Breaking News

LOCAL NEWS

ಲಕಾ..ಲಕಾ..ಅಂತಾ ಹೊಳ್ಯಾತೈತಿ ನೋಡ್ಲ ಮಗಾ…!!!!

ಬೆಳಗಾವಿ- ಬೆಳಗಾವಿ, ರಾಜ್ಯದ ಎರಡನೇಯ ರಾಜಧಾನಿ,ಉತ್ತರ ಕರ್ನಾಟಕದ ಶಕ್ತಿ ಕೇಂದ್ರ,ಕರ್ನಾಟಕ,ಗೋವಾ,ಮಹಾರಾಷ್ಟ್ರ ,ಮೂರು ರಾಜ್ಯಗಳ ಸಂಪರ್ಕದ ಸೇತುವೆಯಾಗಿರುವ. ಕುಂದಾನಗರಿ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣ ಈಗ ಹೈಟೆಕ್ ಆಗಿದ್ದು,ಕಾಮಗಾರಿ ಸಂಪೂರ್ಣವಾಗಿ ಮುಗಿಯದಿದ್ದರೂ ನಿಲ್ಧಾಣದ ಹೊಸ ಕಟ್ಟಡ ಎಲ್ಲರ ಕಣ್ಮಣ ಸೆಳೆಯುತ್ತಿದೆ. 2016 ಡಿಸೆಂಬರ ತಿಂಗಳಲ್ಲಿ ಆಗಿನ ಮುಖ್ಯಮಂತ್ರಿ ಸಿದ್ರಾಮಯ್ಯ ನವರು ಬೆಳಗಾವಿಯ ಹೈಟೆಕ್ ಬಸ್ ನಿಲ್ಧಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.2019 ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಮುಗಿಯಬೇಕಿತ್ತು,ಅನುದಾನದ ಕೊರತೆ ಸರ್ಕಾರದ ನಿರ್ಲಕ್ಷ್ಯ ದಿಂದಾಗಿ …

Read More »

ಕೋರ್ಟ್ ಆವರಣದಲ್ಲಿ ಹಾಪ್ ಮರ್ಡರ್…..!!

ಬೆಳಗಾವಿ- ವಿವಾಹ ವಿಚ್ಛೇದನ ಕುರಿತು ವಿಚಾರಣೆಗಾಗಿ ಕೋರ್ಟಿಗೆ ಬಂದಿದ್ದ ಪತ್ನಿಯ ಮೇಲೆ ಕೋರ್ಟ್ ಆವರಣದಲ್ಲೇ ಪತಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೈಲಹೊಂಗಲದಲ್ಲಿ ನಡೆದಿದೆ. ಮಾಜಿ ಸೈನಿಕನೊಬ್ಬ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬೆಚ್ಚಿ ಬೀಳಿಸುವ ಘಟನೆ ಬೈಲಹೊಂಗಲ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನಡೆದಿದೆ.ಬೈಲಹೊಂಗಲ ತಾಲೂಕಿನ ನನಗುಂಡಿಕೊಪ್ಪದ ಗ್ರಾಮದ ನಿವೃತ್ತ ಸೈನಿಕ ಶಿವಾನಂದ ಅಡಕಿ ಮತ್ತು ಆತನ ಪತ್ನಿ ಜಯಮಾಲಾ ವ್ಯಾಜ್ಯದ ವಿಚಾರಣೆ ಇಂದು ಕೋರ್ಟನಲ್ಲಿ ನಡೆಯುತ್ತಿತ್ತು. …

Read More »

ಹಂದಿಗೆ ಗುಂಡು ಹೊಡೆಯಲು ಹೋಗಿ ಮಂದಿಗೆ ಗುಂಡು ಹೊಡೆದ ಅಪ್ಪ ಮಕ್ಕಳ ಅರೆಸ್ಟ್…

ಬೆಳಗಾವಿ-ರಾಗಿಯ ರಾಶಿ ಮಾಡಲು ಅಪ್ಪ ಮಕ್ಕಳು ಹೊಲಕ್ಕೆ ಹೋಗಿದ್ರು‌. ಜೊತೆಗೆ ಸಮಂಧಿಕನೊಬ್ಬ ಹೋಗಿದ್ದ ,ಹೊಲದಲ್ಲಿ ಹಂದಿಗಳ ಕಾಟ ಇದೆ ಅಂತಾ ಡಬಲ್ ಬಾರ್ ಬಂದೂಕು ಹೊತ್ಕೊಂಡ ಹೋದ ಅಪ್ಪ ಮಕ್ಕಳು ಎಡವಟ್ಟು ಮಾಡಿಕೊಂಡ ಘಟನೆ ಬೆಳಗಾವಿ ಸಮೀಪದ ರಾಜಕಟ್ಟಿ ಗ್ರಾಮದಲ್ಲಿ ನಡೆದಿದೆ. ರಾಜಕಟ್ಟಿ ಗ್ರಾಮದ ಅಪ್ಪ ಮಕ್ಕಳು ಹೊಲದಲ್ಲಿ ರಾಗಿ ರಾಶಿ ಮಾಡಲು ಹೋಗಿದ್ದರು‌.ಗದ್ದೆಯಲ್ಲಿ ಕಾಲಿಡುತ್ತಿದ್ದಂತೆಯೇ ಕಾಡು ಹಂದಿ ರಾಗಿ ಬೆಳೆ ಹಾಳು ಮಾಡುತ್ತಿರುವದನ್ನು ನೋಡಿದ ಇವರು ಅಲರ್ಟ್ ಆದ್ರು.ಇವರ …

Read More »

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ಬೆಳಗಾವಿ- ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕ್ರಯಾಶೀಲರಾಗಿರುವ ರಾಜು ಪ್ರಲ್ಹಾದ ಸಿಧ್ನಾಳ ಅವರನ್ನು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮೀತಿಯ ಪ್ರಧಾನ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಲಾಗಿದೆ. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮೀತಿಯ ಅದ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಅವರು ಹುಕ್ಕೇರಿ ತಾಲ್ಲೂಕಿನ ನೇರ್ಲಿ ಗ್ರಾಮದ ರಾಜು ಪ್ರಲ್ಹಾದ ಸಿಧ್ನಾಳ ಅವರನ್ನು ಪ್ರಧಾನ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಭೂತ್ ಮಟ್ಟದಲ್ಲಿ ಬಲಪಡಿಸುವಂತೆ ಸೂಚಿಸಿದ್ದಾರೆ.

Read More »

ಸುವರ್ಣಸೌಧದಲ್ಲಿ ಸಚಿವ ಹೆಬ್ಬಾರ ಮಾಡಿದ್ದೇನು ಗೊತ್ತಾ..??

ಬೆಳಗಾವಿ,) : ಸಕ್ಕರೆ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಶೀಘ್ರವೇ‌ ಪರಿಹಾರ ಒದಗಿಸಲಾಗುವುದು ಎಂದು ಕಾರ್ಮಿಕ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಅವರು ತಿಳಿಸಿದರು. ರಾಜ್ಯದಲ್ಲಿರುವ ಸಕ್ಕರೆ ಉದ್ದಿಮೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನ ಪರಿಷ್ಕರಣೆ ಕುರಿತು ಸುವರ್ಣ ಸೌಧದಲ್ಲಿ ಮಂಗಳವಾರ (ಸೆ.28) ನಡೆದ‌ ತ್ರೀಪಕ್ಷೀಯ ವೇತನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಬೆಳಗಾವಿ ಸಕ್ಕರೆ ಕಾರ್ಖಾನೆಗಳ ಕೇಂದ್ರ ಸ್ಥಾನವಾಗಿದೆ. ಕಾರ್ಮಿಕರ ಏಳಿಗೆಗಾಗಿ ಕಾರ್ಮಿಕ‌ ಇಲಾಖೆ …

Read More »

ಪರಿಷತ್ತಿನ ಚುನಾವಣೆಗೂ ಸೆಡ್ಡು ಹೊಡೆದ ಮೀಸೆ ಮಾವ…!!!

ಬೆಳಗಾವಿ- ವಿಧಾನ ಪರಿಷತ್ತಿನ ಚುನಾವಣೆಯ ದಿನಾಂಕ ಘೋಷಣೆ ಆಗಿಲ್ಲ,ಜಿಪಂ,ತಾಪಂ ಚುನಾವಣೆಯ ನಂತರ ಪರಿಷತ್ತಿನ ಚುನಾವಣೆ ನಡೆಯಲಿದ್ದು ಈಗಿನಿಂದಲೇ ಚುನಾವಣೆಯ ತಯಾರಿ ಶುರುವಾಗಿದೆ. ಮಾಜಿ ಸಚಿವ,ಮಾಜಿ ಸಂಸದ ಹಿರಿಯ ಕಾಂಗ್ರೆಸ್ ಮುಖಂಡ ಪ್ರಕಾಶ ಹುಕ್ಕೇರಿ ಅವರು ವಿಧಾನ ಪರಿಷತ್ತಿನ ಚುನಾವಣೆಗೆ ಸ್ಪರ್ಧೆ ಮಾಡಲು ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಟಿಕೆಟ್ ಗಾಗಿ ಪ್ರಕಾಶ ಹುಕ್ಕೇರಿ,ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರೂ …

Read More »

ನಾಟಿ… ಮಿನಿಸ್ಟರ್ ಚಕ್ಕಡಿ ಏರಿದ್ರು, ಬಾರಕೋಲ್ ಹಿಡದ್ರು…!!!

ಬೆಳಗಾವಿ, – ರೈತರು ಮುಖ್ಯ‌ ಬೆಳೆಯ ಜತೆಗೆ ಇತರೆ ಉಪ ಬೆಳೆಗಳನ್ನು ಬೆಳೆಯಬೇಕು; ಇದಲ್ಲದೇ ಹೈನುಗಾರಿಕೆ, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ ಮತ್ತಿತರ ಉಪ ಕಸುಬುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ರೈತರಿಗೆ ಕರೆ ನೀಡಿದರು. “ರೈತರೊಂದಿಗೊಂದು ದಿನ” ಕಾರ್ಯಕ್ರಮದ ಅಂಗವಾಗಿ ನಿಪ್ಪಾಣಿ ತಾಲ್ಲೂಕಿನ ಭೀವಶಿ ಗ್ರಾಮದ ನರಸಿಂಹ ಯಶವಂತ ಚೌಗಲೆ ಅವರ ಜಮೀನಿನಲ್ಲಿ ಮಂಗಳವಾರ (ಸೆ.28) ಕಬ್ಬಿನ ಬೆಳೆಯ ವಿವಿಧ ನಾಟಿ …

Read More »

ಬೆಳಗಾವಿ ಬಂದ್ ಪ್ರತಿಭಟನೆಗೆ ಸೀಮಿತ…!!!

.!ಬೆಳಗಾವಿ-ಕೃಷಿ ಮಸೂದೆ ವಿರೋಧಿಸಿ ವಿವಿಧ ರೈತ ಸಂಘಟನೆಗಳು ನೀಡಿದ ಭಾರತ್ ಬಂದ್ ಕರೆಗೆ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯೆಕ್ತವಾಗಿದ್ದು ಬಂದ್ ಕೇವಲ ಪ್ರತಿಭಟನೆಗೆ ಸೀಮೀತವಾಗಿದೆ. ಬೆಳಗಾವಿ ನಗರ ಎಂದಿನಂತೆ ಸಹಜವಾಗಿದೆ,ಬಸ್ ಗಳು ಅಟೋಗಳು ಎಂದಿನಂತೆ ಓಡಾಡುತ್ತಿದ್ದು,ಶಾಲಾ ಕಾಲೇಜುಗಳು,ಅಂಗಡಿಗಳು ತೆರೆದಿವೆ, ಅಲ್ಲಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಹೊರತು ಪಡಿಸಿದರೆ ಬೆಳಗಾವಿಯ ವ್ಯಾಪಾರ ವಹಿವಾಟು ಸಹಜವಾಗಿದೆ. ಬಸ್ ನಿಲ್ಧಾಣದ ಬಳಿ ಪ್ರತಿಭಟನೆ.., ಬೆಳಗಾವಿ ಬಸ್ ನಿಲ್ದಾಣ ಎದುರು ಟೈಯರ್‌ಗೆ …

Read More »

ಹುಕ್ಕೇರಿ ತಾಲೂಕಿನಲ್ಲಿ ಅಭಿವೃದ್ಧಿ ಪರ್ವ

ಬೆಳಗಾವಿ-ಜನತೆ ನಾಯಕರಿದ್ದರೆ ಅವರು ಪ್ರತಿನಿಧಿಸುವ ಕ್ಷೇತ್ರ ಯಾವ ರೀತಿ ಅಭಿವೃದ್ಧಿಯಾಗಬಹುದು ಎಂಬುದಕ್ಕೆ ಹುಕ್ಕೇರಿ ಕ್ಷೇತ್ರ ಮಾದರಿಯಾಗಿದೆ.ಸಂಗಮ ಬ್ಯಾರೇಜಿಗೆ ಹೊಸ ಏತ ನೀರಾವರಿ ಯೋಜನೆ ನೀಡಲು ಸರ್ಕಾರ ಬದ್ಧವಾಗಿದೆ.ಈ ಭಾಗದ ಪ್ರಗತಿಪರ ರೈತರು ಕಬ್ಬು, ಮೆಕ್ಕೆಜೋಳ ಬೆಳೆಯುತ್ತಾರೆ.ರೈತರ ಮಕ್ಕಳಿಗೆ ವೈಜ್ಞಾನಿಕ ಶಿಕ್ಷಣ ನೀಡಲು ಇಲ್ಲಿ ಕೃಷಿ ಡಿಪ್ಲೋಮಾ ಕಾಲೇಜು ಇಲ್ಲಿ ಪ್ರಾರಂಭಿಸಲಾಗುತ್ತಿದೆ. ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ.ರಾಜ್ಯದ ಜನರ ವಿಶ್ವಾಸಕ್ಕೆ ಅನುಗುಣವಾಗಿ ಜನಪರ ಆಡಳಿತವನ್ನು ನೀಡುತ್ತೇವೆ ಎಂದು …

Read More »

ಕನ್ನಡ ನೆಲ-ಜಲ ರಕ್ಷಣೆಗೆ ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಂಕೇಶ್ವರ-ಕನ್ನಡ ನೆಲ,ಜಲ‌‌ ಹಾಗೂ‌ ಜನರ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದೆ. ಇದಲ್ಲದೇ ಉತ್ತರ ಕರ್ನಾಟಕ ಅಭಿವೃದ್ಧಿ ಸೇರಿದಂತೆ ಕೃಷ್ಣಾ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆಗೆ ಸರಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.ಸಂ ಕೇಶ್ವರ ಪಟ್ಟಣದಲ್ಲಿ ಶನಿವಾರ (ಸೆ.25) ಸಂಜೆ 4 ಕೋಟಿ ರೂಪಾಯಿ ವೆಚ್ಚದ ನೂತನ ಬಸ್ ನಿಲ್ದಾಣ ಹಾಗೂ ಎಸ್.ಎಫ್.ಸಿ. 3.50 ಕೋಟಿ ಅನುದಾನದಲ್ಲಿ ನಿರ್ಮಿಸಲಾದ ಪುರಸಭೆ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ನೇಸರಿ …

Read More »

ಕಿತ್ತೂರ ಕರ್ನಾಟಕ ಹೆಸರಿಡಲು,ಸಿಎಂ ಭೇಟಿಯಾದ ಅಶೋಕ…

ಬೆಂಗಳೂರು: ಬೆಳಗಾವಿಯ ಕನ್ನಡದ ಶಕ್ತಿ ಕೇಂದ್ರವೆನಿಸಿದ ನಾಗನೂರು ಶ್ರೀ ರುದ್ರಾಕ್ಷಿ ಮಠದ ಮಹಾಸ್ವಾಮೀಜಿ ಲಿಂ.ಶಿವಬಸವಸ್ವಾಮೀಜಿಯವರ ಹೆಸರನ್ನು ಬೆಳಗಾವಿಯ ರೈಲು ನಿಲ್ದಾಣಕ್ಕೆ ಇಡಬೇಕು,ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು,ಖ್ಯಾತ ರಂಗಭೂಮಿ ಕಲಾವಿದ ದಿ.ಏಣಗಿ ಬಾಳಪ್ಪ ಅವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು. ವಿಜಯನಗರದ …

Read More »

ಬೆಳಗಾವಿಯ, “ಇ” ಗ್ರಂಥಾಲಯ ವಿಶ್ವದಲ್ಲೇ ಮೊದಲು…

ಬೆಳಗಾವಿ,-ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ನೆನಪಿಸುವ ದೃಷ್ಟಿಯಿಂದ ಮರೆತು ಹೋಗಿದ್ದ ದೇಶ ಪ್ರೇಮಿ ರವೀಂದ್ರ ಕೌಶಿಕ್ ಅವರ ಹೆಸರನ್ನು ಇ- ಗ್ರಂಥಾಲಯಕ್ಕೆ ನಾಮಕರಣ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ನಲ್ಲಿ ಶಿವಾಜಿ ಉದ್ಯಾನದ ಹತ್ತಿರವಿರುವ ರವೀಂದ್ರ ಕೌಶಿಕ್ ಇ-ಗ್ರಂಥಾಲಯದಲ್ಲಿ ಶನಿವಾರ (ಸೆ.25) ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶಕ್ಕಾಗಿ ಸುಮಾರು 26 ವರ್ಷ ತಮ್ಮ ಯೌವನವನ್ನು‌ ಮುಡಿಪಾಗಿಟ್ಟ …

Read More »

ಮಂಗೇಶ್ ಪವಾರ ಮೇಯರ್, ಸವಿತಾ ಉಪಮೇಯರ್….!!!

ಎಂಇಎಸ್ ಮತ್ತೊಂದು ಶಾಕ್ ಕೊಡಲು ಬಿಜೆಪಿ ಶಾಸಕರ ಪ್ಲ್ಯಾನ್ ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಎಂಇಎಸ್ ಕೇವಲ 2 ಸದಸ್ಯರಿಗೆ ಸೀಮಿತವಾಗಿದೆ. ಕಳೆದ ಹತ್ತಾರು ವರ್ಷಗಳಿಂದ ಪಾಲಿಕೆಯಲ್ಲಿ ಹಿಡಿತ ಹೊಂದಿದ್ದ ಸಂಘಟನೆಗೆ ಮರ್ಮಾಘಾತ ನೀಡಿದ ಮತದಾರರು ಬೆಳಗಾವಿಯಲ್ಲಿ ಭಾಷಾ ರಾಜಕಾರಣಕ್ಕೆ ಸಂಪೂರ್ಣ ಇತಿಶ್ರೀ ಹಾಡಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಎಂಇಎಸ್ ಗೆ ಮೇಯರ್, ಉಪಮೇಯರ್ ಆಯ್ಕೆಯಲ್ಕೂ ಹೊಡೆತ ನೀಡಲು ಬಿಜೆಪಿ ಜಾಣ ನಡೆ ಅನುಸರಿಸಲು …

Read More »

ಮಾಣಿಕ್ಯ ಮರೆಯಾಗಿ ಇಂದಿಗೆ ವರ್ಷ….

  ಗ್ರಾಮೀಣ ಸೊಗಡಿನ ಸರಳ ಸಜ್ಜನ ಜನಪರ ಅಪರೂಪ ರಾಜಕಾರಣಿ – ದಿವಂಗತ ಅಂಗಡಿ ( (ಮೆಹಬೂಬ ಮಕಾನದಾರ) ರಾಜಕಾರಣದಲ್ಲಿ ತನ್ನದೇ ಆದ ವಿಶಿಷ್ಟ ಛಾಪ ಮೂಡಿಸಿ ಜನ ಮನ್ನಣೆ ಗಳಿಸಿ ಹೇಳದೇ ಹೋದ ಮಾನ್ಯ ಸುರೇಶ ಅಂಗಡಿ ಅವರನ್ನು ಕೋವಿಡ್ ಮೂಲಕ ನಾವೆಲ್ಲ ಕಳೆದುಕೊಂಡು ಒಂದು ವರ್ಷ ಕಳೆದುಹೋಗಿದೆ. ನಮ್ಮ ಮಧ್ಯ ಅವರು ಇದ್ದಕ್ಕಿದ್ದಂತೆ ಇಲ್ಲವಾದದ್ದು, ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣವೇ ಖಾಲಿಯಾದಂತೆ ಆಗಿರುವುದು ಅವರ ಜನರ ಮಧ್ಯ ಬೆಳದುಬಂದ …

Read More »

ಸವದತ್ತಿ ಯಲ್ಲಮ್ಮ ದೇವಸ್ಥಾನ ಓಪನ್ ಮಾಡಲು ಡಿಸಿ ಆದೇಶ..

ಬೆಳಗಾವಿ- ಬೆಳಗಾವಿ ಜಿಲ್ಲೆಯ ನಾಲ್ಕು ಪ್ರಮುಖ ದೇವಸ್ಥಾನಗಳನ್ನು ಓಪನ್ ಮಾಡುವಂತೆ ಆದೇಶ ಹೊರಬಿದ್ದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲಾಧಿಕಾರಿಗಳು ಈಗ ಮತ್ತೊಂದು ಆದೇಶವನ್ನು ಹೊರಡಿಸಿದ್ದಾರೆ. ನಿನ್ನೆಯ ದಿನ ಜಿಲ್ಲಾಧಿಕಾರಿಗಳು ಸವದತ್ತಿ ಯಲ್ಲಮ್ಮ ದೇವಿ,ದೇವಸ್ಥಾನ ಹೊರತುಪಡಿಸಿ ಉಳಿದ ನಾಲ್ಕು ಪ್ರಮುಖ ದೇವಸ್ಥಾನಗಳನ್ನು ಓಪನ್ ಮಾಡುವಂತೆ ಆದೇಶ ಹೊರಡಿಸಿದ್ದರು. ಆದ್ರೆ ಭಕ್ತರ,ಮತ್ತು ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ ಅವರು ಇಂದು ಸವದತ್ರಿ ಯಲ್ಲಮ್ಮದೇವಿ ದೇವಸ್ಥಾನ ಓಪನ್ ಮಾಡುವಂತೆ ಆದೇಶ ಹೊರಡಿಸಿದ್ದು ಬೆಳಗಾವಿ …

Read More »