Breaking News

LOCAL NEWS

ಜೈಕಾರ ಕೂಗಿ ,ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿ..!!

ಬೆಳಗಾವಿ: ಕರ್ನಾಟಕ ಮರಾಠಾ ಮಹಾಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಟನೆ ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ಮಂಗಳವಾರ ನಡೆಯಿತು. ಪ್ರವರ್ಗ 2ಎ‌ ಮೀಸಲಾತಿಗಾಗಿ ಆಗ್ರಹಿಸಿ ಕೊಂಡಸಕೊಪ್ಪ ಬಳಿ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ಬೆಂಬಲ ಸೂಚಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಸತೀಶ್ ಜಾರಕಿಹೊಳಿ ವೇದಿಕೆಗೆ ಬಂದಿದ್ದರು. ಸತೀಶ್ ಜಾರಕಿಹೊಳಿ ಮಾತನಾಡಲು ಬಂದಾಗ, ಮರಾಠಾ ಸಮುದಾಯದ ಬಗ್ಗೆ ಹಿಂದೂ ದರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಹೀಗಾಗಿ ಭಾಷಣ ಬೇಡ …

Read More »

ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಪವರ್ ಫುಲ್ ಲೀಡರ್ ಅಂದ್ರು ಆರ್.ಅಶೋಕ್

ಮೂಡಲಗಿ- ಮೂಡಲಗಿ ತಾಲೂಕಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 10 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ನೂತನ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಹೊಸ ತಾಲೂಕುಗಳ ಪೈಕಿ ಮೂಡಲಗಿ ತಾಲೂಕಿಗೆ ಮಾತ್ರ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಆರಂಭಿಸಲಾಗಿದ್ದು, ಇದಕ್ಕೆ ಇಲ್ಲಿನ ಜನಪ್ರೀಯ …

Read More »

ಗಡಿವಿವಾದ ಸದನದಲ್ಲಿ ಚರ್ಚೆ ಜೋರು,ಸ್ಥಳೀಯ ಶಾಸಕರೇ ಗೈರು….!!

ಬೆಳಗಾವಿ-ಬೆಳಗಾವಿ ಗಡಿವಿವಾದ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬೆಳಗಾವಿ ಗಡಿ ವಿಚಾರವನ್ನು ಪ್ರಸ್ತಾಪಿಸಿ ಶೂನ್ಯವೇಳೆಯಲ್ಲಿ ಅವರೇ ಮಾತನಾಡಿ ಸರ್ಕಾರದ ಗಮನ ಸೆಳೆದರು. ಸಿದ್ಧರಾಮಯ್ಯ ನವರು ಮಾತನಾಡಿ,ಗಡಿ ಹೋರಾಟದ ಇತಿಹಾಸವನ್ನು ಕಳೆದ ಆರು ದಶಕಗಳಿಂದ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿ ಗಡಿವಿವಾದ ಮುಗಿದ ಅಧ್ಯಾಯ ಮಹಾಜನ ವರದಿಯೇ ಅಂತಿಮ ಎಂದು ಹೇಳಿದ್ರು,ಈ ಚರ್ಚೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಹೆಚ್ ಕೆ ಪಾಟೀಲರು ಸಿದ್ಧರಾಮಯ್ಯನವರ ಜೊತೆ ಧ್ವನಿಗೂಡಿಸಿದರು. ಸದನದಲ್ಲಿ ಬೆಳಗಾವಿ …

Read More »

ಸುವರ್ಣವಿಧಾನಸೌಧದಲ್ಲಿ ಫುಡ್ ಕ್ವಾಲೀಟಿ ಚೆಕ್ಕೀಂಗ್….!!

ಊಟೋಪಚಾರ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ- ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ವರದಿಗಾಗಿ ವಿವಿಧೆಡೆಯಿಂದ ಆಗಮಿಸಿದ ಮಾಧ್ಯಮ ಪ್ರತಿನಿಧಿಗಳು, ಮಾರ್ಷಲ್ ಗಳು ಹಾಗೂ ಸಚಿವಾಲಯ ಅಧಿಕಾರಿಗಳಿ ಮಾಡಲಾಗಿರುವ ಊಟೋಪಚಾರದ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪರಿಶೀಲಿಸಿದರು. ಮಂಗಳವಾರ(ಡಿ.20) ಊಟೋಪಚಾರ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಊಟದ ಗುಣಮಟ್ಟದ ಹಾಗೂ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಂದ ಮಾಹಿತಿ …

Read More »

ಬೆಳಗಾವಿಯಲ್ಲಿ ಮೇಳಾವ್ ಗೆ ಬ್ರೇಕ್, ಮಹಾರಾಷ್ಟ್ರಕ್ಕೆ ಶಾಕ್….!!

ಬೆಳಗಾವಿ-ಬೆಳಗಾವಿಯಲ್ಲಿ ನಿನ್ನೆ ನಡೆಯಬೇಕಿದ್ದ ಮರಾಠಿ ಮೇಳಾವ್ ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬ್ರೇಕ್ ಹಾಕಿ ಹೊಸ ಇತಿಹಾಸ ನಿರ್ಮಿಸಿದ್ದು,ಇದರ ಬಿಸಿ ಮಹಾರಾಷ್ಟ್ರದ ನಾಯಕರಿಗೂ ತಟ್ಟಿದೆ. ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಕರ್ನಾಟಕ ಸರ್ಕಾರದ ಕ್ರಮಕ್ಕೆ ಕಿಡಿಕಾರಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮುಂದಿಟ್ಟುಕೊಂಡು ನಿನ್ನೆ ಎಂಇಎಸ್ ಮಹಾಮೇಳಾವ್‌ಗೆ ಬ್ರೇಕ್ ಹಾಕಿರುವದಕ್ಕೆ ಮಹಾರಾಷ್ಟ್ರಮತ್ತೆ ಕಾಲು ಕೆದರಿ ಜಗಳಕ್ಕೆ ನಿಂತಿದೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ರಿಂದ ಕ್ಯಾತೆ ಶುರುವಾಗಿದೆ. ಗಡಿ ಭಾಗದ …

Read More »

ನೇಕಾರರಿಂದ ಸಮವಸ್ತ್ರ ಖರೀದಿ ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ಭರವಸೆ

*ನೇಕಾರರ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಬ್ರ್ಯಾಂಡಿಂಗ್ ಗೆ ಕ್ರಮ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ* ಬೆಳಗಾವಿ, ಡಿಸೆಂಬರ್ 19 :ಇಳಕಲ್ ಸೀರೆ ಸೇರಿದಂತೆ ನೇಕಾರರ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಬ್ರ್ಯಾಂಡಿಂಗ್ ದೊರೆತಾಗ ಉತ್ಪಾದನೆ ಹಾಗೂ ಆರ್ಥಿಕತೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸರ್ಕಾರವು ನೇಕಾರರ ಬೇಡಿಕೆಗಳನ್ನು ಈಡೇರಿಸಿರುವ ಸಲುವಾಗಿ ನೇಕಾರ‌ರಿಂದ ಸುವರ್ಣ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ‌ಬಸವರಾಜ ಬೊಮ್ಮಾಯಿ …

Read More »

ಬೆಳಗಾವಿಯಿಂದಲೇ ಕಾಂಗ್ರೆಸ್ ನಾಯಕರ ಬಸ್ ಯಾತ್ರೆ…!!

ಬೆಳಗಾವಿ-೨೦೨೩ರ ‌ವಿಧಾನಸಭೆ ಚುನಾವಣೆಯಲ್ಲಿ ನಕಾಂಗ್ರೆಸ್ ಅಧಿಕಾರಕ್ಕೆ ತರುವ ಉದ್ದೇಶದಿಂದ ಜನವರಿ ೧೧ ರಿಂದ ಬೆಳಗಾವಿಯಿಂದ ಕಾಂಗ್ರೆಸ್ ನಾಯಕರ ಬಸ್ ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು. ಬಸ್ ಯಾತ್ರೆ, ಕೃಷ್ಣಾ, ಮಹದಾಯಿ ಯೋಜನೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಹಮ್ಮಿಕೊಂಡಿರುವ ಸಮಾವೇಶ ಕುರಿತು ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೃಷ್ಣಾ, ಮಹದಾಯಿ ನೀರಾವರಿ ಯೋಜನೆಗೆ ಸಂಬಂಧಿಸಿದೆತ …

Read More »

ಒಳಗಡೆ ವೀರ ಸಾವರ್ಕರ್ ಪೋಟೋ, ಹೊರಗಡೆ ವೀರ ರಾಣಿ ಚನ್ನಮ್ಮನ ಮೂರ್ತಿ….!!!

ಅಧಿವೇಶನದ ಮೊದಲ ದಿನವೇ ವಿಧಾನಸೌಧದ ಒಳಗಡೆ ವೀರ ಸಾವರ್ಕರ್ ಜೊತೆಗೆ ಒಟ್ಡು ಏಳು ಜನ ಮಹಾಪುರುಷರ ಭಾವಚಿತ್ರಗಳ ಅನಾವರಣ ಮಾಡಿರುವ ಸರ್ಕಾರ, ಹೊರಗಡೆ ವೀರರಾಣಿ ಚನ್ನಮ್ಮನ, ಸಂಗೊಳ್ಳಿ ರಾಯಣ್ಣ, ಮಹಾತ್ಮಾ ಗಾಂಧೀಜಿ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗಳ ಅನಾವರಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಸರ್ಕಾರ ಸಿದ್ಧತೆ ನಡೆಸುವ ಮೂಲಕ ಅನಾವರಣಕ್ಕೆ ಭಾವನಾತ್ಮಕ ಸಂಗತಿಗಳಿಗೆ ಇಂಬು ನೀಡಲು ಮುಂದಾಗಿದೆ. ಬೆಳಗಾವಿ-ರಾಜ್ಯ ಸರ್ಕಾರ ಸುವರ್ಣಸೌಧದ ವಿಧಾನಸಭೆಯಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಅನಾವರಣ ಮಾಡಿದೆ. …

Read More »

ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಅಧಿವೇಶನದಲ್ಲಿ ಆದ್ಯತೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇಂದಿನಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚಿಸಿ, ಜನರಿಗೆ ಪರಿಹಾರ ಒದಗಿಸುವ ಅಧಿವೇಶನವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದು ಸುವರ್ಣ ವಿಧಾನಸೌಧಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ. ರಾಜ್ಯವನ್ನು ಮುನ್ನಡೆಸುವ ದಿಸೆಯಲ್ಲಿ ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚೆಯಾಗಬೇಕಿದೆ. ಹಲವಾರು ಕಾನೂನುಗಳ ರಚನೆಗಳ …

Read More »

ಸಾವರ್ಕರ್ ಫೋಟೋ ವಿವಾದ: ವಿಧಾನಸಭೆ ಆವರಣದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬೆಳಗಾವಿ- ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ವಿಡಿ ಸಾವರ್ಕರ್ ಭಾವಚಿತ್ರ ವಿವಾದ ಪ್ರತಿಭಟನೆಯ ಕಿಡಿ ಹೊತ್ತಿಸಿದೆ. ಮೊದಲ ದಿನವೇ ಕಾಂಗ್ರೆಸ್ ಬಿಜೆಪಿ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಪ್ರಯತ್ನಿಸಿದೆ. ವಿಧಾನಸಭೆ ಸಭಾಂಗಣದಲ್ಲಿ ವಿಡಿ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿರುವುದನ್ನು ವಿರೋಧಿಸಿ ವಿಧಾನಸಭೆಯ ಹೊರಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಶಾಸಕರು ಸುವರ್ಣಸೌಧದ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜವಾಹರ್ ಲಾಲ್ ನೆಹರೂ, …

Read More »

ಬೆಳಗಾವಿಯಲ್ಲಿ ಎಂಇಎಸ್ ಮೇಳಾವ್ ಪ್ಯಾಕಪ್…!!

ಬೆಳಗಾವಿ-ಇತಿಹಾಸದಲ್ಲಿ ಮೊದಲ ಬಾರಿಗೆ ಎಂಇಎಸ್ ಮಹಾಮೇಳವ್ ಬ್ರೇಕ್ ಬಿದ್ದಿದೆ.ಪ್ರತಿ ವರ್ಷ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳವ್ ಆಯೋಜನೆ ಮಾಡುತ್ತಿದ್ದ ನಾಡದ್ರೋಹಿ ಎಂಇಎಸ್ ಗೆಸಿಎಂ ಬಸವರಾಜ ಬೊಮ್ಮಾಯಿ ಶಾಕ್ ಕೊಟ್ಟಿದ್ದು,ಖಾಕಿ ಪಡೆ ಮೇಳಾವ್ ಗೆ ಹಾಕಲಾಗಿದ್ದ ವೇದಿಕೆಯನ್ನು ವಶಪಡಿಸಿಕೊಂಡಿದೆ. ಬೆಳಗಾವಿಯಲ್ಲಿ ಇದೇ ಮೊದಲ ಸಲ ಎಂಇಎಸ್ ‌ಮಹಾಮೇಳಾವ್ ಪ್ಯಾಕಪ್ ಆಗಿದ್ದು, ಎಂಇಎಸ್ ಮುಖಂಡರ ಮೇಲೆ ಪೊಲೀಸರಿಂದ ತೀವ್ರ ನಿಗಾ ಇಡಲಾಗಿದೆ.ಅನೇಕ ಮುಖಂಡರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ.ಪಾಲಿಕೆ ಸದಸ್ಯ ರವಿ ಸಾಂಳುಕೆ, …

Read More »

ಬೆಳಗಾವಿಯಲ್ಲಿ ಇಂದಿನಿಂದ ಹತ್ತು ದಿನಗಳ ಕಾಲ ರಾಜಧಾನಿಯ ಕಳೆ..!!

ಬೆಳಗಾವಿ-ರಾಜ್ಯದ ಎರಡನೇಯ ರಾಜಧಾನಿ ಆಗಲಿರುವ ಬೆಳಗಾವಿ ಮಹಾನಗರ ಇಂದಿನಿಂದ ಹತ್ತು ದಿನಗಳ ಕಾಲ ರಾಜಧಾನಿಯ ಸ್ವರೂಪ ಪಡೆಯಲಿದೆ.ರಾಜ್ಯಸರ್ಕಾರ ಗಂಟು ಮೂಟೆ ಕಟ್ಟಿಕೊಂಡು ಬೆಳಗಾವಿಗೆ ಶಿಪ್ಟ್ ಆಗಿದೆ. ಇಂದು ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಶುರುವಾಗಲಿದೆ.ಅದಕ್ಕಾಗಿ ಅಭೂತಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದ್ದು,ಇಂದಿನಿಂದ ಕಲಾಪಗಳು ಆರಂಭವಾಗಲಿವೆ. ಇಂದು ಅಧಿವೇಶನದ ಪ್ರಥಮ ದಿನ,ಅಧಿವೇಶನದ ಕಲಾಪಗಳು ಶುರು ಆಗುವ ಮುನ್ನ ವಿಧಾನಸಭೆಯ ಸಭಾಂಗಣದಲ್ಲಿ ಅಳವಡಿಸಿರುವ ಏಳು ಜನ ಮಹಾತ್ಮರ ಭಾವಚಿತ್ರಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಏಳು …

Read More »

ಸುವರ್ಣವಿಧಾನಸೌಧದ ಸಭಾಂಗಣದಲ್ಲಿ, ಪರದೇ ಕೇ ಪಿಚೇ ಕ್ಯಾ ಹೈ…!!!

ಬೆಳಗಾವಿ- ಬೆಳಗಾವಿಯ ಸುವರ್ಣವಿಧಾನಸೌಧದ ಅಸೆಂಬ್ಲಿ ಸಭಾಂಗಣದಲ್ಲಿ ನಾಳೆ ಏಳು ಜನ ಮಹಾಪುರುಷರ ಭಾವಚಿತ್ರಗಳು ಅನಾವರಣಗೊಳ್ಳಲಿದ್ದು ಈ ಏಳು ಪೋಟೋಗಳನ್ನು ಪರದೆಯಿಂದ ಮುಚ್ಚಲಾಗಿದ್ದು ಏಳು ಜನ ಮಹಾಪುರುಷರು ಯಾರು ? ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. ಮಹಾತ್ಮಾ ಗಾಂಧಿ,ವಿಶ್ವರತ್ನ ಬಾಬಾಸಾಹೇಬ್ ಅಂಬೇಡ್ಕರ್,ಜಗಜ್ಯೋತಿ ಬಸವೇಶ್ವರ,ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಗಳು ಇವೆ ಎಂದು ಹೇಳಲಾಗಿದ್ದು ಇವರ ಜೊತೆ ಸಾವರ್ಕರ್ ಪೋಟೋ ಕೂಡಾ ಇದೆ ಎಂದು ದೃಶ್ಯ ಮಾದ್ಯಮಗಳಲ್ಲಿ ಸುದ್ದಿ …

Read More »

ಮಹಾರಾಷ್ಟ್ರದಿಂದ ಬರುವ ಯಾರಿಗೂ ನಾಳೆ ಬೆಳಗಾವಿ ಪ್ರವೇಶಕ್ಕೆ ಅನುಮತಿ ಇಲ್ಲಾ.

ಬೆಳಗಾವಿ- ನಾಳೆ,ಡಿ.19ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದ್ದುಅಧಿವೇಶನದ ದಿನವೇ ಎಂಇಎಸ್ ಮಹಾಮೇಳಾವ್ ಆಯೋಜನೆ ಮಾಡಿದೆ,ಮಹಾಮೇಳಾವ್ ನಡೆಯುವ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ಸ್ಥಳ ಪರಶೀಲನೆ ಮಾಡಿದ್ದಾರೆ. ಬೆಳಗಾವಿಯ ಟೀಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮರಾಠಿ ಮೇಳಾವ್ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮಕ್ಕೆ ಪೊಲೀಸ್ ಭದ್ರತೆ ಸೇರಿದಂತೆ ಜಾಗ ಪರಿಶೀಲನೆ ಮಾಡಿದ ಎಡಿಜಿಪಿ ಅಲೋಕ್ ಕುಮಾರ್ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಡ್ರೋಣ್ ಕಣ್ಗಾವಲು ಇರಿಸುವಂತೆ ಸೂಚನೆ ನೀಡಿದ್ದಾರೆ.ಮಹಾಮೇಳಾವ್ ಕಾರ್ಯಕ್ರಮಕ್ಕೆ ಬೆಳಗಾವಿಗೆ ಮಹಾರಾಷ್ಟ್ರದ ಸಂಸದ …

Read More »

ಬೆಳಗಾವಿ ಅಧಿವೇಶನಕ್ಕೆ ಬಿಗ್ ಪೋಲೀಸ್ ಫೋರ್ಸ್‌….!!!

ಬೆಳಗಾವಿ-ಬೆಳಗಾವಿಯಲ್ಲಿ ನಡೆಯುವ 10 ದಿನಗಳ ವರೆಗೂ ಚಳಿಗಾಲದ ಅಧಿವೇಶನದ ಬಂದೋಬಸ್ತಗಾಗಿ ಸುಮಾರು 4931 ಪೊಲೀಸ್ ಸಿಬ್ಬಂದಿಗಳನ್ನು ‌ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸುಸಜ್ಜಿತವಾಗಿ ನಡೆಯುವ ಉದ್ದೇಶದಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆರು ಜನ ಎಸ್ಪಿ, 11 ಹೆಚ್ಚುವರಿ ಎಸ್ಪಿ, 43 ಡಿಎಸ್ ಪಿ, 95 ಸಿಪಿಐ, 241 ಪಿಎಸ್ ಐ, 298 ಎಎಸ್ಐ, 2829 ಹೆಡ್ ಕಾನ್ ಸ್ಟೇಬಲ್, …

Read More »