Breaking News

LOCAL NEWS

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕಂಟ್ರೋಲ್……!

ಬೆಳಗಾವಿ- ಲಗಾಮಿಲ್ಲದ ಕುದುರೆಯಂತೆ ಓಡಾಡುತ್ತಿದ್ದ ಮಹಾಮಾರಿ ಕೊರೋನಾ ಸೊಂಕಿಗೆ ಬೆಳಗಾವಿ ಜಿಲ್ಲೆಯ ಮೆಡಿಕಲ್ ವಾರಿಯರ್ಸ್ ಗಳು, ಲಗಾಮು ಹಾಕುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಮರಣ ಪ್ರಮಾಣ,ಮತ್ತು ಸೊಂಕಿತರ ಅಂಕಿ ಅಂಶ ನೋಡಿ ಸಾರ್ವಜನಿಕರು ಹೆದರಬಾರದು ಎನ್ನುವ ಏಕೈಕ ಉದ್ದೇಶದಿಂದ ಬೆಳಗಾವಿ ಸುದ್ಧಿ ಡಾಟ್ ಕಾಮ್ ಇಷ್ಟು ದಿನ ಕೋವೀಡ್ ಗೆ ಸಮಂಧಿಸಿದ ಸುದ್ಧಿಗಳನ್ನು ಪ್ರಕಟಿಸಿರಲಿಲ್ಲ ಬೆಳಗಾವಿ ಜಿಲ್ಲೆಯ ನಿನ್ನೆ ಗುರುವಾರದ ಹೆಲ್ತ್ ಬುಲೀಟೀನ್ ಗಮನಿಸಿದ್ರೆ,ಬೆಳಗಾವಿ ಜಿಲ್ಲೆಯ ನಮ್ಮ ಕೊರೋನಾ …

Read More »

ರೇಲ್ವೇ ಸ್ಟೇಶನ್ ಕಾಮಗಾರಿ,ನೋಡಿ ಏನಂದ್ರು ಅಧಿಕಾರಿ..!!

ಬೆಳಗಾವಿ- ಬೆಳಗಾವಿ ರೇಲ್ವೇ ನಿಲ್ಧಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಇಂದು ಹುಬ್ಬಳ್ಳಿ ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಅಜಯಕುಮಾರ್ ಸಿಂಗ್ ಇಂದು ಕಾಮಗಾರಿಯನ್ನು ಪರಶೀಲಿಸಿದರು. ಇಂದು ಬೆಳಿಗ್ಗೆ ಧೀಡೀರ್ ಬೆಳಗಾವಿಗೆ ಭೇಟಿ ನೀಡಿದ ರೈಲು ಅಧಿಕಾರಿಗಳ ತಂಡ ಕಾಮಗಾರಿಯನ್ನು ಚುರುಕುಗೊಳಿಸಿ,ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ರು ಮೀರಜ್ ಲೋಂಡಾ ಡಬ್ಲೀಂಗ್ ಯೋಜನೆಯ ಅಡಿಯಲ್ಲಿ 170 ಕೋಟಿ ರೂ ವೆಚ್ಚದಲ್ಲಿ ಬೆಳಗಾವಿಯಲ್ಲಿ ರೈಲು ನಿಲ್ಧಾಣದ ಪ್ರವೇಶ ದ್ವಾರ,ಮತ್ತು ಕೋಚೀಂಗ್ ಟರ್ಮಿನಲ್ ನಿರ್ಮಿಸುವದರ …

Read More »

ಸವದಿ ಮಾಡಿದ್ರು ಬಸ್ ರೈಡ್….ಸಿಎಂ ಹೇಳಿದ್ರು ರೈಟ್…ರೈಟ್…!

*ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ: ಡಿ.ಸಿ.ಎಂ. ಸವದಿ ಪರಿಶೀಲನೆ* *ಸಿ.ಎಂ. ಯಡಿಯೂರಪ್ಪ ಶ್ಲಾಘನೆ* ಬೆಂಗಳೂರಿನ ಶಾಂತಿನಗರದ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಬೆಳಿಗ್ಗೆ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ ಕೈಗೊಂಡು ಈ ಬಸ್ಸಿನ ಕಾರ್ಯಕ್ಷಮತೆಯನ್ನು ಖುದ್ದಾಗಿ ಪರಿಶೀಲಿಸಿದರು. ವಿಧಾನಸೌಧಕ್ಕೆ ಈ ಬಸ್ಸು ತಲುಪಿದಾಗ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಈ ಬಸ್ಸನ್ನು ಪರಿಶೀಲಿಸಿ ನೂತನ …

Read More »

ಅನುಮತಿ ಕೊಡದಿದ್ದರೂ ಬೈಕ್ ರ್ಯಾಲಿ ಮಾಡ್ತೀವಿ- ಕರವೇ ಎಚ್ಚರಿಕೆ

ಬೆಳಗಾವಿ-ರಾಜ್ಯೋತ್ಸವದ ದಿನ ಕನ್ನಡಿಗರ ಪಾಲಿಗೆ ಹಬ್ಬ,ಆದ್ರೆ ಈ ದಿನ ಮಹಾರಾಷ್ಟ್ರ ಏಕೀಕರಣ ಸಮೀತಿ ಈ ದಿನ ಕಪ್ಪು ದಿನ ,ಕರಾಳ ದಿನವನ್ನಾಗಿ ಆಚರಿಸಲು ಅವರ ಜೊತೆ ಒಳ ಒಪ್ಪಂದವನ್ನು ಮಾಡಿಕೊಂಡಿರುವ ಸ್ಥಳೀಯ ರಾಜಕಾರಣಿಗಳೇ ಕಾರಣ ಎಂದು ಕರವೇ ರಾಜ್ಯ ಕರವೇ ಉಪಾಧ್ಯಕ್ಷ ಹೆಚ್ ಎಸ್ ಸೋಂಪೂರ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಎಂಈಎಸ್ ಅವರ ಕಿತಾಪತಿ ನೋಡಿ ನಮ್ಮ ತೆಲೆ ಕೆಟ್ಟು ಹೋಗಿದೆ,ಈ ಬಾರಿ ಎಂ ಈ ಎಸ್ …

Read More »

ಇಲೆಕ್ಟ್ರೀಕ್ ಬಸ್ ಓಡಿಸಿ ಶಾಕ್ ಕೊಟ್ಟ ಬೆಳಗಾವಿಯ ಮಿನಿಸ್ಟರ್…….!

ಬೆಳಗಾವಿ-ಅವರು ಹುದ್ದೆಯಲ್ಲಿ ಡಿಸಿಎಂ ,ಅದನ್ನೆಲ್ಲಾ ಮರೆತು,ಇಂದು ಇಲೆಕ್ಟ್ರೀಕ್ ಬಸ್ ಏರಿ,ಚಾಲಕನನ್ನು ಇಳಿಸಿ,ಬಿಎಂಟಿಸಿ ಬಸ್ ನಿಲ್ಧಾಣದಿಂದ ವಿಧಾನಸೌಧದ ವರೆಗೆ ಬಸ್ ಓಡಿಸಿ ಎಲ್ಲರಿಗೆ ಶಾಕ್ ಕೊಟ್ಟವರು ಬೆಳಗಾವಿಯ ಲಕ್ಷ್ಮಣ ಸವದಿ. ಹೌದು ಇಂದು ಬೆಂಗಳೂರಿನಲ್ಲಿ ಬಸ್ ಚಲಾಯಿಸಿ ಬೆಂಗಳೂರಿನ ಟ್ರಾಫಿಕ್ ಪಾರು ಮಾಡಿ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತಾ ಡಿಸಿಎಂ ಲಕ್ಷ್ಮಣ ಸವದಿ ಇಂದು ಸಾಭೀತು ಪಡಿಸಿದರು. ಬೆಂಗಳೂರಿನ ಶಾಂತಿ ನಗರದಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು …

Read More »

ಅನುದಾನ ವಿಳಂಬ ಬೆಳಗಾವಿಯಲ್ಲೂ ಅಸಮಾಧಾನ ಸ್ಫೋಟ…!!

ಬೆಳಗಾವಿ-ರಾಜ್ಯದ ಹತ್ತು ಮಹಾನಗರ ಪಾಲಿಕೆಗಳಿಗೆ ಬಿಡುಗಡೆಯಾಗಿದ್ದ ತಲಾ 125 ಕೋಟಿ ರೂ ಅನುದಾನ ಸಿಎಂ ವಾಪಸ್ ಪಡೆದಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀgಲ ಉತ್ನಾಳ ಆರೋಪಿಸಿದ ಬೆನ್ನಲ್ಲಿಯೇ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಪ್ರಶ್ನೆಗೆ ಉತ್ತರಿಸಿದ ಅವರು ಬೆಳಗಾವಿ ನಗರ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ರಾಜ್ಯದ ಎರಡನೇಯ ರಾಜಧಾನಿ ಅಂತಾರೇ ಆದರೆ …

Read More »

ಪಾಪ ಮದುವೆ ಮಾಡಿಕೊಂಡ ಮೂರು ತಿಂಗಳಲ್ಲೇ ಹಿಂಗ್ಯಾಕಾತು….!!!

ಬೆಳಗಾವಿ- ಮದುವೆ ಮಾಡಿಕೊಂಡ ಮೂರು ತಿಂಗಳಲ್ಲೇ ಬೀರುಗಾಳಿ ಬೀಸಿತು ಬದುಕೆಂಬ ಹಡಗು ಮುಳುಗಿತು.ಮೂರು ತಿಂಗಳಲ್ಲೇ ಅವಳು ಇಹಲೋಕ ತ್ಯಜಿಸಿದ್ದು ಯ್ಯಾಕೆ..? ಎನ್ನುವ ಪ್ರಶ್ನೆಗೆ ಪೋಲೀಸರು ಉತ್ತರ ಹುಡುಕಬೇಕಾಗಿದೆ. ಮೂರು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ವಿವಾಹಿತ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿಧ್ರಾವಕ ಘಟನೆ ಬೆಳಗಾವಿ ತಾಲೂಕಿನ‌ ಸುಳಗಾ ಗ್ರಾಮದಲ್ಲಿ ನಡೆದಿದೆ. 19 ವರ್ಷದ ಜ್ಯೋತಿ ಚೋಪ್ಡೆ ನೇಣುಬಿಗಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡ ಯುವತಿ. ಕಳೆದ ಮೂರು‌ ತಿಂಗಳ …

Read More »

ಬೆಳಗಾವಿ ಜಿಲ್ಲೆಯ ಪರಿಸ್ಥಿತಿ ತಿಳ್ಕೊಂಡ್ರು,ಇನ್ ಚಾರ್ಜ್ ಸಕ್ರೇಟರಿ….!!

ಬೆಳಗಾವಿ, – ಜಿಲ್ಲೆಯಲ್ಲಿ ಪದೇ ಪದೆ ಪ್ರವಾಹಭೀತಿ ಎದುರಾಗುತ್ತಿರುವುದರಿಂದ ಇದುವರೆಗೆ ಪ್ರವಾಹ ಮತ್ತು ಅತಿವೃಷ್ಟಿಯಿಂದ ಆಗಿರುವ ಮೂಲಸೌಕರ್ಯಗಳು ಮತ್ತಿತರ ಹಾನಿಯನ್ನು ಸರಿಪಡಿಸಲು ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ(ಅ.20) ನಡೆದ ಜಿಲ್ಲಾ ಪ್ರಗತಿ ಪರಿಶೀನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರವಾಹದಿಂದ …

Read More »

ಕೊರೋನಾ ಸೋಂಕು ತಡೆಗೆ ಹಬೆಯೇ ಮದ್ದು!

(ಅಶೋಕ ಚಂದರಗಿ) ಕೊರೋನಾ ಸೋಂಕು ಶ್ವಾಸಕೋಶ ಪ್ರವೇಶಿಸುವ ಮುನ್ನವೇ ಮೂಗು ಮತ್ತು ಗಂಟಲಲ್ಲಿ ಅದನ್ನು ನಾಶ ಮಾಡುವ ಒಂದು ಕ್ರಮವಾಗಿ ಬಿಸಿ ನೀರಿನ ಹಬೆ ತೆಗೆದುಕೊಳ್ಳಬೇಕೆಂದು ದೇಶದ ಅನೇಕ ತಙ್ಞರು ಹೇಳುತ್ತಲೇ ಇದ್ದಾರೆ.ಆದರೆ ರಾಜ್ಯ ಸರಕಾರದ ಆರೋಗ್ಯ ಸಚಿವರು ಮೊದಲ ಬಾರಿಗೆ ಅಧಿಕೃತವಾಗಿ ಈ ಸಲಹೆಯನ್ನು ಜನತೆಗೆ ನೀಡಿದ್ದಾರೆ. ಬಿಸಿ ನೀರಿನಲ್ಲಿ ನೀಲಗಿರಿ ಎಣ್ಣೆಯ ಟ್ಯೂಬ್ ಹಾಕಿಯೊ, ಅರಿಷಿಣ ಉಪ್ಪು ಹಾಕಿಯೊ ಹಬೆ ತೆಗೆದುಕೊಳ್ಳಲಾಗುತ್ತದೆ.ತುಳಸಿ ಎಲೆ ಅಥವಾ ಯುನಾನಿ ವೈದ್ಯರ …

Read More »

ಅದಕ್ಕಾಗಿಯೇ ಅವರನ್ನು ಕ್ಷೇತ್ರದ ಜನ ಅಂಜಲಿ “ತಾಯಿ’ ಅಂತಾರೆ…!!!

ಬೆಳಗಾವಿ- ಖಾನಾಪೂರ ಶಾಸಕಿ ಡಾ ಅಂಜಲಿ ಹೇಮಂತ್ ನಿಂಬಾಳ್ಕರ್ ಅವರು ಜಗನ್ಮಾತೆ ದುರ್ಗಾ ದೇವಿಗೆ ಹರಕೆ ಹೊತ್ತಿದ್ದಾರೆ. ಕ್ಷೇತ್ರದ ಜನತೆಯ ಸಕಲ ಶ್ರೇಯಸ್ಸಿಗೆ ವಿಶೇಷವಾದ,ವಿಶಿಷ್ಟವಾದ ,ಕಠಿಣ ಆಚರಣೆಯ ಹರಕೆ ಹೊತ್ತಿರುವ ಅವರು ನವರಾತ್ರಿಯ 9 ದಿನಗಳ ಕಾಲ ಬರಿಗಾಲಿನಲ್ಲಿದ್ದು 9 ದಿನಗಳ ಕಾಲ ಊಟ ಮಾಡದೇ ಕೇವಲ ಹಣ್ಣು ಹಂಪಲಗಳನ್ನ ಮಾತ್ರ ಸೇವಿಸುವ ಹರಕೆ ಹೊತ್ತ ಸೇವಾ ಶಾರದೆಯ ಜನಪರ ಕಾಳಜಿ ಪ್ರಶಂಸಾರ್ಹ. ಈ ಹಿಂದೆಯೂ ಶಾಸಕಿ ಅಂಜಲಿ ನಿಂಬಾಳ್ಕರ್ …

Read More »

ತಮ್ಮನಿಂದಲೇ ಅಣ್ಣನ ಮರ್ಡರ್ ,

ಬೆಳಗಾವಿ- ತಮ್ಮನೊಬ್ಬ ರಾಡ್ ನಿಂದ ಅಣ್ಣನ ತಲೆಗೆ ಹೊಡೆದು ಹತ್ಯೆ ಮಾಡಿದ ಘಟನೆ ಮಾರಿಹಾಳ ಪೋಲೀಸ್ ಠಾಣೆ ವ್ಯಾಪ್ತಿಯ ಅಷ್ಟೇ ಗ್ರಾಮದ ಪಕ್ಕದಲ್ಲಿರುವ ಚಂದಗಡ ಗ್ರಾಮದಲ್ಲಿ ನಡೆದಿದೆ. ಕೃಷ್ಣಾ ಕಾಲಕುಂದ್ರಿ30 ಹತ್ಯೆಯಾದ ದುರ್ದೈವಿಯಾಗಿದ್ದಾನೆ ಇತನ ತಮ್ಮ ಮಿಥುನ ಶಿವಾಜಿ ಕಾಲಕುಂದ್ರಿ ಕೊಲೆ ಮಾಡಿದ ಆರೋಪಿಯಾಗಿದ್ದು ಮಾರಿಹಾಳ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಿಥುನ ಕಾಲಕುಂದ್ರಿ ಪ್ರತಿದಿನ ಕುಡಿದ ಅಮಲಿನಲ್ಲಿ ಮನೆಯವರ ಜೊತೆ ನಿತ್ಯ ಜಗಳಾಡುತ್ತಿದ್ದ ಇವತ್ತು ಅಣ್ಣನ ಜೊತೆ ಜಗಳಕ್ಕಿಳಿದು ಅಣ್ಣನಿಗೆ …

Read More »

ಕಾವ್ಯ ಮಾಣಿಕ್ಯ, ಬೆಳಗಾವಿಯ ನದೀಮ ಸನದಿ

ನದೀಮ ಅವರಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ ಬೆಳಗಾವಿ ೧೯:ಹಾಸನದ ಮಾಣಿಕ್ಯ ಪ್ರಕಾಶನ ನೀಡುವ ಕಾವ್ಯ ಮಾಣಿಕ್ಯ ರಾಜ್ಯಪ್ರಶಸ್ತಿಗೆ ಬೆಳಗಾವಿಯ ಯುವ ಕವಿ ನದೀಮ ಸನದಿ ಅವರ ಪ್ರಥಮ ಕೃತಿ ಹುಲಿಯ ನೆತ್ತಿಗೆ ನೆರಳು ಕವನ ಸಂಕಲನ ಆಯ್ಕೆಯಾಗಿದೆ.ನಿನ್ನೆ ರವಿವಾರ ದಿ.೧೮ ರಂದು ಹಾಸನದ ಸಂಸ್ಕೃತ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅವರು ನದೀಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನದೀಮ ಸನದಿ ಬಿ.ಇ, ಎಂ.ಟೆಕ್.ಪದವೀಧರರಾಗಿದ್ದು,ಸಧ್ಯ …

Read More »

ಇನ್ಸುಲಿನ್ ತಗೊಂಡು ಸರ್ಕಾರಕ್ಕೆ ಇಂಜೆಕ್ಷನ್ ಕೊಟ್ಟ ಟಗರು….!

ಬೆಳಗಾವಿ- ಬೆಳಗಾವಿಗೆ ಇನ್ಸೂಲಿನ್ ಮರೆತು ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇನ್ಸುಲಿನ್ ಗಾಗಿ ಗಂಟೆಗಳ ಕಾಲ ಕಾಯ್ದು ಕುಳಿತ ಘಟನೆ ನಡೆಯಿತು. ಮಧುಮೇಹ ಕಾಯಿಲೆಗಾಗಿ ಇನ್ಸುಲಿನ್ ತಗೆದುಕೊಳ್ಳುತ್ತಿರುವ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಇನ್ಸುಲಿನ್ ಮರೆತು ಬೆಳಗಾವಿಗೆ ಬಂದಿದ್ದರು. ಇನ್ಸುಲಿನ್‌ಗಾಗಿ ಒಂದು ಗಂಟೆ ಕಾಯಬೇಕಾಯಿತು. ಬೆಳಗಾವಿ ನಗರದಿಂದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಇನ್ಸುಲಿನ್ ತಂದು ಕೊಟ್ಟ ಬಳಿಕ ಸಿದ್ರಾಮಯ್ಯ ವಿಮಾನ ನಿಲ್ಧಾಣದಿಂದ ಹೊರಕ್ಕೆ ಬಂದರು.ಸಿದ್ದರಾಮಯ್ಯ ಗೆ ಇನ್ಸುಲಿನ್ …

Read More »

ಗಣೇಶ ಹುಕ್ಕೇರಿ,ಅಣ್ಣಾಸಾಬ ಜೊಲ್ಲೆ ನಡುವೆ ಬಿಗ್ ಫೈಟ್….!!!

ಬೆಳಗಾವಿ-ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ,ನಿರ್ದೇಶಕರ ಸ್ಥಾನಕ್ಕೆ ಅಕ್ಟೋಬರ್ 22 ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ‌ ಬೆಳಗಾವಿ ಜಿಲ್ಲೆಯ ಹತ್ತು ತಾಲ್ಲೂಕುಗಳಿಂದ ತಲಾ ಒಬ್ಬರು ನಿರ್ದೇಶಕರು ಚುನಾಯಿತರಾಗುತ್ತಾರೆ,ಚಿಕ್ಕೋಡಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು,ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ,ಮತ್ತು ಶಾಸಕ ಗಣೇಶ್ ಹುಕ್ಕೇರಿ ನಡುವೆ ಬಿಗ್ ಫೈಟ್ ನಡೆಯಲಿದೆ. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಡಿಸಿಸಿ ಬ್ಯಾಂಕಿನ ಹಾಲಿ ನಿರ್ದೇಶಕರಾಗಿದ್ದಾರೆ, ಈ ಸ್ಥಾನ ಗಿಟ್ಟಿಸಿಕೊಳ್ಳಲು …

Read More »

ಆತ ಹೋಗಿದ್ದು ಕುರಿ ಮೇಯಿಸಲು ಆದ್ರೆ, ಅಲ್ಲಿ ಆಗಿದ್ದೇ ಬೇರೆ…..

ಬೆಳಗಾವಿ- ಕುರಿ ಮೇಯಿಸಲು ಹೋಗಿದ್ದ ಯುವಕನೊಬ್ಬ ಕೃಷಿ ಹೊಂಡದಲ್ಲಿ ಕಾಲು ಜಾರಿ ನೀರು ಪಾಲಾದ ಘಟನೆ ಸುಳಗಾ,(ಹಿಂಡಲಗಾ) ಗ್ರಾಮದಲ್ಲಿ ನಡೆದಿದೆ. ಕುರಿ ಮೇಯಿಸಲು ತೆರಳಿದ್ದ 32 ವರ್ಷದ ಯುವಕ ವಿಠ್ಠಲ ಅನಗೋಳಕರ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಈಜಲು ಬಾರದೇ ಇರುವದರಿಂದ ಕೃಷಿ ಹೊಂಡದಲ್ಲೇ ಮೃತಪಟ್ಟಿದ್ದಾನೆ. ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Read More »