Breaking News

LOCAL NEWS

ಬೆಳಗಾವಿ ಮಾರ್ಕೆಟ್ ಪೋಲೀಸರಿಂದ ಭರ್ಜರಿ ಬೇಟೆ…

ಬೆಳಗಾವಿ -ಇತ್ತೀಚಿಗೆ ಬೆಳಗಾವಿಯ ಸಮರ್ಥ ನಗರದಲ್ಲಿ ಮನೆಯ ಕಳ್ಳತನ ನಡೆದ ಬಗ್ಗೆ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,ತನಿಖೆ ಶುರು ಮಾಡಿದ ಪೋಲೀಸರು ಕಳುವಾದ ಚಿನ್ನಾಭರಣಗಳ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ‌. ಕಳುವಾಗಿದ್ದ 231 ಗಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದು ನಿಪ್ಪಾಣಿಯ ನಿವಾಸಿ ಆರೋಪಿ ಯಾಸೀನ ಹಾಸೀಮ ಶೇಖ 23 ಎಂಬಾತನನ್ನು ಬಂಧಿಸಲಾಗಿದ್ದು ಈತ ಕಳವು ಮಾಡಿದ್ದ 231 ಗ್ರಾಂ ಚಿನ್ನಾಭರಣ ಮತ್ತು 140 ಬೆಳ್ಳಿಯ ಆಭರಣಗಳು ಸೇರಿದಂತೆ ಹತ್ತು ಲಕ್ಷಕ್ಕೂ …

Read More »

ಬೆಳಗಾವಿಯಲ್ಲಿ ನೈತಿಕ ಪೋಲೀಸಗಿರಿ ಮೂವರು ಪೋಲೀಸರ ವಶಕ್ಕೆ

ಬೆಳಗಾವಿ- ನಿನ್ನೆ ಶುಕ್ರವಾರ ಸಂಜೆ ಬೆಳಗಾವಿಯ ಖಡೇಬಝಾರ್ ನಲ್ಲಿ ಶಿವಾನಂದ ಚೌಕಿ ಹತ್ತಿರ ಅನ್ಯಕೋಮಿನ ಯುವತಿಯ ಜೊತೆಗಿದ್ದ ಯುವಕನ ಮೇಲೆ ಒಂದು ಗುಂಪು ಹಲ್ಲೆ ಮಾಡಿದ ಘಟನೆ ನಡೆದಿದ್ದು ಈ ಪ್ರಕರಣ ಪೋಲೀಸ್ ಠಾಣೆಯ ಮೆಟ್ಟಲೇರಿದೆ. ನಿನ್ನೆ ಸಂಜೆ ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರ ಬೇರೆ,ಬೇರೆ ಕೋಮಿನ ಯುವಕ ಮತ್ತು ಯುವತಿ ಸುತ್ತಾಡುತ್ತಿರುವದನ್ನು ಗಮನಿಸಿದ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ಮಾಡುವ ಮೂಲಕ ನೈತಿಕ ಪೋಲೀಸ್ ಗಿರಿ ಮಾಡಿದೆ.ಘಟನಾ ಸ್ಥಳಕ್ಕೆ …

Read More »

ಬೆಳಗಾವಿ – ದೆಹಲಿ ವಿಮಾನ ಬುಕ್ಕಿಂಗ್ ಆರಂಭ..

ಬೆಳಗಾವಿ-ಇಂಡಿಗೋ ಏರಲೈನ್ಸ್ ವತಿಯಿಂದ ಬೆಳಗಾವಿ-ದೆಹಲಿ ನಡುವೆ ಅಕ್ಟೋಬರ್ 5 ರಿಂದ ವಿಮಾನಯಾನ ಸಂಚಾರ ಆರಂಭವಾಗಲಿದ್ದು ಈಗ ಬುಕಿಂಗ್ ಪ್ರಾರಂಭವಾಗಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮನವಿ ಮಾಡಿಕೊಂಡಿದ್ದಾರೆ. ವೇಳಾಪಟ್ಟಿ- ಅಕ್ಟೋಬರ್ 5 ರಿಂದ ಪ್ರತಿದಿನ IndiGo Airlines 6E-2378 ದೆಹಲಿಯಿಂದ ಮಧ್ಯಾಹ್ನ 03.45ಕ್ಕೆ ಹೊರಟು 06.05ಕ್ಕೆ ಬೆಳಗಾವಿಗೆ ಆಗಮಿಸುತ್ತದೆ. IndiGo Airlines 6E-2379 ಬೆಳಗಾವಿಯಿಂದ ಸಂಜೆ 06.35 ಗಂಟೆಗೆ ಹೊರಟು ರಾತ್ರಿ 09.00 …

Read More »

ಬೆಳಗಾವಿ:ಕೋಟೆ ಕೆರೆಯ ಮ್ಯುಸಿಕ್ ಫೌಂಟೇನ್ ಆಗುತ್ತಿಲ್ಲ ಮೇಂಟೇನ್….!!

ಬೆಳಗಾವಿ-;ಸರ್ಕಾರದ ಯೋಜನೆಗಳ ಕಥೆ ಇಷ್ಟೇ ಆ ಯೋಜನೆ ಅನುಷ್ಠಾನ ಆಗುವ ಮೊದಲೇ ಹಳ್ಳ ಹಿಡೀತೈತಿ ಇಲ್ಲಾ ಅಂದ್ರೆ ಆದ್ಮೇಲೆ ಹಳ್ಳ ಹಿಡಿತೈತಿ.ಸರ್ಕಾರದ ಅನುದಾನ,ಸರ್ಕಾರದ ಯೋಜನೆ, ಅಂದ್ರೆ ಬೇವರ್ಸಿ ಎನ್ನುವ ಪರಿಸ್ಥಿತಿ ಈಗ ಸಾಮನ್ಯವಾಗಿದೆ. ಬೆಳಗಾವಿ ಮಹಾನಗರದ ಹೃದಯಭಾಗದಲ್ಲಿ ಇರುವ ಕೋಟೆ ಕೆರೆಯ ಅಭಿವೃದ್ದಿಗೆ ಕೋಟಿ,ಕೋಟಿ ಸುರಿದರೂ ಅದೇನು ಸುಧಾರಣೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಬೆಳಗಾವಿ ಮಹಾನಗರದ ಮಕ್ಕಳ ಮನರಂಜನೆಗೆ ಕೋಟೆ ಕೆರೆ ಬಿಟ್ರೆ ಬೇರೆ ಜಾಗವೇ ಇಲ್ಲ.ಬೆಳಗಾವಿಯ ಜನ ಕೋಟೆ ಕೆರೆಯ …

Read More »

ಬೆಳಗಾವಿ: ಮರ್ಡರ್ ಆರೋಪಿಗಳ ಸುಳಿವು ಕೊಟ್ಟ ಸುಣ್ಣದ ಡಬ್ಬಿ….!!

ಬೆಳಗಾವಿ-ಮಗ ದಿನನಿತ್ಯ ಕುಡಿದು ಗಲಾಟೆ ಮಾಡಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾನೆ ಎಂದು ಬೇಸತ್ತ ತಂದೆ ಮಗನ ಕೊಲೆಗೆ ಸುಪಾರಿ ಕೊಟ್ಟು ಹೆತ್ತ ಮಗನನ್ನೇ ಭೀಕರವಾಗಿ ಕೊಲೆ ಮಾಡಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹಲವಾರು ದಿನಗಳಿಂದ ಕೊಲೆ ಮಾಡಿದ್ದು ಯಾರು ? ಅನ್ನೋದೇ ಗೊತ್ತಾಗಿರಲಿಲ್ಲ.ಮೃತ ವ್ಯಕ್ತಿಯ ಜೇಬಿನಲ್ಲಿ ಸಿಕ್ಕಿದ್ದ ಸುಣ್ಣದ ಡಬ್ಬಿ ಆರೋಪಿಗಳ ಸುಳಿವು ನೀಡಿದ್ದು.ಮುರಗೋಡ ಪೋಲೀಸರು ಇದೇ ಸುಳಿವು ಆಧರಿಸಿ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ …

Read More »

ಮುಂದಿನ ತಿಂಗಳು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯಯಾನ…!!

ನವದೆಹಲಿ: ಚಂದ್ರಯಾನ-3 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥರು ಸೂರ್ಯನ ಅಧ್ಯಯನಕ್ಕಾಗಿ ಮಿಷನ್ ಆದತ್ಯ-ಎಲ್ 1 ನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಆದಿತ್ಯ ಎಲ್-1 ಮಿಷನ್ ನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸೋಮನಾಥ್ ಹೇಳಿದ್ದಾರೆ. ಆದಿತ್ಯ ಎಲ್-1 ಭಾರತ ಸೂರ್ಯನ ಅಧ್ಯಯನಕ್ಕಾಗಿ ಕೈಗೊಳ್ಳುತ್ತಿರುವ ಮೊದಲ ಮಿಷನ್ ಆಗಿದೆ. ಸೂರ್ಯನನ್ನು ಅಧ್ಯಯನ ಮಾಡುವ ಮಿಷನ್ ಆದಿತ್ಯ ಎಲ್ 1 ರ ಉಡಾವಣೆ ಕುರಿತು ಮಾಹಿತಿ ನೀಡಿದ …

Read More »

ತೆರೆದ ಮನೆಯಾದ ಬೆಳಗಾವಿಯ ಠಾಣೆಗಳು…

ಬೆಳಗಾವಿ- ಬೆಳಗಾವಿ ನಗರ ಪೋಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಗೊಳಿಸಲು ಇವತ್ತು ನಗರದಲ್ಲಿ ವಿನೂತನ ಕಾರ್ಯಕ್ರಮ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು. ಬೆಳಗಾವಿ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ದಿನ “ತೆರೆದ ಮನೆ” (Open House) ಕಾರ್ಯಕ್ರಮ ಕೈಗೊಂಡು ಶಾಲೆಯ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು ಪೊಲೀಸ್ ಇಲಾಖೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಯಿತು. ಅಲ್ಲದೇ ಮಹಿಳೆ ಮತ್ತು ಮಕ್ಕಳ ಹಕ್ಕುಗಳು ಹಾಗೂ ಕಾಯ್ದೆಗಳ ಬಗ್ಗೆ …

Read More »

ಬೈಕ್ ಕಳ್ಳತನ ಮಾಡುವಾಗ ಪೋಲೀಸರ ಬಲೆಗೆ ಬಿದ್ದರು….!!

ಬೆಳಗಾವಿ- ಗೋಕಾಕ್ ಅಂಕಲಗಿ,ಪಾಶ್ಚಾಪೂರ ಸೇರಿದಂತೆ ಗೋಕಾಕ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಗೋಕಾಕ್ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ. A1 – ಸಂತೋಷ ರಾಮಚಂದ್ರ ನಿಶಾನೆ Age-30 r/o ಕಳಂಭ Tq- ಕರ್ವಿರ್ Dist- ಕೊಲ್ಹಾಪುರ ಹಾಗೂ A2- ಭರಮಪ್ಪ ಯಲ್ಲಪ್ಪ ಕೊಪ್ಪದ Age – 21 r/o ತೆಳಗಿನಹಟ್ಟಿ Tq- ಗೋಕಾಕ Dist – ಬೆಳಗಾವಿ ಇಬ್ಬರು ಆರೋಪಿಗಳನ್ನು ಬಂಧಿಸಿ …

Read More »

ಅಧ್ಯಕ್ಷರಾಗಿ ಡಾ.ಸೋನಾಲಿ ಸರ್ನೋಬತ್ ಅವಿರೋಧವಾಗಿ ಆಯ್ಕೆ !

ಬೆಳಗಾವಿ-ಇತ್ತೀಚೆಗೆ ನಿಯತಿ ಕೋ-ಆಪರೇಟಿವ್ ಸೊಸೈಟಿಯ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ. ಡಾ.ಸೋನಾಲಿ ಸರ್ನೋಬತ್ ಅವರು ಅಧ್ಯಕ್ಷರಾಗಿ, ಭರತ್ ರಾಥೋಡ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕರೋನಾ ಅವಧಿಯಲ್ಲಿ ನಿಯತಿ ಸೊಸೈಟಿಯನ್ನು ಸ್ಥಾಪಿಸಲಾಯಿತು. ಡಾ.ಸೋನಾಲಿ ಸರ್ನೋಬತ್ ಅವರ ನೇತೃತ್ವದಲ್ಲಿ ಈ ಸೊಸೈಟಿಯನ್ನು ಸ್ಥಾಪಿಸಲಾಯಿತು. ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ ರೋಹನ್ ಜುವಳಿ ಅಧ್ಯಕ್ಷ ಮತ್ತು ಖ್ಯಾತ ವೈದ್ಯ ಡಾ.ಸಮೀರ್ ಸರ್ನೋಬತ್ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಅಲ್ಪಾವಧಿಯಲ್ಲಿ ಸೊಸೈಟಿಯನ್ನು ಲಾಭದಾಯಕವಾಗಿಸಿದರು. ಅನೂಪ್ …

Read More »

ವಿಕ್ರಮ ಲ್ಯಾಂಡರ್‌ನ ಬಿಡಿಭಾಗ ತಯಾರಾಗಿದ್ದೇ ಬೆಳಗಾವಿಯಲ್ಲಿ…!!

ಬೆಳಗಾವಿ-ಇಸ್ರೋದ‌ ಬಹು ನಿರೀಕ್ಷಿತ ಚಂದ್ರಯಾನ ಯಶಸ್ವಿ ಹಿಂದೆ ಬೆಳಗಾವಿ ಪಾತ್ರ ಮುಖ್ಯವಾಗಿತ್ತು.ಬೆಳಗಾವಿಯ ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಇಂಡಿಯಾ ಪ್ರೈ. ಲಿ ಕೊಡುಗೆ ಅಪಾರವಾಗಿದೆ. ಚಂದ್ರಯಾನಕ್ಕೆ ತೆರಳಿರುವ ವಿಕ್ರಮ ಲ್ಯಾಂಡರ್‌ನ ಬಿಡಿಭಾಗ ತಯಾರಾಗಿದ್ದೇ ಬೆಳಗಾವಿಯಲ್ಲಿ ಅನ್ನೋದು ಬೆಳಗಾವಿಯ ಜನ ಹೆಮ್ಮೆ ಪಡುವ ವಿಚಾರವಾಗಿದೆ.ಚಂದ್ರಯಾನ ಸಕ್ಸಸ್‌ ಕುರಿತು ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಸರ್ವೋ ಕಂಟ್ರೋಲ್ಸ್‌ನ ಮಾಲೀಕ ದೀಪಕ್‌ ದಡೂತಿ ಪ್ರತಿಕ್ರಿಯೆ ನೀಡಿದ್ದಾರೆ.ಪ್ರಜ್ಞಾನ ರೋವರ್ ಹಾಗೂ ಲ್ಯಾಂಡರ್ ಸೋಲಾರ್ ಪ್ಯಾನಲ್ ಕಂಟ್ರೋಲ್ …

Read More »

ಚಂದ್ರಯಾನ ಸಕ್ಸಸ್ ಆಯ್ತು ಮುಂದಿನ ಪಯಣ ಎಲ್ಲಿಗೆ ಗೊತ್ತಾ…??

ಬೆಂಗಳೂರು: ಚಂದ್ರಯಾನ-3 ರ ಯಶಸ್ಸಿನಲ್ಲಿರುವ ಇಸ್ರೋ ಸಂಸ್ಥೆಯ ಅಧ್ಯಕ್ಷರಾದ ಎಸ್ ಸೋಮನಾಥ್ ತಮ್ಮ ತಂಡದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ತಮ್ಮ ತಂಡ ಎದುರಿಸಿದ ನೋವು ಮತ್ತು ಸಂಕಟಗಳು, ಅದರ ಮೇಲೆ ಪರಿಶ್ರಮಪಟ್ಟಿದ್ದನ್ನು ಈ ಯಶಸ್ಸಿಗೆ ಕಾರಣವನ್ನಾಗಿ ಇಸ್ರೋ ಅಧ್ಯಕ್ಷರು ನೀಡಿದ್ದಾರೆ. ಈ ಯಶಸ್ಸಿನ ಮಾದರಿಯಲ್ಲೇ ಮುಂದಿನ ವರ್ಷಗಳಲ್ಲಿ ಮಂಗಳ ಗ್ರಹದಲ್ಲಿಯೂ ಇದೇ ಮಾದರಿಯ ಬಾಹ್ಯಾಕಾಶ ನೌಕೆಯನ್ನು ಇಳಿಸಲಿದ್ದೇವೆ ಎಂದು ಸೋಮನಾಥ್ ಹೇಳಿದ್ದಾರೆ. ಚಂದ್ರಯಾನ-3 ಮಿಷನ್‌ನ ಯಶಸ್ಸಿಗೆ ದೇಶದ …

Read More »

ಅಕ್ಕ ಕಲಿಸಿದ ಆಟ,ವಿಶ್ವ ದಾಖಲೆ ಮಾಡಿತು….!!

ಯಶಸ್ಸಿಗೆ ವಯಸ್ಸಿಲ್ಲ ಎಂದು ಹೇಳಲಾಗುತ್ತದೆ. ಉತ್ಸಾಹ ಹೊಂದಿದ್ದರೆ, ಕಠಿಣ ಪರಿಶ್ರಮ ಪಟ್ಟರೆ ಯಾವುದೇ ವಯಸ್ಸಿನಲ್ಲಿ ಯಶಸ್ಸನ್ನು ಸಾಧಿಸಬಹುದು. ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಅವರ ವಿಚಾರದಲ್ಲಿ ಈ ಮಾತು ಅಕ್ಷರಃ ನಿಜವಾಗಿದೆ. ಕೇವಲ 18ರ ಹರೆಯದಲ್ಲಿ ಈ ಪ್ರತಿಭಾವಂತ ಬಾಲಕ ಇತಿಹಾಸ ಸೃಷ್ಟಿಸಿದ್ದಾರೆ. ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಗ್ನಾನಂದ ಅವರು ಮಂಗಳವಾರ ಇಲ್ಲಿ ನಡೆದ ಫಿಡೆ ವಿಶ್ವಕಪ್ ಚೆಸ್ ಟೂರ್ನಿಯ ಫೈನಲ್‌ನ ಮೊದಲ ಕ್ಲಾಸಿಕಲ್ ಗೇಮ್‌ನಲ್ಲಿ ವಿಶ್ವದ ನಂ.1 …

Read More »

ಚಂದ್ರಯಾನ 3 ಲ್ಯಾಂಡಿಂಗ್ ಆಗುವ 15 ನಿಮಿಷದ ಪ್ರಕ್ರಿಯೆ ರೋಚಕ…!

ಭಾರತೀಯ ವಿಜ್ಞಾನಿಗಳ ಪರಿಶ್ರಮ ನಾಳೆ ಸಂಜೆ ಸಾರ್ಥಕವಾಗಲಿ,ನಮ್ಮ ವಿಜ್ಞಾನಿಗಳು ನಮ್ಮ ಹೆಮ್ಮೆ,ಚಂದ್ರಯಾನ 3 ಯಶಸ್ವಿಯಾಗಲಿ ಭಾರತದ ಕೀರ್ತಿ ಜಾಗತಿಕವಾಗಿ ಬೆಳಗಲಿ ಜೈ ಹಿಂದ್…. ಭಾರತ್ ಮಾತಾ ಕೀ ಜೈ… ಇಂದು ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ 3  ಲ್ಯಾಂಡಿಂಗ್ ಆಗಲಿದೆ. ಸುಮಾರು 5 ಗಂಟೆ 45 ನಿಮಿಷಕ್ಕೆ ನೌಕಾಯಾನದ ವೇಗವನ್ನು ಕಂಟ್ರೋಲ್ ಮಾಡುವ ಪ್ರಕ್ರಿಯೆ ಶುರುವಾಗಲಿದೆ ಈ ಹದಿನೈದು ನಿಮಿಷ ಭಾರತೀಯ ವಿಜ್ಞಾನಿಗಳಿಗೆ ಅಗ್ನಿ ಪರೀಕ್ಷೆ …

Read More »

ಲಕ್ಷ್ಮೀ ಹೆಬ್ಬಾಳಕರ್ ಹುಟ್ಟೂರಿನಲ್ಲಿ ಹೂವಿನ ಮಳೆ….!!

ಹುಟ್ಟೂರಿನ ಅಭಿವೃದ್ಧಿಗೆ 60 ಕೋಟಿ ರೂ. ಯೋಜನೆ – ಬೆಳಗಾವಿ: ತಾವು ಹುಟ್ಟಿ, ಬೆಳೆದ ಊರು ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿಯಲ್ಲಿ ಮಂಗಳವಾರ ಅದ್ಧೂರಿ ಸನ್ಮಾನ ಸ್ವೀಕರಿಸಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಲಪ್ರಭಾ ನದಿಗೆ ಅಡ್ಡಲಾಗಿ ವೀರಭದ್ರೇಶ್ವರ ದೇವಸ್ಥಾನದ ಬಳಿ ಬ್ರಿಜ್ ಕಂ ಬ್ಯಾರೇಜ್, ತಡೆಗೋಡೆ, ಕಲ್ಯಾಣ ಮಂಟಪ ಮತ್ತಿತರ ಕಾಮಗಾರಿಗಳಿಗೆ ಒಟ್ಟಾರೆ 60 ಕೋಟಿ ರೂ. ಯೋಜನೆ ತಯಾರಿಸಿರುವುದಾಗಿ ಪ್ರಕಟಿಸಿದ್ದಾರೆ. ಜೊತೆಗೆ, ಚಿಕ್ಕಹಟ್ಟಿಹೊಳಿ …

Read More »

ಪಂಚ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಅಭಯ ಸೂತ್ರ…!!

ಛತ್ತೀಸಗಡ- ದೇಶದಲ್ಲಿ ಪಂಚರಾಜ್ಯಗಳ ವಿಧಾನಸಭೆ ನಡೆಯಲಿದ್ದು ಪಂಚರಾಜ್ಯಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ತಾಲೀಮು ಶುರುವಾಗಿದೆ.ಈ ಕುರಿತು ಛತ್ತೀಸಗಡ ರಾಯಾಪೂರದಲ್ಲಿ ಪಂಚರಾಜ್ಯಗಳ ಆಯ್ದ ಶಾಸಕರ ಮಹತ್ವದ ಅಭ್ಯಾಸ ವರ್ಗ ನಡೆಯಿತು ಈ ಅಭ್ಯಾಸ ವರ್ಗದಲ್ಲಿ ಬೆಳಗಾವಿ ದಕ್ಷಿಣ ಮತ್ಷೇತ್ರದ ಶಾಸಕ ಅಭಯ ಪಾಟೀಲ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಾರಿಕೆಯ ಬಗ್ಗೆ ಪಂಚರಾಜ್ಯಗಳ ಶಾಸಕರಿಗೆ ವಿಶೇಷ ಉಪನ್ಯಾಸ ಮಾಡಿದರು. ಪಶ್ಚಿಮ ಬಂಗಾಳ,ಬಿಹಾರ,ಜಾರ್ಖಂಡ,ಆಸ್ಸಾಂ ಹಾಗೂ ಓಡಿಸಾ ರಾಜ್ಯಗಳ ಸುಮಾರು 55 ಶಾಸಕರು ಹಾಗೂ ಪಂಚರಾಜ್ಯಗಳ ಬಿಜೆಪಿಯ …

Read More »