Breaking News

LOCAL NEWS

ಹಿಂಡಲಗಾ : 46 ಜೈಲು ಹಕ್ಕಿಗಳ ಬಿಡುಗಡೆಗೆ ಶಿಪಾರಸ್ಸು?

ಬೆಳಗಾವಿ: ಬೆಳಗಾವಿ ಕೇಂದ್ರ ಕಾರಾಗ್ರದಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಲವತ್ತಾರು ಖೈಧಿಗಳಿಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಜೈಲು ಸಮಿತಿ ರಾಜ್ಯ ಸರ್ಕಾರಕ್ಕೆ ಶಿಪಾರಸ್ಸು ಮಾಡಿದೆ ಎಂದು ತಿಳಿದು ಬಂದಿದೆ. ಬೆಳಗಾವಿಯ ಹಿಮಡಲಗಾ ಕಾರಾಗೃದಲ್ಲಿ ನೂರಾರು ಜನ ಖೈದಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗಾಗಲೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಖೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರಂತೆ ಸ್ವಾತಂತ್ರ್ಯೋತ್ಸವದ ದಿನದಂದು ಜೈಲಿನಲ್ಲಿರುವ ನಲವತ್ತಾರು ಖೈದಿಗಳನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಈ …

Read More »

ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾವತಾರ… ಆರು ಸಾವಿರ ಹೆಕ್ಟರ್ ಬೆಳೆ ಜಲಸಮಾಧಿ

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಜಿಲ್ಲೆಯ ಕೃಷ್ಣಾ, ವೇಧಗಂಗಾ, ದೂಧಗಂಗಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳು ಜಲ ಪ್ರಳಯದಿಂದ ತತ್ತರಿಸಿ ಹೋಗಿದ್ದಾರೆ. ಕೃಷ್ಣಾವತಾರದಿಂದ ನದಿ ಪಾತ್ರದ ಸುಮಾರು ಆರು ಸಾವಿರ ಹೆಕ್ಟರ್ ಬೆಳೆ ಪ್ರದೇಶ ಜಲ ಸಮಾಧಿಯಾಗಿದೆ. ಕೃಷ್ಣಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಒಳ ಹರಿವು 1 ಲಕ್ಷ 85 ಸಾವಿರ ಕ್ಯೂಸೆಕ್ಸ್ ನಷ್ಟು ಇದ್ದು, ಒಳ ಹರಿವು 2 …

Read More »

ಬೆಳಗಾವಿ ಮಹಾನಗರದಲ್ಲಿ ನಾಗ ಪಂಚಮಿ ಬದಲು ಬಸವ ಪಂಚಮಿ ಆಚರಣೆ

ಬೆಳಗಾವಿ: ಸಮಾಜದಲ್ಲಿರುವ ಮೌಡ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಚಾರಿ ಗುರು ಬಸವ ಬಳಗ ಹಾಗೂ ಮಾನವ ಬಂದುತ್ವ ವೇದಿಕೆ ವತಿಯಿಂದ ನಗರದಲ್ಲಿ ವೈಶಿಷ್ಟ್ಯ ಪೂರ್ಣವಾಗಿ ನಾಗರಪ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಬೆಳಗಾವಿ ಅಜಂ ನಗರದಲ್ಲಿರುವ ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಮಕ್ಕಳಿಗೆ ಹಾಲುಣಿಸುವ ಮೂಲಕ ನಾಗಪಂಚಮಿ ಬದಲು ಬಸವ ಪಂಚಮಿಯನ್ನು ಆಚರಿಸಿದರು. ಬೆಳಗಾವಿ ನಗರದ ಅಂಧ ಮತ್ತು …

Read More »

ಬೆಳಗಾವಿಯಲ್ಲಿ ಶಾಹು ಮಹಾರಾಜರ ಪರ್ವ ಆರಂಭ

ಬೆಳಗಾವಿ: ಸಮಾಜಮುಖಿಯಾಗಿ ಹಲವಾರು ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಮಾಡಿ ಸಮಾಜದಲ್ಲಿರುವ ಅಂಧಶೃದ್ಧೆಯನ್ನು ಹೋಗಲಾಡಿಸಲು ಶ್ರಮಿಸಿದ ಶಾಹು ಮಹಾರಾಜರ ತತ್ವಾದರ್ಶಗಳನ್ನು ಅನುಸರಿಸುವಂತೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದ್ದಾರೆ. ನಗರದಲ್ಲಿ ಬಸವ ಪಂಚಮಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ನಗರದ ವೃತ್ತ ಒಂದಕ್ಕೆ ಶೀಘ್ರದಲ್ಲಿಯೇ ಶಾಹು ಮಹಾರಾಜರ ಹೆಸರನ್ನು ನಾಮಕರಣ ಮಾಡಲಾಗುವುದು. ಜೊತೆಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಶಾಹು ಮಹಾರಾಜರ ಭಾವಚಿತ್ರವನ್ನು ಹಾಕುವಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ನಗರದಲ್ಲಿ ಶಾಹು …

Read More »

ಮಳೆ ಹೊಡೆತಕ್ಕೆ ಬೆಳಗಾವಿ ರಸ್ತೆಗಳು ಚಿಂದಿ……… ಚಿಂದಿ……… ಸಂಚರಿಸಿದರೇ ಹೆರಿಗೆ ಗ್ಯಾರಂಟಿ

ಬೆಳಗಾವಿ: ಕಳೆದ ಮೂರು ವಾರಗಳಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ನಗರದ ಜನಜೀವನ ಅಸ್ತವ್ಯಸ್ಥವಾಗಿದೆ. ಜೊತೆಗೆ ನಗರದ ರಸ್ತೆಗಳು ಮಳೆ ಹೊಡೆತಕ್ಕೆ ಚಿಂದಿ ಚಿಂದಿಯಾಗಿ ಸ್ವರೂಪವನ್ನೇ ಕಳೆದುಕೊಂಡಿವೆ. ಬೆಳಗಾವಿ ನಗರದ ಕಾಲೇಜು ರಸ್ತೆ, ಬೋಗಾರವೇಸ್, ಪಿಶ್ ಮಾರ್ಕೆಟ್ ರಸ್ತೆ ಸೇರಿದಂತೆ ನಗರದ ಹಲವಾರು ಪ್ರಮುಖ ರಸ್ತೆಗಳು ಚಿದ್ರ ಚಿದ್ರವಾಗಿದ್ದು, ಈ ರಸ್ತೆಗಳಲ್ಲಿ ಗುಂಡಿಗಳು ತುಂಬಿಕೊಂಡಿವೆ. ಬೆಳಗಾವಿ ನಗರದ ಹಲವಾರು ಪ್ರಮುಖ ರಸ್ತೆಗಳನ್ನು ಗಮನಿಸಿದರೆ ಗುಂಡಿಗಳಲ್ಲಿ ರಸ್ತೆ ಇದೆಯೋ ಅಥವಾ …

Read More »

ಚ.ಕಿತ್ತೂರ ಅನಧಿಕೃತ ಕಟ್ಟಡಗಳ ತೆರವಿಗೆ ಸಚಿವರ ಸೂಚನೆ ಕಿತ್ತೂರ ಪ್ರಾಧಿಕಾರ ಸಭೆಗೆ ಶಾಸಕ ಇನಾಮದಾರ್ ಗೈರು

ಬೆಳಗಾವಿ: ಐತಿಹಾಸಿಕ ಚನ್ನಮ್ಮನ ಕಿತ್ತೂರು ಕೋಟೆಯ ನೂರು ಮೀಟರ್ ವ್ಯಾಪ್ತಿ ಪ್ರದೇಶದ ಒಳಗಡೆ ಇರುವ ಎಲ್ಲ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಕಿತ್ತೂರು ಪಟ್ಟಣ ಪಂಚಾಯಿತಿಗೆ ಸೂಚನೆ ನೀಡಿದ್ದಾರೆ. ಶನಿವಾರ ಚನ್ನಮ್ಮನ ಕಿತ್ತೂರಿನಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ ಅವರು, ಕಿತ್ತೂರು ಕೋಟೆ ಐತಿಹಾಸಿಕ ಸ್ಮಾರಕವಾಗಿದೆ. ಈ ಕೋಟೆ ಸುತ್ತಲೂ ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ. ಇದರಿಂದ ಕಿತ್ತೂರು ಕೋಟೆ …

Read More »

ಕುಡಚಿ-ಉಗಾರ, ಚಿಂಚಲಿ-ಭಿರಡಿ, ಸೆತುವೆಗಳು ಜಲಾವೃತ

ಮಹಾರಾಷ್ಟ್ರದ ಕೊಂಕಣ ತೀರದಲ್ಲಿ ಹಾಗೂ ಕರ್ನಾಟಕದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದರಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ. ಹೀಗಾಗಿ ನದಿಯ ನೀರಿನ ಮಟ್ಟ ಹೆಚ್ಚಳಗೊಂಡು ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಿಕೊಡುವ ಕುಡಚಿ-ಉಗಾರ, ಚಿಂಚಲಿ-ಭಿರಡಿ, ಸೆತುವೆಗಳು ಜಲಾವೃತಗೋಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿವೆ. ಕೃಷ್ಣಾ ನದಿಯ ಒಳ ಹರಿಯು ಹೆಚ್ಚಾಗಿದ್ದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಬೀತಿಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಶುಕ್ರವಾರ ನೀಧಾನ ಗತಿಯಲ್ಲಿ ಏರಿಕೆಯಾಗುತ್ತಿದು ಸಾಯಂಕಾಲ ನದಿ …

Read More »

ರಾಕಸಕೊಪ್ಪ ಜಲಾಶಯ ಭರ್ತಿಗೆ ಕೇವಲ ಒಂದು ಅಡಿ ಬಾಕಿ

ಬೆಳಗಾವಿ- ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾಶಯನಭರ್ತಿಗೆ ಕೇವಲ ಒಂದು ಅಡಿ ಬಾಕಿ ಇದ್ದು ಭಾನುವಾರ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲಿದೆ ರಾಕಸಕೊಪ್ಪ ಜಲಾಶಯದ ಪರಿಸರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಜಲಾಶಯ ಈಗ ಬಹುತೇಕ ಭರ್ತಿಯಾಗಿದ್ದು ಶನಿವಾರ ಮದ್ಯರಾತ್ರಿ ಅಥವಾ ಭಾನುವಾರ ಬೆಳಿಗ್ಗೆ ಜಲಾಶಯ ಒವರ್ ಪೆÇ್ಲ ಆಗಲಿದೆ ಎಂದು ಬೆಳಗಾವಿ ನಗರ ನೀರು ಸರಬರಾಜು ಮಂಡಳಿಯ ಮುಖ್ಯ ಇಂಜ್‍ನಿಯರ್ ಪ್ರಸನ್ನಮೂರ್ತಿ ತಿಳಿಸಿದ್ದಾರೆ. ಬೆಲಗಾವಿ ನಗರದ ಮುಖ್ಯ ಜಲದ …

Read More »

ಕೃಷ್ಣಾ ನದಿಗೆ ಇಂದು ಕೋಯ್ನಾ ನೀರು ಒಂಬತ್ತು ಸೇತುವೆಗಳ ಮುಳುಗಡೆ, ಜಮಖಂಡಿ ಮಿರಜ ಹೆದ್ದಾರಿ ಬಂದ್

ಬೆಳಗಾವಿ-ಸಹ್ಯಾದ್ರಿಯ ಮಡಿಲಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ನೆರೆಯ ಮಹಾರಾಷ್ಟ್ರದ ನದಿಗಳು ಊಕ್ಕಿ ಹರಿಯುತ್ತಿವೆ.ಮಹಾರಾಷ್ಟ್ರದ ಕೋಯ್ನಾ ಜಲಾಶಯ ಭರ್ತಿಯಾಗಿದ್ದು ಶನಿವಾರ ಮಧ್ಯಾಹ್ನದವರೆ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವ ಸಾಧ್ಯತೆಗಳಿವೆ.ಎಂದು ನಂಬಲರ್ಹ ಮೂಲಗಳು ತಿಳಿಸಿವೆ ಬೆಳಗಾವಿ ಜಿಲ್ಲೆಯ ಕೃಷ್ಣಾ,ವೇದಗಂಗಾ,ದೂದಗಂಗಾ, ನದಿಗಳ ಒಳ ಹರಿವು ಹೆಚ್ಚಾಗಿದೆ.ಕೃಷ್ಣಾ ನದಿಯಲ್ಲಿ 1ಲಕ್ಷ 52 ಸಾವಿರ ಕ್ಯುಸೆಕ್ಸ ನೀರು ಹರಿದು ಬರುತ್ತಿದೆ.ಹೀಗಾಗಿ ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಹಾಗು ರಾಯಬಾಗ ತಾಲೂಕಿನ ಎರಡು ಸೇತುವೆಗಳು …

Read More »

ಕಸದ ತೊಟ್ಟಿಯಾದ ರಾಣಿ ಚನ್ನಮ್ಮಾಜಿಯ ಸಮಾಧಿ

ಮೆಹಬೂಬ ಮಕಾನದಾರ ಬೆಳಗಾವಿ: ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಸಮಾದಿ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿರುವ ಐತಿಹಾಸಿಕ ಸಮಾದಿ ಹಂದಿ ನಾಯಿಗಳ ತಾಣವಾಗಿದ್ದು, ದೇಶ ರಕ್ಷಣೆಗಾಗಿ ಹೋರಾಡಿದ ವೀರ ಮಹಿಳೆಯ ಸಮಾಧಿ ಅನಾಥವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಸಮರ ಸಾರಿ ನಿನನಗೇಕೆ ಕೊಡಬೇಕು ಕಪ್ಪ ಎಂದು ಕೆಂಪ ಮುಂಗೋಸಿಗಳಿಗೆ ಪ್ರಶ್ನಿಸಿ ಹೋರಾಟದ ಇತಿಹಾಸವನ್ನು ನಿರ್ಮಿಸಿದ್ದ ವೀರ ರಾಣಿಯ ಸಮಾಧಿ …

Read More »

ಅಳಗವಾಡಿ ಪೊಲೀಸ ದೌರ್ಜನ್ಯ ಖಂಡನೆ

ಬೆಳಗಾವಿ: ನವಲಗುಂದ ತಾಲೂಕಿನ ಯಮನೂರ ಮತ್ತು ಅಳಗವಾಡಿ ಗ್ರಾಮದ ಅಮಾಯಕ ಕುಟುಂಬಗಳ ಮೇಲೆ ನಡೆದಿರುವ ಪೊಲೀಸರ ದೌರ್ಜನ್ಯವನ್ನು ಕನ್ನಡ ರಕ್ಷಣ ಸಮಿತಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಸಂತೋಷ ಭೋಜಪ್ಪ ಅರಳಿಕಟ್ಟಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರಕಟನೆ ನೀಡಿರುವ ಅವರು ಮಹಾದಾಯಿ ನ್ಯಾಯಾಧೀಕರಣ ತೀರ್ಪು ವಿರೋಧಿಸಿ ಹೋರಾಟ ನಡೆಸುತ್ತಿದ್ದವರ ಮೇಲೆ ಮತ್ತು ಅವರ ಕುಟುಂಬಗಳ ಮೇಲೆ ಪೋಲಿಸರು ಹಲ್ಲೆ ನಡೆಸಿರುವದು ಖಂಡನಾರ್ಹ. ಪೋಲೀಸರು ಮಹಿಳೆಯರು, ಗರ್ಭಿಣಿಯರು, ವೃದ್ದರು ಮತ್ತು …

Read More »

ಅಪಾಯದಲ್ಲಿ ನಗರದ ಮರಗಳು

ಬೆಳಗಾವಿ: ನಗರದಲ್ಲಿ ಅಪಾಯದ ಅಂಚಿನಲ್ಲಿರುವ ಮರಗಳು ಸಾಕಷ್ಟು ಇದ್ದರೂ ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮನಸ್ಸು ಮಾಡದೇ ಇರುವುದು ವಿಪರ್ಯಾಸ. ಈಗಾಗಲೇ ಮಳೆಗಾಲ ಪ್ರಾರಂಭವಾಗಿ ಒಂದು ತಿಂಗಳು ಕಳೆದಿದೆ. ಈ ಮಳೆಯಿಂದ ರಸ್ತೆ ಬದಿಯಲ್ಲಿರುವ ಸಾಕಷ್ಟು ಮರಗಳು ನೆಲಕ್ಕುರುಳಿ ಸಂಚಾರದ ತೊಂದರೆ, ವಾಹನಗಳ ಮೇಲೆ ಮರಗಳು ಉರುಳಿ ಬಿದ್ದಿರುವುದು, ವಿದ್ಯುತ್ ತಂತಿಯ ಮೇಲೆ ಮರಗಳ ಟೊಂಗೆ ಬಿದ್ದು, ಶಾರ್ಟಸರ್ಕಿಟ್ ಆಗಿರುವುದು, ಹೀಗೆ ಹತ್ತು ಹಲವು ಸಮಸ್ಯೆಗಳಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು …

Read More »

ಅಥಣಿ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ

ತಾಲೂಕಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ವರ್ಗಾವಣೆಗೊಂಡು ಬೇರೆಯವರು ಅಧಿಕಾರ ವಹಿಸಿಕೊಳ್ಳುತ್ತಿದಂತೆ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಗರಿ ಗೆದರಿದೆ.! ಅವ್ಯಾಹತವಾಗಿ ಮರಳು ಸಾಗಾಣಿಕೆ ಎಗ್ಗಿಲ್ಲದೇ ಸಾಗುತ್ತಿದೆ. ಅಕ್ರಮ ಮರಳು ದಂಧೆಗಾರರು ಸರಕಾರದ ನಕಲಿ ಪಾಸಗಳನ್ನು ಇಟ್ಟುಕೊಂಡು ಮರಳು ದಂಧೆಯನ್ನು ಮಾಡುವ ಮೂಲಕ ಸರಕಾರಕ್ಕೆ ಮೋಸ ಎಸುತ್ತಿದ್ದಾರೆ. ಈ ದಂಧೆಯಲ್ಲಿ ರಾಜಕೀಯ ಮುಖಂಡರು ಭಾಗಿಯಾಗಿರುವದರಿಂದ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಬುಧವಾರ ಸಂಜೆ ಪಟ್ಟಣದ ಹೊರ ವಲಯದ ಅಬ್ಬಿಹಾಳ ರಸ್ತೆಯಲ್ಲಿ ನಕಲಿ …

Read More »

ನಾಗಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಮುನವಳ್ಳಿ : ಸಮೀಪದ ಯಕ್ಕೇರಿ ಗ್ರಾಮದ ಜನತಾ ಕಾಲೋನಿಯಲ್ಲಿರುವ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಆ. 6 ರಿಂದ 10 ರವರೆಗೆ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಜು. 6 ರಂದು ಬೆಳಿಗ್ಗೆ ರುದ್ರಾಭಿಷೇಕ, ಸಂಜೆ 6 ಗಂಟೆಗೆ ಹಾಲು ಎರೆಯುವುದು. ದಿ. 7 ರಂದು ಮುಂಜಾನೆ 10 ಗಂಟೆಗೆ ಸ್ಲೋ ಸೈಕಲ್ ಮೋಟಾರ ಸ್ಪರ್ಧೆ, ಮಧ್ಯಾಹ್ನ 1 ಗಂಟೆಗೆ ಹಗ್ಗ ಜಗ್ಗಾಟ ಸ್ಪರ್ಧೆ. ದಿ. 8 ರಂದು …

Read More »

ಬಿಜೆಪಿ ಬಲಪಡಿಸುವ ಅವಷ್ಯಕತೆ ಇದೆ.

ಬಿಜೆಪಿ ಬಲಪಡಿಸುವ ಅವಷ್ಯಕತೆ ಇದೆ. ಪ್ರಾಮಾಣಿಕ, ನಿಷ್ಠಾವಂತ, ಕಾರ್ಯಕರ್ತರಾಗಿ ಸುಮಾರು 20-25 ವರ್ಷಗಳಿಂದ ಪಕ್ಷದಲ್ಲಿದ್ದು ಜನಮನಗೆದ್ದ ಲಕ್ಕಪ್ಪ ಕುರನಿಂಗ ಅವರು ಬಿಜೆಪಿ ಕುಡಚಿ ಮಂಡಳ ಉಪಾಧ್ಯಕ್ಷರಾಗಿದ್ದು ನಮ್ಮ ಭಾಗದ ಭಾಜಪ ಕಾರ್ಯಕರ್ತರಿಗೆ ಆನೆಬಲ ಬಂದತಾಗಿದೆಂದು ಮಲ್ಲಿಕಾರ್ಜುನ ತೇಲಿ ಹೇಳಿದರು. ಸಮೀಪದ ಕಪ್ಪಲಗುದ್ದಿ ಗ್ರಾಮದ ಗ್ರಾ.ಪಂ.ಕಾರ್ಯಾಲಯದಲ್ಲಿ ಹಮ್ಮಿಕೊಂಡ ಲಕ್ಕಪ್ಪ ಕುರನಿಂಗ ಇವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕ್ಷೇತ್ರತುಂಬೆಲ್ಲ ಪಕ್ಷವನ್ನು ಬಲಪಡಿಸಿ, ಯುವಕರನ್ನು ಹುರಿದುಂಬಿಸಿ, ಭಾಜಪ ಪಕ್ಷವನ್ನು …

Read More »