Breaking News

LOCAL NEWS

ಬೆಳಗಾವಿಗೆ ನಿಜಾಮುದ್ದೀನ್ ನಂಟು,ಜಿಲ್ಲಾ ಆಸ್ಪತ್ರೆಯಲ್ಲಿ 62 ಜನರ ತಪಾಸಣೆ…

ಮರ್ಕಜ್ ಧಾರ್ಮಿಕ ಸಭೆ: ಜಿಲ್ಲೆಯ ೬೨ ಜನರಲ್ಲಿ ಸೋಂಕಿನ ಲಕ್ಷಣಗಳಿಲ್ಲ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಏ.೧(ಕರ್ನಾಟಕ ವಾರ್ತೆ): ದೆಹಲಿಯ ಮರ್ಕಜ್ ಧಾರ್ಮಿಕ ಸಭೆಗೆ ಹೋಗಿಬಂದಿರುವ ಬೆಳಗಾವಿ ಜಿಲ್ಲೆಯ ೬೨ ಜನರ ಮಾಹಿತಿ ಲಭಿಸಿದೆ. ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ೬೨ ಜನರ ಪೈಕಿ ಡಯಾಬಿಟಿಸ್, ಅಸ್ಥಮಾ, ಹೈಪರ್ ಟೆನ್ಷನ್ ಹೊಂದಿರುವ ಐವತ್ತಕ್ಕೂ ಅಧಿಕ ವಯೋಮಾನದ ೨೭ ಜನರನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ಗಂಟಲು …

Read More »

ಬೆಳಗಾವಿಯ, ಬಿಟಿ ಪಾಟೀಲ ಪರಿವಾರ…ಪಿಎಂ ನಿಧಿಗೆ ಕೋಟಿ ರೂ ಪರಿಹಾರ….!!!

  ಬೆಳಗಾವಿ- ಬೆಳಗಾವಿಯ ಪ್ಯಾಟ್ಸನ್ ಗ್ರೂಪ್ ಯಾರಿಗೆ ತಾನೇ ಗೊತ್ತಿಲ್ಲ, ಬಿಟಿ ಪಾಟೀಲ ಸಾರಥ್ಯದ ಈ ಗ್ರೂಪ್ ಈಗ ದೇಶದ ಗಮನ ಸೆಳೆದಿದೆ. ಬೆಳಗಾವಿಯ ಪ್ಯಾಟ್ಸನ್ ಗ್ರೂಪ್ ನ ಬಾಳಾಸಾಹೇಬ್ ಪಾಟೀಲ್ (ಬಿ.ಟಿ. ಪಾಟೀಲ) ಒಂದು ಕೋಟಿ ರೂ ಅನುದಾನವನ್ನು ಪ್ರಧಾನಂತ್ರಿಗಳ ಕೊರೋನಾ ಪರಿಹಾರ ನಿಧಿಗೆ ನೀಡುವ ಮೂಲಕ ಬೆಳಗಾವಿಯ ಗೌರವ ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಿ ಮಾನವೀಯತೆ ಮೆರೆದಿದ್ದಾರೆ. ಉತ್ತರ ಕರ್ನಾಟಕದಲ್ಲಿಯೇ ವ್ಯೆಯಕ್ತಿಕವಾಗಿ ಒಂದು ಕೋಟಿ ,ಅತೀ ಹೆಚ್ಚು ಧನ …

Read More »

ದಿಲ್ಲಿಯಿಂದ ಬೆಳಗಾವಿ ಹಳ್ಳಿಗೆ ಹಬ್ಬಿದ ಆತಂಕ….ಈ ಹಳ್ಳಿ ಈಗ ಸಂಪೂರ್ಣ ಲಾಕ್ ಡೌನ್….!!!

ಬೆಳಗಾವಿ-ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿ ಧರ್ಮಸಭೆಯ ಎಫೆಕ್ಟ್‌ಗೆ ಈಗ ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರ ಮೇಲೂ ಆಗಿದ್ದು ಈ ಹಳ್ಳಿ ಈಗ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ. ದೆಹಲಿಯ ಜಮಾತ್‌ನಲ್ಲಿ ಭಾಗವಹಿಸಿ ಬಂದವನ‌ ಜತೆ ಶಿಂಧಿಕುರಬೇಟನ 10 ಜನ‌ರು ಪ್ರಯಾಣಿಸಿದ ಮಾಹಿತಿ ಗ್ರಾಮದಲ್ಲಿ ಹರಿದಾಡುತ್ತಿದ್ದಂತೆಯೇಶಿಂಧಿಕುರಬೇಟ ಗ್ರಾಮದಲ್ಲಿ ಆ 10 ಜನರಿಗೂ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿದೆ. ಶಿಂಧಿಕುರಬೇಟನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 10 ಜನರಿಗೆ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿದೆ. ನಿನ್ನೆ ಮಧ್ಯರಾತ್ರಿ 1 …

Read More »

ಬೆಳಗಾವಿಗೆ ಬಂದವರು ಇಂಡೋನೆಷಿಯಾದವರು….!!!

ಬೆಳಗಾವಿ- ದೇಶಾದ್ಯಂತ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಕೊರೊನಾ ಸೊಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ. ಆದರೇ ಬೆಳಗಾವಿಗೆ ಬಂದಿರುವ ಇಂಡಿನೇಷಿಯಾದ ತಬಲಿಗ್ ಜಮಾತ್ ನ 10 ಜನ ಧರ್ಮ ಪ್ರಚಾರರನ್ನು ಮುನ್ನೆಚ್ಚೆರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ. ಇಂಡೋನೇಶಿಯಾದಿಂದ ದೆಹಲಿಗೆ ಬಂದು ದೆಹಲಿಯ ಬಂಗ್ಲೆವಾಲಿ ಮಸೀದಿಯ ನಿಜಾಮುದ್ದಿನ್ ಮರಕಜ್ ನಲ್ಲಿ ನಡೆದ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ಬಂಗ್ಲೆವಾಲಿ ಮಸೀದಿಯ ಧಾರ್ಮಿಕ …

Read More »

ಶೆರೆ ಅಂಗಡಿ ಚಾಲೂ ಮಾಡ್ರಿ ಅಂತ ಜನ ನನಗೆ ಫೋನ್ ಮಾಡಾಕತಾರ್ರೀ….

  ಶೆರೆ ಅಂಗಡಿ ಚಾಲೂ ಮಾಡ್ರಿ ಅಂತ ಜನ ನನಗೆ ಫೋನ್ ಮಾಡಾಕತಾರ್ರೀ…. ಎರಡು ದಿನ ಆಯ್ತು ಜನ ನನಗ ಫೋನ್ ಮಾಡಿ ಶೆರೆ ಅಂಗಡಿ ಚಾಲೂ ಮಾಡ್ರಿ ಅಂತ ನನಗ ಪೋನ್ ಮಾಡಾಕತಾರ…ನಮ್ಮ ಜನಕ್ಕೆ ಸಮಾಧಾನ, ಇಲ್ಲ ಜನ ತಾಳ್ಮೆ ಕಳೆದುಕೊಳ್ಳಬಾರದು ಎಂದು ಬೆಳಗಾವಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿ ಯಲ್ಲಿ ಹಾಸ್ಯ ಚಟಾಕಿ ಹಾರಿಸಿ,ನಕ್ಕಿದ್ದೇ ನಕ್ಕಿದ್ದು…   *ಕೋವಿಡ್-19 ನಿಯಂತ್ರಣ: ಬೆಳಗಾವಿಯಲ್ಲಿ ಸಚಿವ ಜಗದೀಶ ಶೆಟ್ಟರ …

Read More »

ಆಹಾರ ಸಾಮುಗ್ರಿಗಳನ್ನು ನೇರವಾಗಿ ವಿತರಣೆ ಮಾಡುವಂತಿಲ್ಲ

ಆಹಾರ ಸಾಮಗ್ರಿಗಳ ನೇರ‌ ವಿತರಣೆಗೆ ನಿರ್ಬಂಧ ————————————————————— ಆಹಾರ ಸಾಮಗ್ರಿ ಮಹಾನಗರ ಪಾಲಿಕೆಗೆ ಸಲ್ಲಿಸಲು ಸಂಘ-ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಮನವಿ ಬೆಳಗಾವಿ,-ಕೋವಿಡ್-೧೯ ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ಸಿದ್ಧಪಡಿಸಿದ ಆಹಾರ ಅಥವಾ ಆಹಾರ ಸಾಮಗ್ರಿಗಳನ್ನು ಸಾರ್ವಜನಿಕರಿಗೆ ನೇರವಾಗಿ ವಿತರಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ನಿರ್ಬಂಧ ವಿಧಿಸಲಾಗಿರುತ್ತದೆ. ಆಹಾರ ಸಾಮಗ್ರಿಗಳನ್ನು ವಿತರಿಸಲು ಬಯಸುವ ಸಂಘ-ಸಂಸ್ಥೆಗಳು ಮಹಾನಗರ …

Read More »

ಅಸಂಘಟಿತ ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಖರೀದಿಗೆ ೮ ಲಕ್ಷ ಅನುದಾನ

  ಬೆಳಗಾವಿ,-ಕೋವಿಡ್-೧೯ ಹಿನ್ನೆಲೆಯಲ್ಲಿ ಜಿಲ್ಲೆಯ ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಖರೀದಿಸಲು ಕಾರ್ಮಿಕ ಇಲಾಖೆಯ ವತಿಯಿಂದ ರೆಡ್ ಕ್ರಾಸ್ ಸಂಸ್ಥೆಗೆ ಎಂಟು ಲಕ್ಷ ರೂಪಾಯಿ ಚೆಕ್ ನೀಡಲಾಯಿತು. ಶಾಸಕ ಅನಿಲ್ ಬೆನಕೆ ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರ ಸಮ್ಮುಖದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ (ಮಾ.೩೧) ರೆಡ್ ಕ್ರಾಸ್ ಸಂಸ್ಥೆಗೆ ಚೆಕ್ ನೀಡಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ …

Read More »

ಬೆಳಗಾವಿಯ ಹತ್ತು ಜನ ದೆಹಲಿಯ ನಿಜಾಮುದ್ದೀನ್ ಗೆ ಹೋಗಿದ್ರು…ಅವರೆಲ್ಲ ಈಗ ಹೋಮ್ ಕೊರಂಟೈನ್ ದಲ್ಲಿ….

ದೆಹಲಿಯ ನಿಜಾಮುದ್ದೀನ್ ಮರಕಜ್ ಗೆ ಹೋಗಿ ಬಂದವರು ಬೆಳಗಾವಿಯಲ್ಲೂ ಇದ್ದಾರೆ…. ಬೆಳಗಾವಿ- ದೆಹಲಿಯ ತಬಲೀಗ್ ಜಮಾತಿನ ನಿಜಾಮುದ್ದೀನ್ ಮರಕಜ್ ಗೆ ಬೆಳಗಾವಿಯ ಹತ್ತು ಜನ ಹೋಗಿ ,ಬೆಳಗಾವಿಗೆ ಬಂದಿದ್ದು ಈ ಹತ್ತು ಜನರನ್ನು ಹೋಮ್ ಕೋರಂಟೈನ್ ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದ್ದಾರೆ‌ ದೆಹಲಿಗೆ ಹೋಗಿ ಬೆಳಗಾವಿಗೆ ಬಂದಿರುವ ಹತ್ತು ಜನರನ್ನು ಹೋಮ್ ಕೊರಂಟೈನ್ ನಲ್ಲಿ ಇಟ್ಟು ಹದಿನಾಲ್ಕು ದಿನ ಕಳೆದಿದೆ.ಆದರೂ ಇವರಲ್ಲಿ ಕೊರೋನಾ ಸೊಂಕಿನ ಲಕ್ಷಣ ಕಂಡು …

Read More »

ಲಾಕ್ ಡೌನ್ ಉಲ್ಲಂಘಿಸಿದ 66 ಜನರ ವಿರುದ್ಧ ಎಫ್. ಆಯ್. ಆರ್.

  ಬೆಳಗಾವಿ- *ಬೆಳಗಾವಿ ಜಿಲ್ಲೆಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿದ 496 ವಾಹನಗಳ ಸೀಜ್* ಮಾಡಲಾಗಿದ್ದು, ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ 66 ಎಫ್ಐಆರ್ ಪ್ರಕರಣಗಳು ದಾಖಲಾಗಿವೆ ಎಂದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ,ನಿಂಬರಗಿ ತಿಳಿಸಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿದ 66 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಜಿಲ್ಲೆಯಲ್ಲಿ ಕಟ್ಡು ನಿಟ್ಟಾಗಿ ಲಾಕ್ ಡೌನ್ ಮಾಡಿದ್ದೇವೆ ಎಂದು ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಹೇಳಿದರು. ಯಾರೂ ಸಹ ಲಾಕ್‌ಡೌನ್ ಆದೇಶ ಉಲ್ಲಂಘಿಸಬಾರದು ಲಾಕ್‌ಡೌನ್ ಆದೇಶ ಉಲ್ಲಂಘಿಸಿದವರ …

Read More »

ರೇಲ್ವೆ ಬೋಗಿಗಳನ್ನು ಆಸ್ಪತ್ರೆ ಮಾಡ್ತಾರಂತೆ,ರೈಲು ಮಂತ್ರಿ ಸುರೇಶ ಅಂಗಡಿ…!!

  ಬೆಳಗಾವಿ- ಬೆಳಗಾವಿಯ ಉದ್ಯಮಿಗಳ ಜೊತೆ ಕೇಂದ್ರ ಸಚಿವ ಸುರೇಶ್ ಅಂಗಡಿ ಸಭೆ ನಡೆಸಿದರು ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಅವರು ಕಾರ್ಮಿಕರ ಸಂಬಳ ಪಾವತಿಗೆ ವ್ಯವಸ್ಥೆ ಮಾಡಲು ಉದ್ಯಮಿಗಳ ಜೊತೆ ಸಮಾಲೋಚನೆ ನಡೆಸಿದರು. ಕಾರ್ಮಿಕರಿಗೆ ಪಾಸ್ ಕೊಟ್ಟು ಸಂಬಳ ಪಾವತಿ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಿತು ಬರುವ ಒಂದು ವಾರದಲ್ಲಿ ಕಾರ್ಮಿಕರಿಗೆ ಸಂಬಳ ಕೊಡಿಸುವ ಕುರಿತು ಕೇಂದ್ರ ರೈಲು ಸಚಿವ ಸುರೇಶ್ ಅಂಗಡಿ ಉದ್ಯಮಿಗಳಿಗೆ ಮನವರಿಕೆ ಮಾಡಿದರು.ನಂತರ …

Read More »

ಬೆಳಗಾವಿಗೆ ವಲಸೆ ಬಂದಿರುವ ನೆರೆಯ ರಾಜ್ಯದ ಕಾರ್ಮಿಕರಿಗೆ ಸಾಮೂಹಿಕ ಕ್ವಾರಂಟೈನ್

ಬೆಳಗಾವಿ- ನೆರೆಯ ರಾಜ್ಯಗಳು ಮತ್ತು ಬೆಂಗಳೂರಿನಿಂದ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸರ್ಕಾರದ ನಿರ್ದೇಶನದ ಮೇರೆಗೆ ಅಂತಹವರಿಗೆ ಸಾಮೂಹಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಿ ಉಟೋಪಹಾರವನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು. ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ(ಮಾ.೩೦) ಜಿಲ್ಲೆಯ ಎಲ್ಲ ತಾಲ್ಲೂಕಗಳ ಅಧಿಕಾರಿಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಖಾನಾಪುರ, ನಿಪ್ಪಾಣಿ, ಚಿಕ್ಕೋಡಿ, ಬೆಳಗಾವಿ ಸೇರಿದಂತೆ ಜಿಲ್ಲೆಯ ಎಲ್ಲ ಗಡಿ ತಾಲ್ಲೂಕುಗಳಲ್ಲಿ ವಲಸೆ …

Read More »

ಗೋಕಾಕ್ ವಿಧಾನಸಭಾ ಕ್ಷೇತ್ರದ ಮಹಾಜನತೆಗೆ ನನ್ನ ವಿನಮ್ರ ಮನವಿ.

ಗೋಕಾಕ್ ವಿಧಾನಸಭಾ ಕ್ಷೇತ್ರದ ಮಹಾಜನತೆಗೆ ನನ್ನ ವಿನಮ್ರ ಮನವಿ. ————————————- ನೆಚ್ಚಿನ ಸಾರ್ವಜನಿಕ ಬಂಧುಗಳೇ,‌ ನಿಮಗೆಲ್ಲಾ ತಿಳಿದಿರುವಂತೆ ನೋವೆಲ್ ಕೊರೋನಾ ಕೋವಿಡ್ 19 ಎಂಬ ವೈರಸ್ ಸೋಂಕು ಎಲ್ಲೆಡೆ ಹರಡುತ್ತಿದೆ. ಈ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ, ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದರೂ‌ ಸಹಾ ಈ ಸೋಂಕು ಎಲ್ಲಾ ಕಡೆ ಹಬ್ಬುತ್ತಾ ಜನರ ಬದುಕನ್ನು ದುರ್ಭರಗೊಳಿಸಿದೆ. ಈ‌ ಹಿನ್ನೆಲೆಯಲ್ಲಿ ಭಾರತದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು 21 ದಿನಗಳ …

Read More »

ಬೆಳಗಾವಿಗೆ ಮಿಲಿಟರಿ ಬರೋದಿಲ್ಲ..ಪೋಲೀಸರು ಹಿಂದೆ ಸರಿಯೋದಿಲ್ಲ….!!!!

  ಬೆಳಗಾವಿ – ಬೆಳಗಾವಿಗೆ ,ಮಿಲಿಟರಿ ಬಂದೈತಿ,ಕಮಾಂಡೋ ಫೋರ್ಸ್ ಬಂದೈತಿ,ಅಂತಾ ,ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಗೇಡಿಗಳು ಸುಳ್ಳು ಸುದ್ಧಿ ಹಬ್ಬಿಸಿ ಆತಂಕ ಮೂಡಿಸುವ ಕೆಲಸ ಮಾಡುತ್ತಿದ್ದು ಬೆಳಗಾವಿಗೆ ಮಿಲಿಟರಿ ಬರುತ್ತಿರುವ ಸುದ್ಧಿ ಸುಳ್ಳಾಗಿದ್ದು ,ಬೆಳಗಾವಿ ಪೋಲೀಸರೇ ಇಲ್ಲಿಯ ಪರಿಸ್ಥಿತಿಯನ್ನು ಎದುರಿಸಿ ಸಮರ್ಥವಾಗಿ ನಿಭಾಯಿಸಲಿದ್ದಾರೆ. ಬೆಳಗಾವಿಗೆ ಮಿಲಿಟರಿ ಬರುವ ಬಗ್ಗೆ ಡಿಸಿಪಿ ಸೀಮಾ ಲಾಟ್ಕರ್ ಅವರನ್ನು ವಿಚಾರಿಸಿದಾಗ, ಅವರು ಅಲ್ಲಗೆಳೆದಿದ್ದು,ಬೆಳಗಾವಿಯಲ್ಲಿ ಮಿಲಿಟರಿ ಬಂದಿಲ್ಲ,ಬರೋದೂ ಇಲ್ಲ .ಎಂದು ಡಿಸಿಪಿ ಸೀಮಾ ಲಾಟ್ಕರ್ ಸ್ಪಷ್ಟ …

Read More »

ಬೆಳಗಾವಿ ಜಿಲ್ಲೆ ಪಾಲಿಗೆ ಮತ್ತೇ ಗುಡ್ ನ್ಯುಸ್… ಐದು ಪ್ರಕರಣಗಳ ವರದಿ ಮತ್ತೇ ನೆಗೆಟಿವ್-

ಬೆಳಗಾವಿ ಜಿಲ್ಲೆ: ಮತ್ತೇ ಐದು ಪ್ರಕರಣಗಳ ವರದಿ ನೆಗೆಟಿವ್- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಮಾ.೩೦(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಒಟ್ಟು ಎಂಟು ಮಾದರಿಗಳ ಪೈಕಿ ಐದು ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂಟು ಮಾದರಿಗಳ ಪೈಕಿ ಇನ್ನು ಮೂರು ಮಾದರಿಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು‌ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಪ್ರಯೋಗಾಲಯಕ್ಕೆ …

Read More »

ನಾನು ಡೇಂಜರ್ ನನ್ನಿಂದ ದೂರವಿರಿ,ಎಂದು ರಸ್ತೆ ಮೇಲೆ ಬರೆದ ದಯಾಮಯಿ ಯಾರು ಗೊತ್ತಾ..?

ಬೆಳಗಾವಿ ಉದ್ಯಮ ಬಾಗ ಪೋಲೀಸರು ಬೈಕ್ ಸವಾರರ ಮೇಲೆ ಲಾಠಿ ಬೀಸದೇ ,ದಯವಿಟ್ಟು ಮನೆಗೆ ಹೋಗಿ ಎಂದು ಕೈ ಮುಗಿಯುತ್ತಿರುವ ಅಪರೂಪದ ದೃಶ್ಯ ಬೆಳಗಾವಿ- ಮುಂಬೈಯಲ್ಲಿ ಸರಣಿ ಎನ್ ಕೌಂಟರ್ ಮಾಡಿ ದಯಾ ನಾಯಕ್ ರಾಷ್ಟ್ರದ ಗಮನ ಸೆಳೆದಂತೆ ,ಬೆಳಗಾವಿಯಲ್ಲಿ ಕೊರೋನಾ ಹರಡದಂತೆ ರಸ್ತೆಯ ಮೇಲೆ ಜಾಗೃತಿ ಮೂಡಿಸುವ ಚಿತ್ರ ಬಿಡಿಸಿ ದಯಾನಂದ ಎಂಬ ಸಿಪಿಐ ಈಗ ಎಲ್ಲರ ಗಮನ ಸೆಳೆದಿದ್ದಾರೆ‌. ಉದ್ಯಮಬಾಗ ಸಿಪಿಐ ದಯಾನಂದ ಶೇಗುಣಸಿ ಅವರು ತಮ್ಮ …

Read More »