Breaking News

LOCAL NEWS

ತಂದೆಯ ಪರವಾಗಿ ಫೀಲ್ಡ್ ಗಿಳಿದ ಸುಪುತ್ರ ಯಮಕನಮರ್ಡಿಯಲ್ಲಿ ಎಲ್ಲವೂ ಸುಸೂತ್ರ!!

ಬೆಳಗಾವಿ- ತಂದೆ ಸೈದ್ಧಾಂತಿಕ ತಳಹದಿಯ ನಾಯಕ,ಕೆಪಿಸಿಸಿ ಕಾರ್ಯಾಧ್ಯಕ್ಷ, ತಂದೆ ಪಕ್ಷದ ಹೆಚ್ಚಿನ ಜವಾಬ್ದಾರಿ ನಿಭಾಯಿಸುವಲ್ಲಿ ಹೆಲಿಕಾಪ್ಟರ್ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದರೆ,ಇತ್ತ ತಂದೆಯ ಕ್ಷೇತ್ರದಲ್ಲಿ ಮಗ ಫೀಲ್ಡ್ ಗೆ ಇಳಿದು ತಂದೆಯ ಪರವಾಗಿ ಮತಯಾಚಿಸುವ ಮೂಲಕ.ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದು ಯಮಕನಮರ್ಡಿ ಕ್ಷೇತ್ರದ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷ,ಮಾಜಿ ಮಂತ್ರಿ,ಸತೀಶ್ ಜಾರಕಿಹೊಳಿ ಕ್ಷೇತ್ರದ ಪ್ರಸ್ತುತ ಕಹಾನಿ, ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿದ್ದು ಯಮಕನಮರ್ಡಿ …

Read More »

ಸೀರೆ,ಗೋಡೆ ಗಡಿಯಾರದ ಜೊತೆಗೆ 100 ಪೇಪರ್ಸ ಕಿಕ್!!

ಖಾನಾಪೂರ-ಖಾನಾಪುರ ಪಟ್ಟಣದ ಮುಖ್ಯರಸ್ತೆಯ ಲೋಕಮಾನ್ಯಭವನದ ಮುಂದುಗಡೆ ನಿಂತಿದ್ದ ಗೂಡ್ಸ್ ವಾಹನವನ್ನು ಪರಶಿಸಿದಾಗ ವಾಹನದಲ್ಲಿ ಸೀರೆ,ಗೋಡೆ ಗಡಿಯಾರ,ಹಾಗೂ 100 ಪೇಪರ್ಸ್ ಬಾಟಲ್ ಗಳು ಪತ್ತೆಯಾಗಿವೆ ಶ್ರೀ ಎ .ದಿಲೀಪ್ ಕುಮಾರ್ ಬಿಜೆಪಿ ಮುಖಂಡರು ,ಖಾನಾಪುರ ವಿಧಾನಸಭಾ ಕ್ಷೇತ್ರ. ಇವರ ಹೆಸರಿರುವ ಹಾಗೂ ಇವರ ಫೋಟೋ ಇರುವ, ಬಿಜೆಪಿ ಪಕ್ಷದ ಚಿಹ್ನೆ ಇರುವ ಚೀಲಗಳ ಸಮೇತ,Ka.22 D 2422 tata ace ಮಿನಿ ಗೂಡ್ಸ್ ವಾಹನದಲ್ಲಿ 280 .. ಸೀರೆಗಳು , 280 …

Read More »

ಲಿಂಗಾಯತರಿಗೆ ಟಿಕೆಟ್ ನೀಡಿದ ಪಕ್ಷಕ್ಕೆ ಬೆಂಬಲ, ಶ್ರೀಗಳ ಸಮ್ಮುಖದಲ್ಲಿ ನಿರ್ಧಾರ!

ಬೆಳಗಾವಿ- ಬೆಳಗಾವಿ ನಗರದ ಉತ್ತರ ಮತ್ತು ದಕ್ಷಿಣ ಮತ ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಆಕಾಂಕ್ಷಿಗೆ ಟಿಕೆಟ್ ನೀಡಿದ ಪಕ್ಷಕ್ಕೆ ಬಹಿರಂಗ ಬೆಂಬಲ ನೀಡುವದಾಗಿ ಬೆಳಗಾವಿಯ ನಾಗನೂರು ಮಠದಲ್ಲಿ ಸೇರಿದ ವಿವಿಧ ಲಿಂಗಾಯತ ಸಂಘಟನೆಗಳ ನಾಯಕರು ಶ್ರೀಗಳ ಸಮ್ಮುಖದಲ್ಲಿ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಬೆಳಗಾವಿ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳು ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದರೆ ಪಕ್ಷಾತೀತವಾಗಿ ಲಿಂಗಾಯತ ಸಂಃಘಟನೆಗಳು ಬೆಂಬಲ ನೀಡುತ್ತವೆ …

Read More »

ಯಾವುದೇ ಕಾರಣಕ್ಕೂ ಸರಕಾರದ ಆದೇಶವನ್ನು ನಾವು ಒಪ್ಪೋದಿಲ್ಲ.

ಬೆಳಗಾವಿ-ಯಾವುದೇ ಕಾರಣಕ್ಕೂ ಸರಕಾರದ ಆದೇಶವನ್ನು ನಾವು ಒಪ್ಪೋದಿಲ್ಲ. ಬಿಜೆಪಿ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು. ಸೋಮವಾರ ಗಾಂಧಿ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸರಕಾರದ ಧೋರಣೆಯನ್ನು ನಾವೆಲ್ಲರೂ ಖಂಡಿಸಬೇಕು ಮುಂದೆ ಸರಕಾರ ಬದಲಾಗುತ್ತದೆ. ನಮಗೆ ನ್ಯಾಯ ಸಿಗುತ್ತೆ. ಕಳೆದ ಎರಡೂವರೆ ವರ್ಷಗಳಿಂದ ಹೋರಾಟ ಮಾಡಿದ್ದರೂ ನಮಗೆ ಸೂಕ್ತ …

Read More »

ಬೆಳಗಾವಿ ದಕ್ಷಿಣದಿಂದ ಪ್ರಭಾವತಿ ಫೈನಲ್!!

ಬೆಳಗಾವಿ- ಪ್ರಭಾವತಿ ಚಾವಡಿ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಫೈನಲ್ ಆಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಪ್ರಭಾವತಿ ಚಾವಡಿ,ಅವರು ಕಳೆದ ಆರು ತಿಂಗಳುಗಳಿಂದ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೊಸ ಶಕ್ತಿ ತುಂಬಿರುವ ಪ್ರಭಾವತಿ ಚಾವಡಿ ಅಲ್ಪಾವಧಿಯಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದು ಪಕ್ಷದ ನಾಯಕರು ಬೆಳಗಾವಿ ದಕ್ಷಿಣದಿಂದ ಪ್ರಭಾವತಿ ಚಾವಡಿ ಅವರನ್ನೇ ಕಣಕ್ಕಿಳಿಸುವ ನಿರ್ದಾರ ಕೈಗೊಂಡಿದ್ದಾರೆ …

Read More »

ಸ್ಟ್ರಾಂಗ್ ರೂಮ್ ಕೌಂಟೀಂಗ್ ಸೆಂಟರ್ ಪರಶೀಲಿಸಿದ ಬೆಳಗಾವಿ ಡಿಸಿ!

ಮತ ಎಣಿಕೆ ಕೇಂದ್ರ: ಸ್ಥಳ‌ ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಕ್ತ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ಬೆಳಗಾವಿ, ಏ.1(ಕರ್ನಾಟಕ ವಾರ್ತೆ): ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಎಣಿಕೆ‌ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ಥಳ ಪರಿಶೀಲನೆ ನಡೆಸಿದರು. ಹಿರಿಯ ಪೊಲಿಸ್ ಅಧಿಕಾರಿಗಳೊಂದಿಗೆ ನಗರದ ಆರ್.ಪಿ.ಡಿ. ಕಾಲೇಜಿಗೆ ಶನಿವಾರ(ಏ.1) ಭೇಟಿ ನೀಡಿದ ಅವರು, ಸ್ಟ್ರಾಂಗ್ ರೂಮ್ ಮತ್ತು ಮತ ಎಣಿಕೆ‌ ಕೇಂದ್ರ …

Read More »

ಖಾನಾಪೂರದಲ್ಲಿ ಅಂಜಲಿ ವಿರುದ್ಧ ಸೋನಾಲಿ. ಕಣಕ್ಕಿಳಿಸಲು ಬಿಜೆಪಿ ಚಿಂತನೆ!

ಬೆಳಗಾವಿ-ಒಂದು ಕಡೆ ಮಲೆನಾಡಿನ ಸೊಬಗು ಮತ್ತೊಂದು ಕಡೆ ಬಯಲುಸೀಮೆ ರಂಗು ಇವೆರಡ ಮಧ್ಯೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಗಡಿ ಹಂಚಿಕೊಂಡಿರುವ, ಬೆಳಗಾವಿಯ ದಕ್ಷಿಣ ಭಾಗದ ತಾಲ್ಲೂಕು ಖಾನಾಪುರದಲ್ಲಿ ಚುನಾವಣಾ ಕಾವು ಜೋರಾಗಿದೆ. ಸಧ್ಯ ಕಾಂಗ್ರೆಸ್ ಪಕ್ಷದ ಅಂಜಲಿ ನಿಂಬಾಳ್ಕರ್ ಶಾಸಕಿಯಾಗಿದ್ದು, ಕ್ಷೇತ್ರ ವಶಕ್ಕೆ ಬಿಜೆಪಿ ಚುನಾವಣಾ ರಣತಂತ್ರ ಹೆಣೆಯುತ್ತಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ವೈದ್ಯೆ ಡಾ. ಸೋನಾಲಿ ಸರ್ನೋಬತ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಈ ಹಿಂದೆ ಎಂಇಎಸ್ …

Read More »

ಮಚ್ಛೆ,ಪೀರನವಾಡಿ ಪಟ್ಟಣ ಪಂಚಾಯ್ತಿಗಳು ಈಗ ಗ್ರಾಮ ಪಂಚಾಯತಿ ಗಳಾಗಿ ಪರಿವರ್ತನೆ!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಚ್ಛೆ ಮತ್ತು ಪೀರನವಾಡಿ ಪಟ್ಟಣ ಪಂಚಾಯತಿಗಳನ್ನು ಗ್ರಾಮ ಪಂಚಾಯತಿ ಗಳನ್ನಾಗಿ ಪರಿವರ್ತಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಎರಡೂ ಗ್ರಾಮಗಳ ಗ್ರಾಮ ಪಂಚಾಯತಿ ಗಳು ಪಟ್ಟಣ ಪಂಚಾಯತಿ ಆದಾಗಿನಿಂದ ಈ ಗ್ರಾಮಗಳ ಬಡವರು,ನರೇಗಾ ಕಾರ್ಮಿಕರು,ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರುವದನ್ನು ಗಮನಿಸಿದ ಶಾಸಕ ಅಭಯ ಪಾಟೀಲ ಎರಡೂ ಪಟ್ಟಣ ಪಂಚಾಯ್ತಿ ಗಳನ್ನು ಗ್ರಾಮ ಪಂಚಾಯತಿ ಗಳನ್ನಾಗಿ ಪರಿವರ್ತಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿ ಬಸವರಾಜ್ …

Read More »

ನೀತಿಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ

ಬೆಳಗಾವಿ, -.ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿರುವುದರಿಂದ ಸಾರ್ವಜನಿಕ ಸ್ಥಳದಲ್ಲಿರುವ ಎಲ್ಲ ಪೋಸ್ಟರ್, ಬ್ಯಾನರ್, ಗೋಡೆಬರಹಗಳನ್ನು ತೆರವುಗೊಳಿಸಬೇಕು. ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲ ತಂಡಗಳು ತಕ್ಷಣವೇ ಕಾರ್ಯಪ್ರವೃತ್ತಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು. ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಮಾ.29) ನಡೆದ ಚುನಾವಣಾಧಿಕಾರಿಗಳ ಹಾಗೂ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮತಗಟ್ಟೆಗಳಲ್ಲಿ ಕನಿಷ್ಠ …

Read More »

ಮೇ.10 ಫೈಟಿಂಗ್..ಮೇ13 ರಂದು ಕೌಂಟಿಂಗ್,ನಂತರ ಸರಕಾರ ರಚಿಸಲು ಡೇಟೀಂಗ್!!

  ಎಪ್ರೀಲ್ 13 ರಂದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ಎಪ್ರೀಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ 21 ನಾಮಪತ್ರಗಳ ಪರಶೀಲನೆ ಎಪ್ರೀಲ್ 24 ನಾಮಪತ್ರ ಹಿಂಪಡೆಯಲು ಕೊನೇಯ ದಿನಾಂಕ ಮೇ 10 ರಂದು ಮತದಾನ ಮೇ 13 ರಂದು ಮತ ಎಣಿಕೆ ದೆಹಲಿ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ …

Read More »

ಎಲ್ಲರ ಚಿತ್ತ ಚುನಾವಣಾ ಆಯೋಗದ ಸುದ್ದಿಗೋಷ್ಠಿಯತ್ತ

ಬೆಳಗಾವಿ: ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಚುನಾವಣೆ ಘೋಷಣೆಯಾಗುವ ದಿನಾಂಕವನ್ನೇ ಜನ ಎದುರು ನೋಡುತ್ತಿದ್ದರು. ಇಂದು ಬೆಳಿಗ್ಗೆ 11.30ಕ್ಕೆ ಭಾರತ ಚುನಾವಣೆ ಆಯೋಗದ ಸುದ್ದಿಗೋಷ್ಠಿ ನಡೆಯಲಿದ್ದು, ಎಲ್ಲರ ಚಿತ್ತ ಅದರತ್ತ ನೆಟ್ಟಿದೆ. ಎಷ್ಟು ಹಂತದಲ್ಲಿ ಚುನಾವಣೆ ನಡೆಯುತ್ತದೆ? ಏನೇನು ಮಹತ್ವದ ಕ್ರಮ ಕೈಗೊಳ್ಳುತ್ತದೆ? ಮಾದರಿ ಚುನಾವಣೆ ನೀತಿಸಂಹಿತೆ ಯಾವಾಗಿನಿಂದ‌ ಜಾರಿಯಾಗ್ತದೆ ಎಂಬುದು ಕುತೂಹಲ ಮೂಡಿಸಿದೆ.

Read More »

ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಕಿಟ್ ಕೊಟ್ಟ ಸಿಎಂ!!

  ಬೆಂಗಳೂರು, ): ಸಮಾಜ‌ ಸುಧಾರಣೆಯಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪತ್ರಕರ್ತರ ವೃತ್ತಿಗೆ ಅನುಕೂಲವಾಗುವಂತಹ ಲ್ಯಾಪ್‌ಟಾಪ್, ಕ್ಯಾಮೆರಾ ಮತ್ತಿತರ ಅಗತ್ಯ ಸಲಕರಣೆಗಳನ್ನು ಸರಕಾರದ ವತಿಯಿಂದ ನೀಡಲಾಗಿದ್ದು, ಇವುಗಳನ್ನು ಬಳಸಿಕೊಂಡು ಇನ್ನಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸೋಮವಾರ (ಮಾ.27) ನಡೆದ‌ ಕಾರ್ಯಕ್ರಮದಲ್ಲಿ …

Read More »

ಒಂದೇ ಕ್ಷೇತ್ರದಲ್ಲಿ 42 ಗಾರ್ಡನ್ ಗಳನ್ನು ನಿರ್ಮಿಸಿದ್ದು,ಎಲ್ಲಿ ಯಾರು ಗೊತ್ತಾ??

ಬೆಳಗಾವಿ- ಹೋಲ್ ಸೇಲ್ ವ್ಯಾಪಾರ,ಹೋಲ್ ಸೇಲ್ ಖರೀದಿ, ಯನ್ನು ನಾವು ನೋಡಿದ್ದೇವೆ.ಆದ್ರೆ ಹೋಲ್ ಸೇಲ್ ಡೆವಲಪ್ಮೆಂಟ್ ನೋಡಲು ನಮಗೆ ಶಾಸಕ ಅಭಯ ಪಾಟೀಲರ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಮಾತ್ರ ನೋಡಲು ಸಿಗುತ್ತದೆ.ಹೌದು ಇದು ಸತ್ಯ,ಯಾಕಂದ್ರೆ ಶಾಸಕ ಅಭಯ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ಒಟ್ಟು 42 ಉದ್ಯಾನವನಗಳನ್ನು ನಿರ್ಮಿಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ಬೆಳಗಾವಿ ದಕ್ಷಿಣತಕ್ಷೇತ್ರದ ಯಾವ ಭಾಗದಲ್ಲಿ ಗಾರ್ಡನ್ ಇಲ್ಲ,ಆ ಭಾಗವನ್ನು ಆಯ್ಕೆ ಮಾಡಿ ಅಲ್ಲಿ ಒಟ್ಟು …

Read More »

ಎರಡೂವರೆ ಕೋಟಿಯಲ್ಲಿ ಮೂರು ಮೂರ್ತಿ,ಲೋಕೋಪಯೋಗಿ ಮಂತ್ರಿಗೆ ಕೀರ್ತಿ!!

ಬೆಳಗಾವಿ-ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರತಿಮೆ ಪೊಲಿಟಿಕ್ಸ್ ಮುಂದುವರೆದಿದೆ.ಛತ್ರಪತಿ ಶಿವಾಜಿ, ವಿಶ್ವಜ್ಯೋತಿ ಬಸವೇಶ್ವರ, ಸಂಭಾಜೀ ಮಹಾರಾಜರ ಪುತ್ಥಳಿ ಆಯ್ತು,ಈಗ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗಿದ್ದು ಲಬೆಳಗಾವಿಯ ಸುವರ್ಣಸೌಧ ಎದುರು ತಲೆ ಎತ್ತಿರುವ ಮೂವರು ಮಹನೀಯರ ‌ಪುತ್ಥಳಿಗಳು ನಾಳೆ ಅನಾವರಣ ಮಾಡಲಾಗುತ್ತಿದೆ.ಮೂವರು ಮಹನೀಯರ ಪುತ್ಥಳಿಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ನಾಳೆ ಬೆಳಗ್ಗೆ 11 ಕ್ಕೆ ಬೆಳಗಾವಿಗೆ ಆಗಮಿಸಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ …

Read More »

ಕಿತ್ತೂರು ಕ್ಷೇತ್ರದಿಂದ ಲಕ್ಷ್ಮೀ ಅಕ್ಕಾ ಇಲೆಕ್ಷನ್ ಗೆ ನಿಲ್ಲೋದು ಪಕ್ಕಾ!!

ಬೆಳಗಾವಿ-ಕಿತ್ತೂರು ಕಾಂಗ್ರೆಸ್‌ನಲ್ಲಿ ಬಂಡಾಯದ ಬಿರುಗಾಳಿ ಬೀಸುವ ಎಲ್ಲ ಲಕ್ಷಣಗಳು ಕಂಡು ಬಂದಿವೆ ಇನಾಮದಾರ್ ಕುಟುಂಬದ ಸೊಸೆ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ದೆ ಮಾಡುವ ಎಲ್ಲ ಸಾಧ್ಯತೆಗಳಿದ್ದು ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮೀ ವಿಕ್ರಂ ಇನಾಮದಾರ್ ಅವರನ್ನು ಚುನಾವಣೆಯ ಅಖಾಡಕ್ಕೆ ಇಳಿಸಲು ಇನಾಮದಾರ್ ಅಭಿಮಾನಿಗಳು ಎಲ್ಲ ಸಿದ್ಧತೆಗಳನ್ನು ನಡೆಸಿದ್ದಾರೆ. ಶುಕ್ರವಾರ ಕಿತ್ತೂರು ಕ್ಷೇತ್ರದ ನೇಗಿನಹಾಳದಲ್ಲಿರುವ ಡಿ.ಬಿ ಇನಾಮದಾರ್ ಮನೆಯಲ್ಲಿ ಅಭಿಮಾನಿಗಳು ಸಭೆ ಸೇರಿ ಈ ಸಭೆಯಲ್ಲಿ ಮಾತನಾಡಿದ ಇನಾಮದಾರ್ ಆಪ್ತ …

Read More »