Breaking News

LOCAL NEWS

ರಮೇಶ್ ಸಾಹುಕಾರ್,ಲಖನ್ ಸಾಹುಕಾರ್, ಸಾಥ್ ಸಾಥ್ ಹೈ..‌‌‌‌‌‌‌….!

ಬೆಂಗಳೂರು- ಬೆಂಗಳೂರಿನ ಸದಾಶಿವ ನಗರದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆಯಿತು. ಲಖನ್ ಜಾರಕಿಹೊಳಿ,ಶಾಸಕರಾದ ಅಭಯ ಪಾಟೀಲ,ಮಹಾಂತೇಶ ಕವಟಗಿಮಠ,ಅನೀಲ ಬೆನಕೆ,ರಮೇಶ್ ಕತ್ತಿ ಸೇರಿದಂತೆ ಹಲವಾರು ಜನ ನಾಯಕರು ಬೆಂಗಳೂರಿನ ಸದಾಶಿವ ನಗರದ ಮನೆಗೆ ಭೇಟಿ ನೀಡಿ ಶುಭಕೋರಿದರು. ಲಖನ್ ಜಾರಕಿಹೊಳಿ,ಅವರು ಸಚಿವ ರಮೇಶ್ ಜಾರಕಿಹೊಳಿ ಅವರ ಮನೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.

Read More »

ಬಂತು..ಬಂತು ಬೆಳಗಾವಿಗೆ ಕಚೇರಿ ಬಂತು…..!

ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕರ್ನಾಟಕ ಮಾಹಿತಿ ಆಯೋಗ ಬೆಳಗಾವಿ ಪೀಠವು ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರ, 1 ನೇ ಮಹಡಿ ಕೊಠಡಿ ಸಂಖ್ಯೆ 141 ರಲ್ಲಿ ಕಾರ್ಯಾರಂಭಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು,ಈಗಾಗಲೇ ಹಲವಾರು ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದ್ದು,ಉತ್ತರ ಕರ್ನಾಟಕದ ಜನರಿಗೆ ಅನಕೂಲವಾಗುವ ಪ್ರಮುಖ ಕಚೇರಿಗಳು …

Read More »

15 ಜನರು ಕೊರೋನಾ ಸೊಂಕಿತರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ-, ಕೊರೋನಾ ಸೋಂಕು ತಗುಲಿದ್ದ ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ ಹಾಗೂ ಗೋಕಾಕ ತಾಲ್ಲೂಕಿನ ಒಟ್ಟು 15 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೆಳಗಾವಿ ತಾಲ್ಲೂಕಿನ 7, ಹುಕ್ಕೇರಿ ತಾಲ್ಲೂಕಿನ 4, ಚಿಕ್ಕೋಡಿ ತಾಲ್ಲೂಕಿನ 2, ಗೋಕಾಕ ತಾಲ್ಲೂಕಿನ 1 ಹಾಗೂ ಮಹಾರಾಷ್ಟ್ರದ ಚಂದಗಡ ತಾಲ್ಲೂಕಿನ ಒಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಬಿಡುಗಡೆ …

Read More »

ವಾಟ್ ಎ ನೈಸ್ ಡೇ……ಗುಲಾಬಿ ಕೊಟ್ಟು ಮಾಸ್ಕ ಜಾಗೃತಿ

ಬೆಳಗಾವಿ-ಕೋವಿಡ್- ೧೯ ಸಾಂಕ್ರಾಮಿಕ ರೋಗದಿಂದ ಪಾರಾಗಲು ಮುಖಕ್ಕೆ ಮಾಸ್ಕ್ ಧರಿಸುವುದು; ಸೋಪಿನಿಂದ ಕೈ ತೊಳೆಯುವುದು , ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು 18 ನೇ ಜೂನ್ ಅನ್ನು ಮಾಸ್ಕ್ ದಿನವನ್ನಾಗಿ ಘೋಷಿಸಿರುವುದರಿಂದ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ಗುರುವಾರ (ಜೂ‌.18) ಮಾಸ್ಕ್ ದಿನವನ್ನು ಆಚರಿಸಲಾಯಿತು. ನಗರದ ಅಶೋಕ ವೃತ್ತದಿಂದ ಸಂಗೊಳ್ಳಿ ರಾಯಣ್ಣ …

Read More »

ಬೆಳಗಾವಿಯಲ್ಲಿ ಯಾವುದೇ ತೊಂದರೆ ಇಲ್ಲದೇ ನಡೆಯಿತು, ಪಿಯುಸಿ ಪರೀಕ್ಷೆ

ಬೆಳಗಾವಿ- ಜಿಟಿಜಿಟಿ ಮಳೆ ಮಧ್ಯೆಯೂ ಬೆಳಗಾವಿಯಲ್ಲಿ ಪಿಯು ಇಂಗ್ಲಿಷ್ ಪರೀಕ್ಷೆ ನಡೆಯಿತು ಬೆಳಿಗ್ಗೆ 7 ಘಂಟೆಗೆ ಬೆಳಗಾವಿಯಲ್ಲಿ ಪರೀಕ್ಷಾ ಕೇಂದ್ರದತ್ತ ಧಾವಿಸಿದ ವಿದ್ಯಾರ್ಥಿಗಳು ಬಸ್‌ಗಳು ಸಿಗುತ್ತೋ ಇಲ್ವೋ ಎಂಬ ಆತಂಕದಲ್ಲಿ‌ ಪರೀಕ್ಷಾ ಕೇಂದ್ರಕ್ಕೆ ಬೆಳಗಿನ ಜಾವವೇ ಹಾಜರಾಗಿದ್ದರು. ಉಪನ್ಯಾಸಕರು ಕರೆ ಮಾಡಿ ಪರೀಕ್ಷೆಯಲ್ಲಿ ಅನುಸರಿಸಬೇಕಾದ ಕ್ರಮದ ಬಗ್ಗೆ ತಿಳಿಸಿದ್ದರು. ಕೆಲವರು,ಸರ್ಕಾರಿ ಬಸ್‌ನಲ್ಲಿ ಹಾಲ್‌ ಟಿಕೆಟ್ ತೋರಿಸಿ, ಉಚಿತ ಪ್ರಯಾಣ ಮಾಡಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದರೆ,ಇನ್ನು ಕೆಲವರು ಬಸ್‌ಗಳಲ್ಲಿ ಬಂದ್ರೆ ಇನ್ನೂ …

Read More »

ಅಗಸರು, ಕ್ಷೌರಿಕರಿಗೆ 5 ಸಾವಿರ ನೆರವು- ಜಿಲ್ಲಾಧಿಕಾರಿ ಸಭೆ

ಬೆಳಗಾವಿ,-ಕೋವಿಡ್-೧೯ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಗಸರು ಮತ್ತು ಕ್ಷೌರಿಕ ವೃತ್ತಿದಾರರಿಗೆ ಸರ್ಕಾರ ಘೋಷಿಸಿರುವ ಐದು ಸಾವಿರ ರೂಪಾಯಿ ನೆರವನ್ನು ಯಾವುದೇ ವಿಳಂಬವಿಲ್ಲದೇ ಅರ್ಹರಿಗೆ ತಕ್ಷಣ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೋವಿಡ್-೧೯ ಹಿನ್ನೆಲೆಯಲ್ಲಿ ಅಗಸರು ಮತ್ತು ಕ್ಷೌರಿಕರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂಪಾಯಿ ನೆರವು ಒದಗಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜೂ.17) ನಡೆದ …

Read More »

ಅಶೋಕ ಚಂದರಗಿ ಅವರನ್ನು ಎಂ.ಎಲ್ ಸಿ ಮಾಡಲು,ಬೆಳಗಾವಿಯ ಕನ್ನಡ ಸಂಘಟನೆಗಳ ಒಗ್ಗಟ್ಟು

ಬೆಳಗಾವಿ- ಹಲವಾರು ದಶಕಗಳಿಂದ ಕನ್ನಡಪರ ಹೋರಾಟ ಮಾಡುತ್ತ ಬಂದಿರುವ ಸಮಾಜ ಚಿಂತಕ,ಹಿರಿಯ ಪತ್ರಕರ್ತ ಅಶೋಕ ಚಂದರಗಿ ಅವರನ್ನು ಚಿಂತಕರ ಚಾವಡಿ ಅಶೋಕ ಚಂದರಗಿ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ವಿವಾದದಲ್ಲಿ ಬೆಳಗಾವಿಯ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಸರ್ಕಾರದ ಬಳಿ,ಹಕ್ಕೊತ್ತಾಯ ಮಾಡಲು ಬೆಂಗಳೂರಿಗೆ ಕನ್ನಡ ಹೋರಾಟಗಾರರ ನಿಯೋಗ ತೆರಳಿದೆ. ಗಡಿ ಇನ್ನಷ್ಟು ಗಟ್ಟಿಗೊಳಿಸುವ ವಿಚಾರವಾಗಿ ಬೆಳಗಾವಿ ಗಡಿ ಭಾಗದಲ್ಲಿ ಕನ್ನಡ ಪರ ಹೋರಾಟ ಮಾಡಿದ ಹೋರಾಟಗಾರರನ್ನು ಈ ಬಾರಿ ವಿಧಾನ …

Read More »

ನರಿ ಬುದ್ದಿ ಬಿಡಲಿ,ಚೀನಾಗೆ ಕೇಂದ್ರ ಸಚಿವರ ಖಡಕ್ ಎಚ್ಚರಿಕೆ….

ಬೆಳಗಾವಿ- ಕೊರೋನಾ ಸಂಕಷ್ಟದ ಸಮಯದಲ್ಲಿ ಚೀನಾ ನರಿ ಬುದ್ದಿ ತೋರಿಸುವದನ್ನು ಬಿಡಲಿ ಎಂದು, ಬೆಳಗಾವಿಯಲ್ಲಿ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಭಾರತಕ್ಕಾಗಿ ಪ್ರಾಣಕೊಟ್ಟು ಹುತಾತ್ಮರಾದ ಸೈನಿಕರಿಗೆ ಚೀರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಸೈನಿಕರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸುರೇಶ ಅಂಗಡಿ ಮೃತಯೋಧರಿಗೆ ಶೃದ್ದಾಂಜಲಿ ಅರ್ಪಿಸಿದರು. …

Read More »

ಗುಡ್ಡ ಕುಸಿತ,ಬೆಳಗಾವಿ ಚೋರ್ಲಾ ರಸ್ತೆ ಸಂಪರ್ಕ ಬಂದ್….

ಬೆಳಗಾವಿ- ಇಂದು ಬೆಳಗಿನ ಜಾವದಿಂದ ನಿರಂತರವಾಗಿ ಕೊಂಕಣ ಬೆಲ್ಟ್ ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು,ವಿಪರೀತ ಮಳೆಯಿಂದಾಗಿ,ಬೆಳಗಾವಿ ಚೋರ್ಲಾ ರಸ್ತೆಯಲ್ಲಿ ಅಪಾರ ಪ್ರಮಾಣದ ಗುಡ್ಡ ಕುಸಿದಿದೆ‌. ಧಾರಾಕಾರ ಮಳೆಗೆ ಛೋರ್ಲಾ ಬಳಿ ಭಾರೀ ಪ್ರಮಾಣದ ಗುಡ್ಡ ಕುಸಿತವಾಗಿ, ಬೆಳಗಾವಿ-ಗೋವಾ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತ ಗೊಂಡಿದೆ.ಪಶ್ಚಿಮ ಘಟ್ಟ ಕೊಂಕಣ ಬೆಲ್ಟ್, ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆ ಸುರಿಯುತ್ತಿದೆ. ಗೋವಾದ ಛೋರ್ಲಾ ಘಾಟ ಸಮೀಪ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ಬೆಳಗಾವಿ-ಗೋವಾ ಸಂಪರ್ಕ …

Read More »

ಬೆಳಗಾವಿಯಲ್ಲಿ ನಡೆದ ,ಎಸಿಬಿ ದಾಳಿಯಲ್ಲಿ, ತೂಕ ಅಳತೆ,ಗಿಂತ ಹೆಚ್ಚಿನ ಆಸ್ತಿ ಪತ್ತೆ.

ಬೆಳಗಾವಿ- ಬೆಳಗಾವಿಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ,ಸುಭಾಷ್ ಸುರೇಂದ್ರ ಉಪ್ಪಾರ್ ಇವರ ರುಕ್ಮಿಣಿ ನಗರದ ಮನೆ ಸೇರಿದಂತೆ ನಾಲ್ಕು ಕಡೆ ಎಸಿಬಿ ದಾಳಿ ನಡೆದಿದ್ದು ಕೋಟ್ಯಾಂತರ ರೂ ಆಸ್ತಿ ಪತ್ತೆಯಾಗಿದೆ. ಆಕ್ರಮ ಆಸ್ತಿ ಹೊಂದಿದ ಆರೋಪದ ಮೇಲೆ ಇವರ ವಿರುದ್ಧ,ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. ಇವರು ಬೆಳಗಾವಿಯಲ್ಲಿ ರಿಸ ನಂ.1291/2-ಪಿ1,ಪ್ಲಾಟ್ ನಂ 84 ಕ್ಷೇತ್ರ 2720 ಚದರ ಅಡಿ,ರುಕ್ಮಿಣಿ ನಗರದಲ್ಲಿ ಭವ್ಯವಾದ ಡುಪ್ಲೆಕ್ಸ್ …

Read More »

ಬೆಳಗಾವಿಯಲ್ಲಿ ಇಂದು ಮತ್ತೆ 3 ಜನ ಸೊಂಕಿತರ ಪತ್ತೆ

ಬೆಳಗಾವಿ- – ಬೆಳಗಾವಿಯಲ್ಲಿ ಇಂದು ಮೂರು ಜನ ಸೊಂಕಿತರು ಪತ್ತೆಯಾಗಿದ್ದಾರೆ,ಇಂದಿನ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಕೊರೋನಾ ಸ್ಕೋರ್ 307 ಕ್ಕೆ ಏರಿದಂತಾಗಿದೆ. ಇಂದು ಪತ್ತೆಯಾದ ಮೂವರು ಸೊಂಕಿತರು ಮಹಾರಾಷ್ಟ್ರದ ಜೊತೆ ನಂಟು ಹೊಂದಿದ್ದಾರೆ. ಆದ್ರೆ ಇಂದು ಒಂಬತ್ತು ಜನ ಸೊಂಕಿತರು ಡಿಸ್ಚಾರ್ಜ ಆಗಿದ್ದು ,ಇಂದು 3 ಇನ್ ಕಮೀಂಗ್,9 ಜನ ಹೋಮ್ ಗೋಯಿಂಗ್ ಆಗಿದ್ದಾರೆ.  

Read More »

ಬೆಳಗಾವಿಯಲ್ಲಿ 9 ಜನ ಸೊಂಕಿತರು ಗುಣಮುಖ,ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ -ಕೊರೋನಾ ಸೊಂಕು ತಗುಲಿದ್ದ ಹುಕ್ಕೇರಿ ತಾಲ್ಲೂಕಿನ 8 ಜನರು ಹಾಗೂ ಬೆಳಗಾವಿ ನಗರದ ವಡಗಾವಿಯ ಒಬ್ಬರು 9 ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬಿಡುಗಡೆ ಹೊಂದಿದವರ ವಿವರ: ಪಿ–5410(ಹುಕ್ಕೇರಿ) ಪಿ–5411(ಹುಕ್ಕೇರಿ) ಪಿ–5412(ಹುಕ್ಕೇರಿ) ಪಿ–5419(ಹುಕ್ಕೇರಿ) ಪಿ–1497(ಹುಕ್ಕೇರಿ) ಪಿ–5393(ಹುಕ್ಕೇರಿ) ಪಿ–5394(ಹುಕ್ಕೇರಿ) ಪಿ–5390(ವಡಗಾವಿ, ಬೆಳಗಾವಿ) ಪಿ–5399(ಹುಕ್ಕೇರಿ) ***

Read More »

ಬೆಳಗಾವಿಯಲ್ಲಿ ಬೆಳ್ಳಂ ಬೆಳಿಗ್ಗೆ ಎಸಿಬಿ ದಾಳಿ

ಬೆಳಗಾವಿ-ಬೆಳಗಾವಿಯಲ್ಲಿ ಬೆಳ್ಳಂ ಬೆಳಿಗ್ಗೆ ಎಸಿಬಿ ದಾಳಿ ನಡೆದಿದೆ.ಮುಖಕ್ಕೆ ಮಾಸ್ಕ ಹಾಕೊಂಡು,ಎಸಿಬಿ ಅಧಿಕಾರಿಗಳು ನಾಲ್ಕು ಕಡೆ ದಾಳಿ ಮಾಡಿದ್ದಾರೆ. ಬೆಳಗಾವಿಯ ಅಳತೆ, ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿ ಮನೆ ಮೇಲೆ ದಾಳಿ ನಡೆದೆ‌ ಅಸಿಸ್ಟೆಂಟ್ ಕಂಟ್ರೋಲರ್ ಸುಭಾಷ್ ಉಪ್ಪಾರ ನಿವಾಸ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರುಕ್ಮಿಣಿ ನಗರದ ನಿವಾಸ ಮತ್ತು, ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.ಸುಭಾಷ್ ಉಪ್ಪಾರ್, ಬೆಳಗಾವಿಯ ತೂಕ ಮತ್ತು ಮಾಪನ …

Read More »

ಅತಿಕ್ರಮಣ ತೆರವು, ತಡೆಗೋಡೆ ನಿರ್ಮಾಣಕ್ಕೆ ಸೂಚನೆ

ಬೆಳಗಾವಿ- ಕಳೆದ ಮಳೆಗಾಲದಲ್ಲಿ ಪ್ರವಾಹದಿಂದ ನಗರ ಪ್ರದೇಶದಲ್ಲಿ ತೀವ್ರ ಹಾನಿಯುಂಟು ಮಾಡಿದ್ದ ಬಳ್ಳಾರಿ ನಾಲಾ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ *ರಮೇಶ್ ಜಾರಕಿಹೊಳಿ* ಸೋಮವಾರ ಪರಿಶೀಲಿಸಿದರು. ನಗರದ ಪ್ರಮುಖ ನಾಲಾ ಆಗಿರುವ ಬಳ್ಳಾರಿ ನಾಲಾ, ಲೇಂಡಿ ನಾಲಾ ಹಾಗೂ ನಾಗಝರಿ ನಾಲಾಗಳ ಎರಡೂ ಬದಿಗೆ ಬೆಳೆದಿರುವ ಕಸವನ್ನು ತಕ್ಷಣವೇ ಸ್ವಚ್ಛಗೊಳಿಸಬೇಕು ಮತ್ತು ನಗರದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಎರಡೂ ಬದಿಗೆ ತಡೆಗೋಡೆ ನಿರ್ಮಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸಚಿವರು ಕಟ್ಟುನಿಟ್ಟಿನ …

Read More »

ಚುನಾವಣೆ ಬಂದಾಗ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಗ್ಗೆ,ಸ್ಪೇಶಲ್ ಕೇರ್ ತಗೋತೀನಿ- ರಮೇಶ್ ಜಾರಕಿಹೊಳಿ

ಬೆಳಗಾವಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಬೆಳಗಾವಿ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆಯಿತು. ತುಂಬಿದ ಸಭೆಯಲ್ಲಿ ಬಿಜೆಪಿ ಸರ್ಕಾರದ ಸಾಧನೆ ಕುರಿತ ವಿಚಾರದಲ್ಲಿ ನಾಯಕರಿಗೆ ಶಾಸಕಿ ಮಾತಿನೇಟು ನೀಡಿದರು.ಈ ಸಂಧರ್ಭದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ, ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ವಾಗ್ವಾದ ನಡೆಯಿತು ಕೇಂದ್ರ ಸರ್ಕಾರದ ಅನುದಾನದ ವಿಚಾರವಾಗಿ ಆರೋಪ ಪ್ರತ್ಯಾರೋಪ ನಡೆಯಿತು ‘ಉದ್ಯೋಗ ಕಳೆದುಕೊಂಡು ಸಾಕಷ್ಟು …

Read More »