Breaking News

LOCAL NEWS

ಇದು ರೆಡಿ ಆಗಿದ್ದು ಇಲ್ಲೇ…ಪೋಸ್ಟ್ ಆಗಿದ್ದು ಅಲ್ಲೇ….ಸಂಜಯ ರಾವುತನ ಹುಚ್ಚಾಟ ನಾ..ಒಲ್ಲೇ…!!!

ವ್ಯಂಗ್ಯ ಚಿತ್ರ ಬಿಡಿಸಿದ್ದು ಇಲ್ಲೇ ಟ್ವಿಟರ್ ಎಂಟ್ರಿ ಆಗಿದ್ದು ಅಲ್ಲೇ..ಸಂಜಯ ರಾವುತನ ಆಟ ನಾ..ಒಲ್ಲೇ…!! ಬೆಳಗಾವಿ- ಮಹಾರಾಷ್ಟ್ರದಲ್ಲಿ ಮರಾಠಿಗರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿರುವ ಶಿವಸೇನೆ ಬೆಳಗಾವಿ ಗಡಿ ವಿಚಾರವನ್ನು ಕೆಣಕಿ, ಮುಗ್ದ ಮರಾಠಿಗರ ದಿಕ್ಕು ತಪ್ಪಿಸುವ ದುಸ್ಸಹಾಸ ಮಾಡುವ ಕಾರ್ಯ ಮಾಡುತ್ತಿದೆ. ಸ್ವಾಭಿಮಾನಿ ಕನ್ನಡಿಗರ ಮತ್ತೆ ಕೆಣಕಿದ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬೆಳಗಾಂವ ಫೈಲ್ಸ್’ ಅಂತಾ ಟ್ವಿಟ್ಟರ್‌ನಲ್ಲಿ ವಿವಾದಿತ ಪೋಸ್ಟ್ ಮಾಡಿ,ಮತ್ತೆ ಕಾಲು ಕೆದರಿ ಜಗಳಾಡುವ ಪುಂಡಾಟಿಕೆ …

Read More »

ಧಿಡೀರ್ ದೆಹಲಿಗೆ ಹಾರಿದ ರಮೇಶ್ ಜಾರಕಿಹೊಳಿ…..!!!!

ಬೆಳಗಾವಿ- ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬೆಳವಣಿಗೆಗಳ ಬೆನ್ನಲ್ಲೇ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಧಿಡೀರ್ ದೆಹಲಿಗೆ ಹಾರಿದ್ದು ,ಸಾಹುಕಾರ್ ನಡೆ ತೀವ್ರ ಕುತೂಹಲ ಮೂಡಿಸಿದೆ. ಇಂದು ಬೆಳಿಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಿಂದ ದೆಹಲಿಗೆ ತೆರಳಿದ ಅವರು ಇಂದು ಸಂಜೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸಂಪುಟ ಪುನಾರಚನೆ,ಅಥವಾ ವಿಸ್ತರಣೆ ಯುಗಾದಿ ಹಬ್ಬ ಮುಗಿದ ಬಳಿಕ ಎಪ್ರಿಲ್ …

Read More »

ಸಂಜೆ, ಸಂಗೀತದಲ್ಲಿ ರಂಗೇರಿದ ಸ್ವರಲೋಕ….

ಡಿಕೆ ಮೋಟಿವ್ ಆಶ್ರಯದಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆದ ರಂಗಬರಸೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಅಭಯ್ ಪಾಟೀಲ..! ಬೆಳಗಾವಿ: ಹಿರಿಯ ಪತ್ರಕರ್ತ ದಿಲೀಪ್ ಕುರುಂದವಾಡೆ ನೇತೃತ್ವದಲ್ಲಿ ಮುನ್ನೆಡೆಯುತ್ತಿರುವ ಡಿಕೆ ಮೋಟಿವ್ ಆಶ್ರಯದಲ್ಲಿ ಹೋಳಿ ಹಬ್ಬದ ಪ್ರಯುಕ್ತ ರಂಗಬರಸೆ ಕಾರ್ಯಕ್ರಮವನ್ನು ಬಲೂನ ಹಾರಿಸುವ ಮೂಲಕ ಶಾಸಕರಾದ ಅಭಯ್ ಪಾಟೀಲ, ಅನಿಲ ಬೆನಕ ಹಾಗೂ‌ ಡಿಸಿ ಎಂ.ಜಿ.ಹಿರೇಮಠ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ‌ಕಾರ್ಯಕ್ರಮದಲ್ಲಿ ಉದ್ಘಾಸಿ ಮಾತನಾಡಿದ ಶಾಸಕ ಅಭಯ್ …

Read More »

ಯಾವ ಬಸ್ ಎಲ್ಲಿ ಹೋಗತೈತಿ ಯಾವಾಗ ಬರತೈತಿ ನಿಮಗ ಗೊತ್ತಾಗತೈತಿ…!!

ಬೆಳಗಾವಿ- ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸ ಯೋಜನೆಗಳು, ಕಾರ್ಯ ಚಟುವಟಿಕೆಗಳು , ಮತ್ತು ಹೊಸ ಮಾರ್ಗಗಳು, ಪ್ರತಿಷ್ಠಿತ ಸಾರಿಗೆಗಳ ಕಾರ್ಯಾಚರಣೆ, ಸಂಸ್ಥೆಯ ವತಿಯಿಂದ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸೇವೆಗಳು ಮತ್ತು ಸೌಲಭ್ಯಗಳು ವಿದ್ಯಾರ್ಥಿ ಪಾಸುಗಳು, ಮತ್ತು ವಿವಿಧ ಮಾದರಿಯ ರಿಯಾಯಿತಿ ಪಾಸುಗಳು, ಪ್ರಾಸಂಗಿಕ ಕರಾರಿನ ಮೇಲೆ ಬಸ್ಸುಗಳನ್ನು ಪಡೆಯುವದು, ಸಾರ್ವಜನಿಕರ ಕುಂದುಕೊರತೆಗಳು, ಬಸ್ ನಿಲ್ದಾಣಗಳ ಸಂಪರ್ಕ ದೂರವಾಣಿ ಸಂಖ್ಯೆಗಳು, ಸಂಸ್ಥೆಯ ವ್ಯಾಪ್ತ್ತಿಯಲ್ಲಿ ಖಾಲಿ ಇರುವ ವಾಣಿಜ್ಯ ಮಳಿಗೆಗಳಿಗೆ ಸಂಬಂಧಪಟ್ಟ …

Read More »

ಕ್ಯಾಮರಾ ಇಲ್ಲದ ಜೈಲಿನಿಂದ ಪರಾರಿಯಾದ ಖೈದಿ…

ಬೈಲಹೊಂಗಲ- ಮುರಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆಯತ್ನ ಪ್ರಕರಣದಲ್ಲಿ ಬಂಧಿಸಲಾದ ವಿಚಾರಣಾಧೀನ ಖೈದಿ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಖಾದಿರಸಾಬ ಮದಾರಸಾಬ ರಾಜೇಖಾನ (೩೪) ಬುಧವಾರ ಮಧ್ಯಾಹ್ನ ಬೈಲಹೊಂಗಲ ಸಬ್ ಜೈಲ್ ದಿಂದ ಪರಾರಿಯಾದ ಘಟಣೆ ನಡೆದಿದೆ. ಕಳೆದ ೧೫ ದಿನಗಳ ಹಿಂದೆ ಕೊಲೆ ಪ್ರಕರಣದಲ್ಲಿ ಈತನನ್ನು ಬಂಧಿಸಿ, ಕಾರಾಗ್ರಹದಲ್ಲಿ ಇಡಲಾಗಿತ್ತು. ಈತನ ಮೇಲೆ ಮುರಗೋಡ ಠಾಣೆಯಲ್ಲಿ ಜಾತಿ ನಿಂದನೆ, ದೊಂಬಿ, ಸೇರಿ ಆರು ಪ್ರಕರಣಗಳು ದಾಖಲಾಗಿವೆ. ರೌಡಿ ಶೀಟರ್ …

Read More »

ಹೋಳಿ ಸಂಭ್ರಮದಿಂದ ವಂಚಿತರಾದ ಕಾಲೇಜಿನ ವಿಧ್ಯಾರ್ಥಿಗಳು..

*; *”ಕಲಿಕೆ ಹೆಸರಿನಲ್ಲಿ ಮಕ್ಕಳ ಸಹಜ ಬಿಡುವು ಕಸಿದುಕೊಳ್ಳುತ್ತಿರುವ ಶೈಕ್ಷಣಿಕ ವ್ಯವಸ್ಥೆ”* ಪ್ರಸಕ್ತ ಶೈಕ್ಷಣಿಕ ಸಾಲಿನ ಪಿಯುಸಿ ದ್ವಿತೀಯ ವರ್ಣದ ಪೂರ್ವಭಾವಿ ಪರೀಕ್ಷೆಗಳು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಆರಂಭವಾಗಿದ್ದು, ಹೋಳಿ ಹಬ್ಬದ ಓಕುಳಿಯ ದಿನದವಾದ ಇಂದು ಸಹಿತ ರಸಾಯನಶಾಸ್ತ್ರ ಹಾಗು ಸಂಖ್ಯಾಶಾಸ್ತ್ರ ಪರೀಕ್ಷೆಗಳು ಮುಂಜಾನೆ 9 ಗಂಟೆಯಿಂದ ಆರಂಭವಾಗಿವೆ. ಹಬ್ಬ ಹರಿದಿನಗಳು ಪರಸ್ಪರ ಮನಷ್ಯ ಸಂಬಂಧಗಳನ್ನು ಬೆಸೆಯುವ, ಮನುಷ್ಯ ಪ್ರೀತಿ ಹೆಚ್ಚಿಸುವ, ಆ ಮೂಲಕ ಮಾನಸಿಕ ಸ್ಥಿತಿಯನ್ನು ವಿಕಸಿಸುವುದಕ್ಕೆ …

Read More »

ಮಿಲಿಟರಿ ಡ್ರೆಸ್ ಹಾಕಿಕೊಂಡು ಜೇಮ್ಸ್ ನೋಡಲು ಬಂದ ಯೋಧ

ಬೆಳಗಾವಿ-ಗಡಿನಾಡು ಗುಡಿ ಬೆಳಗಾವಿಯಲ್ಲಿ ಈಗ ಅಪ್ಪು ಅಭಿನಯಿಸಿದ ಜೇಮ್ಸ್ ಚಿತ್ರದ ಹವಾ ಜೋರಾಗಿದೆ.ನಿವೃತ್ತ ಯೋಧನೊಬ್ಬ ಸೇನಾ ಸಮವಸ್ತ್ರ ಧರಿಸಿ ಕುಟುಂಬ ಸಮೇತ ಜೇಮ್ಸ್ ಚಿತ್ರ ನೋಡಲು ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಬೆಳಗಾವಿಯ ಚಿತ್ರಾ ಚಿತ್ರಮಂದಿರಕ್ಕೆ ಕುಟುಂಬ ಸಮೇತ ಬಂದ ನಿವೃತ್ತ ಯೋಧ ಜೇಮ್ಸ್ ಚಿತ್ರ ನೋಡಿ ಅಪ್ಪು ಅವರನ್ನು ಸ್ಮರಿಸಿದ್ದಾನೆ.ಕುಂದಾನಗರಿ ಬೆಳಗಾವಿಯಲ್ಲಿ ಜೇಮ್ಸ್ ಮೇನಿಯಾ ಜೋರಾಗಿದ್ದು ಕೇಕ್ ಕಟ್ ಮಾಡುವ ಮೂಲಕ ನಿವೃತ್ತ ಯೋಧ ವಿನಾಯಕ ಮೇದಾರ್ ಪುನೀತ್ …

Read More »

ಹಿಜಾಬ್ ವಿವಾದ ಸುಪ್ರೀಂ ಕೋರ್ಟಿನಲ್ಲಿ ಇವತ್ತು ಏನಾಯ್ತು ಗೊತ್ತಾ…???

ಬೆಂಗಳೂರು,-ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಬಳಿಕ ಹಿಜಾಬ್ ವಿವಾದ ಈಗ ಸುಪ್ರೀಂ ಕೋರ್ಟಿನ ಮೆಟ್ಟಿಲು ಏರಿದ್ದು,ಹಿಜಾಬ್ ಅರ್ಜಿ ತುರ್ತು ವಿವಾರಣೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾರ್ಚ್ 16; ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ. ಅರ್ಜಿಯ ತುರ್ತು ವಿಚಾರಣೆಗೆ ಕೋರ್ಟ್‌ ನಿರಾಕರಿಸಿದೆ. ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ …

Read More »

ನಾಳೆ ಕರ್ನಾಟಕ ಬಂದ್ ಗೆ ಮುಸ್ಲಿಂ ಶರಿಯತ್ ಸಂಘಟನೆ ಕರೆ….

ಬೆಂಗಳೂರು : ಹಿಜಾಬ್‌ಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಕೆಲವು ಮುಸ್ಲಿಂ ಸಂಘಟನೆಗಳು, ಆಕ್ರೋಶ ಹೊರ ಹಾಕಿದ್ದು ಅಮೀರ್-ಎ-ಶರಿಯತ್ ನಾಳೆ, ಮಾರ್ಚ್ 17 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಕೋರ್ಟ್ ತೀರ್ಪು ನಿರಾಶಾದಾಯಕವಾಗಿದ್ದು, ನಾಳೆ ಶಾಂತಿಯುತವಾಗಿ ಬಂದ್ ನಡೆಸಬೇಕು ಎಂದು ಅಮೀರ್-ಇ-ಶರಿಯತ್ ಮುಖಂಡ ಮೌಲಾನಾ ಸಗೀರ್ ಅಹಮದ್ ಕರೆ ನೀಡಿದ್ದಾರೆ. ಬಲವಂತದ ಬಂದ್ ಆಗಲಿ, ಜಾಥಾ , ಮೆರವಣಿಗೆ ಆಗಲಿ ಮಾಡಬಾರದು ಎಂದು ಅವರು …

Read More »

ಬೆಳಗಾವಿಯಲ್ಲಿ ಬೆಳ್ಳಂ ಬೆಳಿಗ್ಗೆ ಬೀಲ್ಡರ್ ನ ಮರ್ಡರ್….

ಬೆಳಗಾವಿ-ಕುಂದಾನಗರಿಯಲ್ಲಿ ಬೆಳಂ ಬೆಳಗ್ಗೆ ಓರ್ವ ಬಿಲ್ಡರ್ ನ ಮರ್ಡರ್ ಆಗಿದೆ. ಕಾರದ ಪುಡಿ ಎರಚಿ ಬಿಲ್ಡರ್ ಬರ್ಬರ ಹತ್ಯೆ ಮಾಡಲಾಗಿದೆ. ಬೆಳಗಾವಿ: ಬೆಳಗಾವಿಯಲ್ಲಿ ‌ಬೆಳಂಬೆಳಗ್ಗೆ ನೆತ್ತರು ಹರಿದಿದೆ. ಕಣ್ಣಿಗೆ ಕಾರದ ಪುಡಿ ಎರಚಿ ಓರ್ವ ಬೀಲ್ಡರ್ ನ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಗರದ ಗುರುಪ್ರಸಾದ್ ಕಾಲೊನಿಯಲ್ಲಿ ಈ ಘಟನೆ ನಡೆದಿದೆ. ಬಿಲ್ಡರ್ ರಾಜು ದೊಡ್ಡಬಣ್ಣವರ (46) ಹತ್ಯೆಯಾದ ದುರ್ದೈವಿ. ಬೆಳಗಾವಿ ತಾಲ್ಲೂಕಿನ ‌ಬಸ್ತವಾಡ ಗ್ರಾಮದ ರಾಜು ಸದ್ಯ ಭವಾನಿ ನಗರದಲ್ಲಿ …

Read More »

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶವಿಲ್ಲ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಅಸ್ತು…

ಬೆಂಗಳೂರು- ಅನೇಕ ವಿವಾದಗಳಿಗೆ ಕಾರಣವಾಗಿದ್ದ ಹಿಜಾಬ್ ಕುರಿತು ಇವತ್ತು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಸರ್ಕಾರದ ಆದೇಶಕಾನೂನುಬದ್ಧವಾಗಿದೆ. ಸರ್ಕಾರದ ಡ್ರೆಸ್ ಕೋಡ್ ಪ್ರಶ್ನೆ ಮಾಡುವ ಹಾಗಿಲ್ಲ, ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ನ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇಂದು ಮಂಗಳವಾರ(ಮಾರ್ಚ್ 15)ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ …

Read More »

ಬೆಳಗಾವಿಯಲ್ಲಿ ಕ್ರಿಯಾಶೀಲವಾದ ಆಮ್ ಆದ್ಮಿ ಪಾರ್ಟಿ..

ಬೆಳಗಾವಿ ಜಿಲ್ಲೆಯ ಭ್ರಷ್ಟಾಚಾರ ಪ್ರಕರಣಗಳಲ್ಲಿ 9 ವರ್ಷ ಕಳೆದರೂ ಆರೋಪಿತರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುವಂತೆ ಆಗ್ರಹಿಸಿ ಸೋಮವಾರ ಆಮ್ ಆದ್ಮಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಎಸಿಬಿ ಎಸ್ಪಿ ಮೂಲಕ ಎಸಿಬಿ ಮುಖ್ಯಸ್ಥರಿಗೆ ಮನವಿ ರವಾನಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಭ್ರಷ್ಟಾಚಾರ, ಅಕ್ರಮ ಆಸ್ತಿ ಕಬಳಿಕೆ ಮಾಡಿರುವ ದೂರು ನೀಡಿದ 9 ವರ್ಷ ಕಳೆದರೂ ಬೆಳಗಾವಿ ಎಸಿಬಿ ( ಭ್ರಷ್ಟಾಚಾರ ನಿಗ್ರಹ ದಳ) ಇಲ್ಲಿಯವರೆಗೂ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿ …

Read More »

ಅಭಯ ಪಾಟೀಲ್ ಫೇಸ್ ಬುಕ್ ಪೇಜ್ ಹ್ಯಾಕ್…..!!!

ಬೆಳಗಾವಿ-ಸಾಮಾಜಿಕ ಕಾರ್ಯಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧಿ ಪಡೆದಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಫೇಸ್ ಬುಕ್ ಪುಟವನ್ನು ಕೆಲವು ಕಿಡಗೇಡಿಗಳು ಹ್ಯಾಕ್ ಮಾಡಿದ್ದಾರೆ. ಅಭಯ ಪಾಟೀಲ ಎಂಬ ಹೆಸರಿನಲ್ಲಿದ್ದ ವೇರಿಫೈಡ್ ಪೇಸ್ ಬುಕ್ ಪೇಜ್ ಹ್ಯಾಕ್ ಆಗಿದ್ದು, ಈ ಕುರಿತು ಶಾಸಕ ಅಭಯ ಪಾಟೀಲ ಬೆಳಗಾವಿಯ ಸೈಬರ್ ಕ್ರೈಂ, ಸಿಇಎನ್ ಪೋಲೀಸ್ ಠಾಣೆಗೆ ದೂರು ನೀಡಿದ್ದು ಇನೆಸ್ಪೆಕ್ಟರ್ ಗಡ್ಡೇಕರ ಅವರು ದೂರು ದಾಖಲಿಸಿಕೊಂಡು ವಿಚಾರಣೆ …

Read More »

ಬೆಳಗಾವಿ ಜಿಲ್ಲೆಯ ಸಾವಿರಾರು ಪ್ರಕರಣಗಳು ಇತ್ಯರ್ಥ..

ಬೆಳಗಾವಿ-ರಾಷ್ಡ್ರೀಯ ಲೋಕ ಅದಾಲತ್ ಅಂಗವಾಗಿ ಬೆಳಗಾವಿ ಜಿಲ್ಲೆಯ 81 ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸಾವಿರಾರು ಪ್ರಕರಣಗಳು ಒಂದೇ ದಿನ ಇತ್ಯರ್ಥ ವಾಗಿವೆ. ಬೆಳಗಾವಿ ಜಿಲ್ಲೆಯಾದ್ಯಂತ 81 ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಅದಾಲತ್‌ಗೆ ಕಕ್ಷಿದಾರರು ಮತ್ತು ನ್ಯಾಯವಾದಿಗಳಿಂದ ಉತ್ತಮ ಸಹಕಾರ ದೊರೆತಿದ್ದು, ಒಂದೇ ದಿನದಲ್ಲಿ 12514 ವಿವಿಧ ಕೇಸ್‌ಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ ಜೋಶಿ ಅವರು ತಿಳಿಸಿದ್ದಾರೆ. ಶನಿವಾರ ಸಂಜೆ ಪತ್ರಿಕಾ ಪ್ರಕಟಣೆಯ …

Read More »

ಭೂಮಿ ಪೂಜೆ ನೆರವೇರಿಸಿ,ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದ ಶಾಸಕಿ …

ಖಾನಾಪೂರ ಬಸ್ ನಿಲ್ಧಾಣ ಶಂಕು ಸ್ಥಾಪನೆ ವಿಚಾರದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಕಿತ್ತಾಟ ನಡೆದಿದೆ.ಇದರ ನಡುವೆ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಬೆಂಬಲಿಗರೊಂದಿಗೆ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಶಂಕು ಸ್ಥಾಪನೆ ನೆರವೇರಿಸಿ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. 2020 ರಲ್ಲಿ ಖಾನಾಪೂರ ಬಸ್ ನಿಲ್ಧಾಣದ ಕಾಮಗಾರಿಗೆ 7.35 ಕೋಟಿ ಹಣ ಮಂಜೂರಾಗಿತ್ತು 2022 ಜನೇವರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆ ದಾರನಿಗೆ ವರ್ಕ್ ಆರ್ಡರ್ ಕೊಡಲಾಗಿತ್ತು.ಆದ್ರೆ ಕಾಮಗಾರಿ ಶುರು …

Read More »