Breaking News

LOCAL NEWS

ಇಂದು ಸಂಜೆ ಗೋಕಾಕಿಗೆ ಸಿಎಂ….

ಬೆಳಗಾವಿ- ಗೋಕಾಕಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ, ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದೆ. ಇಂದು ಸಂಜೆ ಈ ಉತ್ಸವವನ್ನು ಸಿಎಂ ಇಬ್ರಾಹೀಂ ಉದ್ಘಾಟಿಸಲಿದ್ದಾರೆ. ಇಂದು ಮಧ್ಯಾಹ್ನ ಬೆಳಗಾವಿಗೆ ಆಗಮಿಸುವ ಸಿಎಂ ಇಬ್ರಾಹೀಂ, ಸಂಜೆ ಗೋಕಾಕಿಗೆ ತೆರಳಲಿದ್ದಾರೆ, ಗೋಕಾಕಿನ ಶೂನ್ಯ ಸಂಪಾದನ ಮಠ ಪ್ರತಿ ವರ್ಷ ಶರಣ ಸಂಸ್ಕೃತಿ ಉತ್ಸವ ನಡೆಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಗಣ್ಯರಿಗೆ ಕಾಯಕ ಶ್ರೀ ಪ್ರಶಸ್ತಿ ನೀಡುತ್ತ ಬಂದಿದ್ದು ಈ ವರ್ಷದ ಕಾಯಕ ಶ್ರೀ …

Read More »

ಬೆಳಗಾವಿ ಜಿಲ್ಲೆಗೆ ಸಿಹಿ ಸುದ್ದಿ….ಜಿಲ್ಲೆಯಲ್ಲಿ ಮಹಾಮಾರಿ ಫಿನೀಶ್…!!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಮೂರನೆಯ ಅಲೆ ಅಪ್ಪಳಿಸಿ ಈ ಅಲೆ ಈಗ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನೆಲೆ ಕಳೆದುಕೊಂಡಿದೆ‌. ಇಂದು ಬುಧವಾರ ಬಿಡುಗಡೆಯಾದ ಬೆಳಗಾವಿ ಜಿಲ್ಲೆಯ ಹೆಲ್ತ್ ಬುಲಿಟೀನ್ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ನೀಡಿದೆ‌‌. ಬೆಳಗಾವಿ ಮಹಾನಗರದಲ್ಲಿ ಇವತ್ತು ಕೊರೋನಾ ರಿಪೋರ್ಟ್ ಬಿಗ್ ಝಿರೋ ಆದ್ರೆ ಜಿಲ್ಲೆಯಾದ್ಯಂತ ಕೇವಲ ನಾಲ್ಕು ಜನ ಸೊಂಕಿತರು ಮಾತ್ರ ಪತ್ತೆಯಾಗಿದ್ದಾರೆ. ಬೆಳಗಾವಿ ತಾಲ್ಲೂಕಿನಲ್ಲಿ ಝಿರೋ ಖಾನಾಪೂರ 1 ,ರಾಮದುರ್ಗ 1,ಚಿಕ್ಕೋಡಿ 1, ಗೋಕಾಕ್ …

Read More »

ಯುದ್ಧ ಪೀಡಿತ ಉಕ್ರೇನ್ ದಲ್ಲಿ ಬೆಳಗಾವಿ ಜಿಲ್ಲೆಯ ಇನ್ನೂ 17 ಜನ ಸಿಲುಕಿದ್ದಾರೆ.

ಬೆಳಗಾವಿ-ಯುದ್ದಪೀಡಿತ ಉಕ್ರೇನ್ ದೇಶಕ್ಕೆ ಮೆಡಿಕಲ್ ಶಿಕ್ಷಣ ಪಡೆಯಲು ಹೋಗಿದ್ದ ಬೆಳಗಾವಿ ಜಿಲ್ಲೆಯ ಇನ್ನೂ 17 ಜನ ಸಿಲುಕಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಅವರನ್ನು ಭೇಟಿಯಾದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಉಕ್ರೇನ್‌ನಲ್ಲಿ ಬೆಳಗಾವಿಯ 19 ವಿದ್ಯಾರ್ಥಿಗಳು ಸಿಲುಕಿದ್ದು, ಇಬ್ಬರು ವಾಪಸ್ ಆಗಿದ್ದಾರೆ.ರಾಜ್ಯ ನೋಡಲ್ ಅಧಿಕಾರಿ ಡಾ.ಮನೋಜ್ ರಾಜನ್ ನಮಗೆ ಪಟ್ಟಿ ನೀಡಿದ್ದಾರೆ. ಆ ಪ್ರಕಾರ ಉಕ್ರೇನ್‌ನಲ್ಲಿ ಬೆಳಗಾವಿಯ 19 ವಿದ್ಯಾರ್ಥಿಗಳು ಇದ್ದರು. ಈಗಾಗಲೇ ಇಬ್ಬರು …

Read More »

ಬೆಳಗಾವಿಗೆ ಬಂತು ಗೋಲ್ಡ್ ಪ್ಲಸ್ ಗ್ಲಾಸ್ ಕಂಪನಿ…..

ಬೆಳಗಾವಿ- ಗ್ಲಾಸ್ ತಯಾರಿಕೆಯಲ್ಲಿ ದೇಶದಲ್ಲಿಯೇ ಎರಡನೇಯ ಅತೀ ದೊಡ್ಡ ಕಂಪನಿಯಾಗಿರುವ ಗೋಲ್ಡ್ ಪ್ಲಸ್ ಫ್ಲೋಟ್ ಗ್ಲಾಸ್ ಕಂಪನಿ ಈಗ ಸದ್ದಿಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಗ್ಲಾಸ್ ಉತ್ಪಾದನಾ ಘಟಕದ ನಿರ್ಮಾಣದ ಕಾಮಗಾರಿ ಆರಂಭಿಸಿದೆ. ಬೆಳಗಾವಿ ಜಿಲ್ಲೆಯ ಗಡಿಯಲ್ಲಿರುವ ನಿಪ್ಪಾಣಿ ಬಳಿಯ ಕನಗಲಾ ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕರ್ನಾಟಕ ಸರ್ಕಾರ ಈ ಕಂಪನಿಗೆ ಘಟಕ ಸ್ಥಾಪಿಸಲು 200 ಎಕರೆ ಜಮೀನು ನೀಡಿದೆ, ಇಲ್ಲಿ ಗೋಲ್ಡ್ ಪ್ಲಸ್ ಕಂಪನಿ ಘಟಕ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಿದ್ದು …

Read More »

ಬೆಳಗಾವಿ ಕಾಂಗ್ರೆಸ್ ಅಂಗಳದಲ್ಲಿ ಭರವಸೆಯ “ಕಿರಣ”…!!!

ಬೆಳಗಾವಿ- ಬೆಳಗಾವಿ ಕಾಂಗ್ರೆಸ್ ಈಗ ಫುಲ್ ಆಕ್ಟೀವ್ ಆಗಿದೆ. ನಿನ್ನೆ ಸೋಮವಾರ ಸದ್ದಿಲ್ಲದೇ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸಭೆ ನಡೆಸಿದ ಬೆಳಗಾವಿಯ ಕಾಂಗ್ರೆಸ್ ಮುಖಂಡರು, ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಯುವ ಕಾಂಗ್ರೆಸ್ ಮುಖಂಡ ಕಿರಣ ಸಾಧುನವರ ಅವರ ಹೆಸರನ್ನು ಆಲ್ ಮೋಸ್ಟ್ ಫೈನಲ್ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ನಿನ್ನೆ ಸೋಮವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸಭೆ ಸೇರಿದ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ …

Read More »

ಬೆಳಗಾವಿಗೆ ಗಡ್ಕರಿಯಿಂದ ಬಂಪರ್ ಲಾಟರಿ…..!!!

ಬೆಳಗಾವಿ, – ಕಿತ್ತೂರಿನಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ‌ಸಂಪೂರ್ಣವಾಗಿ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಬೆಳಗಾವಿ ಜಿಲ್ಲೆಯಿಂದ ಆರಂಭಿಸಲಾಗುವ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಅನುಷ್ಢಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ (ಫೆ‌28) ನಡೆದ ಒಟ್ಟು 3972 ಕೋಟಿ …

Read More »

ಎರಡು ವರ್ಷದ ಹಿಂದೆ ಮಗುವಿಗೆ ಜನ್ಮ ನೀಡಿದ ಮಾನಸಿಕ ಅಸ್ವಸ್ಥ ಮಹಿಳೆ ಈಗ ಮತ್ತೆ ಗರ್ಭಿಣಿ….!!

ಎರಡು ವರ್ಷದ ಹಿಂದೆ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಈಗ ಮತ್ತೆ ಅತ್ಯಾಚಾರ ನಡೆದಿದೆ. ಈ ಅಸ್ವಸ್ಥ ಮಹಿಳೆ ಗರ್ಭಿಣಿಯಾಗಿ ಜಿಲ್ಲಾ ಆಸ್ಪತ್ರೆಗೆ ಸೇರ್ಪಡೆಯಾಗಿದ್ದಾಳೆ. ಈ ಹಿಂದೆಯೂ ಅತ್ಯಾಚಾರ ಪ್ರಕರಣ ದಾಖಲು ಆಗಿರಲಿಲ್ಲ ,ಈ ಮಹಿಳೆ ಗರ್ಭಿಣಿ ಯಾಗಿ ಆಸ್ಪತ್ರೆ ಸೇರಿ ವಾರ ಕಳೆದರೂ ಇನ್ನೂವರೆಗೆ ಅತ್ಯಾಚಾರ ಪ್ರಕರಣ ದಾಖಲು ಆಗಿಲ್ಲ. ವಿಶೇಷ ವರದಿ (ಮೆಹಬೂಬ ಮಕಾನದಾರ) ಬೆಳಗಾವಿ- ಪ್ರಜ್ಞಾವಂತ ನಾಗರಿಕ ಸಮಾಜ ತಲೆತಗ್ಗಿಸುವ …

Read More »

ಬೆಳಗಾವಿ ಬಸ್ ನಿಲ್ಧಾಣದ ಕಾಮಗಾರಿ ಪರಶೀಲನೆ…

ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ .ಶಿವಯೋಗಿ ಸಿ.ಕಳಸದ, ಭಾಆಸೇ, ರವರು, ಸ್ಮಾರ್ಟ್ ಸಿಟಿಯಿಂದ ಕೈಗೊಂಡಿರುವ ಬೆಳಗಾವಿ ಸಿಟಿ ಬಸ್ ಟರ್ಮಿನಸ್ ಗೆ ಭೇಟಿ ನೀಡಿ ಕಾಮಗಾರಿ ಪರಿವೀಕ್ಷಣೆ ನಡೆಸಿದರು. ಹಾಗೆಯೇ ಎನ್‌ಡಬ್ಲ್ಯುಕೆಆರ್‌ಟಿಸಿ ನಿರ್ಮಿಸುತ್ತಿರುವ ಬೆಳಗಾವಿ ಬಸ್ ನಿಲ್ದಾಣವನ್ನು ಪರಿಶೀಲಿಸಿದ ಅವರು ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತು ಚರ್ಚಿಸಿದರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸದರಿ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಮಹಿಳಾ ಕೊಠಡಿ, ಬೇಬಿ ಕೇರ್ ಕೇಂದ್ರ, ಪಾರ್ಸೆಲ್ ಮತ್ತು ಕೊರಿಯರ್‌ಗಳ ಸೇವೆಗಳ‌ ಕೇಂದ್ರ, ಛಾವಣಿಗಳಿಗೆ …

Read More »

ಉಕ್ರೇನ್ ಟೂ ಬೆಳಗಾವಿ ರಿಟರ್ನ್ ಸಕ್ಸೆಸ್….!!!

ಬೆಳಗಾವಿ-ಯುದ್ಧಪೀಡಿತ ಉಕ್ರೇನ್‌ನಿಂದ ಬೆಳಗಾವಿ ಮೂಲದ ಮೆಡಿಕಲ್ ವಿಧ್ಯಾರ್ಥಿನಿ ಫೈಜಾ ಯಾವುದೇ ಅಡೆತಡೆ ಇಲ್ಲದೇ ತವರೂರಿಗೆ ಸುರಕ್ಷಿತವಾಗಿ ತಲುಪಿದ್ದಾಳೆ. ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದ ನಿವಾಸಿ ಆಗಿರುವ ಫೈಜಾ ಸುಬೇದಾರ್ ರೊಮೇನಿಯಾ ಗಡಿಗೆ ಬಂದು ಅಲ್ಲಿಂದ 12 ಗಂಟೆ ಪ್ರಯಾಣ ಮಾಡಿ ಮುಂಬೈ ಏರ್‌ಪೋರ್ಟ್‌ ತಲುಪಿ ಬೆಳಗಾವಿಗೆ ಮರಳಿದ್ದಾಳೆ. ನಿನ್ನೆ ರಾತ್ರಿ ಮುಂಬೈಗೆ ಆಗಮಿಸಿದ್ದ ಫೈಜಾ ಅಲ್ತಾಫ್ ಸುಬೇದಾರ್, ರೋಮೆನಿಯಾದಿಂದ ಮುಂಬೈಗೆ ಬಂದಿದ್ದ ಫೈಜಾ ಅವರ ತಂದೆ ಅಲ್ತಾಫ್ ಮಗಳನ್ನ ಬೆಳಗಾವಿಗೆ …

Read More »

ಪರಿಹಾರ….ಪರಿಹಾರ……ಪರಿಹಾರ…..!!!!

35 ಬನವಿ ಭಸ್ಮ; ಶಾಸಕ ಸತೀಶ್ ಜಾರಕಿಹೊಳಿ 10 ಸಾವಿರ ರೂ. ಪರಿಹಾರ ಘೋಷಣೆ ಬೆಳಗಾವಿ: ಭೂತರಾಯನಹಟ್ಟಿ ಗ್ರಾಮದಲ್ಲಿ 35 ಬನವಿಗೆ ಬೆಂಕಿ ತಗುಲಿ ಅಪಾರ ಹಾನಿಗೊಳಗಾದ ಕುಟುಂಬಸ್ಥರಿಗೆ ತಲಾ 10 ಸಾವಿರ ರೂ. ನೀಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಘೋಷಿಸಿದ್ದಾರೆ. ಶುಕ್ರವಾರ ಹೊಸ ವಂಟಮುರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೂತರಾಯನಹಟ್ಟಿ ಗ್ರಾಮದಲ್ಲಿ 35 ಬನವಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. …

Read More »

ಬಾಲಚಂದ್ರ ಜಾರಕಿಹೊಳಿ ಸಿಎಂಗೆ ಮನವಿ ಮಾಡಿದ್ದೇನು ಗೊತ್ತಾ…??

*ವಿದ್ಯಾರ್ಥಿಗಳು ಸುರಕ್ಷಿತವಾಗಿ ಕರೆ ತರಲು ಸಿಎಂಗೆ ಮನವಿ ಮಾಡಿರುವೆ: ಬಾಲಚಂದ್ರ ಜಾರಕಿಹೊಳಿ* ಮೂಡಲಗಿ: ಯುದ್ಧ ಸನ್ನಿವೇಶ ನಿರ್ಮಾಣವಾಗಿರುವ ಉಕ್ರೇನ್‌ನಲ್ಲಿ ಮೂಡಲಗಿ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಬೆಳಗಾವಿ ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿರುವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಈ …

Read More »

ಸುವರ್ಣಸೌಧದಲ್ಲಿ ಇವತ್ತು ಜಬರದಸ್ತ್ ಮೀಟೀಂಗ್ ಆಯ್ತು…!!

ಕಾಲಮಿತಿಯಲ್ಲಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಬೇಕು: ಸಚಿವ ಗೋವಿಂದ ಕಾರಜೋಳ ಬೆಳಗಾವಿ, ಫೆ.25(ಕರ್ನಾಟಕ ವಾರ್ತೆ): ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲಜೀವನ ಮಿಷನ್ ಯೋಜನೆಯ ಪ್ರಸಕ್ತ ಸಾಲಿನ ನಿಗದಿತ ಗುರಿಯನ್ನು ಮಾರ್ಚ್ ಅಂತ್ಯಕ್ಕೆ ಸಾಧನೆ ಮಾಡಬೇಕು; 2019 ರ ನೆರೆಹಾವಳಿ ಸಂದರ್ಭದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಮನೆ ಒದಗಿಸಬೇಕು; ಶೇ.100 ಗುರಿ ಸಾಧಿಸುವ ಮೂಲಕ ಕೋವಿಡ್ ಲಸಿಕಾಕರಣ ಸಂಪೂರ್ಣ ಯಶಸ್ವಿಗೊಳಿಸಬೇಕು. ಇದಲ್ಲದೇ ಎಲ್ಲ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ …

Read More »

ಬೆಳಗಾವಿ ಡಿಹೆಚ್ಓ ಮುನ್ಯಾಳ ನೀರಿಳಿಸಿದ ಮಿನಿಸ್ಟರ್….

ಬೆಳಗಾವಿ ಡಿಹೆಚ್ಓ ನೀರಿಳಿಸಿದ ಮಿನಿಸ್ಟರ್…. ಬೆಳಗಾವಿ- ದೀರ್ಘಾವಧಿಯ ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕೆಡಿಪಿ ಸಭೆ ನಡೆಯುತ್ತಿದೆ ಈ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದು ,ಜಿಲ್ಲಾ ಉಸ್ತುವಾರಿ ಸಚಿವ ಬೆಳಗಾವಿ ಡಿಹೆಚ್ಓ ಮುನ್ಯಾಳ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಡಿಪಿ ಸಭೆಯಲ್ಲಿ ರಾಮದುರ್ಗ ದಡಾರ ಲಸಿಕೆಯಿಂದ ಮೂರು ಜನ ಮಕ್ಕಳ ಸಾವಿನ ಕುರಿತು ಚರ್ಚೆ ನಡೆಯಿತು,ಈ ಪ್ರಕರಣದ ಕುರಿತು ಇನ್ನುವರೆಗೆ ವರದಿ ಬಂದಿಲ್ಲ,ಸಮಂಧಿಸಿದ …

Read More »

ಸಾರ್ಟ್ ಸಿಟಿ ಕಾಮಗಾರಿ ನೋಡಿದ್ರು….ನಂತರ ಮಸಾಲೆ ದೋಸೆ ತಿಂದ್ರು…!!!

ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆ ——————————————————– “ಡಿಸೆಂಬರ್ ಅಂತ್ಯಕ್ಕೆ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣ” ಬೆ ಬೆಳಗಾವಿ-  ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಗುರುವಾರ(ಫೆ.24) ಪರಿಶೀಲಿಸಿದರು. ನಗರದ ಸಿ.ಬಿ.ಟಿ. ಕಾಮಗಾರಿ, ವಿವಿಧ ರಸ್ತೆಗಳು, ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್‌ ಸೆಂಟರ್, ಟಿಳಕವಾಡಿಯ ಕಲಾಮಂದಿರ ಮತ್ತಿತರ ಕಾಮಗಾರಿಗಳನ್ನು ಅವರು ವೀಕ್ಷಿಸಿದರು. ಸಿಬಿಟ 2018 ರಲ್ಲಿ …

Read More »

ಬೆಳಗಾವಿ ಸಿಟಿಯಲ್ಲಿ ಡಿಸಿ ಹಿರೇಮಠ ರೌಂಡ್ಸ್……

ರುಕ್ಮಿಣಿ ನಗರಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ,ಗುಡಿಸಲು ನಿವಾಸಿಗಳಿಗೆ ವಸತಿ ಕಲ್ಪಿಸಲು ಸೂಚನೆ ಬೆಳಗಾವಿ, – ರುಕ್ಮಿಣಿ ನಗರದಲ್ಲಿ ಪಾಲಿಕೆಯ ಜಾಗೆಯಲ್ಲಿ ಗುಡಿಸಲುಗಳಲ್ಲಿ ವಾಸಿಸುವ ಕುಟುಂಬಗಳ ಪಟ್ಟಿಯನ್ನು ಸಿದ್ಧಪಡಿಸಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅವರಿಗೆ ಮನೆ ನಿರ್ಮಿಸಿ ಕೊಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರುಕ್ಮಿಣಿ ನಗರಕ್ಕೆ ಬುಧವಾರ (ಫೆ.23) ಭೇಟಿ ನೀಡಿ ಪರಿಶೀಲಿಸಿದ ಅವರು, ಸ್ಥಳೀಯ ಜನರ ಅಹವಾಲುಗಳನ್ನು ಆಲಿಸಿದರು. …

Read More »