂ ಖರೀದಿಯಲ್ಲಿ ತೊಡಗಿದ್ದರು. ಖರೀದಿಗೆ ಬಂದ ಜನರು, ರೈತರು ಹಾಗೂ ವ್ಯಾಪಾತಸ್ಥರು ರಸ್ತೆ ಬದಿಗೆ ವಾಹನಗಳನ್ನು ನಿಲ್ಲಿಸಿದ್ದರಿಂದ ಬೆಳಗ್ಗೆ 7 ರಿಂದ ಒಂದು ತಾಸು ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಹೂವು ಬೆಳಗಾರರಿಗೆ …

Read More »

ನಿಂತ ಲಾರಿಗೆ, ಬೈಕ್ ಡಿಕ್ಕಿ,ಬೆಳಗಾವಿಯ ಇಬ್ಬರು ಯುವಕರ ಸಾವು..

  ಬೆಳಗಾವಿ- ಹಾಯವೇ ಪಕ್ಕ ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬೆಳಗಾವಿ ನಗರದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಕತಿ ಗ್ರಾಮದ ಸಮೀಪದಲ್ಲಿರುವ ಬರ್ಡೆ ಧಾಭಾ ಬಳಿ ನಡೆದಿದೆ. ನಿನ್ನೆ ರಾತ್ರಿ ಬರ್ಡೆ ಧಾಭಾ ಬಳಿ, ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೆಳಗಾವಿಯ ಚವ್ಹಾಟ ಗಲ್ಲಿಯ ಯುವಕ ಶ್ರೀನಾಥ ಡಿ‌.ಪವಾರ,ಸದಾಶಿವ ನಗರದ ಯುವಕ, ರುಚಿತ.ಆರ್ .ಧುಮಾವತ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಇಬ್ಬರೂ ಯುವಕರು …

Read More »

ಗದ್ದಲದಲ್ಲಿ ಕಾಲ್ ರಿಸೀವ್ ಮಾಡಿ,ಆತ ಹೋಗಿದ್ದಾದರೂ ಎಲ್ಲಿ ..??

ಬೆಳಗಾವಿ- ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿಯೊಬ್ಬ,ತನ್ನ ವಾರ್ಡಿನಲ್ಲಿ ಸಂಬ್ರಮಿಸುತ್ತಿರುವಾಗ, ವಿಜಯೋತ್ಸವ ಆಚರಿಸುವ ಸಂಧರ್ಭದಲ್ಲಿ ಈ ವಿಜಯಶಾಲಿಗೆ ಮೋಬೈಲ್ ಕಾಲ್ ಬರುತ್ತೆ,ತಕ್ಷಣ ವಿಜಯೋತ್ಸವ ನಿಲ್ಲಿಸಿ,ಆತ ಹೋಗಿದ್ದಾದರೂ ಎಲ್ಲಿ‌.? ಆತ ಮಾಡಿರುವ ಕಾರ್ಯದ ಬಗ್ಗೆ ಕೇಳಿದ್ರೆ,ಕಣ್ಣೀರು ಕಪಾಳಕ್ಕೆ ಬರುವದರಲ್ಲಿ,ಸಂದೇಹವೇ ಇಲ್ಲ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ 7 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿ ಗೆದ್ದ, ಗಣಾಚಾರಿ ಗಲ್ಲಿಯ ಶಂಕರ ಪಾಟೀಲ. ಮಾಜಿ ಮಹಾಪೌರ ವಿಜಯ ಮೋರೆ ಅವರ …

Read More »

ನಾಳೆ ಬೆಳಿಗ್ಗೆ ಸುಮಾರು, 10 ಗಂಟೆಗೆ ಪಾಲಿಕೆ ಫಲಿತಾಂಶ ಕ್ಲಿಯರ್….!!!!

ಬೆಳಗಾವಿ- ಕಳೆದ ಮೂರು ವಾರಗಳಿಂದ ಪಕ್ಷದ ಟಿಕೆಟ್ ಗಾಗಿ ಗುದ್ದಾಡಿ,‌ನಂತರ ಒಂದು ವಾರ ವಾರ್ಡುಗಳಲ್ಲಿ ಸುತ್ತಾಡಿ,ಮತದಾರರನ್ನು ಓಲೈಸಿ ತಮ್ಮ ಅಸ್ತಿತ್ವಕ್ಕಾಗಿ ಶ್ರಮಿಸಿದ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ ಸೋಮವಾರ ಪ್ರಕಟವಾಗಲಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತದಾನ ಶುಕ್ರವಾರ ಮುಗಿದಿದೆ.ನಾಳೆ ಸೋಮವಾರ ಫಲಿತಾಂಶ ಪ್ರಕಟವಾಗಲಿದೆ. ಬೆಳಗಾವಿಯ ಬಿ.ಕೆ ಮಾಡೆಲ್ ಹೈಸ್ಕೂಲಿನಲ್ಲಿ ಮತ ಎಣಿಕೆ ಕೇಂದ್ರ ತೆರೆಯಲಾಗಿದೆ.ತ್ವರಿತ ಗತಿಯ ಮತ ಏಣಿಕೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು,ನಾಳೆ ಸೋಮವಾರ ಸುಮಾರು ಹತ್ತು …

Read More »

ಆರೋಪದಲ್ಲಿ ಸತ್ಯಾಂಶ ಇಲ್ಲ,-ಮಲ್ಲಮ್ಮನ ಬೆಳವಡಿ ,ಪಿಡಿಓ ಸ್ಪಷ್ಟನೆ

ಬೆಳಗಾವಿ-ಬೆಳವಡಿ ಗ್ರಾಮದ ಗ್ರಾಮಲೆಕ್ಕಾಧಿಕಾರಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವದಾಗಿ ಕೆಲವು ಮಾದ್ಯಮಗಳಲ್ಲಿ ಪ್ರಕಟವಾಗಿದ್ದು ಈ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಬೆಳವಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸ್ಪಷ್ಟೀಕರಣ ನೀಡಿದ್ದಾರೆ. ಈ ಕುರಿತು ಪತ್ರಿಕಾ ಸ್ಪಷ್ಟನೆ ಹೊರಡಿಸಿರುವ ಅವರುಇಂದು ಸೆಪ್ಟೆಂಬರ್ 3 ರಂದು ಕೆಲವು ಮಾದ್ಯಮಗಳಲ್ಲಿ ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹ ಎನ್ನುವ ಶಿರ್ಷಿಕೆಯಲ್ಲಿ ಸುದ್ಧಿ ಪ್ರಕಟವಾಗಿದ್ದು ಇದರಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು …

Read More »

ಮಹಾನಗರ ಪಾಲಿಕೆ ಚುನಾವಣೆಗೆ ಬೆಳಗಾವಿ ಸಜ್ಜು

ಬೆಳಗಾವಿ-ನಾಳೆ ಶುಕ್ರವಾರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತದಾನ,ಬೆಳ್ಳಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು ಮತದಾನಕ್ಕೆ ಬೆಳಗಾವಿ ಮಹಾನಗರ ಸಜ್ಜಾಗಿದೆ. ಒಟ್ಟು 58 ವಾರ್ಡ್ ಗಳಿಗೆ ನಡೆಯಲಿರುವ ಮತದಾನ.  58 ವಾರ್ಡ್‌ಗಳಿಗೆ ಒಟ್ಟು 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ- 55, ಕಾಂಗ್ರೆಸ್ – 45, ಎಂಇಎಸ್- 21, ಜೆಡಿಎಸ್-11, ಆಮ್ ಆದ್ಮಿ – 27, MIM- 7, ಉತ್ತಮ ಪ್ರಜಾಕೀಯ -1 SDPI- 1, ಪಕ್ಷೇತರರು- 217 …

Read More »