Breaking News

LOCAL NEWS

ಬೊವ್..ಬೊವ್… ದಾಳಿಗೆ ಮಗು ಸಾವು,10 ಲಕ್ಷ ₹ ಪರಿಹಾರ ಕೊಡುವಂತೆ ಹೈಕೋರ್ಟ್ ಆರ್ಡರ್…!

ನಾಯಿ, ಕಚ್ವಿ ಮಗು ಸಾವು,10 ಲಕ್ಷ ₹ ಪರಿಹಾರ ಕೊಡುವಂತೆ ಹೈಕೋರ್ಟ್ ಆರ್ಡರ್…. ಬೆಳಗಾವಿ-ಬೀದಿ ನಾಯಿಗಳ ದಾಳಿಗೆ ಮಗು ಬಲಿಯಾಗಿತ್ತು ಈ ಕುರಿತು ಮಹತ್ವ್ ತೀರ್ಪು ನೀಡಿರುವ ಹೈಕೋರ್ಟ್ ಮೃತಪಟ್ಟ ಮಗುವಿನ ಕುಟುಂಬದವರಿಗೆ 10 ಲಕ್ಷ‌ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಬೀದಿ ನಾಯಿ ದಾಳಿಯಿಂದ ಮೃತಪಟ್ಟ ಮಗು ಅಬ್ಬಾಸ ಗೆ ಒಂದು ತಿಂಗಳೊಳಗಾಗಿ 10 ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಬೆಳಗಾವಿ ಜಿಲ್ಲಾ ಪಂಚಾಯತಿಗೆ ಸೂಚನೆ ನೀಡಿದೆ. …

Read More »

ಗ್ಯಾಲರಿಗೆ ನೇಣು ಬಿಗಿದು ಆತ್ಮಹತ್ಯೆ,ಬೆಚ್ಚಿಬಿದ್ದ ಜನ

ಗ್ಯಾಲರಿಗೆ ನೇಣು ಬಿಗಿದು ಆತ್ಮಹತ್ಯೆ,ಬೆಚ್ಚುಬಿದ್ದ ಜನ ಬೆಳಗಾವಿ-ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಬಿಲ್ಡಿಂಗ್ ಗ್ಯಾಲರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಗ್ಗೆ ಇದನ್ನು ನೋಡಿದ ಅಲ್ಲಿಯ ಜನ ಬೆಚ್ವಿಬಿದ್ದಿದ್ದಾರೆ. ನೇಣಿಗೆ ಶರಣಾದ ವ್ಯಕ್ತಿ ಬೆಳಗಾವಿಯ ಶಿವಾಜಿ ಟಿ ಭಿರ್ಜೆ ಎಂದು ಗುರುತಿಸಲಾಗಿದೆ. ಈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ನೀಖರ ಕಾರಣ ತಿಳಿದು‌ ಬಂದಿಲ್ಲ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೆಳಗಾವಿ ನಗರದಲ್ಲಿ ಬೆಳ್ಳಂ ಬೆಳಗ್ಗೆ ಮರ್ಡರ್….

ಬೆಳಗಾವಿಯಲ್ಲಿ ಬೆಳ್ಳಂ ಬೆಳಗ್ಗೆ ಮರ್ಡರ್…. ಬೆಳಗಾವಿ- ಬೆಳಗಾವಿ ಉದ್ಯಮಬಾಗ ಪ್ರದೇಶದಲ್ಲಿ ಓರ್ವನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಇಂದು ಬೆಳ್ಳಂ ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳಗಾವಿ ನಗರದ ಉದ್ಯಮಭಾಗದಲ್ಲಿರುವ ಯಲ್ಲೇಶ ಶಿವಾಜಿ ಕೊಲ್ಕರ್ (27) ಎಂಬ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ ಘಟನೆ ನಡೆದಿದೆ. ಮಜಗಾವಿ ಅಂಬೇಡ್ಕರ್ ಗಲ್ಲಿಯ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಅನೈತಿಕ ಸಂಬಂಧವೇ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಉದ್ಯಮಭಾಗ ಪೊಲೀಸರು ಭೇಟಿ ನೀಡಿ …

Read More »

ದೂದ್ ಸಾಗರ್ ಬೆಳಗಾವಿಯಿಂದ ದೂರವಿಲ್ಲ…..!!!!

ದೂದ್ ಸಾಗರ್ ಬೆಳಗಾವಿಯಿಂದ ದೂರವಿಲ್ಲ…..!!!! ಬೆಳಗಾವಿ- ಮಳೆ ಶುರುವಾದ್ರೆ ಸಾಕು ಬೆಳಗಾವಿ ಹುಡುಗರ ಮುಖದ ಮೇಲೆ ಹೊಸ ಕಳೆ ಬರುತ್ತೆ.ಯಾಕಂದ್ರೆ,ಜಿಟಿ..ಜಿಟಿ..ಮಳೆಯಲ್ಲಿ ಬೆಳಗಾವಿ ಸಿಟಿಯ ಜನ ಮಹಾರಾಷ್ಟ್ರದ ಗಡಿಯಲ್ಲಿರುವ ಅಂಬೋಲಿ,ಮತ್ತು ಗೋವಾ- ಕರ್ನಾಟಕದ ಗಡಿ ರೇಖೆಯಂತಿರುವ ದೂದ್ ಸಾಗರ್ ಟ್ರಿಪ್ ಮಾಡೇ ಮಾಡ್ತಾರೆ.ಇದು ಬೆಳಗಾವಿಯ ಮಾನ್ಸೂನ್ ಸ್ಪೇಶ್ಯಾಲಿಟಿ… ಕೋವಿಡ್ ಸೊಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ಕರ್ನಾಟಕದ ಗಡಿಯಾಚೆ ಕಾಲಿಡುವದು ಕಷ್ಟವಾಗಿತ್ತು. ಕೋವಿಡ್ ನಿಯಮಗಳು ಎರಡು ವರ್ಷದಿಂದ ಎಂಜಾಯ್ ಟ್ರಿಪ್ ಗೆ ಬ್ರೇಕ್ …

Read More »

ನಾಳೆ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ವಿಶ್ವಾಸಮತ ಯಾಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ

ಮಹಾರಾಷ್ಟ್ರ ರಾಜ್ಯಪಾಲರ ಆದೇಶದಂತೆ ನಾಳೆಯೇ ಉದ್ಧವ ಠಾಖ್ರೆ ಸರ್ಕಾರ ವಿಶ್ವಾಸಮತ ಯಾಚಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಇಂದು ಸಂಜೆ ಮಹಾರಾಷ್ಟ್ರದ ಮಹಾ ಅಘಾಡಿ ಸರ್ಕಾರದ ಬೆಳವಣಿಗೆಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ರಾಜ್ಯಪಾಲರ ಆದೇಶದಂತೆ ನಾಳೆಯೇ ವಿಶ್ವಾಸಮತವನ್ನು ಯಾಚಿಸಬೇಕು ಅದಕ್ಕೆ ತಡೆಯಾಜ್ಞೆ ನೀಡುವದಿಲ್ಲ ನಾಳೆಯೇ ಬೆಳಗ್ಗೆ 11-00 ಗಂಟೆಗೆ ವಿಶ್ವಾಸಮತ ಯಾಚನೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಶಿವಸೇನೆಯ 39 ಜನ ಭಿನ್ನಮತ ಶಾಸಕರು ಗುಹಾವಟಿಯಿಂದ …

Read More »

ಅಧಿಕಾರಿಗಳು ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನದಿಂದ ಹೊರಗಡೆ ಹೋಗುವಂತಿಲ್ಲ

  ಬೆಳಗಾವಿ, ಜೂ.29(ಕರ್ನಾಟಕ ವಾರ್ತೆ): ಕ್ರಿಯಾಯೋಜನೆ ಅನುಮೋದನೆಯಾದ ಕೂಡಲೇ ಆ ಪ್ರಕಾರ ಪ್ರತಿಯೊಂದು ಇಲಾಖೆಯು ಶೇಕಡ ನೂರರಷ್ಟು ಆರ್ಥಿಕ ಮತ್ತು ಭೌತಿಕ ಸಾಧನೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಜೂ.29) ನಡೆದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ 2022-23 ನೇ ಸಾಲಿನ ಮೇ ಮಾಹೆವರೆಗಿನ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. …

Read More »

ನಾಳೆ ಬೆಳಗಾವಿಯಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ…

ಬೆಳಗಾವಿ-ರಾಜಸ್ಥಾನದ ಉದಯಪೂರದಲ್ಲಿ ನಡೆದ ಜಿಹಾದಿ ಮುಸ್ಲೀಮರ ಹೀನ ಕೃತ್ಯವನ್ನು ಖಂಡಿಸಿ,ಹಿಂದೂ ಕಾರ್ಯಕರ್ತ ಕನಯ್ಯಲಾಲ ಹತ್ಯೆ ಮಾಡಿದ ಖದೀಮರನ್ನು ತಕ್ಷಣ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳು ನಾಳೆ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಿವೆ. ವಿಶ್ವ ಹಿಂದೂ ಪರಿಷತ್ತ,ಭಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ನಾಳೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಿದ್ದು ನಾಳೆ ಬೆಳಗ್ಗೆ 11-00 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡು ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ರ್ಯಾಲಿ ನಡೆಸಲಿದ್ದು ಸಹಸ್ರ ಸಹಸ್ರ …

Read More »

ನಾವು ಈ ಬಾರಿ ಕಾನ್ಪಿಡೆಂಟ್ ಆಗಿ ಇದ್ದೇವೆ-ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ-ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ವಿಚಾರವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿಯಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು,ನಾವು ಈ ಬಾರಿ ಕಾನ್ಪಿಡೆಂಟ್ ಆಗಿ ಇದ್ದೇವೆ.ಎಂದು ಹೇಳಿದ್ದಾರೆ. ಎಂಟು ತಿಂಗಳಲ್ಲಿ ಚುನಾವಣೆ ಬರ್ತಿದ್ದು, ಮೂರು ಪಕ್ಷಗಳಲ್ಲಿ ಚುನಾವಣೆ ತಯಾರಿ ನಡೆದಿದೆ,ನಾವು ಈ ಬಾರಿ ಕಾನ್ಪಿಡೆಂಟ್ ಆಗಿ ಇದ್ದೇವೆ.ಜನರಿಗೆ ತಿಳವಳಿಕೆ ಹೇಳ್ತೇವೆ, ಜನರನ್ನು ಒಲಿಸಿಕೊಳ್ಳುವ ವಿಶ್ವಾಸ ಕಾಂಗ್ರೆಸ್‌ನವರಿಗಿದೆ.ಇಡೀ ದೇಶದಲ್ಲಿ ಇವತ್ತು ಕಾಂಗ್ರೆಸ್‌‌ಗೆ ಕಷ್ಟದ ಸಂದರ್ಭ,ಇಂದಿರಾಗಾಂಧಿ ಕಷ್ಟದಲ್ಲಿ ಇದ್ದಾಗ, ಕಾಂಗ್ರೆಸ್ ಕಷ್ಟದಲ್ಲಿ ಇದ್ದಾಗ …

Read More »

ಸಿದ್ರಾಮಯ್ಯ ಸವದತ್ತಿ ಯಲ್ಲಮ್ಮನ ಕ್ಷೇತ್ರದಿಂದ ಸ್ಪರ್ದೆ ಮಾಡ್ತಾರಾ…???

ಬೆಳಗಾವಿ- ಮೈಸೂರಿನ ಚಾಮುಂಡಿ ಕ್ಷೇತ್ರದಿಂದ ಬಾದಾಮಿಯ ಬನಶಂಕರಿ ದೇವಿಯ ಸನ್ನಿದಾನದಲ್ಲಿ ಆಶ್ರಯ ಪಡೆದ ಮಾಜಿ ಸಿಎಂ ಸಿದ್ರಾಮಯ್ಯ ಈಗ ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಿಯ ಆಶಿರ್ವಾದ ಪಡೆಯುವ ಚಿಂತನೆ ನಡೆಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಅವರು ಸ್ಪರ್ದೆ ಮಾಡುತ್ತಾರೆ ಎನ್ನುವ ಸುದ್ದಿ ಪ್ರಚಾರ ಪಡೆದ ಬೆನ್ನಲ್ಲಿಯೇ ಈಗ ಹೊಸ ಸುದ್ದಿ ಹರಿದಾಡುತ್ತಿದೆ. ಸಿದ್ರಾಮಯ್ಯ ನವರು ಸವದತ್ತಿ ಯಲ್ಲಮ್ಮನ ಕ್ಷೇತ್ರದಿಂದ ಈ ಬಾರಿ ಸ್ಪರ್ದೆ …

Read More »

ಎಂಇಎಸ್ ನಾಯಕರ ಮನವಿಯನ್ನು ಕಸದ ಬುಟ್ಟಿಗೆ ಎಸೆಯಿರಿ- ಕರವೇ

ಎಂಇಎಸ್ ನಾಯಕರಿಗೆ ಕರವೇ ಟಾಂಗ್… ಬೆಳಗಾವಿ-ಚುನಾವಣೆ ಸಮೀಪ ಬರುತ್ತಿದ್ದಂತೆಯೇ ಎಂಇಎಸ್ ನಾಯಕರಿಗೆ ಭಾಷಾ ಪ್ರೇಮ ಹೆಚ್ಚಾಗುತ್ತದೆ.ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ರಾಜಕೀಯ ಮಾಡುತ್ತಲೇ ಬಂದಿರುವ ಎಂಇಎಸ್ ಎಲ್ಲ ರಂಗಗಳಲ್ಲಿ ಅಧಿಕಾರ ಕಳೆದುಕೊಂಡು ಕಂಗಾಲಾಗಿದ್ದು,ಮರಾಠಿ ಫಲಕ,ಮರಾಠಿ ಕಾಗದಪತ್ರ ಎಂದು ಮತ್ತೆ ಕಾಲು ಕೆದರಿ ಜಗಳಕ್ಕೆ ನಿಂತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಕರವೇ ಆಗ್ರಹಿಸಿದೆ. ಈ ಕರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ,ಭಾಷಾ ಅಲ್ಪ ಸಂಖ್ಯಾತ ಆಯೋಗದ …

Read More »

ಬೆಳಗಾವಿಯ ರೌಡಿಗಳಿಗೆ ಬೆಳ್ಳಂ ಬೆಳಗ್ಗೆ ಖಾಕಿ ಶಾಕ್…!!

ಬೆಳಗಾವಿಯಲ್ಲಿ ಗಲ್ಲಿ ಗೂಂಡಾಗಳ ಹಾವಳಿ ಹೆಚ್ಚಾಗಿದೆ‌.ರಿಯಲ್ಲ ಇಸ್ಟೇಟ್ ದಂಧೆಯಲ್ಲಿ ಹೆದರಿಸಿ,ಬೆದರಿಸಿ,ಸುಳ್ಳು ದಾಖಲೆ ಸೃಷ್ಢಿಸಿ ಹಣ ವಸೂಲಿ ಮಾಡುವ ಮರಿ ಪುಡಾರಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು.ಇದಕ್ಕೆ ಕಡಿವಾಣ ಹಾಕಲು ಬೆಳಗಾವಿ ಪೋಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.ಇವತ್ತು ಬೆಳಗಿನ ಜಾವ ರೌಡಿಗಳ ಮನೆ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ: ನಗರದಲ್ಲಿ ರೌಡಿಸಂ ಮಾಡುತ್ತ ಜನರನ್ನು ಹೆದರಿಸುತ್ತಿದ್ದ ಒಟ್ಟು 26 ರೌಡಿಗಳ ಮನೆಗಳ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಡಿಸಿಪಿ ರವೀಂದ್ರ ಗಡಾದಿ …

Read More »

ಬೆಳಗಾವಿ ಜಿಲ್ಲೆಯ ಕರದಂಟಿನ ಗೋಕಾಕಿಗೆ ಟ್ವೀಟರ್ ಶಾಕ್…..!!!

ಬೆಳಗಾವಿ- ಸೋಶಿಯಲ್ ಮಿಡಿಯಾ ಕ್ರಿಯಾಶೀಲ ವಾದಾಗಿನಿಂದ ಅನೇಕ ಸಾಮಾಜಿಕ ಲೋಪಗಳು ಬೆಳಕಿಗೆ ಬರುತ್ತಿವೆ.ಬಸ್ ನಿಲ್ಧಾಣದಲ್ಲಿ ಬಾಲಕಿಯೊಬ್ಬಳು ಕಸಗೂಡಿಸುವ ಚಿತ್ರ ಇವತ್ತು ಟ್ವೀಟರ್ ನಲ್ಲಿ ಬಿರುಗಾಳಿ ಎಬ್ಬಿಸಿತು . ಬಸ್ ನಿಲ್ದಾಣದ ಕಸಗೂಡಿಸುವ ಕೆಲಸಕ್ಕೆ ಬಾಲಕಿ ನೇಮಕ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಬಸ್ ನಿಲ್ದಾಣದಲ್ಲಿ ನಡೆದಿರುವ ಬಗ್ಗೆ ಟ್ವೀಟ್ ಮಾಡಲಾಗಿತ್ತು.ವಾಯವ್ಯ ಸಾರಿಗೆ ಅಧಿಕಾರಿಗಳ ವಿರುದ್ಧ ಟ್ವಿಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ವಿನಾಯಕ ಕಟ್ಟಿಕಾರ ಎಂಬಾತನ ಅಕೌಂಟಿನಿಂದ ಕಸಗೂಡಿಸುವ ಫೋಟೊ …

Read More »

ಹೊಲದಲ್ಲಿ ರಾಹುಲ್ ವಿಹಾರ…..ಏನ್ ಸಮಾಚಾರ….!!!

ರಾಜಕೀಯ ಒತ್ತಡಗಳ ನಡುವೆಯೂ ಹೊಲದಲ್ಲಿ ರಾಹುಲ್, ವಿಹಾರ….!! ಬೆಳಗಾವಿ- ದಿನನಿತ್ಯ ರಾಜಕೀಯ ಚಟುವಟಿಕೆ,ಉದ್ಯಮದ ನಿರ್ವಹಣೆ,ಕಾರ್ಯಕ್ರಮಗಳಲ್ಲಿ ಭಾಗವಹಿಸುವದು,ಯಮಕನಮರ್ಡಿ ಕ್ಷೇತ್ರದಲ್ಲಿ ಫೌಂಡೆಶನ್ ಆಶ್ರಯದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವದು, ರಾಹುಲ್ ಜಾರಕಿಹೊಳಿ ಅವರ ದಿನಚರಿ,ಆದ್ರೆ ಇವತ್ತು ರಾಹುಲ್ ರಿಲ್ಯಾಕ್ಸ್ ಆಗಿದ್ರು. ತಂದೆ ಸತೀಶ್ ಜಾರಕಿಹೊಳಿ ಅವರ ಜೊತೆ ರಾಹುಲ್ ಇಂದು ಹೊಲದಲ್ಲಿ ವಿಹಾರ ಮಾಡಿ ಒಕ್ಕಲುತನದ ಸೊಗಡು ನೋಡಿ ಸಂಬ್ರಮಿಸಿದರು. ಇತ್ತೀಚಿಗಷ್ಟೆ ಶಿಕ್ಷಣ ಮುಗಿಸಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ ರಾಹುಲ್ ಸಾಮಾಜಿಕ ಚಟುವಟಿಕೆ,ಸೇರಿದಂತೆ ಉಳಿದ …

Read More »

ಕ್ರೂಸರ್ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ..

ಬೆಳಗಾವಿ-ಕಲ್ಯಾಳ ಫುಲ್ ಬಳಿ ಕ್ರೂಸರ್ ಪಲ್ಟಿಯಾಗಿ ಏಳು ಜನ ಸಾವು ಪ್ರಕರಣ ಈ ಅಪಘಾತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಕಾರಿಯಾದೇ ಇಂದು ಸಾವನ್ನಪ್ಪಿದ್ದಾನೆ. ಚಿಕಿತ್ಸೆ ಫಲಕಾರಿಯಾದೇ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಕಿರಣ ಕಲಸನ್ನವರ್ ಎಂಬಾತ ಮೃತಪಟ್ಟಿದ್ದಾನೆ. ಬೆಳಗಾವಿ ತಾಲೂಕಿನ ಕಲ್ಯಾಳ ಫುಲ್ ಬಳಿ ನಡೆದಿದ್ದ ಭೀಕರ ಅಪಘಾತದಲ್ಲಿ 7 ಜನ ಮೃತಪಟ್ಟಿದ್ದರು 14 ಜನ ಗಾಯಗೊಂಡಿದ್ದರು.ಇಂದು ಸಾವಿನ ಸಂಖ್ಯೆ 8 ಕ್ಕೇರಿದೆ. …

Read More »

ಬೆಳಗಾವಿಯಲ್ಲಿ ಸೆಂಟ್ರಲ್ ಮಿನಿಸ್ಟರ್ ಮಾಡಿದ್ರು ಟೆಂಪಲ್ ರನ್…

ಬೆಳಗಾವಿಯ ಕೋಟೆ ಆವರಣದಲ್ಲಿರುವ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ರಾಜ್ಯ ಸಚಿವರಾದ ಸೋಮ ಪ್ರಕಾಶ್ ಅವರು ದೇವಿ ದರ್ಶನ ಪಡೆದುಕೊಂಡರು. ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ****** ಬೆಳಗಾವಿಯ ಕೋಟೆ ಆವರಣದಲ್ಲಿರುವ ಕಮಲ ಬಸದಿಗೆ ಭೇಟಿ ಮಂಗಳವಾರ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ …

Read More »