Breaking News

LOCAL NEWS

ಹತ್ತು ದಿನದಲ್ಲಿ 2600 ರೈಲು ಬಿಡ್ತಾರಂತೆ…36 ಲಕ್ಷ ಕಾರ್ಮಿಕರನ್ನು, ತವರೂರಿಗೆ ಕಳಸ್ತಾರಂತೆ….!!!

ಬೆಳಗಾವಿ- ಮುಂದಿನ ಹತ್ತು ದಿನಗಳಲ್ಲಿ ದೇಶಾದ್ಯಂತ 2600 ರೈಲುಗಳ ಸಂಚಾರ ಮಾಡಲಿವೆ ಎಂದು, ಬೆಳಗಾವಿಯಲ್ಲಿ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ ಬೆಳಗಾವಿಯ ಗೃಹ ಕಚೇರಿಯಲ್ಲಿ, ಮಾದ್ಯಮಗಳ ಜೊತೆ ಮಾತನಾಡಿದ ಅವರು 10 ದಿನಗಳಲ್ಲಿ 36 ಲಕ್ಷ ಶ್ರಮಿಕರನ್ನು ಅವರವರ ಸ್ಥಳಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 31 ಲಕ್ಷ ಶ್ರಮಿಕರು ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡಲಾಗಿದೆ,ರಾಜ್ಯಗಳು ಸಹಕಾರ ಕೇಳಿದ್ರೆ, ಸಮ್ಮತಿಸಿದ್ರೆ ಆಯಾ ರಾಜ್ಯದೊಳಗೆ ರೈಲುಗಳ ಸಂಚಾರಕ್ಕೆ …

Read More »

ಪತಿಗೆ ಪೆರೋಲ್, ಪತ್ನಿ ಕ್ವಾರಂಟೈನ್ ನಿಂದ ಎಸ್ಕೇಪ್ ,ಅನಂತರ ಅವಾಂತರ….!!!

ಬೆಳಗಾವಿ: ಇನ್ಸ್ಟಿಟ್ಯೂಷನಲ್ ಕ್ವಾರಂಟೈನಲ್ಲಿದ್ದ ಮಹಿಳೆ ಹಾಸ್ಟೆಲ್ ನಿಂದ ಎಸ್ಕೇಪ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಪೆರೋಲ್ ಮೇಲೆ ಜೈಲಿನಿಂದ ಬಂದಿದ್ದ ಗಂಡನ ಜತೆ ಮಹಿಳೆ ಎಸ್ಕೇಪ್‌ ಆಗಿರಬೇಕು ಅಂತಾ ಪೋಲೀಸರು ಶಂಕೆ ವ್ಯಕ್ತಪಡಿಸಿದ್ದರು. ಗೋಕಾಕ್ ‌ತಾಲೂಕಿನ ಪಂಜಾನಟ್ಟಿ ಗ್ರಾಮದ‌ ಮಹಿಳೆ ಮಹಾರಾಷ್ಟ್ರದ ನೂಲ್ ಗ್ರಾಮದಿಂದ ಬಂದಿದ್ದರು. ಮಹಾರಾಷ್ಟ್ರದಿಂದ ಬಂದಿದಕ್ಕೆ ಪಂಜಾನಟ್ಟಿ ಗ್ರಾಮ ಪ್ರವೇಶಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಗೋಕಾಕ ನಗರದ ಆಶ್ರಯ …

Read More »

ಸೋಮವಾರ ರಮಜಾನ್ ಈದ್ ಆಚರಿಸಲು ನಿರ್ಧಾರ

ಬೆಳಗಾವಿ- ಪವಿತ್ರ ರಮಜಾನ್ ಈದ್ ಹಬ್ಬವನ್ನು ಸೋಮವಾರ ಆಚರಿಸಲು ಬೆಳಗಾವಿಯ ಅಂಜುಮನ್ ಇಸ್ಲಾಂ ಮತ್ತು ಚಾಂದ್ ಕಮೀಟಿ ನಿರ್ಧರಿಸಿದೆ ಇಂದು ದೇಶದ ಯಾವ ಭಾಗದಲ್ಲೂ ಚಂದ್ರ ದರ್ಶನವಾಗಿಲ್ಲ ಹೀಗಾಗಿ ರಮಜಾನ್ ಈದ್ ಸೋಮವಾರ ಆಚರರಿಸಲು ನಿರ್ಣಯಿಸಲಾಗಿದೆ ಬೆಳಗಾವಿಯ ಅಂಜುಮನ್ ಸಂಸ್ಥೆಯ ಅಧ್ಯಕ್ಷ ರಾಜು ಸೇಠ ಅಧ್ಯಕ್ಷತೆಯಲ್ಲಿ ನಡೆದ ಚಾಂದ್ ಕಮೀಟಿ ಇಂದು ಸಂಜೆ ಅಂಜುಮನ್ ಹಾಲ್ ನಲ್ಲಿ ಸಭೆ ಸೇರಿ ಈದ ಆಚರಣೆಯ ಕುರಿತು ಸಮಾಲೋಚನೆ ನಡೆಸಿತು .ಚಂದ್ರ ದರ್ಶನದ …

Read More »

ನಕಲಿ ಬೀಜ..ನಕಲಿ ಗೊಬ್ಬರ ಮಾರಾಟ ಆಗಾತೈತಿ ಹುಷಾರ್…!

ಕೃಷಿ ಪರಿಕರ ಮಾರಾಟಮಳಿಗೆಗಳ ತಪಾಸಣೆ; ಕಳಪೆ ರಸಗೊಬ್ಬರ ಮುಟ್ಟುಗೋಲು ——————————————————————- ಜಿಲ್ಲೆಯ 112 ಮಳಿಗೆಗಳಿಗೆ ನೋಟಿಸ್: ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಬೆಳಗಾವಿ,-ಮಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು, ರೈತಾಪಿ ವರ್ಗಕ್ಕೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳು ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಕೃಷಿ ಇಲಾಖೆ ಹಾಗೂ ಜಾಗೃತ ಕೋಶದ ಒಟ್ಟು 65 ಅಧಿಕಾರಿಗಳನ್ನೊಳಗೊಂಡ 19 ತಂಡಗಳು ಜಿಲ್ಲೆಯ ಎಲ್ಲಾ ತಾಲುಕುಗಳಲ್ಲಿ ಕೃಷಿ ಪರಿಕರ ಮಾರಾಟಮಳಿಗೆಗಳ …

Read More »

ಇಂದು ಸೊಂಕು ಪತ್ತೆಯಾದ ಗರ್ಭಿಣಿ ಮಹಿಳೆಯ ಟ್ರಾವೆಲ್ ಹಿಸ್ಟರಿ ಇಲ್ಲಿದೆ ನೋಡಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು 27 ವರ್ಷದ ಗರ್ಭಿಣಿ P-1814ಗೆ ಸೋಂಕು ಪತ್ತೆಯಾಗಿದ್ದು ಈ ಮಹಿಳೆ ಮೇ 11ರಂದು ತಂದೆ ಮತ್ತು ಇಬ್ಬರ ಮಕ್ಕಳ ಜೊತೆ ಶಿವಪೇಟೆಗೆ ಆಗಮಿಸಿದ್ದಳು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮಕ್ಕೆ ಮೇ 11 ರಂದು ಆಗಮಿಸಿದ್ದರು ವಿಜಯಪುರ ಜಿಲ್ಲೆ ಸಿಂದಗಿಯ ಮಹಿಳೆಯನ್ನು ಶಿವಪೇಟೆಯ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು, ಸಂಬಂಧಿಯ ಮದುವೆಗೆಂದು ತಂದೆ ಜೊತೆ ಮುಂಬೈಗೆ ತೆರಳಿದ್ದ ಗರ್ಭಿಣಿ, ಮೇ 11 ರಂದು ಮುಂಬೈನಿಂದ …

Read More »

ಬೆಳಗಾವಿ ಜಿಲ್ಲೆಗೆ ಮತ್ತೆ ಶಾಕ್, ಇಂದು ಮೊತ್ತೊಂದು ಸೊಂಕಿತ ಪತ್ತೆ

ಬೆಳಗಾವಿ- ಇಂದು ಬೆಳಗಾವಿಗೆ ಶನಿಕಾಟ ಯಾಕಂದ್ರೆ ಇಂದು ಶನಿವಾರದ ಮಿಡ್ ಡೇ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯ 27ವರ್ಷದ ಮಹಿಳೆಗೆ  ಕೊರೋನಾ ಸೊಂಕು ಇರುವದು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ತಾಂಡವ ಮುಂದುವರೆದಿದ್ದು ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಬೆಳಗಾವಿ ಜಿಲ್ಲೆಗೆ,ತಬ್ಲೀಗ್,ಅಜ್ಮೇರ್ ಹಾಗು ಮುಂಬಯಿ ನಂಟಿನಿಂದ ಇವತ್ತಿನವರೆಗೆ ಸೊಂಕಿತರು  ಪತ್ತೆಯಾಗಿದ್ದಾರೆ . ಇವವತ್ತು ಸೊಂಕು ಪತ್ತೆಯಾದ ಮಹಿಳೆ ಮುಂಬಯಿ ರಿಟರ್ನ ಎಂದು ತಿಳಿದು …

Read More »

ಇಂದು ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಬೆಳಗಾವಿ ಮಾರ್ಕೆಟ್ ಬಂದ್

ಬೆಳಗಾವಿ- ಇಂದು ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಬೆಳಗಾವಿಯಲ್ಲಿ ಕರ್ಫ್ಯು ಮಾದರಿಯ ಲಾಕ್ ಡೌನ್ ಇರುತ್ತದೆ ಎಂದು ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ. ಇಂದು ಶನಿವಾರ ಸಂಜೆ 7 ಗಂಟೆಯಿಂದ ಬೆಳಗಾವಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಇರುತ್ತದೆ. ರವಿವಾರ ಫುಲ್ ಡೇ ಬೆಳಗಾವಿ ಮಾರುಕಟ್ಟೆ ಬಂದ್ ಇರುತ್ತದೆ.ಸೋಮವಾರ ಬೆಳಿಗ್ಗೆ 7 ಗಂಟೆಗೆ ಬೆಳಗಾವಿ ಮಾರುಕಟ್ಟೆ ಆರಂಭವಾಗುತ್ತದೆ ಮೇಡಿಕಲ್ ಎಮರ್ಜನ್ಸಿ ಬಿಟ್ರೆ ಬೇರೆ ಯಾವ …

Read More »

ಲಾಕ್ ಡೌನ್ ಸಡಲಿಕೆ ನಂತರ ಬೆಂಗಳೂರಿನಿಂದ ಬೆಳಗಾವಿಗೆ ಬಂತು ಸೂಪರ್ ಫಾಸ್ಟ್ ರೈಲು

ಬೆಳಗಾವಿ-ಲಾಕ್ ಡೌನ್ ಮಧ್ಯದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನವಿ ಮೇರೆಗೆ ,ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಯವರ ಇಚ್ಛಾಶಕ್ತಿಯ ಪರಿಣಾಮವಾಗಿ ಬೆಂಗಳೂರಿಂದ ವಿಶೇಷ ರೈಲು ಇಂದು ಸಂಜೆ ಬರೊಬ್ಬರಿ 7 ಗಂಟೆಗೆ ಬೆಳಗಾವಿಗೆ ತಲುಪಿತು. ಬೆಂಗಳೂರು ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸಪ್ರೆಸ್ ರೈಲು ಬೆಳಗಾವಿಗೆ ಆಗಮಿಸಿದ್ದು ಬೆಂಗಳೂರಿಂದ ಬೆಳಗಾವಿಗೆ ಆಗಮಿಸಿದ 171 ಪ್ರಯಾಣಿಕರು ಆಗಮಿಸಿದ್ದಾರೆ. ಲಾಕ್ ಡೌನ್ ಸಡಿಲಿಕೆ ಬಳಿಕ ಸಂಚಾರ ಆರಂಭಿಸಿದ ಮೊದಲ ರೈಲು ಇದಾಗಿದ್ದು …

Read More »

ಬೆಳಗಾವಿ ಜಿಲ್ಲಾಡಳಿತಕ್ಕೆ ಹೌದ್ದೋ ಹುಲಿಯಾ ಎಂದ ಗುಪ್ತ ವಾರ್ತೆ….!!

ಬೆಳಗಾವಿ-ಕೊರೊನಾ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಗಡಿಯಲ್ಲಿ ಸುಸಜ್ಜಿತ ಚೆಕ್ ಪೋಸ್ಟ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಪ್ರಯಾಣಿಕರ ನೋಂದಣಿ ಪ್ರಕ್ರಿಯೆಯ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿರುವ ಜಿಲ್ಲಾಡಳಿತದ ಬಗ್ಗೆ ಗುಪ್ತವಾರ್ತೆಯ ಹೆಚ್ಚುವರಿ ಆರಕ್ಷಕ ಮಹಾನಿರೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಅಭಿನಂದನಾ ಪತ್ರ ಬರೆದಿದ್ದಾರೆ ವಿಶೇಷವಾಗಿ ನಿಪ್ಪಾಣಿ ಚೆಕ್ ಪೋಸ್ಟ ನಲ್ಲಿ ಮಾಡಿರುವ ಅತ್ಯುತಮ ವ್ಯೆವಸ್ಥೆಯ ಕುರಿತು ಗುಪ್ತ ವಾರ್ತೆ ಮೆಚ್ಚುಗೆ ವ್ಯೆಕ್ತ ಪಡಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಅಭಿನಂಧನೆ ಸಲ್ಲಿಸಿ ಪತ್ರ …

Read More »

ಬೆಳಗಾವಿಗೆ ಮತ್ತೆ ಶಾಕ್ ಇಂದು ಮತ್ತೊಂದು ಪಾಸಿಟೀವ್ ಕೇಸ್ ಪತ್ತೆ

ಬೆಳಗಾವಿ ಇಂದು ಬೆಳಗಾವಿಯಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ 126 ಕ್ಕೆ ತಲುಪಿದೆ. ಜಾರ್ಖಂಡ್‌ನಿಂದ ಬೆಳಗಾವಿ ಜಿಲ್ಲೆಗೆ ಮರಳಿದ್ದ ಮತ್ತೋರ್ವ ವೃದ್ಧನಿಗೆ ಕೊರೊನಾ ಪತ್ತೆಯಾಗಿದೆಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 126ಕ್ಕೇರಿಕೆ   ಜಾರ್ಖಂಡ್‌ನಿಂದ ಮರಳಿದ್ದ15 ಜನರ ಪೈಕಿ ನಿನ್ನೆ ಮೂವರಲ್ಲಿ ಕೊರೊನಾ ದೃಢವಾಗಿತ್ತು ಇಂದು ಮತ್ತೆ ಓರ್ವ ವೃದ್ಧನಲ್ಲಿ ಕೊರೊನಾ ಸೋಂಕು ದೃಢ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ …

Read More »

ಆಶಾ ಕಾರ್ಯಕರ್ತೆಯರಿಗೆ ಮಹೇಶ ತಮ್ಮಣ್ಣವರ ನೆರವು…..

ರಾಯಬಾಗ: ಮಹಾಮಾರಿ ಕರೋನಾ ವೈರಸ್ ದೇಶಾದ್ಯಂತ ಹರಡುತ್ತಿರುವ ಹಿನ್ನೆಲೆ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ ಆಶಾ ಕಾರ್ಯಕರ್ತರನ್ನು ಮೆಚ್ಚಲೆ ಬೇಕು.‌ಅವರಿಗೆ ಧೈರ್ಯ ತುಂಬುವ ಕೆಲಸ‌ ಎಂದು ಯುವ ಧುರೀಣ ಮಹೇಶ ತಮ್ಮಣ್ಣವರ ಹೇಳಿದರು. ಕಲ್ಲೋಳಿಕರ ಪ್ರತಿಷ್ಠಾನದ ವತಿಯಿಂದ ತಾಲೂಕಿನ‌ ನಸಲಾಪುರ, ನಂದಿ‌ಕುರಳಿ ಗ್ರಾಮದ ಆಶಾ ಕಾರ್ಯಕರ್ತರಿಗೆ ಹಾಗೂ ಬಡ ಕುಟುಂಬಗಳಿಗೆ ಸುಮಾರು ೨೦೦೦ ಕ್ಕಿಂತ ಅಧಿಕ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ದೇಶದಲ್ಲಿ ಶೇ.೪೦ ರಷ್ಟು …

Read More »

ಗೋಕಾಕ್ ಕ್ಷೇತ್ರದ ಹಳ್ಳಿ,ಹಳ್ಳಿ… ಗಲ್ಲಿ ಗಲ್ಲಿ…ಗಳಲ್ಲಿ ಇಂದಿನಿಂದ “ಅಮರನಾಥ” ಯಾತ್ರೆ…..!

ವಿ ಬೆಳಗಾವಿ- ಗೋಕಾಕ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲಿ ಅಮರನಾಥ ಯಾತ್ರೆ ಈ ಯಾತ್ರೆ,ಕ್ಷೇತ್ರದ ಜನರಿಗೆ ಸಹಾಯ ಮಾಡುವ ಯಾತ್ರೆ,ಕ್ಷೇತ್ರದ ಮನೆ,ಮನೆಗೂ ತಲುಪುವ ಯಾತ್ರೆ,ಕ್ಷೇತ್ರದ ಜನರಿಗೆ ಧೈರ್ಯ ತುಂಬುವ ಯಾತ್ರೆ,ಈ ಅರ್ಥಪೂರ್ಣ,ಅಂತಃಕರಣದ ಯಾತ್ರೆ ಗೋಕಾಕ ಪಟ್ಟಣದಿಂದ ಶುಭ ಶುಕ್ರವಾರ ಆರಂಭವಾಗಲಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಪುತ್ರ ಅಮರನಾಥ ಅವರು,ಗೋಕಾಕ್ ಕ್ಷೇತ್ರದ ಜನರಿಗೆ ಕಿಟ್ ವಿತರಣೆ ಮಾಡುವ ಜವಾಬ್ದಾರಿ ವಹಿಸಿಕೊಂಡು,ಐವತ್ತು ಸಾವಿರಕ್ಕೂ ಹೆಚ್ಚು ಕಿಟ್ ರೆಡಿ ಮಾಡಿಕೊಂಡು ಇಂದು …

Read More »

PM ಕೇರ್ ಗೆ ಒಂದು ಲಕ್ಷ ₹ ನೀಡಿದ ಬೆಳಗಾವಿಯ ಅಜ್ಜಿ

ಕಳೆದ 20ವರ್ಷಗಳಿಂದ ದೈಹಿಕ ಅಂಗವಿಕಲತೆಯಿಂದ ಬಳಲುತ್ತಿರುವ ಸ್ವಾಧ್ಯಾಯ ವಿದ್ಯಾ ಕೇಂದ್ರದ ವಿಶ್ರಾಂತ ಗ್ರಂಥಪಾಲಕಿಯಾದ ಟಿಳಕವಾಡಿ ನಿವಾಸಿಯಾದ ನಳಿನಿ ಕೆಂಭಾವಿ ಅವರು ಕೊರೋನಾ ಮಹಾಮಾರಿಯಿಂದ ಜನರ ಸಂಕಷ್ಟಗಳಿಗೆ ಸ್ಪಂದಿಸಲು PMCare fund ಗೆ ರೂ.1,00,000 ಹಣವನ್ನು ದೇಣಿಗೆ ನೀಡಿ ಆದರ್ಶಪ್ರಾಯರಾಗಿರುವರನ್ನು ಮಾನ್ಯ ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ಶ್ರೀ ಸುರೇಶ ಅಂಗಡಿ ಅವರು ಸ್ವತಃ ಅವರ ಮನೆಗೆ ಭೇಟಿ ನೀಡಿ ಅವರ ಕೊಡುಗೆಗೆ ಶಾಘ್ಲೀಸಿ ಧನ್ಯವಾದಗಳನ್ನು ಅರ್ಪಿಸಿದರು. ಸ್ವಾವಲಂಬಿ ಭಾರತಕ್ಕೆ ಇಂತಹ …

Read More »

ಬೆಳಗಾವಿಯಲ್ಲಿ ಇಂದು ಮತ್ತೆ ಒಬ್ಬ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, -ಕೋವಿಡ್-೧೯ ಸೋಂಕು ತಗುಲಿದ್ದ ಹಿರೇಬಾಗೇವಾಡಿಯ ವ್ಯಕ್ತಿಯೊಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ವ್ಯಕ್ತಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಹಿರೇಬಾಗೇವಾಡಿ ಪಿ-483 ***

Read More »

ಇಂದು ಪತ್ತೆಯಾದ 9 ಜನ ಸೊಂಕಿತರು ಎಲ್ಲಿಂದ ಬಂದವರು,ಯಾವ ಊರಿನವರು,ವಿವರ ಇಲ್ಲಿದೆ ನೋಡಿ

ಇಂದು ಪತ್ತೆಯಾದ 9 ಜನ ಎಲ್ಲಿಂದ ಬಂದವರು,ಯಾವ ಊರಿನವರು,ವಿವರ ಇಲ್ಲಿದೆ ನೋಡಿ ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು 9 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಇಂದು ಪತ್ತೆಯಾದ 9 ಜನ ಎಲ್ಲಿಂದ ಬಂದವರು ಯಾವ,ಯಾವ ಊರಿನವರು ಮಾಹಿತಿ ಟ್ರಾವೆಲ್ ಹಿಸ್ಟರಿ ಇಲ್ಲಿದೆ ನೋಡಿ‌ ರಾಮದುರ್ಗ ತಾಲ್ಲೂಕಿನ ಕಲ್ಲೂರ ಗ್ರಾಮದ ಏಳು ತಿಂಗಳ ಹೆಣ್ಣು ಮಗುವಿನಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು P-1496 – 7 ತಿಂಗಳ ಹೆಣ್ಣು ಮಗುವಿಗೆ ಮಗುವಿಗೆ ಸೊಂಕು …

Read More »