Breaking News

LOCAL NEWS

ಕಿತ್ತೂರ ತಾಲ್ಲೂಕು ಪಂಚಾಯತಿ ರಚನೆ, ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ..

ಬೆಳಗಾವಿ- ವೀರ ರಾಣಿ ಕಿತ್ತೂರ ಚನ್ನಮಾಜಿಯ ಹೋರಾಟದ ನೆಲ ಐತಿಹಾಸಿಕ ಕಿತ್ತೂರನ್ನು ಪೂರ್ಣ ಪ್ರಮಾಣದ ತಾಲ್ಲೂಕು ಮಾಡಲು ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಿದ್ದಾರೆ ಕಿತ್ತೂರು ತಾಲ್ಲೂಕಿನಲ್ಲಿ ಈಗಾಗಲೇ ತಾಲೂಕಾ ದಂಡಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಜೊತೆಗೆ ಕಿತ್ತೂರಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ಧಗೊಂಡಿದೆ,ಜೊತೆಗೆ ಕಿತ್ತೂರು ತಾಲ್ಲೂಕಿಗೆ ತಾಲ್ಲೂಕು ಮಟ್ಟದ ಎಲ್ಲ ಕಚೇರಿಗಳನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಎನ್ ಜಯರಾಂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆನ್ನು …

Read More »

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಪ್ರಕಾಶ ಹುಕ್ಕೇರಿ

ಇಟಗಿ ಕ್ರಾಸ್ ಬಳಿ ಕ್ರೂಸರ್-ಲಾರಿ ನಡುವೆ ಢಿಕ್ಕಿ, ಕ್ರೂಸರ್ ನಲ್ಲಿದ್ದ ಓರ್ವ ಸ್ಥಳದಲ್ಲಿಯೇ ಸಾವು, ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಅದೇ ಮಾರ್ಗದಿಂದ ಸಂಚರಿಸುತ್ತಿದ್ದ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ ಕಿತ್ತೂರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆನೀಡಲಾಗುತ್ತಿದೆ  ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಟಗಿ ಕ್ರಾಸ್,ಬಳಿ ಈ ಘಟನೆ ನಡೆದಿದೆ ಯಕ್ಸಂಬಾ ಪಟ್ಟಣದ ನಿವಾಸಿ ಸತ್ಯಪ್ಪ ಪೂಜಾರಿ (೫೦) ಮೃತ ದುರ್ದೈವಿ,ಯಾಗಿದ್ದಾನೆ …

Read More »

ಮೇಯರ್ ಖುರ್ಚಿಗಾಗಿ ಹಗ್ಗ ಜಗ್ಗಾಟ..ಆಕಾಂಕ್ಷಿಗಳ ಕಿತ್ತಾಟ.ಎಂಈಎಸ್ ಗುಂಪಿನಲ್ಲಿ ಸಂಕಟ..!

ಬೆಳಗಾವಿ-ಮಾರ್ಚ ಐದರಂದು ಮೇಯರ್ ಸರೀತಾ ಪಾಟೀಲರ ಅಧಿಕಾರದ ಅವಧಿ ಮುಗಿಯಲಿದ್ದು ಮೇಯರ್ ಹಾಗು ಡೆಪ್ಯುಟಿ ಮೇಯರ್ ಖುರ್ಚಿಗಾಗಿ ಈಗಿನಿಂದಲೇ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಹಾಗು ಮರಾಠಿ ಗುಂಪಿನ ನಡುವೆ ಹಗ್ಗ ಜಗ್ಗಾಟ ಶುರುವಾಗಿದೆ ಮೇಯರ್ ಸ್ಥಾನವನ್ನು ಪ್ರ ವರ್ಗ 1 ಉಪ ಮಹಾಪೌರ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಟ್ಟು ೫೮ ಜನ ಸದಸ್ಯರಿದ್ದು ಇದರಲ್ಲಿ ಓರ್ವ ಸದಸ್ಯನಿಗೆ ಮತದಾನದ ಹಕ್ಕಿಲ್ಲ ೫೭ ಸದಸ್ಯರಲ್ಲಿ …

Read More »

ಬೆಳಗಾವಿ ನಗರಕ್ಕೆ ಶೀಘ್ರದಲ್ಲಿಯೇ ಪಾಸ್ ಪೋರ್ಟ ಸೇವಾ ಕೇಂದ್ರ

ಬೆಳಗಾವಿ- ರಾಜ್ಯದ ಎರಡನೇಯ ರಾಜಧಾನಿ ಗಡಿನಾಡ ಗುಡಿಗೆ ಈಗ ಮತ್ತೊಂದು ಅಭಿವೃದ್ಧಿಯ ಕಿರೀಟ ದಕ್ಕಿದೆ,ಸಂಸದ ಸುರೇಶ ಅಂಗಡಿ ಅವರ ಸತತ ಪ್ರಯತ್ನ ಫಲ ನೀಡಿದ್ದು ಬೆಳಗಾವಿ ನಗರಕ್ಕೆ ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಸಮ್ಮತಿ ಸೂಚಿಸಿದೆ ಈ ಕುರಿತು ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಸಂಸದ ಸುರೇಶ ಅಂಗಡಿ ಕೇಂದ್ರದ ವಿದೇಶಾಂಗ ಸಚಿವಾಲಯ ಬೆಳಗಾವಿಗೆ ಪಾಸ್ ಪೋರ್ಟ ಸೇವಾ ಕೇಂದ್ರ ಪೋಸ್ಟ್ ಆಫೀಸ್ ಮಂಜೂರು …

Read More »

110 ಕೋಟಿ ಟೋಪಿ ಹಾಕಿದ ಝುಲ್ಫಿಗೆ ಥಳಿತ..!

ಬೆಳಗಾವಿ- ಬೆಳಗಾವಿಯ ರಿಯಲ್ ಎಸ್ಟೇಟ್ ಕುಳಗಳಿಗೆ ಮತ್ತು ಕೆಲವು ನಗರ ಸೇವಕರಿಗೆ 110 ಕೋಟಿ ರೂ ಟೋಪಿ ಹಾಕಿದ ಭಟ್ಕಲ್ ಮೂಲದ ಝುಲ್ಫಿ ಖತೀಬ ಎಂಬಾತನನ್ನು ಒಂಚನೆಗೊಳಗಾದವರು ಝುಲ್ಫಿಗೆ ಮನಬಂದಂತೆ ಥಳಿಸಿದ ಚಿತ್ರಗಳು ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಲಭ್ಯವಾಗಿವೆ ಚಿತ್ರ ನೋಡಿದರೆ ಆತನ ಮೇಲೆ ಯಾವ ರೀತಿಯ ಹಲ್ಲೆ ನಡೆದಿರಬಹುದು ಎನ್ನುವದು ಗೊತ್ತಾಗುತ್ರದೆ ಝುಲ್ಫಿಗೆ ಕೋಟ್ಯಾಂತರ ರೂ ಹಣ ನೀಡಿ ಮೋಸ ಹೋದವರು ಝುಲ್ಫಿಯನ್ನು ಹಿಡಿದು ಅಜ್ಞಾತ …

Read More »

ಸಾಮಾಜಿಕ ಪ್ರ,ಜ್ಞೆ ಮೂಡಿಸಿದ ಶಾಲಾ ಮಕ್ಕಳ ಪ್ರೊಜೆಕ್ಟ…!

ಬೆಳಗಾವಿ ಇಲ್ಲಿನ ಕ್ಯಾಂಪ ಪ್ರದೇಶದಲ್ಲಿರುವ ಮುಸ್ಲಿಂ ಎಜುಕೇಶನ ಸೊಸೈಟಿಯ ಇಸ್ಲಾಮಿಯಾ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ವಿಜ್ಞಾನ ಮತ್ತು ಕಲಾ ಪ್ರದರ್ಶನ ಗಮನ ಸೆಳೆಯಿತು. ವಿದ್ಯಾರ್ಥಿಗಳು ವಿವಿಧ ಕಚ್ಚಾವಸ್ತುಗಳನ್ನು ಬಳಕೆ ಮಾಡಿ ನಿರ್ಮಿಸಿದ್ದ ಮಳೆ ನೀರು ಸಂಗ್ರಹಣೆ ಮತ್ತು ಶುದ್ಧೀಕರಣ ಘಟಕ, ಜೈವಿಕ ಇಂಧನ, ಗಾಳಿವಿದ್ಯುತ,  ಜಲ ವಿದ್ಯುತ, ಸೌರಶಕ್ತಿ, ಕುಡಿಯುವ ನೀರು ಸಂಗ್ರಹಿಸುವ ವಿಧಾನ, ಸಾವಯವ ಕೃಷಿ, ಗೊಬ್ಬರ ಬಳಕೆ ವಿಧಾನ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಇನ್ನು ಅನೇಕ …

Read More »

ವಾರ್ಡುಗಳ ಡೀ.ಲಿಮಿಟೇಶನ್..ಪಾಲಿಕೆ ಅಧಿಕಾರಿಗಳಿಗಿಲ್ಲ..ಟೇನ್ ಶನ್…!

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಬೆಳಗಾವಿ ನಗರದ ವಾರ್ಡುಗಳನ್ನು ಪುನರ್ ವಿಂಗಡನೆ ಮಾಡುವಂತೆ ೨೦೧೬ ಜುಲೈ ೨೫ ರಂದು ಬೆಳಗಾವಿ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿ ಬರೊಬ್ಬರಿ ಏಳು ತಿಂಗಳು ಗತಿಸಿದರೂ ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಇನ್ನುವರೆಗೆ ಯಾವದೇ ರೀತಿಯ ಕ್ರಮ ಕೈಗೊಂಡಿಲ್ಲ ವಾರ್ಡಗಳ ಪುನರ್ ವಿಂಗಡನೆ ಕುರಿತು ಜಿಲ್ಲಾಧಿಕಾರಿಳ ಆದೇಶ ಪಾಲಿಕೆ ಆಯುಕ್ತರ ಕೈ ಸೇರಿ ಏಳು ತಿಂಗಳು ಗತಿಸಿವೆ ಆದರೆ ಇನ್ನುವರೆಗೆ ಈ …

Read More »

ಮರಾಠಾ ಕ್ರಾಂತಿ ಮೋರ್ಚಾಗೆ ಮುಸ್ಲಿಂ ಮುಖಂಡರ ಬೆಂಬಲ

ಬೆಳಗಾವಿ- ಬೆಳಗಾವಿ ನಗರದಲ್ಲಿ ಫೆ ೧೬ ರಂದು ನಡೆಯಲಿರುವ ಮರಾಠಾ ಕ್ರಾಂತಿ ಮೋರ್ಚಾಗೆ ಬೆಳಗಾವಿಯ ಮುಸ್ಲಿಮ ಮುಖಂಡರು ಬೆಂಬಲ ಸೂಚಿಸಿದ್ದಾರೆ ಫೆ ೧೬ ರಂದು ಬೆಳಗಾವಿಯ ಎಂಈಎಸ್ ಹಾಗು ವಿವಿಧ ಮರಾಠಿ ಭಾಷಿಕ ಸಂಘಟನೆಗಳು ವಿಶೇಷ ಮೀಸಲಾತಿಗಾಗಿ ಕ್ರಾಂತಿ ಮೋರ್ಚಾ ಆಯೋಜಿಸಿವೆ ಇದರಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ ಎಂದು ಎಂಈಎಸ್ ನಾಯಕರು ರೀಲು ಬಿಡುತ್ತಿದ್ದಾರೆ ಶನಿವಾರ ಬೆಳಗಾವಿ ನಗರದ ಶಹಾಪೂರ,ವಡಗಾಂವ ಜಮಾತಿನ ಮುಖಂಡರು ಮೇಯರ್ ಸರೀತಾ ಪಾಟೀಲ …

Read More »

ಕೃಷ್ಣಾ ನಿನ್ನನ್ನು ಬಿಟ್ಟು ಇರಲಾರೆವು…ಬೇರೆ ಪಕ್ಷಕ್ಕೆ ನಿಮ್ಮನ್ನು ಬಿಡಲಾರೆವು

ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ಮನನೊಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿ ಕೃಷ್ಣಾ ನಿಮ್ಮನ್ನು ಬಿಟ್ಟು ಇರಲಾರೆವು ಬೇರೆ ಪಕ್ಷಕ್ಕೆ ಹೋಗಲು ನಿಮ್ಮನ್ನು ಬಿಡಲಾರೆವು ಎನ್ನುವ ಮನದಾಳದ ಇಂಗಿತವನ್ನು ಹೊರಹಾಕಿದರು ಶಂಕರ ಮುನವಳ್ಳಿ ಅವರ ನೇತ್ರತ್ವದಲ್ಲಿ ಸಭೆ ಸೇರಿದ ಬೆಳಗಾವಿ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರು ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ …

Read More »

ನಾಡ ವಿರೋಧಿ ಟೀ ಶರ್ಟ ಮಾರುತ್ತಿದ್ದ ಯುವಕನ ಬಂಧನ..

ಬೆಳಗಾವಿ-ಬೆಳಗಾವಿ ನಗರದಲ್ಲಿ ಫೆ ೧೬ ರಂದು ಮರಾಠಾ ಕ್ರಾಂತಿ ಮೋರ್ಚಾ ನಡೆಯಲಿದೆ ಈ ಮೋರ್ಚಾಗೆ ಸಂಬಂಧಿಸಿದಂತೆ ಕೊಲ್ಹಾಪೂರದಿಂದ ಬೆಳಗಾವಿಗೆ ಬಂದು ನಾಡ ವಿರೋಧಿ ಟೀ ಶರ್ಟ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಖಡೇ ಬಝಾರ ಪೋಲೀಸರು ತಮ್ಮ ವಶಕ್ಜೆ ಪಡೆದು ವಿಚಾರಣೆ ನಡೆಸಿದ್ದಾರೆ ಬೆಳಗಾವಿ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಎನ್ನುವ ಸಂದೇಶ ಬಿಂಬಿಸುವ ಟೀ ಶರ್ಟಗಳನ್ನು ಮತ್ತು ಶಾಲ್ ಗಳನ್ನು ಈತ ಬೆಳಗಾವಿಯ ಖಡೇ ಬಝಾರ ಮತ್ತು ಗಣಪತಿ ಗಲ್ಲಿಯಲ್ಲಿ ಮಾರಾಟ …

Read More »

ಭಂಡಾರದಲ್ಲಿ ಮಿಂದೆದ್ದ ಭಕ್ತಿಯ ಸುನಾಮಿ..ದೇವಿ ಯಲ್ಲಮ್ಮನ ,ಪಾದಕ್ಕೆ ಹುದೋ..ಹುದೋ..ಹುದೋ..!

ಬೆಳಗಾವಿ: ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ನಡೆದ ಭಾರತ ಹುಣ್ಣಿಮೆ ಜಾತ್ರೆಗೆ ಭಕ್ತಸಾಗರವೇ ಹರಿದು ಬಂದಿದ್ದು, ಭಕ್ತರಿಂದ ಗುಡ್ಡದ ಪ್ರದೇಶವೆಲ್ಲ ತುಂಬಿ ತುಳುಕಿತು. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬಂದು ಯಲ್ಲಮ್ಮ ದೇವಿಯ ದರ್ಶನ, ಆಶೀರ್ವಾದ ಪಡೆದುಕೊಂಡರು. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ ಎಂಬ ಜೈಕಾರ ಮುಗಿಲು ಮುಟ್ಟಿತ್ತು. ಭಂಡಾರದಲ್ಲಿ ಭಕ್ತರೆಲ್ಲ ಮಿಂದೆದ್ದರು. ದೀಡ್ ನಮಸ್ಕಾರ, ಉರುಳು ಸೇವೆ ಮೂಲಕ ಹರಕೆ ತೀರಿಸಿದರು. ಬಳೆ, ಎಣ್ಣೆ, ತೆಂಗಿನಕಾಯಿ, …

Read More »

ಹೆಲ್ಮೇಟ್ ಮರೆತರೆ ನೂರು ರೂ ತೆಲೆದಂಡ ಗ್ಯಾರಂಟಿ…

ಸ್ಮಾರ್ಟ್ ಸಿಟಿಯಲ್ಲಿ ಈಗ ಎಲ್ಲಿ ನೋಡಿದ್ರು ಹೆಲ್ಮೆಟ್ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾ ನ್ಯಾಯಾಧೀಶರ ಕಟ್ಟಪ್ಪಣೆಯ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಗುರುವಾರ ರಾತ್ರಿ ವರೆಗೆ ಕಾರ್ಯಾಚರಣೆ ನಡೆಸಿ ದಾಖಲೆ ಪ್ರಮಾಣದ ದಂಡ ವಸೂಲಿ ಮಾಡಿದ್ದಾರೆ. ನಿನ್ನೆ ಗುರುವಾರ ೪ ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದಾರೆ. ನಗರದ ಮೂಲೆ ಮೂಲೆಯಲ್ಲಿ ಪೊಲೀಸರು ಚಕ್ರವ್ಯೂಹ ರಚಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ವಾಹನ ಸವಾರ ನಗರ ಪ್ರವೇಶ ಮಾಡಿದ್ದರೆ. ದಂಡ ಕಟ್ಟದೆ ವಾಪಸ್ ಹೋಗುವುದು ಕಠಿಣವಾಗಿದೆ. …

Read More »

ಬೆಳಗಾವಿಯ ಸದಾಶಿವ ನಗರದಲ್ಲಿ ಮನೆಗಳ್ಳತನ

ಬೆಳಗಾವಿ-ಬೆಳಗಾವಿಯ ಸದಾಶಿವ ನಗರದ ಒಂದನೇಯ ಮುಖ್ಯ ರಸ್ತೆ ನಾಲ್ಕನೇಯ ಅಡ್ಡ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಮನೆಯ ಕೀಲಿ ಮುರಿದು  ಚಿನ್ನಾಭರಣಗಳನ್ನು ದೋಚಲಾಗಿದೆ ಅಶ್ವಿನಿ ವಿಶ್ವನಾಥ ಅಮವಾಸೆ ಅವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ ಅಶ್ವಿನಿ ಅವರು ತಮ್ಮ ಗಂಡನನ್ನು ಭೇಟಿಯಾಗಲು ದುಭೈಗೆ ಹೋದ ಸಂಧರ್ಭದಲ್ಲಿ ಸಮಯ ಸಾಧಿಸಿ ಗುರುವಾರ ಮದ್ಯರಾತ್ರಿ ಕಳ್ಳರು ಮನೆಯ ಕೀಲಿ ಮುರಿದು ಕಳ್ಳತನ ನಡೆಸಿದ್ದಾರೆ ಮನೆಯಲ್ಲಿನ ಟ್ರೀಝರಿಯ ಲಾಕ್ ಮುರಿದು ಸುಮಾರು ನೂರು ಗ್ರಾಂ ತೂಕದ ಚಿನ್ನಾಭರಣಗಳನ್ನು …

Read More »

ಬೆಳಗಾವಿಯ ಕೊಲ್ಹಾಪೂರ ಬಸ್ ಸ್ಟ್ಯಾಂಡ ಈಗ ನೆನಪು ಮಾತ್ರ…

ಬೆಳಗಾವಿ- ಬೆಳಗಾವಿಯ ಹೃದಯ ಭಾಗದಲ್ಲಿರುವ ಕೇಂದ್ರ ಬಸ್ ನಿಲ್ಧಾಣ ಕೊಲ್ಹಾಪೂರ ಬಸ್ ಸ್ಟ್ಯಾಂಡ್ ಎಂಬ ಹೆಸರಿನಲ್ಲಿ ಪ್ರಸಿದ್ಧ ವಾಗಿತ್ತು ೧೯೬೨ ರಲ್ಲಿ ಆಗಿನ ಮೈಸೂರ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿಡಿ ಜತ್ತಿ ಅವರು ಉದ್ಘಾಟಿಸಿದ್ದ ಈ ನಿಲ್ಧಾಣ ಈಗ ನೆನಪು ಮಾತ್ರ ಕೇಂದ್ರ ಬಸ್ ನಿಲ್ದಾಣ ಕಾರ್ಯ ಚಟುವಟಿಕೆಗಳನ್ನು ಪಕ್ಕದ ನಗರ ಸಾರಿಗೆ ಮತ್ತು ಗ್ರಾಮೀಣ ಬಸ್ ನಿಲ್ಧಾಣಕ್ಕೆ ಶಿಪ್ಟ ಮಾಡಲಾಗಿದೆ ಪಾರ್ಕಿಂಗ್ ಮತ್ತು ಬಸ್ ಗಳನ್ನು ಪಕ್ಜದ ನಿಲ್ಧಾಣದಲ್ಲಿ ಶಿಪ್ಟ …

Read More »

ಬೆ ಕೆ ಮಾಡೆಲ್ ಶಾಲೆಗೆ ಪಾಲಕರ ಮುತ್ತಿಗೆ,ಶಾಲೆಯ ಕಿಟಕಿ ದ್ವಂಸ…

ಬೆಳಗಾವಿ- ಆ ಪುಟ್ಟ ಬಾಲಕ ಇನ್ನೂ ಶಾಲೆ ಕಲಿತು ನೌಕರಿ ಹಿಡಿದು ತಂದೆ ತಾಯಿನ್ನ ಚನ್ನಾಗಿ ನೊಡಿಕೊಳ್ಳಬೇಕು ಎಂದು ಸುಂದರ ಕನಸು ಕಂಡಿದ್ದ. ಸ್ನೇಹಿತರು ಜೊತೆ ಆಟವಾಡಲು ಹೋಗಿದ್ದ ಅವನ ಬಾಳಲ್ಲಿ, ವಿಧಿ ಅವನ ಬಾಳಲ್ಲಿ ಆಟವಾಡಿದೆ. ಇತ್ತ ಬಾಲಕನ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಬಾಲಕ ಸಾವಿಗೆ ಕಾರಣ ಸತ್ಯಾಂಶ ಹೊರಗೆಡುವಲು ಪಾಲಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ೧೪ ವರ್ಷದ ೮ನೇ ತರಗತಿಯ ವಿದ್ಯಾರ್ಥಿ ಪ್ರಶಾಂತ ಹುಲಮನಿ …

Read More »