Breaking News

LOCAL NEWS

ಬೆಳಗಾವಿ ಜಿಲ್ಲಾಧಿಕಾರಿಗಳ ಜೊತೆ ಪುನರ್ ಚರ್ಚೆಗೆ ಗಣೇಶ ಮಹಾ ಮಂಡಳ ನಿರ್ಧಾರ

ಬೆಳಗಾವಿ- ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡದಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಗಣೇಶ ಉತ್ಸವ ಆಚರಣೆಗೆ ಷರತ್ತು ಭದ್ಧ ಅನುಮತಿ ನೀಡಿರುವ ಜಿಲ್ಲಾಡಳಿತದ ಕ್ರಮವನ್ನು ಬೆಳಗಾವಿಯ ಗಣೇಶ ಮಹಾಮಂಡಳ ಸ್ವಾಗತಿಸಿದೆ . ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ,ಮಂದಿರಗಳಲ್ಲಿ ಮಾತ್ರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದ್ದು ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಪುನರ್ ಸಮಾಲೋಚನೆ ನಡೆಸಲು ಗಣೇಶ ಮಹಾಮಂಡಳ ನಿರ್ಧರಿಸಿದ್ದು ಇಂದು ಸಂಜೆ ಅಥವಾ ನಾಳೆ ಮಹಾ …

Read More »

ಲಂಚ ಪ್ರಕರಣ: ಕಲಕಾಂಬ ಗ್ರಾಪಂ ಪಿಡಿಓ ಬಂಧನ

ಬೆಳಗಾವಿ,-ಫಿರ್ಯಾದಿ ಶ್ರೀ.ರೋಹಣ. ಚಂದ್ರಕಾAತ. ಪಾಟೀಲ್, ಸಾ: ಕಲಕಾಂಬ ತಾ:ಜಿ: ಬೆಳಗಾವಿ ಪಿರ್ಯಾದಿಯವರ ತಂದೆ ಮತ್ತು ದೊಡ್ಡಪ್ಪ ಹೆಸರನಲ್ಲಿ ಜಂಟಿಯಾಗಿರುವ ಮನೆಗಳಾದ ಆಸ್ತಿ ನಂ.೧೨೪ಸಿ ಮತ್ತು ಅಸ್ತಿ ನಂ. ೩೬೩ ನೆದ್ದವುಗಳನ್ನು ವಾಟ್ನಿ ಮಾಡಿಕೊಂಡು ನಂತರ ಫಿರ್ಯಾದಿಯ ತಂದೆಯವರ ಪಾಲಿಗೆ ಬಂದ ಮನೆ ನಂ.೧೨೪ ಸಿ ನೆದ್ದನ್ನು ಪಂಚಾಯತಿಯಲ್ಲಿ ದಾಖಲ ಮಾಡಿ ಉತ್ತಾರ ನೀಡಲು ಅರ್ಜಿ ಸಲ್ಲಿಸಿದ ನಂತರ ಫಿರ್ಯಾದಿಯು ಆಪಾದಿತ ಸರ್ಕಾರಿ ನೌಕರನಾದ ಶ್ರೀ. ಶ್ರೀಶೈಲ. ದೇವೆಂದ್ರ. ನಾಗಠಾಣ, ಪಂಚಾಯತ …

Read More »

ಈ ಬಾರಿಯ ಗಣೇಶ ಉತ್ಸವದಲ್ಲಿ ಮೆರವಣಿಗೆ ಪಟಾಕಿ ಏನೂ ಇಲ್ಲ…..!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೋವೀಡ್ ಹಾವಳಿ ಹೆಚ್ಚಾಗಿರುವದರಿಂದ ಈ ಬಾರಿಯ ಗಣೇಶ ಉತ್ಸವವನ್ನು ಕಟ್ಟುನಿಟ್ಟಾಗಿ ಆಚರಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಬಾರಿಯ ಸಾರ್ವಜನಿಕ ಗಣೇಶ ಮಂಡಳಿಗಳು ಮಂಟಪದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡದೇ ಸಮೀಪದ ಮಂದಿರಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕು,ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶನ ಮೂರ್ತಿ 4 ಫೂಟ್ ಗಿಂತ ಎತ್ತರ ಇರಬಾರದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶನ ಮೂರ್ತಿ ಎರಡು ಪೂಟ್ ಗಿಂತ ಎತ್ತರ ಇರಬಾರದು,ಗಣೇಶ ಮೂರ್ತಿಯನ್ನು …

Read More »

ಬೆಳಗಾವಿಯಲ್ಲಿ ಶಾಸಕಿ ಅಂಜಲಿ ಭಾವಚಿತ್ರಕ್ಕೆ ಬೆಂಕಿ…..

ಬೆಳಗಾವಿ- ಮನಗುತ್ತಿ ಗ್ರಾಮದಲ್ಲಿ ನಡೆದ ಶಿವಾಜಿ ಪ್ರತಿಮೆಯ ಕುರಿತು ನಡೆದ ಘಟನೆಯ ಸತ್ಯಾ ಸತ್ಯತೆಯನ್ನು ತಿಳಿದುಕೊಳ್ಳದೇ ಕರ್ನಾಟಕ ಸರ್ಕಾರದ ವಿರುದ್ಧ ಟ್ವೀಟ್ ಮಾಡಿರುವ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯೆಕ್ತ ಪಡಿಸಿದರು. ಬೆಳಗಾವಿಯ ಕನ್ನಡ ಸಾಹಿತ್ಯಭವನ ದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕರವೇ ಕಾರ್ಯಕರ್ತರು ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು,ಅಂಜಲಿ ನಿಂಬಾಳ್ಕರ್ ಭಾವಚಿತ್ರಕ್ಕೆ ಬೆಂಕಿ …

Read More »

ಆಕ್ಸಿಜನ್ ಯಂತ್ರಗಳ ಖರೀಧಿಗೆ ಅನುದಾನ ನೀಡಿದ ಅಭಯ ಪಾಟೀಲ

ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವೀಡ್ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು,ರೋಗಿಗಳಿಗೆ ಸುಧಾರಿತ ಆಕ್ಸಿಜನ್ ಯಂತ್ರಗಳ ಖರೀಧಿಗೆ ಶಾಸಕ ಅಭಯ ಪಾಟೀಲ ಭೀಮ್ಸ್ ಆಸ್ಪತ್ರೆಗೆ ವಿಶೇಷ ಅನುದಾನ ನೀಡಿದ್ದಾರೆ. ಭೀಮ್ಸ್ ಆಸ್ಪತ್ರೆಯಲ್ಲಿ high flow nasal canuala oxygenation ಯಂತ್ರಗಳ ಖರೀಧಿಗೆ ಶಾಸಕರ ಅನುದಾನ ನೀಡುವಂತೆ ಭೀಮ್ಸ್ ನಿರ್ದೇಶಕರು ಶಾಸಕ ಅಭಯ ಪಾಟೀಲರಿಗೆ ಪತ್ರ ಬರೆದಿದ್ದರು ಭೀಮ್ಸ್ ಮನವಿಗೆ ತಕ್ಷಣ ಸ್ಪಂದಿಸಿರುವ ಶಾಸಕ ಅಭಯ ಪಾಟೀಲ ಉಪ ವಿಭಾಗಾಧಿಕಾರಿಗಳಿಗೆ ಪತ್ರ …

Read More »

ಬೆಂಕಿ ಹಚ್ಚಿದವರು ದೇಶದ್ರೋಹಿಗಳು

ಬೆಳಗಾವಿ-ಪೊಲೀಸ್ ಠಾಣೆಗೆ ಆವರಣಕ್ಕೆ ನುಗ್ಗಿ ಬೆಂಕಿ ಹಚ್ಚಿದವರು ದೇಶದ್ರೋಹಿಗಳು ಎಂದು ಬೆಂಗಳೂರಿನ ಗಲಬೆ ಕುರಿತು,ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ನಡೆದ ಘಟನೆ ಅತ್ಯಂತ ಖಂಡನೀಯವಾಗಿದೆ.ಇಂದು ಇಡೀ ಜಗತ್ತು ಭಾರತದತ್ತ ಮುಖ ಮಾಡಿ ನೋಡುತ್ತಿದೆ, ದೇಶದಲ್ಲಿ ಕೊರೊನಾ ಮಹಾಮಾರಿ ಇದ್ದು ಶಾಂತತೆ ಕಾಪಾಡಬೇಕು, ದೇಶದ ಆರ್ಥಿಕತೆ ಸುಧಾರಿಸಲು ಪ್ರಧಾನಿ ಕೆಲಸ ಮಾಡುವ ವೇಳೆ ಕೆಲವು ದುಷ್ಟ ಶಕ್ತಿ …

Read More »

ಅಂಜಲಿ ನಿಂಬಾಳ್ಕರ್ ಕ್ಷಮೆಯಾಚಿಸಲಿ- ಕರವೇ

ಖಾನಾಪೂರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಮನಗುತ್ತಿ ಘಟನೆಯ ವಾಸ್ತವತೆಯನ್ನು ತಿಳಿದುಕೊಳ್ಳದೇ ಕರ್ನಾಟಕ ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕ ಆರೋಪಿಸಿದೆ. ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವೀಟ್ ಮಾಡಿದ್ದನ್ನು ಖಂಡಿಸಿದ್ದಾರೆ. ಅಂಜಲಿ ನಿಂಬಾಳ್ಕರ್ ಒಬ್ಬ ಶಾಸಕಿಯಾಗಿ ಮನಗುತ್ತಿಯ ಘಟನೆಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು …

Read More »

ಬೆಳಗಾವಿ ಜಿಲ್ಲೆಯಲ್ಲಿ ಇಂದು 444 ಸೊಂಕಿತರು ಡಿಸ್ಚಾರ್ಜ್

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು ಎಲ್ಲವೂ ದಾಖಲೆ ಯಾಕಂದ್ರೆ ಇವತ್ತು ದಾಖಲೆ ಪ್ರಮಾಣದಲ್ಲಿ ಸೊಂಕಿತರು ಪತ್ತೆಯಾಗಿದ್ದು,ದಾಖಲೆ ಪ್ರಮಾಣದಲ್ಲಿಯೇ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡಾ ಆಗಿದ್ದಾರೆ ಇವತ್ತು ಮಂಗಳವಾರದ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು, ಇವತ್ತು 575 ಸೊಂಕಿತರು ಪತ್ತೆಯಾಗಿದ್ದು ದಾಖಲೆ,ಆದರೆ ಇವತ್ತು ಒಂದೇ ದಿನ 444 ಜನ ಸೊಂಕಿತರು ಗುಣಮುಖರಾಗಿ ದಾಖಲೆ ಪ್ರಮಾಣದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ವಿಶೇಷವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಸೊಂಕಿತರು ಪತ್ತೆಯಾಗುತ್ತಿರುವ ಬೆನ್ನಲ್ಲಿಯೇ ದಾಖಲೆ …

Read More »

ಕಣಕುಂಬಿ ಅರಣ್ಯದಲ್ಲಿ ರೈತನ ಮೇಲೆ ಕರಡಿ ದಾಳಿ

ಬೆಳಗಾವಿ- ಖಾನಾಪೂರ ತಾಲ್ಲೂಕಿನ ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದೆ. ಚಿಕಲೆ ಗ್ರಾಮದ 60 ವರ್ಷದ ಶಂಕರ ಗವಸ್ ಎಂಬ ರೈತ ಹೊಲದಲ್ಲಿ ಕೆಲಸ ಮಾಡುವಾಗ ಕರಡಿ ದಾಳಿ ಮಾಡಿ ಗಾಯಪಡಿಸಿದ್ದು ಗಾಯಾಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಎಂದು ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

Read More »

ಬೆಳಗಾವಿಯಲ್ಲಿ, 70 ಕೊರೊನಾ ಸೋಂಕಿತರ ಯಶಸ್ವಿ ಹೆರಿಗೆ

ಬೆಳಗಾವಿ-ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ, ಈವರೆಗೂ 70 ಕೊರೊನಾ ಸೋಂಕಿತರ ಯಶಸ್ವಿ ಹೆರಿಗೆ ಮಾಡಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬಿಮ್ಸ್ ಆಸ್ಪತ್ರೆಯಲ್ಲಿ ಈವರೆಗೂ 70 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಲಾಗಿದೆ. ಈ ಪೈಕಿ 34 ಸೀಜರಿನ್ ಹಾಗೂ 36 ನಾರ್ಮಲ್ ಡಿಲಿವರಿ ಆಗಿವೆ,ಎಂದು ದಾಸ್ತಿಕೊಪ್ಪ ಮಾಹಿತಿ ನೀಡಿದ್ದಾರೆ. ಹೆರಿಗೆಯಾದ 5 ಅಥವಾ 7ನೇ ದಿವಸಕ್ಕೆ ನವಜಾತ ಶಿಶುವಿನ ಸ್ವ್ಯಾಬ್ ಟೆಸ್ಟ್ …

Read More »

ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಲು ನಿರ್ದೇಶನ

ಬೆಳಗಾವಿ,): ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಮುಂದಾಗುವ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಿ ಮಾರ್ಗಸೂಚಿ ಪ್ರಕಾರ ತಕ್ಷಣವೇ ಅನುಮತಿ ನೀಡಬೇಕು ಎಂದು ಶಶಿಕಲಾ ಜೊಲ್ಲೆ ತಿಳಿಸಿದರು. ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ(ಆ.11) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರ್ಯಾಪಿಡ್ ಟೆಸ್ಟ್ ಗೆ ಹೆಚ್ಚಿನ ಆದ್ಯತೆ ನೀಡಬೇಕು. ಏನಾದರೂ ಕೊರತೆ ಕಂಡುಬಂದರೆ ಉಸ್ತುವಾರಿ ಸಚಿವರು ಅಥವಾ ತಮ್ಮ ಗಮನಕ್ಕೆ ತರಬೇಕು. ಖಾಸಗಿ …

Read More »

ಕರ್ನಾಟಕ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ,ಕನ್ನಡಿಗರ ಮನಸ್ಸಿನಿಂದ ಕ್ವೀಟ್ ಆದ ಶಾಸಕಿ ಅಂಜಲಿ ನಿಂಬಾಳ್ಕರ್….!

ವಾಸ್ತವತೆ ತಿಳಿಯದೇ ಟ್ವೀಟ್ ಮಾಡಿ ಸರ್ಕಾರದ ಮೇಲೆ ಗೂಬೆ ಕೂರಿಸಿದ ನಿಂಬಾಳ್ಕರ್…..! ಬೆಳಗಾವಿ- ಹುಕ್ಕೇರಿ ತಾಲ್ಲೂಕಿನ ಮನಗುತ್ತಿಯಲ್ಲಿ ಆಗಿದ್ದು ಶಿವಾಜಿ ಮೂರ್ತಿಯ ವಿವಾದ ಅಲ್ಲ,ಅಲ್ಲಿ ನಡೆದಿದ್ದು ಜಾಗೆಯ ವಿವಾದ,ಶಿವಾಜಿ ಮೂರ್ತಿಯನ್ನು ತೆರವು ಮಾಡಲು ಸರ್ಕಾರ ಸೂಚನೆಯೂ ನೀಡಿಲ್ಲ,ಮೂರ್ತಿಯನ್ನು ತೆರವು ಮಾಡಿದ್ದು ಜಿಲ್ಲಾಡಳಿತವೂ ಅಲ್ಲ,ಮೂರ್ತಿ ಪ್ರತಿಷ್ಠಾಪನೆ ಮಾಡಿದವರೇ ಮೂರ್ತಿಯನ್ನು ತೆರವು ಮಾಡಿ,ಇದು ನಮ್ಮ ವಿವಾದ ಅದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಅಲ್ಲಿಯ ಮರಾಠಾ ಸಮಾಜದ ಮುಖಂಡರೇ ಹೇಳಿಕೆ ನೀಡಿದ್ದು ವಾಸ್ತವತೆ. ಮನಗುತ್ತಿಯಲ್ಲಿ …

Read More »

ಶಿವಾಜಿ ಮಹಾರಾಜರು,ಕೇವಲ ಮಹಾರಾಷ್ಟ್ರದ ಸ್ವತ್ತು ಅಲ್ಲ- ಸತೀಶ್

ಬೆಳಗಾವಿ- ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮಹಾರಾಷ್ಟ್ರದ ಸ್ವತ್ತು ಅಲ್ಲ,ಅವರೊಬ್ಬ ರಾಷ್ಟ್ರಪುರುಷರಾಗಿದ್ದು ,ಬೆಳಗಾವಿ ಜಿಲ್ಲೆಯಲ್ಲಿ ಶಿವಾಜಿ ಮೂರ್ತಿಗಳ ಸ್ಥಾಪನೆಯ ವಿಷಯದಲ್ಲಿ,ಮಹಾರಾಷ್ಟ್ರದ ಕಾಂಟ್ರಿಬ್ಯುಶನ್ ಏನೂ ಇಲ್ಲ,ಅವರು ಇಲ್ಲಿಯ ಲೋಕಲ್ ವಿಷಯದಲ್ಲಿ ಮೂಗು ತೂರಿಸುವ ನೈತಿಕತೆ ಮಹಾರಾಷ್ಟ್ರಕ್ಕೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಹಾರಾಷ್ಟ್ರದ ನಾಯಕರಿಗೆ ತಿರಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಶಿವಾಜಿ ಮೂರ್ತಿಗಳಿವೆ,ಯಮಕನಮರಡಿ ಕ್ಷೇತ್ರದ ಕಡೋಲಿಯಲ್ಲಿ ನಾವೂ 50 ಲಕ್ಷ ರೂ …

Read More »

ಬೆಳಗಾವಿಯ ನರ್ಸ್ ಗೆ ವೈದ್ಯಕೀಯ ಶಿಕ್ಷಣ ಸಚಿವರಿಂದ ಅಭಿನಂದನೆ

ಬೆಳಗಾವಿ-ಕೋವಿಡ್ ಸೋಂಕಿತೆಗೆ ಯಶಸ್ವಿ ಹೆರಿಗೆ ಮಾಡಿಸಿದ ನರ್ಸ್‌ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್‌ಗೆ ಸಚಿವ ಡಾ.ಕೆ.ಸುಧಾಕರ್ ಅಭಿನಂದ‌ನೆ ಸಲ್ಲಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದ,ಸೋಂಕಿತೆಗೆ ಧೈರ್ಯ ತುಂಬಿ ಹೆರಿಗೆ ಮಾಡಿಸಿದ ನರ್ಸ್ ಕಾರ್ಯ ಶ್ಲಾಘನೀಯ’ ಎಂದು.ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ ಸಚಿವ ಡಾ.ಕೆ.ಸುಧಾಕರ್ ಬೆಳಗಾವಿ ಜಿಲ್ಲೆಯ ನರ್ಸ್ ಕಾರ್ಯವನ್ನು ಕೊಂಡಾಡಿದ್ದಾರೆ. ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ …

Read More »

ಇಂದು ಭಾನುವಾರ ಒಂದೇ ದಿನ 455 ಜನ ಸೊಂಕಿತರು ಗುಣಮುಖ,ಆಸ್ಪತ್ರೆಯಿಂದ ಡಿಸ್ಚಾರ್ಜ್..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಸಂಡೇ ಸಿಹಿ ಸುದ್ಧಿ ಹೊರಬಿದ್ದಿದೆ ಇವತ್ತೂ ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ ಸೊಂಕಿತರಕ್ಕಿಂತ ದುಪ್ಪಟ್ಟು ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಇಂದು ಭಾನುವಾರದ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಇವತ್ತು ಬೆಳಗಾವಿ ಜಿಲ್ಲೆಯಲ್ಲಿ 235 ಜನ ಸೊಂಕಿತರು ಪತ್ತೆಯಾಗಿದ್ದು,ಇವತ್ತು ಒಂದೇ ದಿನ 455 ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವದು ಸಂತಸದ ಸಂಗತಿಯಾಗಿದೆ ನಿನ್ನೆ ಶನಿವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ ಸೊಂಕಿತರಕ್ಕಿಂತ ಹೆಚ್ಚು ಜನ …

Read More »