Breaking News

LOCAL NEWS

26 ರಂದು ಬೆಳಗಾವಿಯಲ್ಲಿ, ಜನತಾ ದರ್ಶನ

ಸಾರ್ವಜನಿಕರ ಅಹವಾಲು ಆಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಸೆ.26 ರಂದು “ಜನತಾ ದರ್ಶನ”- ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸುವ ಉದ್ಧೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸೆ.26 ರಂದು ಜಿಲ್ಲಾಮಟ್ಟದ “ಜನತಾ ದರ್ಶನ” ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ(ಸೆ.22) ನಡೆದ ಜನತಾ ದರ್ಶನ …

Read More »

ಎರಡು ಗುಂಪುಗಳ ನಡುವೆ ಗಲಾಟೆ,ಪೋಲೀಸರ ದೌಡು…

ಖಾನಾಪೂರ-ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿರುವ ಘಟನೆ,ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ನಿನ್ನೆ ಸಂಜೆ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ನಡೆದಿದ್ದ ಗಲಾಟೆ ನಡೆದಿದೆ.ನಡೆದುಕೊಂಡು ಹೋಗುವಾಗ ಕೈ ತಾಗಿದಕ್ಕೆ ಯುವಕರ ಮಧ್ಯೆ ಗಲಾಟೆ ಆಗಿದೆ. ಹಿರಿಯರು ಯುವಕರನ್ನು ಮನವೊಲಿಸಿ ಗಲಾಟೆಯನ್ನು ನಿಯಂತ್ರಿಸಿದ್ದರು. ಸಂಜೆ ಆಗ್ತಿದ್ದಂತೆ ಒಂದು ಗುಂಪಿನ ಯುವಕರ ಕಾಲನಿಗೆ ಹೋಗಿ ಮತ್ತೊಂದು ಗುಂಪಿನವರ ಜೊತೆ ಗಲಾಟೆ ಮಾಡಿದ್ದಾರೆ.ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಾಸಕ ವಿಠ್ಠಲ ಹಲಗೇಕರ …

Read More »

ಬೆಳಗಾವಿಯಲ್ಲಿ FM ರೇಡಿಯೋ ಶುರು ಮಾಡಿ…!!

ಬೆಳಗಾವಿ- ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಪ್ರಾರಂಭಿಸಲು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ದೆಹಲಿಯಲ್ಲಿ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಇಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವರಿಗೆ- ಸಂಸದ ಈರಣ್ಣ ಕಡಾಡಿ ಬೇಟಿ ಮಾಡಿ, ಬೆಳಗಾವಿಯಲ್ಲಿ FM ರೇಡಿಯೋ ಕೇಂದ್ರಕ್ಕೆ ಮಂಜೂರಾತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ನವದೆಹಲಿಯಲ್ಲಿ ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅವರನ್ನು …

Read More »

ಬೆಳಗಾವಿ DCP ರೋಹನ್ ಜಗದೀಶ್  ಅವರಿಂದ ಬುಲೆಟ್ ರೌಂಡ್ಸ್……!!

ಬೆಳಗಾವಿ- ಗಣೇಶ ಉತ್ಸವದ ಪೋಲೀಸ್ ಬಂದೋಬಸ್ತಿಯ ವಿಕ್ಷಣೆಗಾಗಿ,ಹಾಗೂ ಗಣೇಶ ಮಂಡಲಗಳ ಅಹವಾಲುಗಳನ್ನು ಆಲಿಸಲು ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಅವರು ನಗರದಲ್ಲಿ ಬುಲೆಟ್ ರೌಂಡ್ಸ್ ಹಾಕಿದ್ರು. ಪ್ರಥಮವಾಗಿ ಬೆಳಗಾವಿಯ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಡಿಸಿಪಿ ರೋಹನ್ ಜಗದೀಶ್,ಮಾಳಮಾರುತಿ ಸಿಪಿಐ ಕಾಲಿಮಿರ್ಚಿ,ಪಿ ಎಸ್ ಐ ಹೊನ್ನಪ್ಪ ತಳವಾರ,ಶ್ರೀಶೈಲ ಗುಳಗೇರಿ, ಹಾಗೂ ಮಾಳಮಾರುತಿ ಠಾಣೆಯ ಪೇದೆಗಳು ಠಾಣಾ ವ್ಯಾಪ್ತಿಯಲ್ಲಿ ಬೈಕ್ ರೌಂಡ್ಸ್ ಹಾಕುವ ಮೂಲಕ ಗಣೇಶ ದರ್ಶನದ ಜೊತೆಗೆ ಮಂಡಲಗಳ ಸದಸ್ಯರ ಜೊತೆ …

Read More »

ಅವರು ಫೋನ್ ಮಾಡಿದ ನಂತರ ಹತ್ತು ನಿಮಿಷದಲ್ಲಿ ಸ್ಥಳಕ್ಕೆ JCB ಬಂದಿತ್ತು…!!

ಇದು ನಿಜವಾದ ಪ್ರಾಣಿ ದಯೆ, ಸ್ವಂದನೆಗೆ ವಂದನೆ…!! ಸಾಮಾಜಿಕ ಸೇವೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿಯೇ ಅತ್ಯಂತ ಕ್ರೀಯಾಶೀಲವಾಗಿರುವ ಈ ಗೆಳೆಯರ ಬಳಗ ಭಿಕ್ಷುಕರಿಗೆ ಚಳಿಯಲ್ಲಿ ರಗ್ಗು, ಬೀದಿ ವ್ಯಾಪಾರಿಗಳಿಗೆ ಛತ್ರಿ,ಬೀದಿ ವ್ಯಾಪಾರಿಗಳ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಮತ್ತು ಸಹಾಯ,ನಿರ್ಗತಿಕರಿಗೆ ಚಿಕಿತ್ಸೆ ಹೀಗೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಫೇಸ್ ಬುಕ್ ಫ್ರೆಂಡ್ ಸರ್ಕಲ್ ಇವತ್ತು ನಗರದಲ್ಲಿ ಮೃತಪಟ್ಟಿದ್ದ ಎರಡು ಬಿಡಾಡಿ ಜಾನುವಾರಗಳನ್ನು ಅಂತ್ಯ ಸಂಸ್ಕಾರ ಮಾಡಲು ಶಹಾಪೂರದಲ್ಲಿ ಇರುವ ಜಾನುವಾರುಗಳ …

Read More »

ಬೆಳಗಾವಿ ಜಿಲ್ಲೆಯಾದ್ಯಂತ ಕಾಲುಬಾಯಿ ರೋಗಕ್ಕೆ ಲಸಿಕೆ….

ಅಭಿಯಾನ ಯಶಸ್ವಿಗೆ ಹೆಚ್ಚಿನ ಶ್ರಮ ವಹಿಸಿ: ಜಿ. ಪಂ ಸಿಇಓ ಹರ್ಷಲ್ ಭೋಯರ್ ಬೆಳಗಾವಿ,-ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 25 ರವರೆಗೆ ನಡೆಯಲಿರುವ ಜಾನುವಾರುಗಳ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕೈಗೊಳ್ಳಲು ವ್ಯಾಕ್ಸೀನ್, ಸಿರಿಂಜ್ ಸೇರಿದಂತೆ ಯಾವುದೇ ರೀತಿಯ ವೈದಕೀಯ ಸೌಲಭ್ಯ ಕೊರತೆಯಾಗಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಸೆ.20) ನಡೆದ ನಾಲ್ಕನೇ ಸುತ್ತಿನ ಜಾನುವಾರುಗಳ …

Read More »

ಕುಡಿಯುವ ನೀರು ಬಿಡುಗಡೆಗೆ ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ,- ಮಲಪ್ರಭಾ ಅಚ್ಚುಕಟ್ಟು ಪ್ರದೇಶದಿಂದ ಶುಕ್ರವಾರ(ಸೆ.22)ದಿಂದ ಹದಿನೈದು ದಿನಗಳ ಕಾಲ ಕುಡಿಯುವ ನೀರು ಬಿಡುಗಡೆ ಮಾಡಲು ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಸೆ.20) ನಡೆದ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರಾವರಿ …

Read More »

ಅಧ್ಯಕ್ಷರಾಗಿ ಬಸವರಾಜ್ ಉಪಾಧ್ಯಕ್ಷರಾಗಿ, ಮಹಾಂತೇಶ್ ಆಯ್ಕೆ.

ಬೈಲಹೊಂಗಲ-ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಬಸವರಾಜ್ ಬಾಳೆಕುಂದರಗಿ. ಉಪಾಧ್ಯಕ್ಷರಾಗಿ, ಮಹಾಂತೇಶ್ ಅಣ್ಣಾ ಮತ್ತಿಕೊಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಬೈಲಹೊಂಗಲದ ಸೋಮೇಶ್ವರ ಶುಗರ್ಸ್ ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ನಡೆದಿತ್ತು ಈ ಚುನಾವಣೆಯಲ್ಲಿ ಬಾಳೆಕುಂದರಗಿ ಅವರ ಪ್ಯಾನಲ್ ಜಯಭೇರಿ ಸಾಧಿಸಿತ್ತು.ನೂತನವಾಗಿ ಚುನಾಯಿತರಾದ ನಿರ್ದೇಶಕರ ಪ್ರಥಮ ಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡ್ರ ಅವರ ಪ್ಯಾನೆಲ್ ಬಾಳೆಕುಂದರಗಿ ಅವರ ಪ್ಯಾನೆಲ್ ಗೆ ತೀವ್ರ ಪೈಪೋಟಿ ನಡೆದಿತ್ತು. …

Read More »

ಮಹಿಳಾ ಮೀಸಲಾತಿ,ಬೆಳಗಾವಿ ಜಿಲ್ಲೆಯಲ್ಲಿ ಮಹಿಳಾ ನಾಯಕಿಯರಿಗೆ ಜಾಕ್ ಪಾಟ್….!!

ಬೆಳಗಾವಿ – ಕೇಂದ್ರದಲ್ಲಿರುವ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಕಾಯ್ದೆಗೆ ಕ್ಯಾಬಿನೆಟ್ ಮೀಟೀಂಗ್ ನಲ್ಲಿ ಅನುಮತಿ ನೀಡುತ್ತಿದ್ದಂತೆಯೇ ಭಾರತದ ರಾಜಕೀಯ ರಂಗದಲ್ಲಿ ನಾರಿ ಶಕ್ತಿ ಜಿಂದಾಬಾದ್ ಎನ್ನುವಂತಾಗಿದೆ. ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮಹಿಳಾ ಮೀಸಲಾತಿ ಸಿಗಲಿದೆ ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಶ್ರಮಿಸುತ್ತಿರುವ ಮಹಿಳಾ ಕಾರ್ಯಕರ್ತರಿಗೆ ಮಹಿಳೆಯರಿಗೆ ರಾತ್ರೋ ರಾತ್ರಿ ಲಾಟರಿ ಡ್ರಾ ಆಗಿ ಸ್ಥಳದಲ್ಲೇ ಬಹುಮಾನ ಸಿಕ್ಕಿದಂತಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ …

Read More »

ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ..??

ಬೆಳಗಾವಿ: ಭಾರತದ ಹೊಸ ಸಂಸತ್‌ನಲ್ಲಿ ಕಲಾಪದ ಮೊದಲ ದಿನವಾದ ಮಂಗಳವಾರ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಿರುವುದಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ವಾಗತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಮಸೂದೆ ಕಡೆಗೂ ಮಂಡನೆಯಾಗಿದ್ದು, ಇದರಿಂದ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಶಕ್ತಿ ಬಂದಂತಾಗಿದೆ ಎಂದಿದ್ದಾರೆ. ಕಳೆದ 27 ವರ್ಷಗಳಲ್ಲಿ ಹಲವಾರು ಬಾರಿ ಮಸೂದೆಯನ್ನು …

Read More »

ಶ್ರೀ ಗಣೇಶನನ್ನು ಹೊತ್ತು ಗಣಪತಿ ಬಪ್ಪಾ ಮೊರೆಯಾ ಎಂದ ಝಾಕೀರ್ ಸಾಹೇಬ್…!!

ಬೆಳಗಾವಿ-ಮುಸ್ಲಿಂ ಸಮುದಾಯಕ್ಕೆ ಸೇರಿದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಠಾಣೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಮಾಳಮಾರುತಿ ಪೊಲೀಸ್‌ ಠಾಣೆ ಸಿಪಿಐ ಜಾಕೀರ್‌ ಪಾಶಾ ಕಾಲಿಮಿರ್ಚಿ ಅವರು ಹಿಂದು ಸಂಪ್ರದಾಯದಂತೆ ಸ್ವತಃ ತಾವೇ ಗಣೇಶ ಮೂರ್ತಿಯನ್ನು ಹೊತ್ತು ತಂದರು. ಸಮವಸ್ತರದಲ್ಲೇ ಹಣೆ ಮೇಲೆ ತಿಲಕವನ್ನಿಟ್ಟು, ತಲೆ ಮೇಲೆ ಕೇಸರಿ ಗೋಪಿ, ಕೇಸರಿ ಶಾಲು ಹಾಕಿಕೊಂಡು, ಬರಿಗಾಲಿನಲ್ಲಿ ಗಣೇಶ ಮೂರ್ತಿಯನ್ನು ತಂದು, ಪೊಲೀಸ್‌ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ …

Read More »

ಹಿಂಡಲಗಾ ಜೈಲಿನಲ್ಲಿ ಮತ್ತೆ ಹೊಡೆದಾಟ,ನ್ಯಾಯಾಧೀಶರು ಭೇಟಿ…!!

ಬೆಳಗಾವಿ – ಪ್ರಸಿದ್ದ ಹಿಂಡಲಗಾ ಜೈಲಿನಲ್ಲಿ ಪದೇ ಪದೇ ಕೈದಿಗಳು ಹೊಡೆದಾಟ ನಡೆಸಿದ ಪ್ರಕರಣಗಳು ನಡೆಯುತ್ತಲೇ ಇವೆ.ಇಂದು ಮತ್ತೆ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು ನ್ಯಾಯಾಧೀಶರು ಧಿಡೀರ್ ಭೇಟಿ ನೀಡಿ ಜೈಲಿನ ಸಿಬ್ಬಂದಿಗಳಿಗೆ ವಾರ್ನ್ ಮಾಡಿದ್ದಾರೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಖೈದಿಗಳ ಮಾರಾಮಾರಿ ವಿಚಾರವಾಗಿ,ಹಿಂಡಲಗಾ ಜೈಲಿಗೆ ಬೆಳಗಾವಿಯ ೧ ನೇ ಜೆಎಂಎಫ್ಸಿ ನ್ಯಾಯಾಧೀಶ ಮಹದೇವ ಕೂಡವಕ್ಕಲಿಗೇರ ಭೇಟಿ ನೀಡಿ ಪರಶೀಲನೆ ಮಾಡಿದ್ದಾರೆ.ಜೈಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು ಮಾದ್ಯಮಗಳ …

Read More »

ತಿಗಡೊಳ್ಳಿ ಯುವಕನ ಕೊಲೆಗೆ ಕಾರಣ ಏನು ಗೊತ್ತಾ..??

ಬೆಳಗಾವಿ: ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಪರಸ್ಪರ ಬಡಿದಾಡಿಕೊಂಡು ಅದರಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ. ಇಂದು SP ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಿಗಡೊಳ್ಳಿಯ ವಿಜಯ ಆರೇರ್(32) …

Read More »

ಬೆಳಗಾವಿಯ ಕೇಬಲ್ ಕಾರ್ ಯೋಜನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್..

ಶಾಸಕ ಅಭಯ ಪಾಟೀಲ ಅವರ ಪ್ರಯತ್ನ ಸಾರ್ಥಕ* ಬೆಳಗಾವಿ – ಬೆಳಗಾವಿ ಮಹಾನಗರದಲ್ಲಿ ಹೊಸತನ ಬಯಸುವ ಶಾಸಕ ಅಭಯ ಪಾಟೀಲ ಈಗ ಬೆಳಗಾವಿಯ ಸೌಂದರ್ಯ ಹೆಚ್ಚಿಸಿ ಪಕ್ಕದ ರಾಜ್ಯಗಳ ಪ್ರವಾಸಿಗರನ್ನು ಆಕರ್ಷಿಸುವ ಕೇಬಲ್ ಕಾರ್ ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಅನುಮತಿ ಪಡೆಯುವಲ್ಲಿ ಶಾಸಕ ಅಭಯ ಪಾಟೀಲ ಯಶಸ್ವಿಯಾಗಿದ್ದಾರೆ. ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿಯಾಗಿ,ಬೆಳಗಾವಿ ದಕ್ಷಿಣ ಮತಕ್ಷೇತ್ರದ ಯಳ್ಳೂರು ಗ್ರಾಮದಿಂದ ರಾಜಹಂಸಗಡ ವರೆಗಿನ ಕೇಬಲ್ ಕಾರ್ …

Read More »

ಟೆಂಪಲ್ ರನ್ ಬಳಿಕ ನೇರವಾಗಿ ಪಾಲಿಟೀಕ್ಸ್ ಫೀಲ್ಡಿಗಿಳಿದ ಸಾಹುಕಾರ್….!!

ಬೆಂಗಳೂರು-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ರು.ಒಂದು ಗಂಟೆಗೂ ಹೆಚ್ವು ಸಮಯ ಇಬ್ಬರ ನಡುವೆ ಚರ್ಚೆ ನಡೆಯಿತು. ಭೇಟಿಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಸೌಜನ್ಯದ ಭೇಟಿ, ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ,ನಾನು ಪ್ರವಾಸದಲ್ಲಿ ಇರುವ ಕಾರಣ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಂದಿದ್ದೇನೆ ಎಂದು ರಮೇಶ್ …

Read More »