Breaking News

Breaking News

ನೀವು ನಂಬ್ತೀರಾ ? ಈ ಕಟ್ಟಡ ಇರೋದು ಬೆಳಗಾವಿಯಲ್ಲಿ,

ಬೆಳಗಾವಿ-ಬೆಳಗಾವಿ ಮಹಾನಗರ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.ಸ್ವಾತಂತ್ರ್ಯ ಪೂರ್ವದಲ್ಲೇ ಜಾಗತಿಕ ಭೂಪಟದಲ್ಲಿ ಮಿಂಚಿದ್ದ ಈ ನಗರದಲ್ಲಿ ಐತಿಹಾಸಿಕ ಘಟನೆಗಳನ್ನು ಇವತ್ತಿನ ಪೀಳಿಗೆ ಸ್ಮರಿಸುವಂತಹ ಅನೇಕ ಪ್ರಾಚೀನ ಕಟ್ಟಡಗಳು ಬೆಳಗಾವಿ ನಗರದಲ್ಲಿವೆ. ಹತ್ತೊಂಬತ್ತರ ದಶಕದಲ್ಲಿ ದೇಶದಲ್ಲಿ ಅನೇಕ ಮಹಾಮಾರಿ ರೋಗಗಳು ಮರಣಮೃದಂಗ ನಡೆಸಿದ ಸಂಧರ್ಭದಲ್ಲಿ ದೇಶದ ಅನೇಕ ಭಾಗಗಳಲ್ಲಿ ವ್ಯಾಕ್ಸೀನ ತಯಾರಿಸುವ ಘಟಕಗಳನ್ನು ನಿರ್ಮಿಸಲಾಯಿತು.ಅದೇ ಸಂಧರ್ಭದಲ್ಲಿ ಬೆಳಗಾವಿಯ ತಿಲಕವಾಡಿ ಪ್ರದೇಶದಲ್ಲಿ ವ್ಯಾಕ್ಸೀನ್ ಡಿಪೋ ಮಾಡಲಾಗಿತ್ತು.ಈ ಡಿಪೋ ನೋಡಿದ್ರೆ ಹತ್ತೊಂಬತ್ತನೇಯ ಶತಮಾನದಲ್ಲಿ ಕರಾಳ …

Read More »

ದೇವಸ್ಥಾನದ ಬಳಿ ಆತ್ಮಹತ್ಯೆ ಮಾಡಿಕೊಂಡ ASI

ಬೆಳಗಾವಿ- ಅಥಣಿ ಪೋಲೀಸ್ ಠಾಣೆಯಲ್ಲಿ ಎಎಸ್ಐ ಆಗಿದ್ದ,ರಾಮಲಿಂಗ ಭೀಮಪ್ಪಾ ನಾಯಕ ಎಂಬಾತರು ದೇವಸ್ಥಾನದ ಹತ್ತಿರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾರೂಗೇರಿಯಲ್ಲಿ ನಡೆದಿದೆ. ಅಥಣಿ ಪೋಲೀಸ್ ಠಾಣೆಯಲ್ಲಿ ASI ಆಗಿ ಕರ್ತವ್ಯ ನಿಭಾಯಿಸುತ್ತಿದ್ದ,ರಾಮಲಿಂಗ ಭೀಮಪ್ಪ ನಾಯಕ ಅವರಿಗೆ ಇಲಾಖೆಯ ತೊಂದರೆ ಆಗಲಿ,ಕುಟುಂಬದ ಕಿರಿಕಿರಿ ಇರಲಿಲ್ಲ.ಹಲವಾರು ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದ ಅವರು ಹಾರೂಗೇರಿ ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ಇರು ಶೆಡ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಬ್ವರು …

Read More »

ಪಂಚಮಸಾಲಿ ಸಮಾಜಕ್ಕೆ ಗುಡ್ ನ್ಯೂಸ್ ಕೊಟ್ಟ ಬೊಮ್ಮಾಯಿ

ಬೆಳಗಾವಿ : ರಾಜ್ಯ ಸರ್ಕಾರ ಕೊನೆಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಮಹತ್ವದ ಘೋಷಣೆಯನ್ನು ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದ ಸರಕಾರ ಗುರುವಾರ ಸಂಜೆ ಸುವರ್ಣ ವಿಧಾನಸೌಧದಲ್ಲಿ ಈ ಕುರಿತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಸರಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು. ಮೀಸಲಾತಿ ಹೀಗಿದೆ. 3B to 2Dಗೆ ಪಂಚಮಸಾಲಿಗಳು, 3A to 2Cಗೆ ವಕ್ಕಲಿಗರು, 2A& 2B ಜಾತಿಗಳು …

Read More »

ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್….

ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಗ್ರೀನ್‌ ಸಿಗ್ನಲ್‌; ಸದನದಲ್ಲಿ ಗೋವಿಂದ ಕಾರಜೋಳ ಹರ್ಷ ವಿಧಾನಸಭೆ, ಸುವರ್ಣ ಸೌಧ ಬೆಳಗಾವಿ: ಕಳಸಾ ಬಂಡೂರಿ ನಾಲಾ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹರ್ಷ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ಕೇಂದ್ರ ಸಚಿವ ಪ್ರಹ್ಲಾದ್‌ …

Read More »

ಹಿಂಡಲಗಾ ಜೈಲಿಗೆ ಹೋಮ್ ಮಿನಿಸ್ಟರ್…!!

ಬೆಳಗಾವಿ- ಕಳೆದ ಹತ್ತು ದಿನಗಳಿಂದ ಬೆಳಗಾವಿಯಲ್ಲಿ ಇರುವ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಇಂದು ಬೆಳ್ಳಂ ಬೆಳಗ್ಗೆ ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಕಾರಾಗೃಹಕ್ಕೆ ಧಿಡೀರ್ ಭೇಟಿ ನೀಡಿದ್ದಾರೆ. ಕಾರಾಗೃಹ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಹಿಂಡಲಗಾ ಜೈಲಿಗೆ ಹೋಗಿರುವ ಗೃಹಸಚಿವರು ಜೈಲಿನ ವ್ಯವಸ್ಥೆ,ಮತ್ತು ಕೈದಿಗಳ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಕಳೆದ ಒಂದು ಗಂಟೆಯಿಂದ ಜೈಲಿನಲ್ಲಿ ಪರಶೀಲನೆಯ ಕಾರ್ಯಾಚರಣೆ ನಡೆದಿದೆ. ಹಿಂಡಲಗಾ ಕಾರಾಗೃದಲ್ಲಿ ಕುಖ್ಯಾತ ರೌಡಿಗಳು,ಕ್ರಮಿನಲ್ ಗಳು ಇದ್ದಾರೆ‌.ಸ್ವಾತಂತ್ರ್ಯ ಪೂರ್ವ …

Read More »

ಅಧಿಕಾರ ಇಲ್ಲದಿದ್ದರೂ ಜನಸೇವೆ ಹೇಗೆ ಮಾಡಬಹುದು ಅನ್ನೋದನ್ನು ಇವರನ್ನು ನೋಡಿ ಕಲಿಯಬೇಕು..!!

ಬೆಳಗಾವಿ- ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ತಾಲ್ಲೂಕಿನ ಬಿಜೆಪಿ ಉಸ್ತುವಾರಿ ಹುದ್ದೆ ಪಡೆದ ತಕ್ಷಣ ತಾಲ್ಲೂಕಿನಲ್ಲಿ ಜನ ಸ್ಪಂದನ ಕಚೇರಿ ಆರಂಭಿಸಿ ಈ ಕ್ಷೇತ್ರದ ಜನರ ಜೊತೆ ಬೆರೆತು,ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಅವರು ಖಾನಾಪೂರ ಕ್ಷೇತ್ರದ ಮನೆಯ ಮಗಳಾಗಿ ಸೇವೆ ಮಾಡುತ್ತಿದ್ದಾರೆ. ಡಾ.ಸೋನಾಲಿ ಸರ್ನೋಬತ್ ಅವರ ಹತ್ತಿರ ಯಾವುದೇ ಅಧಿಕಾರ ಇಲ್ಲ, ಆದ್ರೆ ಅವರ ಪಕ್ಷ ಅಧಿಕಾರದಲ್ಲಿದ್ದು ಖಾನಾಪೂರ ಕ್ಷೇತ್ರದ ಹಲವಾರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ …

Read More »

ಸರ್ಕಾರಕ್ಕೆ ಅಗ್ನಿಪರೀಕ್ಷೆ, ಬೆಳಗಾವಿಯಲ್ಲಿ ಇಂದು ಫೈನಲ್ ಮ್ಯಾಚ್…!!

ಬೆಳಗಾವಿ-ಡಿಸಬರ್ 19 ರಿಂದ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ಇಂದು ಸಂಜೆ 5 ಗಂಟೆಗೆ ಮುಕ್ತಾಯವಾಗುವ ಸಾಧ್ಯತೆ ಇದೆ. ಈ ಬಾರಿಯ ಚಳಿಗಾಲದ ಅಧಿವೇಶನ ಗದ್ದಲ ಗಲಾಟೆ ಇಲ್ಲದೇ ಅತ್ಯಂತ ಶಾಂರವಾಗಿ ನಡೆಯಿತು‌. ಸದನದ ಒಳಗೆ ಫೈಟ್ ನಡೆಯದಿದ್ದರೂ ಸದನದ ಹೊರಗೆ ವಿವಿಧ ಸಮಾಜಗಳು ಮೀಸಲಾತಿಗಾಗಿ ನಡೆಸಿದ ಹೋರಾಟಗಳು ಸರ್ಕಾರಕ್ಕೆ ಸವಾಲ್ ಆಗಿದ್ದು ನಿಜ. ಪಂಚಮಸಾಲಿ ಸಮಾಜದ ಶ್ರೀಗಳು 2 ಎ ಮೀಸಲಾತಿಗಾಗಿ ನಡೆಸಿದ ಹೋರಾಟ ಬೆಳಗಾವಿಯಲ್ಲಿ ದಾಖಲೆ …

Read More »

ಜಾನುವಾರುಗಳಿಗೆ ಗಂಟುರೋಗ ,ಕಾರ್ಯದರ್ಶಿಯಿಂದ ಮಿಂಚಿನ ಸಂಚಾರ…!!

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಚರ್ಮಗಂಟುರೋಗ ತಡೆಗಟ್ಟುವ ನಿಟ್ಟಿನಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ.ಕೆ ಫಾಹೀಮ್ ಅವರು ಮಿಂಚಿನ ಸಂಚಾರ ನಡೆಸಿ, ಔಷಧೋಪಚಾರ ಮತ್ತು ಲಸಿಕೆ ದಾಸ್ತಾನು ಪರಿಶೀಲಿಸಿದರು. ಚರ್ಮಗಂಟು ರೋಗ ಪೀಡಿತ ರಾಸುಗಳನ್ನು ಪರಿಶೀಲನೆ ನಡೆಸಿದ ಅವರು ಬೆಳಗಾವಿ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿ, ದಾಸ್ತಾನು ಕೊಠಡಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ಬೆಳಗಾವಿ …

Read More »

ಸದನದಲ್ಲಿ ಸೀಟೀ ಹೊಡೆದ ಕುಕ್ಕರ್….!!

  ಬೆಳಗಾವಿ, ಡಿಸೆಂಬರ್ ೨೭ ರಾಜ್ಯ ಪೊಲೀಸರು, ರಾಷ್ಟ್ರದಲ್ಲಿಯೇ ಅತ್ಯಂತ ದಕ್ಷತೆ ಹಾಗೂ ಶಿಸ್ತಿನ ಪೊಲೀಸ್ ಎಂಬ ಹೆಗ್ಗಳಿಕೆ ಹೊಂದಿದ್ದು, ಅವರ ಮನ ಸ್ಥೈರ್ಯ ಕುಗ್ಗಿಸುವ ಯಾವುದೇ ಪ್ರಯತ್ನವನ್ನು, ಖಂಡಿಸುವುದಾಗಿ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ವಿಧಾನ ಸಭೆಯಲ್ಲಿ, ಗುಡುಗಿದ್ದಾರೆ. ಇಂದು, ಸದನದಲ್ಲಿ, ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ, ಸಚಿವರು, ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣವನ್ನು, ಗೌಣವಾಗಿಸಿ, ಮಾತನಾಡಿ, ಹಿರಿಯ ಪೊಲೀಸ್ ಅಧಿಕಾರಿಗಳ ವೃತ್ತಿ ನಿಷ್ಠೆಯನ್ನು ಪ್ರಶ್ನೆ …

Read More »

ಆಕಾಂಕ್ಷಿಗೆ ಅವಾಜ್ ಹಾಕಿದ ಅಶೋಕ ಪಟ್ಟಣ

ಬೆಳಗಾವಿ-ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಯಿತು ಈ ಸಭೆಯಲ್ಲಿ ರಾಮದುರ್ಗ ಮಾಜಿ ಶಾಸಕ ಅಶೋಕ್ ಪಟ್ಟಣ ಮತ್ತೋರ್ವ ಆಕಾಂಕ್ಷಿಗೆ ಆವಾಜ್ ಹಾಕಿದ ಘಟನೆ ನಡೆದಿದೆ. ಎಐಸಿಸಿ ಕಾರ್ಯದರ್ಶಿ ವಿಶ್ವನಾಥ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ರಾಮದುರ್ಗ ಕ್ಷೇತ್ರದ ಆಕಾಂಕ್ಷಿಗಳ ಅಭಿಪ್ರಾಯ ಆಲಿಸುತ್ತಿರುವಾಗ ರಾಮದುರ್ಗ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಅರ್ಜುನ್ ಗದಿಗೆಪ್ಪ ಗುಡ್ಡದ. ನಾನು ಕುರುಬ ಸಮಾಜಕ್ಕೆ …

Read More »
Sahifa Theme License is not validated, Go to the theme options page to validate the license, You need a single license for each domain name.