Breaking News

LOCAL NEWS

ಬೆಳಗಾವಿಯಲ್ಲಿ ಹೊಸ ಬಾಂಬ್ ಸಿಡಿಸಿದ ಸಾಹುಕಾರ್…!!

ಬೆಳಗಾವಿ-ಬೆಳಗಾವಿಯಲ್ಲಿ ಸಚಿವ ರಮೇಶ ‌ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ ಕಾಂಗ್ರಸ್ಸಿನ ಐದು ಜನ ಟಾಪ್ ಲೀಡರ್ ಗಳು ನನ್ನನ್ನು ಸಂಪರ್ಕ ಮಾಡಿದ್ದು ನಾನು ಮನಸ್ಸು ಮಾಡಿದ್ರೆ 24 ಗಂಟೆಯಲ್ಲಿ ಅವರನ್ನು ಬಿಜೆಪಿಗೆ ತರಬಲ್ಲೇ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸಂಜಯ ಪಾಟೀಲ್ ಕ್ಷಮೆ ಕೊರುತ್ತೇನೆ. ಈ ಹಿಂದೆ ಕಾಂಗ್ರೆಸ್ ಮಂತ್ರಿಯಾಗಿ ಕೆಲಸ ಮಾಡಿದ್ದೇವೆ. …

Read More »

ಬೆಳಗಾವಿಯಲ್ಲಿ ಕಟ್ಟಿಗೆ ಸಂಗ್ರಹಣೆ ಘಟಕಕ್ಕೆ ಬೆಂಕಿ….

ಬೆಳಗಾವಿ-ಬೆಳಗಾವಿಯಲ್ಲಿ ಕಟ್ಟಿಗೆ ಸಂಗ್ರಹಣೆ ಘಟಕಕ್ಕೆ ಬೆಂಕಿ ತಗಲಿದ್ದು ಕಟ್ಟಿಗೆ ಸಂಗ್ರಹ ಘಟಕ ಹೊತ್ತಿ ಉರಿಯುತ್ತಿದೆ. ಉದ್ಯಮಬಾಗ ಪ್ರದೇಶದಲ್ಲಿ ಇರೋ ಸಂಗ್ರಹಣೆ ಘಟಕಕ್ಕೆ ಆಕಸ್ಮಿಕ ಬೆಂಕಿ ತಗಲಿದ್ದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದಳ ದೌಡಾಯಿಸಿದೆ. ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದು ಬೆಳಗಾವಿಯ ನಾಲ್ಕು ಅಗ್ನಿ ಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿವೆ.

Read More »

ಇಬ್ಬರು ಕಂದಮ್ಮಗಳ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

*ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳು ನದಿಯಲ್ಲಿ ಹೆಣವಾಗಿ ಪತ್ತೆ* ಬೆಳಗಾವಿ/ಗೋಕಾಕ: ಮನೆಯಲ್ಲಿ ಜಗಳವಾಡಿ ಮೂರು ದಿನಗಳಿಂದ ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳೊಂದಿಗೆ ಘಟಪ್ರಭಾ ನದಿಗೆ ಹಾತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಗೋಕಾಕ ತಾಲೂಕಿನ ಅರಭಾಂವಿಯ ಸಾವಿತ್ರಿ ರಾಜು ಬನಾಜ(೩೦), ಪೂಜಾ(೪), ಲಕ್ಷ್ಮೀ (೨) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಜಗಳವಾಡಿ, ಜೀವನದಲ್ಲಿ ಜಿಗುಪ್ಸೆಗೊಂಡು ಮೂರು ದಿನಗಳಿಂದ ಕಾಣೆಯಾಗಿದ್ದರು. ನಾಪತ್ತೆ ಆಗಿರುವ ಬಗ್ಗೆ ಗಂಡನ ಮನೆಯವರು ಶನಿವಾರ ದೂರು ನೀಡಿದ್ದರು. …

Read More »

ಲೋಕಸಭೆಯಲ್ಲಿ ಮತ್ತೇ ಶಿವಸೇನೆ ಕಿರಿಕ್….

ಬೆಳಗಾವಿ- ಲೋಕಸಭೆಯಲ್ಲಿ ಇಂದು ನಡೆಬಾರದ ಘಟನೆ ನಡೆದು ಹೋಯಿತು.ಶಿವಸೇನೆ ಸಂಸದನೊಬ್ಬ ಬೆಳಗಾವಿ ಕಾರವಾರ ನಿಪ್ಪಾಣಿ ಪ್ರದೇಶಗಳು ಕೇಂದ್ರಾಡಳಿತ ಪ್ರದೇಶ ಆಗಲೇಬೇಕು ಎಂದು ಒತ್ತಾಯ ಮಾಡಿದ್ರೂ ಕರ್ನಾಟಕದ ಯಾವೊಬ್ಬ ಸಂಸದನೂ ಅದಕ್ಕೆ ಅಡ್ಡಿ ಪಡಿಸಲಿಲ್ಲ,ರಾಜ್ಯದ ಕೋಟ್ಯಾಂತರ ಕನ್ನಡಿಗರು ಕ್ಷಮಿಸಲಾರದ ಘಟನೆ ಇಂದು ನಡೆದಿದೆ. ಇವತ್ತು ಶಿವಸೇನೆಯ ಸಂಸದ, ರಾಹುಲ್ ಶೇವಾಲೆ ಎಂಬಾತ ಲೋಕಸಭೆಯಲ್ಲಿ ಮಾತಾಡಿ ಬೆಳಗಾವಿ ಕಾರವಾರ,ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆ ಠರಾವ್ ಪಾಸ್ ಮಾಡಿದೆ ಈ ಕುರಿತು …

Read More »

ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾದ ಶಾಸಕ ಅಭಯ ಪಾಟೀಲ..

ಬೆಳಗಾವಿ- ಬೆಳಗಾವಿಯಲ್ಲಿ ಹೈಟೆಕ್ ಐಟಿ,ಬಿಟಿ ಪಾರ್ಕ್ ನಿರ್ಮಿಸಲು ಸಂಕಲ್ಪ ಮಾಡಿರುವ ಶಾಸಕ ಅಭಯ ಪಾಟೀಲ ಇಂದು ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಬೆಳಗಾವಿಯ ರಕ್ಷಣಾ ಇಲಾಖೆಗೆ ಸೇರಿದ ಜಮೀನನ್ನು ಐಟಿ,ಬಿಟಿ ಪಾರ್ಕ್ ನಿರ್ಮಾಣಕ್ಕೆ ಹಸ್ತಾಂತರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ,ಹಾಗೂ ಐಟಿ,ಬಿಟಿ ಸಚಿವ ಅಶ್ವಥ್ ನಾರಾಯಣ ಮತ್ತು ಶಾಸಕ ಅಭಯ ಪಾಟೀಲ ಅವರು ಇಂದು ದೆಹಲಿಯಲ್ಲಿ ಭೇಟಿಯಾಗಿ ,ಬೆಳಗಾವಿ ನಗರದಲ್ಲಿ ಕೆ,ಎಲ್,ಇ ಆಸ್ಪತ್ರೆ …

Read More »

22 ರಂದು ದೆಹಲಿಗೆ ಹೋಗ್ತೇನೆ,ಚರ್ಚೆ ಮಾಡ್ತೀನಿ….

ಬೆಳಗಾವಿ-ಇದೇ 22 ರಂದು ದೆಹಲಿಗೆ ಪ್ರಯಾಣ ಮಾಡಲಿದ್ದೇನೆ.. ರಾಜ್ಯ ನೀರಾವರಿ ಯೋಜನೆ ಕುರಿತು ಮಾತನಾಡಲಿದ್ದೇನೆ ಎಂದು ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಇಲ್ಲಿ ಪೀಠದ ತಜ್ಞರು ಅಧಿಕಾರಿಗಳು ಜೊತೆಗೆ ಚೆರ್ಚೆ ಮಾಡುತ್ತೇನೆ. ಹಳೆಯ ಭದ್ರ ಮೇಲ್ದಂಡೆ ಯೋಜನೆ ಕೃಷ್ಣ ಮೇಲ್ದಂಡೆ ಯೋಜನೆ , ಮಹದಾಯಿ, ಮೇಕೆ ದಾಟು ಯೋಜನೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆ ಕುರಿತು ಚೆರ್ಚೆ ಮಾಡುತ್ತೇನೆ.ಕೃಷ್ಣ ಮೇಲ್ದಂಡೆ ಯೋಜನೆ ಗೆ ಅಡ್ಡಿಯಾಗಿರುವ …

Read More »

ಮಚ್ಛೆ ಬೈಪಾಸ್… ರೈತರಿಗೆ ಲಾಸ್…ಸ್ಥಳಕ್ಕೆ ದೌಡಾಯಿಸಿದ್ರು ಬಿಗ್ ಬಾಸ್….!!!

ಬೆಳಗಾವಿ- ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ರೈತರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲಿಯೇ ರೈತರು ಮೊತ್ತೊಂದು ಗಂಭೀರ ಆರೋಪ ಮಾಡಿರುವ ಹಿನ್ನಲೆಯಲ್ಲಿ,ಜಿಲ್ಲಾಧಿಕಾರಿ ಹಿರೇಮಠ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ರಸ್ತೆ ಕಾಮಗಾರಿಯಲ್ಲಿ ಜಮೀನು ಕಳೆದುಕೊಂಡ ರೈತನಿಗೆ 57 ,ಲಕ್ಷ ರೂ ಪರಿಹಾರ ಕೊಡಲು 11 ಲಕ್ಷ ರೂ ಕಮೀಷನ್ ಕೇಳುತ್ತಿದ್ದಾರೆ ಎಂದು ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ. ಇತ್ತೀಚಿಗೆ ರೈತರು ಅಹೋ ರಾತ್ರಿ …

Read More »

ದಂಡ ವಸೂಲಿ ಜತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ

ಬೆಳಗಾವಿ: ರಾಜ್ಯ ಸರ್ಕಾರಿ ನೌಕರರು, ನಿಗಮ ಮಂಡಳಿ ಪ್ರಾಧಿಕಾರ ವಿಶ್ವವಿದ್ಯಾಲಯ ಸಂಸ್ಥೆಯ ಅಧಿಕಾರಿ/ ನೌಕರರು ತಪ್ಪು ಮಾಹಿತಿ ನೀಡಿ ಬಿ.ಪಿ.ಎಲ್ ಪಡಿತರ ಚೀಟಿಯನ್ನು ಪಡೆದಿದ್ದಲ್ಲಿ ಅದನ್ನು ಸ್ವಯಂ ಪ್ರೇರಣೆಯಿಂದ ಆಹಾರ ಇಲಾಖೆಗೆ ಅಧ್ಯರ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಹಾರ, ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಉಮೇಶ ಕತ್ತಿ ಅವರು ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರು, ನಿಗಮ ಮಂಡಳಿ ಪ್ರಾಧಿಕಾರ ವಿಶ್ವವಿದ್ಯಾಲಯ ಸಂಸ್ಥೆಯ …

Read More »

ಮಟಕಾ ಅಡ್ಡೆ ಮೇಲೆ ದಾಳಿ 13 ಜನ ಪೋಲೀಸರ ವಶಕ್ಕೆ

ಬೆಳಗಾವಿ- ಬೆಳಗಾವಿ ನಗರದಲ್ಲಿ ಮಟಕಾ,ಜೂಜಾಟವನ್ನು ಸಂಪೂರ್ಣವಾಗಿ ಸಮಾಧಿ ಮಾಡಲು ಸಂಕಲ್ಪ ಮಾಡಿರುವ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರು ಬೆಳಗಾವಿ ನಗರದಲ್ಲಿ ತಡರಾತ್ರಿ ಮೊತ್ತೊಂದು ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಕಮಿಷನರೇಟಿನ ವ್ಯಾಪ್ತಿಯಲ್ಲಿ ತಡರಾತ್ರಿ ಬೆಳಗಾವಿಯ ಹಳೆ ಬಾಜಿ ಮಾರ್ಕೆಟ್ ಬಳಿಯ ಮಟಕಾ ಅಡ್ಡೆಯ ಮೇಲೆ ದಾಳಿ ನಡೆಸಿ,ಒಟ್ಟು 13 ಜನ ಆರೋಪಿಗಳ ದಸ್ತಗೀರ್;ರೂ.17,020 /- ಹಣ,15 ಮೊಬೈಲ್ ಹಾಗೂ 6 ಬೈಕ್ ಜಪ್ತಿ ಮಾಡಿದ್ದಾರೆ. ಮಟಕಾ ಆಡುತ್ತಿದ್ದ  …

Read More »

ಬೆಳಗಾವಿ ಬೈ ಇಲೆಕ್ಷನ್ ಪಂಚಮಸಾಲಿ ಕನೆಕ್ಷನ್…!!!

ಬೆಳಗಾವಿ:ಕೇಂದ್ರ ರೈಲ್ವೆ ಇಲಾಖೆ ಸಚಿವರಾಗಿದ್ದ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆಗೆ ಉಪ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಆದರೆ ಬಿಜೆಪಿ ಪಾಳೆಯದಲ್ಲಿ ದಿನಕ್ಕೊಂದು ಹೆಸರು ಕೇಳಿ ಬರುತ್ತಿವೆ. ಇದೀಗ ಬೆಳಗಾವಿ ಬಿಜೆಪಿ ಟಿಕೆಟ್ ನಗರದ ಖ್ಯಾತ ವೈದ್ಯ ಹಾಗೂ ವಿಜಯಾ ಆರ್ಥೋ ಆಸ್ಪತ್ರೆ ಮುಖ್ಯಸ್ಥ ಡಾ. ರವಿ ಪಾಟೀಲ ಅವರಿಗೆ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ‌. ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಕಾವು …

Read More »

ಮಗ್ಗಕ್ಕೆ ನೇಣು ಬಿಗಿದುಕೊಂಡು ನೇಕಾರನ ಆತ್ಮಹತ್ಯೆ..

ಬೆಳಗಾವಿ-ಕೊರೋನಾ ಮಹಾಮಾರಿ ಪ್ರಕೋಪದಿಂದ ಅದೆಷ್ಟು ಬದುಕುಗಳು ಬೀದಿಗೆ ಬಂದಿವೆ ಅನ್ನೋದು ಲೆಕ್ಕವೇ ಇಲ್ಲ ,ಬೆಳಗಾವಿಯ ನೇಕಾರನೊಬ್ಬ ಲಾಕ್ ಡೌನ್ ನಿಂದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಿದ್ದಲಿಂಗೇಶ್ವರ ಗಂಗಪ್ಪ ಹೊರಕೇರಿ ವಯಸ್ಸು: 47 ವರ್ಷ ಸಾ: ತಗ್ಗಿನಗಲ್ಲ ವಡಗಾವಿ ಬೆಳಗಾವಿ ಈತನು ಮಗ್ಗದ ಹಿಂದಿನ ಸಲಾಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗ್ಗದ ಕೆಲಸದ ಸಲುವಾಗಿ ಮತ್ತು ಮನೆಯ ಕೆಲಸದ ಸಲುವಾಗಿ ಬೆಳಗಾವಿ ಬಿಎಸ್‌ಎಸ್ ಮೈಕ್ರೋ ಪೈನಾನ್ಸ್ …

Read More »

ಉಪಚುನಾವಣೆ ಯಾವಾಗ ಘೋಷಣೆ ಆಗುತ್ತೆ ಅಂತಾ ನಾವು ಹೇಳಕ್ಕಾಗಲ್ಲ…

ಬೆಳಗಾವಿ-ಉಪಚುನಾವಣೆ ಯಾವಾಗ ಘೋಷಣೆ ಆಗುತ್ತೆ ಅಂತಾ ನಾವು ಹೇಳಕ್ಕಾಗಲ್ಲ ಎಂದು ಬೆಳಗಾವಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ.ಸಂಜೀವಕುಮಾರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 38,57,982 ಮತದಾರರು ಇದ್ದಾರೆ, 19,52,160 ಪುರುಷ, 19,00,822 ಮಹಿಳಾ ಮತದಾರರು ಇದ್ದಾರೆ, 19,836 ಸೇವಾ ಮತದಾರರು ಇದರಲ್ಲಿ 354 ಮಹಿಳಾ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡ ಅವರು,ಮತದಾರರ ಪಟ್ಟಿಯಲ್ಲಿ …

Read More »

ಹಲಗಾ- ಮಚ್ಛೆ, ಬೈಪಾಸ್ ಕಾಮಗಾರಿ,ಅಡ್ಡ ಮಲಗಿದ ರೈತರು

ಬೆಳಗಾವಿ-ಬೆಳಗಾವಿ ನಗರದಲ್ಲಿ ವಾಹನ ದಟ್ಟನೆ ನಿಯಂತ್ರಿಸಲು,ಬೆಳಗಾವಿಯಿಂದ ಗೋವಾಕ್ಕೆ ಹೋಗಲು ಅನಕೂಲವಾಗಲೆಂದು,ಬೆಳಗಾವಿ ನಗರದ ಟ್ರಾಫಿಕ್ ಡೈವೋರ್ಟ್ ಮಾಡುವ ಉದ್ದೇಶಕ್ಕಾಗಿ ಹಲಗಾ-ಮಚ್ಛೆ ಬೈ ಪಾಸ್ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಗೆ ರೈತರು ತೀವ್ರ ವಿರೋಧ ವ್ಯೆಕ್ತ ಪಡಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಬಂದ ಜೆಸಿಬಿ ಎದುರು ರೈತರು ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ.ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ಬಳಿ ಪ್ರತಿಭಟನೆ ನಡೆಯುತ್ತಿದೆ. ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಇದ್ದರೂ ಕಾಮಗಾರಿ ನಡೆಸುತ್ತಿದ್ದೀರಿ ಎಂದು ರೈತರಯ ಆಕ್ರೋಶ ವ್ಯೆಕ್ತಪಡಿಸಿದ್ದು,ಸ್ಥಳದಲ್ಲಿ …

Read More »

ಬೆಳಗಾವಿಯಲ್ಲಿ ನಟಿ ಕಂಗನಾ ವಿರುದ್ಧ ಕಂಪ್ಲೇಂಟ್….

ಬೆಳಗಾವಿ-ರೈತರನ್ನು ಉಗ್ರವಾದಿಗಳು ಎಂದು ನಟಿ ಕಂಗನಾ ರಣಾವತ್. ಹೇಳಿಕೆ ನೀಡಿದ್ದು, ಬೆಳಗಾವಿಯ ವಕೀಲರೊಬ್ಬರು,ಬಾಲಿವುಡ್ ನಟಿ ಕಂಗನಾ ರಣಾವತ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ. ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ನಟಿ ಕಂಗನಾ ವಿರುದ್ಧ,ವಕೀಲ ಹರ್ಷವರ್ಧನ ಪಾಟೀಲ್ ಪೋಲೀಸರಿಗೆ ದೂರು ನೀಡಿದ್ದಾರೆ.ಸದ್ಯ ಟಿಳಕವಾಡಿ ಪೊಲೀಸರು ದೂರು ಸ್ವೀಕರಿಸಿದ್ದು ನಟಿ ಕಂಗನಾ ವಿರುದ್ಧ ತಕ್ಷಣ FIR ದಾಖಲಿಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಸೆಕ್ಷನ್ 153, 154A, 503, 504, 505(1), 505(B), 505(C), …

Read More »

ಮರಾಠಿ ವಿದ್ಯಾರ್ಥಿಗಳ ಜೊತೆ, ನಾಡಗೀತೆ ಹಾಡಿದ ಮಿನಿಸ್ಟರ್….!!

ಬೆಳಗಾವಿ- ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಬೆಳಗಾವಿಯ ಗಡಿಯಲ್ಲಿರುವ,ಮರಾಠಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ರು ಮೂರು ಸರ್ಕಾರಿ ಮರಾಠಿ ಶಾಲೆಗಳಿಗೆ ಭೇಟಿ ನೀಡಿದ ಮಿನಿಸ್ಟರ್ ಸುರೇಶ್ ಕುಮಾರ್ ,ಇದೇ ಮೊದಲ ಬಾರಿಗೆ ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.,ಜಾಂಬೋಟಿ, ನಂದಗಡ, …

Read More »