Breaking News

LOCAL NEWS

ಬೆಳಗಾವಿಯಲ್ಲಿ ಕೊರೋನಾ ಸೊಂಕಿನ ಮಹಾಸ್ಪೋಟ.ಇಂದು ಗುರುವಾರ ಒಂದೇ ದಿನ 14 ಸೊಂಕಿತರ ಪತ್ತೆ 69 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿ–ಬೆಳಗಾವಿ ಜಿಲ್ಲೆಯಲ್ಲಿ ಇಂದು ಗುರುವಾರ ಕೊರೋನಾ ಸೊಂಕು ದೊಡ್ಡ ಆಘಾತ ನೀಡಿದೆ.ಇಂದು ಒಂದೇ ದಿನ  14 ಜನ .ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ69 ಕ್ಕೆ     ತಲುಪಿದೆ. ಕೊರೋನಾ ಸೊಂಕು ಗಡಿನಾಡು ಗುಡಿ ಬೆಳಗಾವಿಯಲ್ಲಿ ತಾಂಡವಾಡುತ್ತಿದೆ ದಿನದಿಂದ ದಿನಕ್ಕೆ ಕೊರೋನಾ ಸೊಂಕು ತನ್ನ ಕದಂಬಬಾಹು ಚಾಚಿದೆ ಹಿರೇಬಾಗೇವಾಡಿಯಲ್ಲಿ ಇಂದು 12  ಸೊಂಕಿತರು ಪತ್ತೆಯಾಗಿದ್ದು ಹಿರೇಬಾಗೇವಾಡಿ ಯಲ್ಲಿ ಸೊಂಕಿತರ ಸಂಖ್ಯೆ37 ಕ್ಜೆ    ಏರಿದಂತಾಗಿದೆ. ಸಂಕೇಶ್ವರದಲ್ಲಿ  ಮತ್ತೆ ಇಬ್ಬರು  …

Read More »

ಕೆಲವು ದಿನಗಳ ಗೆಳೆಯ ‘ಕೊರೊನಾ’ ಗಿಳಿ ಇನ್ನಿಲ್ಲ..!

  ಕೆಲವು ದಿನಗಳ ಗೆಳೆಯ ಗಿಳಿ ಇಂದು ಸಂಜೆ ಮೃತಪಟ್ಟಿದೆ. ಕೆಲ ದಿನಗಳ ಹಿಂದೆ ಬೆಳಗಾವಿಯ ಸರ್ಕ್ಯೂಟ್ ಹೌಸ್ ನಲ್ಲಿ ಮರದ ಮೇಲಿಂದ ಗಿಳಿಯೊಂದು ಬಿದ್ದಿತ್ತು. ಮೇಲಿಂದ ಬಿದ್ದು ಕಾಲು ಮುರಿದುಕೊಂಡಿದ್ದ ಮುದ್ದಾದ ಗಿಳಿಗೆ ಮಾಧ್ಯಮ ಮಿತ್ರರಾದ ನಮ್ಮ ವಿಡಿಯೋ ಜರ್ನಲಿಸ್ಟ್ ಪ್ರತಾಪ್, ಪ್ರವೀಣ, ವಿನಾಯಕ ರಕ್ಷಣೆ ನೀಡಿದ್ದರು. ಕೆಲಸ ಒತ್ತಡದ ನಡುವೆ ಗಿಳಿಗೆ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಸಹ ಕೊಡಿಸಿದ್ರು. ನಂತರ ಬೆಳಗ್ಗೆ, ಸಂಜೆ ಅದಕ್ಕೆ …

Read More »

ಯಕ್ಸಂಬಾ CRPF ಯೋಧನ ಗಲಾಟೆ ಪ್ರಕರಣ,ಸದಲಗಾ ಪಿ ಎಸ್ಐ ಸ್ಸಪೆಂಡ್

ಬೆಳಗಾವಿ- ಸಿಆರ್‌ಪಿಎಪ್ ಯೋಧ ಸಚಿನ್ ಮೇಲೆ ಕೇಸ್ ದಾಖಲು ಮಾಡಿದ ಪ್ರಕರಣಕ್ಕೆ ಸಮಂಧಿಸಿಂತೆ ಕರ್ತವ್ಯದಲ್ಲಿ ಲೋಪ ಆರೋಪದಡಿ ಸದಲಗಾ ಸಬ್ ಇನ್ಸ್ಪೆಕ್ಟರ್ ಸಸ್ಪೆಂಡ್ ಮಾಡಲಾಗಿದೆ. ಯೋಧನ ಗಲಾಟೆ ಪ್ರಕರಣದ ಸಮಸ್ಯೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆ ಪಿಎಸ್ಐ ಅನಿಲ ಕುಮಾರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಹೇಳಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ. ಯೋಧ ಸಚಿನ್ ಬಿಡುಗಡೆಯಾದ ಬಳಿಕ ಆತನಿಂದ ಹೇಳಿಕೆ ಪಡೆದಿದ್ದು. …

Read More »

ಬುಧವಾರ ಸಂಜೆಯ ಹೆಲ್ತ್ ಬುಲಿಟೀನ್ ,ಬೆಳಗಾವಿಗೆ ಸಮಾಧಾನ

ಬೆಳಗಾವಿ- ಬುಧವಾರ ಸಂಜೆಯ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದೆ ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಪ್ರಕರಣ ಪತ್ತೆಯಾಗಿಲ್ಲ ಬುಧಾವಾರ ಸಂಜೆಯ ರಿಪೋರ್ಟ್ ಬೆಳಗಾವಿ ಜಿಲ್ಲೆಗೆ ಸಮಾಧಾನ ತಂದಿದೆ‌ ಬುಧಾವರಾ ಬೆಳಗಿನ ಹೆಲ್ತ್ ಬುಲಿಟೀನ್ ನಲ್ಲಿ ಸಂಕೇಶ್ವರದ ಹನ್ನೆರಡು ವರ್ಷದ ಬಾಲಕನಿಗೆ ಸುಂಕು ಇರುವದು ದೃಡವಾಗಿತ್ತು ಸಂಜೆಯ ಬುಲಿಟೀನ್ ಜಿಲ್ಲೆಗೆ ರಿಲ್ಯಾಕ್ಸ್ ತಂದಿದೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 55 ಇದೆ

Read More »

ಬೆಳಗಾವಿ ಜಿಲ್ಲೆಯ 12 ವರ್ಷದ ಬಾಲಕನಿಗೆ ಕೊರೋನಾ ಸೊಂಕು..ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 55 ಕ್ಕೆ ಏರಿಕೆ

ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಸೊಂಕಿತನ ಸಂಪರ್ಕಕ್ಕೆ ಬಂದ ಹನ್ನೆರಡು ವರ್ಷದ ಬಾಲಕನಿಗೆ ಕೊರೋನಾ ಸೊಂಕು ಇರುವುದು ದೃಡವಾಗಿದೆ. ಬುಧವಾರ ಬೆಳಗಿನ ಹೆಲ್ತ್ ಬುಲಿಟೀನ್ ಬೆಳಗಾವಿ ಪಾಲಿಗೆ ಆಘಾತ ನೀಡಿದೆ .ಬುಲಿಟೀನ್ ನಲ್ಲಿ ಸೊಂಕಿತ ಬಾಲಕ ಹುಕ್ಕೇರಿ ಪಟ್ಟಣಕ್ಕೆ ಸೇರಿದವನು ಎಂದು ನಮೂದಿಸಲಾಗಿದೆ.ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 55 ಕ್ಕೇರಿದೆ.

Read More »

ಟೋಲ್ ವಿನಾಯಿತಿ ನೀಡಲು ಕೇಂದ್ರಕ್ಕೆ ಡಿಸಿಎಂ ಸವದಿ ಮನವಿ

ಬೆಂಗಳೂರು-    ಲಾಕಡೌನಿನ್ ಪರಿಣಾಮವಾಗಿ ಕರ್ನಾಟಕ ಸರ್ಕಾರದ ಸಾರಿಗೆ ಕ್ಷೇತ್ರಕ್ಕೆ ತೀವ್ರ ನಷ್ಟವಾಗುತ್ತಿರುವ ದರಿಂದ ಮುಂದಿನ ಆರು ತಿಂಗಳುಗಳ ಕಾಲ ಸಾರಿಗೆ ಸಂಸ್ಥೆಯ ಕೆ.ಎಸ್.ಆರ್. ಟಿ. ಸಿ ಬಸ್ಸುಗಳಿಗೆ ಟೋಲ್ ಗಳಲ್ಲಿ ವಿನಾಯಿತಿ ನೀಡಬೇಕೆಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರು ಕೇಂದ್ರ ಭೂ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದರು. ಶ್ರೀ ನಿತಿನ್ ಗಡ್ಕರಿ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಇಂದು …

Read More »

ಕೋವಿಡ್-೧೯: ಮತ್ತೇ ಒಬ್ಬ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ,: ಕೋವಿಡ್-೧೯ ಸೋಂಕು ತಗುಲಿದ್ದ ಮತ್ತೊಬ್ಬ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಬಿಮ್ಸ್ ನಿರ್ದೇಶಕರಾದ ಡಾ.ವಿನಯ ದಾಸ್ತಿಕೊಪ್ಪ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದ ಕಸಾಯಿಗಲ್ಲಿಯ ೨೬ ವರ್ಷದ ವ್ಯಕ್ತಿ(ಪಿ-೧೨೭)ಯನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಇವರು ಮಾ.೩೧ ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು ೫೪ ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ …

Read More »

ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್‌ಗೆ ಜಾಮೀನು ಮಂಜೂರು

ಬೆಳಗಾವಿ-ಬೆಳಗಾವಿ- ಇತ್ತೀಚಿಗೆ ಯಕ್ಸಂಬಾದಲ್ಲಿ ಇಬ್ಬರು ಪೋಲೀಸ್ ಪೇದೆಗಳ ಜೊತೆ ನಡೆದ ಗಲಾಟೆಗೆ ಸಮಂಧಿಸಿದಂತೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಿ ಆ ಪಿ ಎಫ್ ಯೋಧನಿಗೆ ಜಾಮೀನು ಸಿಕ್ಕಿದೆ. *ಚಿಕ್ಕೋಡಿ 1ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯ 1ನೇ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ನೀಡಿದೆ. ಮಾಸ್ಕ್ ಹಾಕದ ವಿಚಾರಕ್ಕೆ ಪೇದೆ – ಸಿಆರ್‌ಪಿಎಫ್ ಯೋಧನ ಮಧ್ಯೆ ಗಲಾಟೆ ನಡೆದಿತ್ತು ಕರ್ತವ್ಯನಿರತ ಪೇದೆ ಮೇಲೆ ಹಲ್ಲೆ …

Read More »

ಪಿಎಂ-ಸಿಎಂ ಪರಿಹಾರ ನಿಧಿಗೆ 3.33 ಲಕ್ಷ ದೇಣಿಗೆ ನೀಡಿದ ನಿವೃತ್ತ ಆರೋಗ್ಯ ಮೇಲ್ವಿಚಾರಕ ಶಿವನಪ್ಪ

ಬೆಳಗಗಾವಿ, ಏ.: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಆರೋಗ್ಯ ಮೇಲ್ವಿಚಾರಕರಾದ ಶಿವನಪ್ಪ ಬಿ ಖಣಗಣ್ಣಿ ಅವರು ಕೋವಿಡ್ ನಿಯಂತ್ರಣಕ್ಕಾಗಿ ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಪ್ರತ್ಯೇಕವಾಗಿ 111000/- ರಂತೆ 222000/- ಗಳ ಚೆಕ್ ನ್ನು ಮಂಗಳವಾರ (ಏ.28) ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು. ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಚೆಕ್ ಸ್ವೀಕರಿಸಿದರು. ಆರೋಗ್ಯ ಇಲಾಖೆಯ ವಿಭಾಗೀಯ ಸಹ ನಿರ್ದೇಶಕರಾದ ಡಾ.ಅಪ್ಪಾಸಾಹೇಬ್ ನರಟ್ಟಿ, ಜಿಲ್ಲಾ ಆರೋಗ್ಯ ಮತ್ತು …

Read More »

ಬೆಳಗಾವಿ ಜಿಲ್ಲೆಗೆ ಶುಭ ಮಂಗಳ ಇಂದು ಪಾಸಿಟಿವ್ ಇಲ್ಲ..

ಬೆಳಗಾವಿ- ಇಂದು ಮಂಗಳವಾರ ಬೆಳಗಿನ ಹೆಲ್ತ್ ಬುಲಿಟೀನ್ ಬಿಡುಗಡೆ ಆಗಿದೆ,ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಪತ್ತೆಯಾಗಿಲ್ಲ ರಾಜ್ಯದ ವಿವಿಧ ಜಿಲ್ಲೆಗಳ ಎಂಟು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.ಆದ್ರೆ ಮಂಗಳವಾರ ಬೆಳಗಾವಿ ಜಿಲ್ಲೆಯ ಪಾಲಿಗೆ ಶುಭ ಮಂಗಳ ಸಂಜೆ ಐದು ಘಂಟೆಯ ನಂತರ ಸಂಜೆಯ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಲಿದೆ.

Read More »

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ….!!!!

ಬೆಳಗಾವಿ- ಯೋಧರು- ಪೋಲೀಸರು ಒಂದು ನಾಣ್ಯದ ಎರಡು ಮುಖಗಳು,ಇಬ್ಬರ ಸೇವೆಯೂ ಅಮೂಲ್ಯವಾಗಿದೆ. ಆಕಸ್ಮಿಕವಾಗಿ ನಡೆದ ಘಟನೆಯಿಂದ ಇಬ್ಬರ ನಡುವೆ ಸಂಘರ್ಷ ನಡೆಯುವದನ್ನು ಯಾರೂ ಬಯಸುವದಿಲ್ಲಿ.ಕರ್ತವ್ಯ ನಿಭಾಯಿಸುವ ಸಂಧರ್ಭದಲ್ಲಿ ಎಡವಟ್ಟು ಆಗಿದ್ದು ನಿಜ. ತಪ್ಪು ಯಾರದು? ಎನ್ನುವ ಚರ್ಚೆ ಬೇಡವೇ ಬೇಡ.ಕೈ..ಕೈ ಮಿಲಾಯಿಸುವ ಮೂಲಕ ಉದ್ಭವಿಸಿದ ಕಲಹ ಪರಸ್ಪರ ಕೈ ಜೋಡಿಸುವ ಮೂಲಕ ಈ ಕಲಹ ಅಂತ್ಯವಾಗಲಿ ಅನ್ನೋದು ಎಲ್ಲರ ಬಯಕೆ.. ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಒಬ್ಬ ಜಂಟಲ್ …

Read More »

984 ಶಂಕಿತರ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತ

ಬೆಳಗಾವಿ- ಬೆಳಗಾವಿ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದೆ ಬೆಳಗಾವಿ ಜಿಲ್ಲೆಯಲ್ಲಿ 47 ಕೊರೊನಾ ಪಾಸಿಟಿವ್ ಕೇಸ್ ಗಳು ಆಕ್ಟಿವ್ ಆಗಿವೆ 984 ಶಂಕಿತರ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತವಿದ್ದು ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 3630 ಜನರ ಮೇಲೆ‌ ನಿಗಾ ಇಡಲಾಗಿದೆ. ಒಟ್ಟು 1450 ಜನರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ . ಒಟ್ಟು 47 ಜನರಿಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 999 ಜನರಿಗೆ 14 …

Read More »

ಯಕ್ಸಂಬಾ ಪ್ರಕರಣ, ಡಿ ಜಿ ಪಿ ಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ ಸಿ ಆರ್ ಪಿ ಎಫ್ ,ಐ ಜಿ ಪಿ…..

ಚಿಕ್ಕೋಡಿಯ ಯಕ್ಸಂಬಾ ಹಲ್ಲೆ ಪ್ರಕರಣ ,ಸಿ ಆರ್ ಪಿ ಎಫ್ ತನಿಖೆಗೆ ಆಗ್ರಹ ಬೆಳಗಾವಿ – ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಸಿ ಆರ್ ಪಿ ಎಫ್ ಯೋಧನ ಮೇಲೆ ನಡೆದ ಹಲ್ಲೆ ,ಮತ್ತು ಬಂಧನದ ಪ್ರಕರಣಕ್ಕೆ ಸಮಂಧಿಸಿದಂತೆ ,ಕೂಡಲೇ ತನಿಖೆ ನಡೆಸುವಂತೆ ಸಿ ಆರ್ ಪಿ ಎಫ್ ,ಐಜಿಪಿ ಸಂಜಯ   ಅರೋರಾ ಕರ್ನಾಟಕದ ಡಿಜಿಪಿಗೆ ಪತ್ರ ಬರೆದಿದ್ದಾರೆ . ಚಿಕ್ಕೋಡಿಯ ಯಕ್ಸಂಬಾ ದಲ್ಲಿ ಈ …

Read More »

ಬೆಳಗಾವಿ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ಭರ್ಜರಿ ಶಿಖಾರಿ….!!!

ಲಾಕ್ ಡೌನ್: 794 ಅಬಕಾರಿ ದಾಳಿ- ಮದ್ಯ, ವಾಹನ ಸೇರಿದಂತೆ 1.10 ಕೋಟಿ ಮೌಲ್ಯದ ವಸ್ತು ಜಪ್ತಿ ಬೆಳಗಾವಿ, ಏ.೨೭(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಹೊರಡಿಸಿರುವುದರಿಂದ ಜಿಲ್ಲೆಯಾದ್ಯಂತ ಕಳ್ಳಭಟ್ಟ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಿಕೆಗಳು ನಡೆಯದಂತೆ ಅಬಕಾರಿ ತಂಡಗಳನ್ನು ರಚಿಸಿರುತ್ತದೆ. ದಿನಾಂಕ 24-03-2020 ರಿಂದ ಇಲ್ಲಿಯವರೆಗೆ ಅಕ್ರಮ ಕೇಂದ್ರಗಳಲ್ಲಿ …

Read More »

ಸೋಮವಾರ ಬೆಳಿಗ್ಗೆ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟೀವ್ ಇಲ್ಲ

ಬೆಳಗಾವಿ- ಸೋಮವಾರ ಬೆಳಗಿನ ರಾಜ್ಯ ಹೆಲ್ತ್ ಬುಲಿಟೀನ್ ಬಿಡುಗಡೆ ಆಗಿದ್ದು ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಪತ್ತೆಯಾಗಿಲ್ಲ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸೋಮವಾರ ಬೆಳಗಿನ ಹೆಲ್ತ ಬುಲಿಟೀನ್ ನಲ್ಲಿ ಒಟ್ಟು 8 ಪಾಸಿಟೀವ್ ಕೇಸ್ ಪತ್ತೆಯಾಗಿವೆ.

Read More »