Breaking News

LOCAL NEWS

ಕಿತ್ತೂರಿನಲ್ಲಿ ಇಂದು ದೇವೇಗೌಡರಿಗೆ ಯಡಿಯೂರಪ್ಪ ಹೇಳಿದ್ದೇನು ಗೊತ್ತಾ..?

ಅಪ್ಪ‌ ಮಕ್ಕಳ ಸೊಸೆಯಂದಿರ ಕಾಟ ಮುಗೀತು ಈಗ ಮೊಮ್ಮಕ್ಕಳ ಕಾಟ ಆರಂಭವಾಗಿದೆ,ದೇವೆಗೌಡರಿಗೆ ಯಡಿಯೂರಪ್ಪ ಟಾಂಗ್ ಬೆಳಗಾವಿ- ಕಿತ್ತೂರು ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ರಾಜ್ಯಾದ್ಯಕ್ಷ ಯಡಿಯೂರಪ್ಪ ದೇವೆಗೌಡರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ  ಕುಮಾರಸ್ವಾಮಿ ನೇತೃತ್ವದ ಸರ್ಕಾರ ವರ್ಗಾವಣೆ ದಂಧೆಯ ಲೂಟಿ‌ ಮಾಡುತ್ತಿದೆ.ಯಾವ ಅಭಿವೃದ್ಧಿ ಕಾರ್ಯ ಮಾಡಿಲ್ಲ. ರೈತರ ಸಾಲಾ …

Read More »

ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದ್ರೆ ಅಶೋಕ ಪೂಜಾರಿ ಕಥೆ ಏನು..?

ಬೆಳಗಾವಿ-ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಸಮರ ನಡೆಯುತ್ತಿದೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಇಲೆಕ್ಷನ್ ಹಲ್ ಚಲ್ ಜೋರಾಗಿಯೇ ನಡೆದಿದೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಗೋಕಾಕ ವಿಧಾನಸಭಾ ಮತಕ್ಷೇತ್ರದ ರಾಜಕಾರಣ ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಜೊತೆ ಮುನಿಸಿಕೊಂಡಿದ್ದು ಕಾಂಗ್ರೆಸ್ ಪಕ್ಷದ ಯಾವ ಕಾರ್ಯಕ್ರಮದಲ್ಲೂ ಭಾಗವಹಿಸದೇ ಪಕ್ಷದಿಂದ ದೂರ ಉಳಿದಿರುವದರಿಂದ ಜಿಲ್ಲಾ ಮಂತ್ರಿ ಸತೀಶ್ ಜಾರಕಿಹೊಳಿ ಈ ಕ್ಷೇತ್ರದ ಜವಾಬ್ದಾರಿಯನ್ನು ಲಖನ್ ಜಾರಕಿಹೊಳಿ …

Read More »

ಚುನಾವಣೆ ಬಂದಾಗ ಮಾತ್ರ ಸುರೇಶ ಅಂಗಡಿ ಅವರಿಗೆ ಕಳಸಾ ಬಂಡೂರಿ ನೆನಪಾಗುತ್ತದೆ- ಕೋನರೆಡ್ಡಿ

ಬೆಳಗಾವಿ-ವಾಸ್ಥವ ಸ್ಥಿತಿಯಲ್ಲಿ ಮೋದಿ ಅಲೆ ಎಲ್ಲಿಯೂ ಇಲ್ಲ ಈ ಬಾರಿ ರಾಜ್ಯದ  28 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷ ಕನಿಷ್ಠ 19 ರಿಂದ 21 ಸ್ಥಾನ ಗೆಲ್ಲೋದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್ ಹೆಚ್ ಕೋನರೆಡ್ಡಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಾಧನೆ.ಸಾಲಮನ್ನಾ ಹಾಗೂ ಹಿಂದಿನ ಸಿದ್ರಾಮಯ್ಯ ಸರ್ಕಾರದ ಹಲವು ಜನಪ್ರೀಯ …

Read More »

ಅಸಮಾಧಾನ ನಮ್ಮ ವ್ಯೆಯಕ್ತಿಕ ವಿಚಾರ, ಪಕ್ಷ ಬಂದಾಗ ನಾವೆಲ್ಲರೂ ಒಂದೇ- ಹೆಬ್ಬಾಳಕರ

ಬೆಳಗಾವಿ- ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರ ಸ್ಟಾರ್ ಕ್ಯಾಂಪೇನ್ ಕೊರೆತೆ ಇಲ್ಲ ಎಂದು ಬೆಳಗಾವಿಯಲ್ಲಿ ಶಾಸಕಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ ಬೆಳಗಾವಿಯ ಅಂಬೇಡ್ಕರ್ ಗಾರ್ಡನ್ ದಲ್ಲಿ ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ಸಮರ್ಪಿಸಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಅಸಮಾಧಾನ ನಮ್ಮ ವಯಕ್ತಿಕ ವಿಚಾರ. ಪಕ್ಷ ಬಂದಾಗ ನಾವೇಲ್ಲರು ಒಂದಾಗುತ್ತೆವೆ. ಚುನಾವಣಾ ಬಿರುಸಿನ ಪ್ರಚಾರ ನಡೆಸಿದ್ದೆವೆ. ಯಾರ …

Read More »

ಪ್ರಚಾರದಲ್ಲೂ ಅಭಯ ಪಾಟೀಲ ಡಿಫರಂಟ್ ….!!!

ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲ ವಿಶಿಷ್ಟವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ ಇಂದು ಬೆಳಿಗ್ಗೆ 7 ಗಂಟೆಯಿಂದ ಸುಮಾರು ನಾಲ್ಕು ಸಾವಿರ ಕಾರ್ಯಕರ್ತರು ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರ ಪರವಾಗಿ ಪ್ರಚಾರ ನಡೆಸಿದ್ದಾರೆ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಒಟ್ಟು 251 ಮತಗಟ್ಟೆಗಳಿದ್ದು ಪ್ರತಿಯೊಂದು ಮತಗಟ್ಟೆಯ ವ್ಯಾಪ್ತಿಯಲ್ಲಿ ಸುಮಾರು 15 ರಿಂದ 20 ಯುವಕರು ಸಂಚರಿಸಿ ಪ್ರತಿಯೊಂದು ಮನೆಗೆ ಭೇಟಿ ನೋಡಿ ಪ್ರಧಾನಿ …

Read More »

ನರದೌರ್ಬಲ್ಯ ಸಮಸ್ಯೆ ಗಂಭೀರವಲ್ಲ:-ಡಾ ಕೀರ್ತಿರಾಯಾ

  ಸಳಗಾವಿ ಸುದ್ದಿ:- ಬೆಳಗಾವಿ:- ಕುತ್ತಿಗೆಯ ಸೇರಿದಂತೆ ನರ ದೌರ್ಬಲ್ಯದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವೀಯಾಗಿ ನಮ್ಮ ತಂಡದ ವತಿಯಿಂದ ನಡೆಸಲಾಗಿದೆ ಎಂದು ಲೆಕ್ ವ್ಯೂ ಆಸ್ಪತ್ರೆಯ ಬೆನ್ನೆಲುಬು ಶಸ್ತ್ರ ವೈಧ್ಯರಾದ ಡಾ/ಕೀರ್ತಿರಾಯ ಮಾನೆ ತಿಳಿಸಿದರು. ಬೆಳಗಾವಿಯ ಲೆಕ್ ವ್ಯೂ ಆಸ್ಪತ್ರೆಯಲ್ಲಿ ಸುದ್ದಿಗೋಷ್ಟಿಯನ್ನುದ್ದೆಶಿಸಿ ಮಾತನಾಡಿದ ವೈಧ್ಯ ಮಾನೆಯವರು. ಬೆನ್ನು ಹುರಿಯ,ಕುತ್ತಿಗೆ ನರದೌರ್ಬಲ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಮಸ್ಕತ್ ಓಮನ್ ದೇಶದ ವ್ರದ್ದ ಸುಲೀಮಾನ್ ಎಂಬುವರ ಶಸ್ತ್ರ ಚಿಕಿತ್ಸೆಯನ್ನು …

Read More »

ಅಂಜಲಿ ನಿಂಬಾಳ್ಕರ್ ಕಾರು ಅಪಘಾತ

ಅಂಜಲಿ ನಿಂಬಾಳ್ಕರ್ ಕಾರು ಅಪಘಾತ ಬೆಳಗಾವಿ- ಖಾನಾಪೂರ ಶಾಸಕಿ ಅಂಜಲಿ ಹೇಮಂತ ನಿಂಬಾಳ್ಕರ್ ಅವರು ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಖಾನಾಪೂರದಿಂದ ನಾಂದೇಡ ಗೆ ಹೋಗುವ ಮಾರ್ಗದಲ್ಲಿ ಮಹಾರಾಷ್ಟ್ರದ ಸೊಲ್ಲಾಪೂರ ಸಮೀಪ ಅವರ ಕಾರು ಪಲ್ಟಿ ಹೊಡೆದ ಪರಿಣಾಮ ಅವರ ತೆಲೆಗೆ ಪೆಟ್ಟಾಗಿದ್ದು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಬಲ್ಲ ಮೂಲಗಳ ಪ್ರಕಾರ ಅಂಜಲಿ ನಿಂಬಾಳ್ಕರ್ ಅಪಾಯದಿಂದ ಪಾರಾಗಿದ್ದಾರೆ ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ ಕಾರ್ ಚಾಲಕ …

Read More »

ನಿಖಿಲ್ ಎಲ್ಲಿದಿಯಪ್ಪಾ…ಚಿತ್ರದಲ್ಲಿ ನಟಿಸಲು ಸಿದ್ಧ- ಬೆಳಗಾವಿಯಲ್ಲಿ ತಾರಾ ಹೇಳಿಕೆ

ಬೆಳಗಾವಿ -ನಿಖಿಲ್ ಎಲ್ಲಿದ್ದೀಯಪ್ಪ‌ ಚಿತ್ರದಲ್ಲಿ ನಟನೆ ಮಾಡಲು ನಾನು ರೆಡಿ ಎಂದು ಬೆಳಗಾವಿಯಲ್ಲಿ ಬಿಜೆಪಿ ಮಾಜಿ ಎಂಎಲ್ಸಿ ನಟಿ ತಾರಾ ಹೇಳಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ನನಗೆ ಪಾತ್ರ ಚೆನ್ನಾಗಿ ಅನ್ಸದ್ರೆ ಕಥಾಹಂದರ ಇಷ್ಟ ಆದ್ರೆ ಖಂಡಿತವಾಗಿ ನಾನು ಅಭಿನಯಿಸುತ್ತೇನೆ ಎಂದು ತಾರಾ ಹೇಳಿದ್ದಾರೆ ಚಿತ್ರದ ನಿರ್ದೇಶಕರು ಕಥೆ ಹಂದರ ಹೇಗೆ ಕಟ್ಟಿದ್ದಾರೆ ಎಂಬುದು ಮುಖ್ಯ.ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವ್ಯ ಸಿಕ್ಕರೆ ಚಿತ್ರ ಮಾಡ್ತೇನಿ.ಈ ಸಿನೇಮಾ …

Read More »

ಹಾಡು ಹಗಲೇ ಬೆಳಗಾವಿಯಲ್ಲಿ ಮನೆ ಲೂಟಿ, ಹದಿನೇಳು ಲಕ್ಷ ರೂ ಮೌಲ್ಯದ ಚಿನ್ನಾಭರಣ ಮಟ್ಯಾಶ್

ಬೆಳಗಾವಿ- ಪಾಪ ಅಂಕಲ್ ಎಂದಿನಂತೆ ಡ್ಯುಟಿ ಮಾಡಲು ಬ್ಯಾಂಕ್ ಗೆ ಹೋಗಿದ್ದಾರೆ ಅಂಟಿ ಕೂಡಾ ಮಾರ್ಕೆಟ್ ಗೆ ಹೋಗಿದ್ದನ್ನು ಸಮಯ ಸಾಧಿಸಿ ಇಂದು ಮಟ ಮಟ ಮಧ್ಯಾಹ್ನ ಮನೆಗೆ ಕಣ್ಣ ಹಾಕಿದ ಕಳ್ಳರು ಬರೊಬ್ನರಿ 17 ಲಕ್ಷ 11 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ ಬೆಳಗಾವಿಯ ಟಿಳಕವಾಡಿಯ ಹಿಂದೂ ನಗರದ ನಿವಾಸಿ ಮಂಜುನಾಥ್ ಭಟ್ ಎಂಬುವರ ಮನೆ ಇಂದು ಮಧ್ಯಾಹ್ನ ಎರಡು ಘಂಟೆ ಸುಮಾರಿಗೆ …

Read More »

ಖಾಲಿ ಪೇಪರ್ ಕಯ್ಯಾಗ ಕೊಟ್ಟು ಅದೇ ನನ್ನ ಪ್ರಣಾಳಿಕೆ ಅಂತಿಯಲ್ಲಾ….ಕಾಂತಾ…!!!

ಬೆಳಗಾವಿ-ನಾನು ನಾಯಕನೂ ಅಲ್ಲ.ಸೇವಕನೂ ಅಲ್ಲ ಸಂಬಳ ಪಡೆದು ಕೆಲಸ ಮಾಡುವ ಕೂಲಿ ಕಾರ್ಮಿಕ,ಉಳಿದ ಪಕ್ಷಗಳಂತೆ ನಾನು ಪ್ರಣಾಳಿಕೆ ಬಿಡುಗಡೆ ಮಾಡುವದಿಲ್ಲ ಖಾಲಿ ಪೇಪರ್ ನಿಮ್ಮ ಕಯ್ಯಾಗ ಕೊಡ್ತೀನಿ ನಿಮ್ಮ ಸಮಸ್ಯೆ ಏನು ? ನನಗೆ ಬರೆದು ಕೊಡಿ ಅದೇ ನನ್ನ ಪ್ರಣಾಳಿಕೆ ಅಂತಿಯಲ್ಲಾ ,ಕಾಂತಾ..ಕಾಂತಾ…. ಪ್ರಜಾಕೀಯ ಪಕ್ಷದ ಉಪೇಂದ್ರ ಬೆಳಗಾವಿಗೆ ಬಂದು ಖಾಲಿ ಪೇಪರ್ ಬಿಡುಗಡೆ ಮಾಡಿ ಅದೇ ನನ್ನ ಪ್ರಣಾಳಿಕೆ ಎಂದಾಗ ಅಲ್ಲಿದ್ದ ಅವರ ಅಭಿಮಾನಿಗಳು ಶಿಳ್ಳೆ ಹೊಡೆದು …

Read More »

ದೇಶದಲ್ಲಿ ಫೇರ್ ಆ್ಯಂಡ್ ಫ್ರೀ ಚುನಾವಣೆ ನಡೆಯುತ್ತಿಲ್ಲ- ಬೆಳಗಾವಿಯಲ್ಲಿ ಗುಂಡೂರಾವ್ ಗರಂ

ಬೆಳಗಾವಿ ಸುದ್ದಿ:- ಬೆಳಗಾವಿ:- ಐಟಿ ಇಲಾಖೆ ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗುರಿಯಾಗಿಸಿಕೋಂಡು ಅಭ್ಯರ್ಥಿಗಳ ಉತ್ಸಾಹ ಕುಗ್ಗಿಸಲು ಕಾಂಗ್ರೆಸ್ ಅಭ್ಯರ್ಥಿಗಳ ಕಛೇರಿಗಳ ಮೇಲೆ ಮತ್ತು ಅಭ್ಯರ್ಥಿಗಳ ಬೆಂಬಲಿಗರ ಮನೆಗಳ ಮೇಲೆ ದಾಳಿ ಮಾಡುತ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದರು ಯಾವುದೇ ಕ್ರಮ ಕೈಗೋಳ್ಳುತ್ತಿಲ್ಲ ಸೋಲಿನ ಭೀತಿಯಿಂದಾಗಿ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದ ಸಂಘಟನೆ ಬಲಿಷ್ಠವಾಗಿರುವ ರಾಜ್ಯಗಳಲ್ಲಿ ಐಟಿ ದಾಳಿ ನಡೆಯುತ್ತಿದೆ ಎಂದು ಕೆ ಪಿ ಸಿ …

Read More »

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಇಂದು ಬೆಳಗಾವಿಗೆ

ಬೆಳಗಾವಿ- ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಇಂದು ಬೆಳಿಗ್ಗೆ 11-00 ಘಂಟೆಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸಿ ನೇರವಾಗಿ ನಿಪ್ಪಾಣಿಗೆ ತೆರಳಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ತಿಳಿಸಿದ್ದಾರೆ ಸಂಜೆ 4 ಘಂಟೆಗೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ

Read More »

ನಾಳೆ ತಾರಾ..ನಾಡಿದ್ದು ಯಡಿಯೂರಪ್ಪ ಬೆಳಗಾವಿಗೆ

ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರ ಪರವಾಗಿ ಮತಯಾಚಿಸಲು ವಿವಿಐಪಿ ಗಳ ದಂಡೇ ಬೆಳಗಾವಿಗೆ ಬರುತ್ತಿದೆ ನಾಳೆ ದಿ 12 ರಂದು ಚಿತ್ರನಟಿ ತಾರಾ,13ರಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,17ರಂದು ಯೋಗಿ ಆದಿತ್ಯನಾಥ 18 ರಂದು ಪ್ರಧಾನಿ ಮೋದಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ

Read More »

ನಾಳೆ ಗೋಕಾಕಿನಲ್ಲಿ ಖಾಸ್ ಬಾತ್….. ರಮೇಶ್, ಸತೀಶ್ ಮುಲಾಖಾತ್….!!!

ಬೆಳಗಾವಿ ಸುದ್ದಿ:- ಬೆಳಗಾವಿ:- ಬೆಳಗಾವಿ ಜಿಲ್ಲೇಯಲ್ಲಿ ಜಾರಕಿಹೋಳಿ ಸಾಹುಕಾರರ ರಾಜಕಾರಣ ಗರಿಗೆದರಿದೆ ಒಬ್ಬ ಸಾಹುಕಾರ ಕಾಂಗ್ರೆಸ್ ನಲ್ಲಿದ್ದುಕೋಂಡೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪಣ ತೋಟ್ಟರೆ,ಇನ್ನೋಬ್ಬರ ಸಹೋದರ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಕದನ ಆರಂಭಿಸಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೋಳಿ ಕಾಂಗ್ರೆಸ್ ಜೋತೆ ಸಂಬಂಧ ಇಟ್ಟುಕೋಳ್ಳದಿದ್ದರು ಕಾಂಗ್ರೆಸ್ ನಲ್ಲೆ ಇದ್ದುಕೋಂಡು ಕಾಂಗ್ರೆಸ್ಸಿನ ನಾಗಾಲೋಟಕ್ಕೆ ಅಡ್ಡಗಾಲು ಹಾಕುತ್ತಿರುವುದು ಕಾಂಗ್ರೆಸ್ ಹೈಕಮಾಂಡಿಗೆ ತಲೆನೋವಾಗಿ ಪರಿಣಮಿಸಿದೆ. ಹೈಕಮಾಂಡ್ ಸತೀಶ ಜಾರಕಿಹೋಳಿ …

Read More »

ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ-ಮಹಾಂತೇಶ ಕೌಜಲಗಿ

ಬೆಳಗಾವಿ–ಬೆಳಗಾವಿ ಲೋಕಸಭಾಮತಕ್ಷೇತ್ರದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಕಾಂಗ್ರೆಸ್ ಅಭ್ಯರ್ಥಿ ಡಾ,ವ್ಹಿ ಎಸ್ ಸಾಧುನವರ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದಾರೆ ಬೈಲಹೊಂಗಲ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದ್ದಾರೆ ಶಾಸಕ ಮಹಾಂತೇಶ ಕೌಜಲಗಿ ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಅವರ ಪರವಾಗಿ ಬೈಲಹೊಂಗಲ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ ಸಾಧುನವರ ಅವರ ಪುತ್ರಿ ಕೃಪಾ ಅವರೂ ಕೂಡಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು ಶಾಸಕ ಮಹಾಂತೇಶ ಕೌಜಲಗಿ ಅವರ …

Read More »