Breaking News

LOCAL NEWS

ಯಮಕನಮರಡಿ ಬಿಡಬೇಡಿ,ಬೈ ಇಲೆಕ್ಷನ್ ಗೆ ನಿಲ್ಲಬೇಡಿ….!!!

ಬೆಳಗಾವಿ-ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ‌ ಸ್ಪರ್ಧೆಗೆ ಅವರ ಅಭಿಮಾನಿಗಳು ವಿರೋಧ ವ್ಯೆಕ್ತಪಡಿಸಿದ್ದಾರೆ. ಸತೀಶ್ ಜಾರಕಿಹೊಳಿ‌ ಲೋಕಸಭೆಗೆ ಸ್ಪರ್ಧಿಸದಂತೆ ಅಭಿಮಾನಿಗಳ ಒತ್ತಾಯ ಮಾಡುತ್ತಿದ್ದು ,ಯಮಕನಮರಡಿ ಕ್ಷೇತ್ರದಲ್ಲಿ ಈಗ ,ಯಮಕನಮರಡಿ ಬಿಡಬೇಡಿ,ಬೈ ಇಲೆಕ್ಷನ್ ಗೆ ನಿಲ್ಲಬೇಡಿ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಒತ್ತಾಯದ ಮೂಲಕ ಟಿಕೆಟ್ ನೀಡಿ ಕೇಂದ್ರಕ್ಕೆ ಕಳಸಲು ಒಳಸಂಚು ನಡೆದಿದೆ ಎನ್ನುವ  ಆರೋಪ ಸತೀಶ್ ಜಾರಕಿಹೊಳಿ ಅವರದ್ದಾಗಿದೆ.ಸತೀಶ್ ಜಾರಕಿಹೊಳಿ‌ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು …

Read More »

ಇಲೆಕ್ಷನ್ ಬಂದಾಗ ಮಾತ್ರ, ಕುಂಬಕರ್ಣ ನಿದ್ರೆಯಿಂದ ಎಚ್ಚರಗೊಳ್ಳುವ ಸಿದ್ನಾಳ ಪುತ್ರ…!!!

ಬೆಳಗಾವಿ- ಒಂದು ಕಾಲವಿತ್ತು,ಎಸ್ ಬಿ ಸಿಧ್ನಾಳ ಮತ್ತು ಶಂಕರಾನಂದ ಬೆಳಗಾವಿ ಜಿಲ್ಲೆ ಆಳುತ್ತಿದ್ದರು,ಇಬ್ಬರೂ ಹೇಳಿದ್ದೆ ವೇದವಾಕ್ಯ ಆಗಿತ್ತು,ಅವರ ಹಾಗೆ ಅವರ ಮಕ್ಕಳು ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾಗಲೇ ಇಲ್ಲ,ಇಬ್ಬರು ದಿಗ್ಗಜರ ಮಕ್ಕಳು ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಮಾಜಿ ಸಂಸದ ಎಸ್ ಬಿ ಸಿಧ್ನಾಳ ಅವರು ಇಬ್ಬರು ಮಕ್ಜಳಲ್ಲಿ ಒಬ್ಬನಾದರೂ ರಾಜಕೀಯವಾಗಿ ಬೆಳೆಯಬೇಕೆಂದು ಎಲ್ಲಿಲ್ಲದ ಪ್ರಯತ್ನ ಮಾಡಿದರು ಆದ್ರೆ ಅದು ಸಾಧ್ಯ ಆಗಲೇ ಇಲ್ಲ.. ಆದ್ರೆ ಎಸ್ ಬಿ ಸಿಧ್ನಾಳ ಅವರ ಪುತ್ರ …

Read More »

ಮಾರ್ಚ್ 25 ಅಥವಾ 26 ಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ಬೆಳಗಾವಿ- ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಮಾರ್ಚ,25 ಅಥವಾ 26 ಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಚುನಾವಣೆಗೆಕಾಂಗ್ರೆಸ್ ಪಕ್ಷ ರೆಡಿ ಇದೆ, ಅಭ್ಯರ್ಥಿ ವಿಚಾರ ಹೈಕಮಾಂಡ  ಅಂತಿಮ ಮಾಡಿಲ್ಲ, ಆ  ಸಭೆಯಲ್ಲಿ ಮೂರು ಹೆಸರುಗಳು ಶಿಫಾರಸು ಆಗವೆ,ಪಕ್ಷ  ಆದೇಶ ಮಾಡಿದರೆ  ನಾನು  ಚುನಾವಣೆಗೆ ನಿಲ್ಲುತ್ತೇನೆ, ಪಕ್ಷದ …

Read More »

ಸುವರ್ಣಸೌಧದ ಮುಂದೆ ನಿಂತ, ಪೂಜಾರಿ….!!!

ಬೆಳಗಾವಿಯ ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿ ಸ್ಥಳಾಂತರ ಮಾಡಬೇಕು ಬೆಳಗಾವಿ ಎರಡನೇ ರಾಜ್ಯಧಾನಿಯಾಗಬೇಕು ಈ ಸೌಧವನ್ನು  ಆಡಳಿತಾತ್ಮಕ ಶಕ್ತಿ ಕೇಂದ್ರ ಮಾಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಶಾಸಕರು ಅಧಿವೇಶನದಲ್ಲಿ ಚರ್ಚೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಧರಣಿ ನಡೆಸಿದೆ ಉತ್ತರ ಕರ್ನಾಟಕ ವಿಕಾಸ ವೇದಿಕೆ ಸಂಚಾಲಕ ಅಶೋಕ ಪುಜಾರಿ ನೇತೃತ್ವದಲ್ಲಿ ಬೆಳಗಾವಿ ಸುವರ್ಣಸೌಧ ಎದರು ಕಪ್ಪು ಮಾಸ್ಕ ಧರಿಸಿ ಕೈಗೆ ಕಪ್ಪು ಬಟ್ಟೆ …

Read More »

ಸರಾಯಿ ಲೋಡೆಡ್ ಚೋರ್ ಕ್ಯಾಂಟರ್ ಅಬಕಾರಿ ಬಲೆಗೆ….

ಬೆಳಗಾವಿ- ಬೆಳಗಾವಿ ಲೋಕಸಭೆ ಉಪಚುನಾವಣೆ ರಂಗೇರುವ ಮುನ್ನವೇ  ಮದ್ಯದ ಘಾಟು ಬೆಳಗಾವಿಯಲ್ಲಿ ಜೋರಾಗಿದೆ ಗೋವಾ ಬಾರ್ಡರ್ ನಲ್ಲಿ ಮದ್ಯ ತುಂಬಿದ ಕ್ಯಾಂಟರ್ ಬೆಳಗಾವಿಯ ಅಬಕಾರಿ ಬಲೆಗೆ ಬಿದ್ದಿದೆ. ಕ್ಯಾಂಟರ್ ಮೊಡಿಫೈ ಮಾಡಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಆರೋಪಿ ಅರೆಸ್ಟ್ ಮಾಡಲಾಗಿದ್ದು, ಬೆಳಗಾವಿ ತಾಲೂಕಿನ ಬಾಕನೂರು ಗ್ರಾಮದ ಬಳಿ ಅಬಕಾರಿ ಪೊಲೀಸರ ದಾಳಿ ಮಾಡಿ ಅಡ್ಡ ದಾರಿಯಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸುತ್ತಿದ್ದ ಕ್ಯಾಂಟರ್ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ …

Read More »

ಇವತ್ತು ಬೆಳಗಾವಿಗೆ ಪುನೀತ್ ರಾಜಕುಮಾರ್ ಬರ್ತಾರೆ…

ಬೆಳಗಾವಿ-ಪವರ್ ಸ್ಟಾರ್‌ ಪುನೀತ ರಾಜ್ ಕುಮಾರ್ ಅವರು ಇವತ್ತು ಭಾನುವಾರ ಮದ್ಯಾಹ್ನ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಯುವರತ್ನ ಕನ್ನಡ ಚಲನಚಿತ್ರ ಎಪ್ರಿಲ್ 1 ಕ್ಕೆ ಬೆಳಗಾವಿಯ ಚಂದನ ಚಿತ್ರಮಂದಿರಲ್ಲಿ ಬಿಡುಗಡೆ ಆಗುತ್ತಿದೆ,ಈ ಚಿತ್ರ ದಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಪವರ್ ಸ್ಟಾರ್ ಪುನೀತ ರಾಜಕುಮಾರ್ ಚಿತ್ರಪ್ರೇಮಿಗಳ ಅಪ್ಪು ಇವತ್ತು ಯುವರತ್ನ ಚಿತ್ರದ ಪ್ರಚಾರಕ್ಕಾಗಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಯುವರತ್ನ ಚಿತ್ರದ ತಂಡ ಬೆಳಗಾವಿಗೆ ಆಗಮಿಸಿ ಚಂದನ ಚಿತ್ರಮಂದಿರದಲ್ಲಿ ಯುವರತ್ನ ಚಿತ್ರದ ಪ್ರಚಾರ ಮಾಡಲಿದೆ. …

Read More »

ಅಭ್ಯರ್ಥಿಗಳ ಘೋಷಣೆ,ನಾ ಮೊದಲೋ,ನೀ..ಮೊದಲೋ….???

ಬೆಳಗಾವಿ-ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಬಿರುಸಿನ ಕಸರತ್ತು ನಡೆದಿದೆ. ಈ ವಿಚಾರದಲ್ಲಿ ಎರಡೂ ಪಕ್ಷಗಳು ಕಾದುನೋಡುವ ತಂತ್ರವನ್ನು ಅನುಸರಿಸುತ್ತಿವೆ.ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬಳಿಕ,ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆಗಳೇ ಹೆಚ್ಚಾಗಿವೆ,ಈ ಎರಡೂ ಪಕ್ಷಗಳು ಅಣಬ್ಯರ್ಥಿಗಳ ಆಯ್ಕೆಯ ಕುರಿತು ರಾಜಧಾನಿ ಬೆಂಗಳೂರಿನಲ್ಲಿ ತಂತ್ರ,ಪ್ರತಿತಂತ್ರ ರೂಪಿಸುತ್ತಿವೆ. ಶನಿವಾರ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ದಿನವಿಡೀ ಸರಣಿ ಸಭೆಗಳನ್ನು ನಡೆಸಿ ಬೆಳಗಾವಿ ಜಿಲ್ಲೆಯ …

Read More »

ನೀವೇ ಸ್ಪರ್ದೆ ಮಾಡಿ,ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ನಾಯಕರ ಪಟ್ಟು…!!!

ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ  ಕಾಂಗ್ರೆಸ್ ಅಭ್ಯರ್ಥಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆಯುತ್ತಿದೆ. ಇಂದು ಬೆಳಿಗ್ಗೆ 11 ಟೆಯಿಂದ ಕೆಪಿಸಿಸಿ ಕಚೇರಿಯಲ್ಲಿ ಸರಣಿ ಸಭೆಗಳು ನಡೆಯುತ್ತಿವೆ.ಸತೀಶ್ ಜಾರಕಿಹೊಳಿ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಬೇಕು,ಎಂದು ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿದ್ದು,ಅವರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರು ಸಭೆಯನ್ನು ಮುಂದುವರೆಸಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಸ್ಪರ್ದೆ ಮಾಡಲು ಒಪ್ಪದಿದ್ದರೆ,ಸತೀಶ್ ಜಾರಕಿಹೊಳಿ,ಮತ್ತು ಬೆಳಗಾವಿ ಗ್ರಾಮೀಣ …

Read More »

ಸುವರ್ಣ ವಿಧಾನಸೌಧ ಅಡಳಿತಾತ್ಮಕ ಕೇಂದ್ರ ಮಾಡಲು,ಅಧಿವೇಶನದಲ್ಲಿ ಚರ್ಚೆ ಮಾಡಲಿ

ಬೆಳಗಾವಿ-ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೆಳಗಾವಿ ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಶಕ್ತಿ ಕೇಂದ್ರ ಮಾಡಲು ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವಲ್ಲಿ ಕಿಂಚಿತ್ತೂ ಚಿಂತನೆ ಮಾಡುತ್ತಿಲ್ಲ,ಕೊಟ್ಟ ಭರವಸೆಯನ್ನು ಈಡೇರಿಸುತ್ತಿಲ್ಲ,ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಸಂಚಾಲಕ ಅಶೋಕ ಪೂಜಾರಿ ಅಸಮಾಧಾನ ವ್ಯೆಕ್ತಪಡಿಸಿದರು. ಬೆಳಗಾವಿಯಲ್ಲಿ,ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಂಗಳೂರಿನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದೆ.ಈ ಅಧಿವೇಶನದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿ ಸ್ಥಳಾಂತರ,ಮತ್ತು ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸುವ ಕುರಿತು ಉತ್ತರ ಕರ್ನಾಟಕದ …

Read More »

ಗೆಲ್ಲುವ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ವು- ಆರ್ ಅಶೋಕ

ಬೆಳಗಾವಿ-ಬೆಳಗಾವಿಯಲ್ಲಿ ಶಿವಸೇನೆ ನಿಷೇಧ ಮಾಡಲು ಕಾನೂನಿನಲ್ಲಿ ಇದೆಯೋ ಇಲ್ಲವೋ ಎನ್ನುವುದು ಸರಕಾರ ಚಿಂತನೆ ಮಾಡಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು. ಶನಿವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.  ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುವ ಶಿವಸೇನೆ ಒಂದು ರಾಜಕೀಯ ಪಕ್ಷವಾಗಿರುವುದರಿಂದ ಅದನ್ನು ನಿಷೇಧ ಮಾಡಲು ಅಧಿಕಾರ ಇರುವುದಿಲ್ಲ. ಅದನ್ನು ನಿಷೇಧ ಮಾಡಲು ಅವಕಾಶ ಇದೆಯೋ ಇಲ್ಲ ಎನ್ನುವುದು ಚರ್ಚೆ ಮಾಡುತ್ತೇವೆ ಎಂದರು. ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆಗೆ …

Read More »

ದೈವ ಭಕ್ತರಾದ ಸತೀಶ ಜಾರಕಿಹೊಳಿ‌….!!!!!

ಬೆಳಗಾವಿ- ಯಾರೇ ಕೂಗಾಡಲಿ,ಯಾರೇ ಚೀರಾಡಲಿ,ನಾನೇ ಬೇರೆ ನನ್ನ ಸ್ಟೈಲೇ ಬೇರೆ,ಎನ್ನುವಂತೆ,ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇವತ್ತು ಫುಲ್ ರಿಲ್ಯಾಕ್ಸ ಮೂಡ್ ನಲ್ಲಿದ್ದರು. ರಾಮದುರ್ಗ ಮಾಜಿ ಶಾಸಕ ಅಶೋಕ ಪಟ್ಟಣ ಅವರು ಇವತ್ತು  ರಾಮದುರ್ಗಿನಲ್ಲಿ ,ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಸಮ್ಮಾನ ಕಾರ್ಯಕ್ರಮ ಆಯೋಜಿಸಿದ್ದರು,ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಳಗಾವಿಗೆ ಮರಳುತ್ತಿರುವಾಗ ಗೊಡಚಿ,ವೀರಭದ್ರೇಶ್ವರ ದರ್ಶನ ಪಡೆದು ಪುಣೀತರಾದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇನ್ನಿತರ ನಾಯಕರು ಸತೀಶ್ ಜಾರಕಿಹೊಳಿ ಅವರ …

Read More »

ಸಂಡೇ ಬೆಳಗಾವಿ ಸಿಟಿಯಲ್ಲಿ ಕರೇಂಟ್ ಕಟ್….!!!!

ಬೆಳಗಾವಿ-ಭಾನುವಾರ ದಿನಾಂಕ 21 ರಂದು ಬೆಳಗಾವಿ ನಗರಾದ್ಯಂತ. ಕರೆಂಟ್ ಇರೋದಿಲ್ಲ ಅಂತಾ ಹೆಸ್ಕಾಂ ಪ್ರಕಟಣೆ ಹೊರಡಿಸಿದೆ ದುರಸ್ಥಿ ಕಾರ್ಯದ ನಿಮಿತ್ಯ ಬಹುತೇಕ ಇಡೀ ನಗರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5. ಗಂಟೆಯವರೆಗೆ ಕರೆಂಟ್ ಇರೋದಿಲ್ಲ. ಅದಕ್ಕಾಗಿ ಎಲ್ಲರೂ ತಮ್ಮ ತಮ್ಮ ಮೋಬೈಲ್ ಗಳನ್ನು ಪಾವರ್ ಬ್ಯಾಂಕ್ ಗಳನ್ನು ಅಡವಾನ್ಸ್ ರಿಚಾರ್ಜ್ ಮಾಡಿಕೊಂಡು ಇಡೋದು ಸೂಕ್ತ

Read More »

ಬೆಳಗಾವಿ ಸ್ಮಾರ್ಟ್ ಸಿಟಿ,ಅಧಿಕಾರಿಯ ಮನೆಯಲ್ಲಿ ಪತ್ತೆಯಾದ ನೋಟಿನ ರಾಶಿ….!!!

ಪಿರ್ಯಾದಿ ಶ್ರೀ ಸಂಜೀವ ಕುಮಾರ ನವಲಗುಂದ ತಂದೆ: ಶಿವಲಿಂಗಪ್ಪಾ,  ಸಾ: ಗಣೇಶ್ ನಗರ ಬೆಳಗಾವಿ  ತಾ:ಜಿ: ಬೆಳಗಾವಿ ರವರು ಪ್ರೋಜಕ್ಟ್ ಮ್ಯಾನೇಜರ್, ಅಪೂರ್ವಾ ಕನ್ಸಟ್ರಕ್ಷನ ಕಂ. ವತಿಯಿಂದ ಬೆಳಗಾವಿ ಸ್ಮಾರ್ಟ ಸಿಟಿ ಲಿ.ಯೋಜನೆಯಡಿ ನಿರ್ವಹಿಸಿದ ಬೆಳಗಾವಿ ಸಿಟಿ ಬಸ್ ನಿಲ್ದಾಣದ ಕಾಮಗಾರಿಯ ಆರ್.ಎ-13 ಬಿಲ್ ಮಂಜೂರಿಸಲು   ಮಾಡಲು, ಆಪಾದಿತ ನೌಕರ ಶ್ರೀ ಸಿದ್ದನಾಯ್ಕ ದೂಡಬಸಪ್ಪ ನಾಯ್ಕರ್, ಜನರಲ್ ಮ್ಯನೆಜರ್ ಟೆಕ್ನಿಕಲ್ ತಾಂತ್ರಿಕ, ಬೆಳಗಾವಿ ಸ್ಮಾರ್ಟ್ ಸಿಟಿ ಲಿ. ಕಚೇರಿ, ಬೆಳಗಾವಿ …

Read More »

ಬೆಳಗಾವಿಗೆ ಹುಲಿ ಬಂತು ಹುಲಿ….!!!

ಬೆಳಗಾವಿ- ಸಮೀಪದ ಭೂತರಾಮನಹಟ್ಟಿ ರಾಣಿ ಚೆನ್ನಮ್ಮ ನಿಸರ್ಗದಾಮದಲ್ಲಿ ಸಿಂಹ ಘರ್ಜನೆ ಕೇಳಿಸಿದ ಬೆನ್ನಲ್ಲಿಯೇ ಇಂದಿನಿಂದ ಇದೇ ನಿಸರ್ಗದಾಮದಲ್ಲಿ ಹುಲಿ ಘರ್ಜನೆ ಶುರುವಾಗಿದೆ. ಇವತ್ತು ಮೈಸೂರು ಝೂ ನಿಂದ ಎರಡು ಹುಲಿಗಳು ಬೆಳಗಾವಿಗೆ ಬಂದಿವೆ,ಈ ಎರಡೂ ಹುಲಿಗಳು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೆ,ಈ ಎರಡು ಹುಲಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕನಿಷ್ಕ ಮತ್ತು ಶೌರ್ಯ ಹೆಸರಿನ ಎರಡು ಹುಲಿಗಳು ಇಂದಿನಿಂದ ರಾಣಿ ಚೆನ್ನಮ್ಮ ನಿಸರ್ಗದಾಮದ ಸದಸ್ಯರಾಗಿದ್ದಾರೆ.ಇವತ್ತು ಸಿಡಿ ಲೇಡಿ ಬೆಳಗಾವಿಗೆ ಬರ್ತಾಳೆ,ಎಪಿಎಂಸಿ ಠಾಣೆಗೆ ಬಂದು …

Read More »

ಕನ್ನಡದ ಶಾಲು ಹಾಕಿಕೊಂಡು ಮಹಾರಾಷ್ಟ್ರದ ಗಡಿಯಲ್ಲಿ ನುಗ್ಗುತ್ತೇವೆ….

ಬೆಳಗಾವಿ-ಎಂಇಎಸ್ ಶಿವಸೇನೆ ವಿರುದ್ಧ ಚೆನ್ನಮ್ಮ ವೃತ್ತದಲ್ಲಿ ಕರವೇ ಪ್ರವೀಣ ಶೆಟ್ಟಿ ಬಣ  ಪ್ರತಿಭಟನೆ ನಡೆಸಿತು. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ಕರವೇ ಕಾರ್ಯಕರ್ತರು ಶಿವಸೇನೆ ಮತ್ತು ಎಂಈಎಸ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯೆಕ್ತಪಡಿಸಿದರು. ಪ್ರವೀಣ್ ಶೆಟ್ಟಿ ಬಣದ ಕರವೇ ರಾಜ್ಯಾಧ್ಯಕ್ಷ  ಪ್ರವೀಣ್ ಶೆಟ್ಟಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಪ್ರವೀಣ ಶೆಟ್ಟಿ,ಬೆಳಗಾವಿ ಗಡಿಯಲ್ಲಿ ಶಿವಸೇನೆ ಎಂಇಎಸ್ ಶಾಂತಿ ಕದಡುವ …

Read More »