Breaking News

LOCAL NEWS

ಬೆಳಗಾವಿ, ಗಡಿವಿವಾದ, ಮಹಾರಾಷ್ಟ್ರದಲ್ಲಿ ಹೈ ಪವರ್, ಕರ್ನಾಟಕದಲ್ಲಿ ಡೋಂಟ್ ಕೇರ್…!!

ಬೆಳಗಾವಿ-ಬೆಳಗಾವಿ ಗಡಿ ವಿವಾದವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಈ ಕುರಿತು ಮುಂಬಯಿ ಮಹಾನಗರದಲ್ಲಿ ಹೈ- ಪವರ್ ಮೀಟೀಂಗ್ ಮಾಡುತ್ತಿದೆ. ನವೆಂಬರ್ 23 ರಂದು ಬೆಳಗಾವಿ ಗಡಿ ವಿವಾದದ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆ ನಡೆಯಲಿದೆ.ಗಡಿ ವಿವಾದದ ಸುಪ್ರೀಂ ಕೋರ್ಟಿನ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ಅನ್ನೋದರ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಣಯ ಪ್ರಕಟಿಸಲಿದ್ದು ಈ ವಿಚಾರವಾಗಿ ಚರ್ಚಿಸಲು ಮಹಾರಾಷ್ಟ್ರ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸುತ್ತಿದ್ದು ಈ ಸಭೆಗೆ ಕಾನೂನು …

Read More »

ಯಲ್ಲಮ್ಮನಗುಡ್ಡ: ಮಳಿಗೆಗಳ ಹರಾಜಿನಿಂದ ಕೋಟಿ, ಕೋಟಿ ಆದಾಯ

ಬೆಳಗಾವಿ, : ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಹೊಸ ಮಳಿಗೆಗಳ ಬಹಿರಂಗ ಹರಾಜಿನಿಂದ ಸುಮಾರು ಎರಡು ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಶನಿವಾರ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 226 ಮಳಿಗೆಗಳ ಹರಾಜಿನ ಮೂಲಕ ಈಗಾಗಲೇ 1,74,22,000 ರೂಪಾಯಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. 39 ಮಳಿಗೆಗಳಿಗೆ ಸರಕಾರಿ ಸವಾಲಿಗಿಂತ ಕಡಿಮೆ ಮೊತ್ತಕ್ಕೆ ಕೇಳಲಾಗಿರುತ್ತದೆ. ಇದಲ್ಲದೇ ಬೇಡಿಕೆ ಇಲ್ಲದ 24 ಮಳಿಗೆಗಳನ್ನು …

Read More »

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ. ಭರ್ಜರಿ ತಯಾರಿ…

ಬೆಳಗಾವಿ, -ವಿಧಾನಮಂಡಳದ ಚಳಿಗಾಲ  30 ರವರೆಗೆ ನಡೆಯಲಿದ್ದು, ಸಚಿವರು, ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಪ್ರತಿವರ್ಷದಂತೆ ಅತ್ಯುತ್ತಮ ವಸತಿ ಮತ್ತಿತರ ಸೌಕರ್ಯಗಳನ್ನು ಒದಗಿಸುವ ಅಗತ್ಯವಿದೆ. ಆದ್ದರಿಂದ ಈ ನಿಟ್ಟಿನಲ್ಲಿ ನಗರದ ಎಲ್ಲ ಹೋಟೆಲ್ ಮಾಲೀಕರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಬೆಳಗಾವಿ ಚಳಿಗಾಲ ವಿಧಾನಮಂಡಳ ಅಧಿವೇಶನದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ(ನ.19) ನಡೆದ ನಗರದ ಹೋಟೆಲ್ ಮಾಲೀಕರುಗಳ ಸಭೆಯ ಅಧ್ಯಕ್ಷತೆ …

Read More »

ಬಾರ್ ಗೆ ನುಗ್ಗಿ ಬಾಗಿಲು ಬಂದ್ ಮಾಡಿಸಿದ ಜಿಲ್ಲಾಧಿಕಾರಿ!:

ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಕಾರಿನಿಂದಿಳಿದ ಜಿಲ್ಲಾಧಿಕಾರಿ ‌ನಿತೇಶ್ ಪಾಟೀಲರು ನೇರವಾಗಿ ಪಕ್ದಲ್ಲೇ ಇರುವ ಆನಂದ ಬ್ರ್ಯಾಂಡಿ ಶಾಪ್ ಗೆ ತೆರಳಿ ಲೈಸೆನ್ಸ್, ಲಭ್ಯವಿರುವ ಮದ್ಯದ ಸಂಗ್ರಹ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ಕೈಗೊಂಡರು. ಜಿಲ್ಲಾಧಿಕಾರಿಗಳು ಬಸವೇಶ್ವರ ವೃತ್ತದಲ್ಲಿ ಇರುವ ಆನಂದ ಬ್ರ್ಯಾಂಡಿ ಅಂಗಡಿ ಮತ್ತು ಲಕ್ಷ್ಮೀ ಬಾರ್ ಮತ್ತು ರೆಸ್ಟೋರೆಂಟ್ ಗೆ ಸ್ವತಃ ತೆರಳಿ ಪರಿಶೀಲನೆ ಕೈಗೊಂಡರು. ಖುದ್ದಾಗಿ ಕೆಲವು ಮದ್ಯದ ಬಾಟಲ್ ಗಳನ್ನು ತೆಗೆದುಕೊಂಡು …

Read More »

ಜೆಡಿಎಸ್ ಸೆರೋಲ್ಲ…ಬಿಜೆಪಿ ಬಿಡೋಲ್ಲ,- ರಮೇಶ್ ಜಾರಕಿಹೊಳಿ

ಬೆಳಗಾವಿ- ನಾನು ಜೆಡಿಎಸ್ ಸೇರುತ್ತಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಸೇರುವದಿಲ್ಲ.ನಾನು ಬಿಜೆಪಿ ಬಿಡೋಲ್ಲ,ಬಿಡೋಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾದ್ಯಮಗಳ ಎದುರು ಸ್ಪಷ್ಟಪಡಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಸಮೀಪದಲ್ಲಿ ರಮೇಶ್ ಜಾರಕಿಹೊಳಿ ಅವರ ಆಪ್ತ ನಾಗೇಶ್ ಮನ್ನೋಳಕರ ಮಾಲಿಕತ್ವದ ಸ್ಮಾರ್ಟ್ ಕ್ಯಾಶ್ಯು ಕಾರ್ಖಾನೆಯನ್ನು ಉದ್ಘಾಟಿಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ,ಕಾಂಗ್ರೆಸ್ ನಲ್ಲಿ ನಾನು ಮಂತ್ರಿಯಾಗಿದ್ದೆ,ಆ …

Read More »

ಬೆಳಗಾವಿ: ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ತಾಯಿ….

ಬೆಳಗಾವಿ- ಜೀವನದಲ್ಲಿ ಜಿಗುಪ್ಸೆ ಹೊಂದಿದ ತಾಯಿಯೊಬ್ಬಳು ವೇದನೆಯನ್ನು ತಾಳಲಾರದೆ ಇಬ್ಬರು ಮಕ್ಕಳೊಂದಿದೆ ಮಲಪ್ರಭಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ತಾಲ್ಲೂಕಿನಲ್ಲಿ ನಡೆದಿದೆ. ಸವದತ್ತಿ ಪೋಲೀಸ್ ಠಾಣೆಯ ವ್ಯಾಪ್ತಿಯ ವಟ್ನಾಳ ಗ್ರಾಮದ ಹದ್ದಿಯಲ್ಲಿ ಮಲಪ್ರಭಾ ಹಿನ್ನೀರಿನ ದಡದಲ್ಲಿ ಮೂವರ ಶವ ಪತ್ತೆಯಾಗಿದೆ.ರಾಮದುರ್ಗ ತಾಲ್ಲೂಕಿನ ಚುಂಚನೂರು ಗ್ರಾಮದ 32 ವರ್ಷ ವಯಸ್ಸಿನ ಶಶಿಕಲಾ ಅಲಿಯಾಸ್ ತನುಜಾ ಪರಸಪ್ಪ ಗೋಡಿ,ಮಕ್ಕಳಾದಸುದೀಪ 4, ರಾಧಿಕಾ 3 ಇವರ ಶವಗಳು ಪತ್ತೆಯಾಗಿವೆ. ತಾಯಿ ತನುಜಾ, …

Read More »

ಬೆಂಗಳೂರಿನ ಫೇಮಸ್ ನಾಟಿ ಮನೆ ಈಗ ಬೆಳಗಾವಿಯಲ್ಲಿ….!!

ಬೆಳಗಾವಿ- ಬೆಂಗಳೂರಿನ ಫೇಮಸ್ ನಾಟಿ ಮನೆ ಈಗ ಬೆಳಗಾವಿಯಲ್ಲಿ ಶುರುವಾಗಿದ್ದು,ನಾನ್ ವೇಜ್ ಪ್ರೀಯರು ಬೆಳಗಾವಿಯ ನಾಟಿ ಮನೆಗೆ ಮುಗಿಬೀಳುತ್ತಿದ್ದಾರೆ. ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ ಆಝಂ ನಗರದ ಬಳಿ,ಅಜೀಜ್ ಬಿಲ್ಡೀಂಗ್ ನಲ್ಲಿ ಬೆಂಗಳೂರಿನ ಫೇಮಸ್ ನಾಟಿ ಮನೆಯ ಶಾಖೆ ಶುರುವಾಗಿದ್ದು, ಈ ನಾಟಿ ಮನೆ ಬೆಳಗಾವಿಯಲ್ಲೂ ಫೇಮಸ್ ಆಗುತ್ತಿದೆ. ಈ ನಾಟಿ ಮನೆಯಲ್ಲಿ ಚಿಕನ್ ಬಿರ್ಯಾನಿ,ಮಟನ್ ಬಿರಿಯಾನಿ, ಮಟನ್ ಕರಿ,ಚಿಕನ್ ಕರಿ, ಮಟನ್ ಪಾಯಾ,ಅಂದ್ರೆ ಕಾಲು ಸೂಪು,ಸೇರಿದಂತೆ ಎಲ್ಲ ರೀತಿಯ ನಾನ್ …

Read More »

ಕಲ್ಲಂಗಡಿಯಲ್ಲಿ ಗಾಂಧೀಜಿ,ರಾಜ್ ಕುಮಾರ್ ,ಕುವೆಂಪು,ಚನ್ನಮ್ಮ…!!!

ಬೆಳಗಾವಿಯ ಕ್ಲಬ್ ರಸ್ತೆಯ ಹ್ಯುಂ ಪಾರ್ಕಿನಲ್ಲಿ ತೋಟಗಾರಿಕೆ ಇಲಾಖೆ ಫಲ ಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ.ಕಲ್ಲಂಗಡಿಯಲ್ಲಿ ಡಾ.ರಾಜ್ ಕುಮಾರ್,ಗಾಂಧಿಜಿ,ಚನ್ನಮ್ಮ,ರಾಯಣ್ಣನ ಭಾವಚಿತ್ರಗಳನ್ನು ಮೂಡಿಸಲಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಅಪ್ಪು ಕಟೌಟ್,ಎಲ್ಲರ ಗಮನ ಸೆಳೆಯುತ್ತಿದೆ. ಬೆಳಗಾವಿ, ನ.18 ಬೆಳಗಾವಿಯ ಫಲ ಪುಷ್ಪ ಪ್ರದರ್ಶನ ಬೆಂಗಳೂರು ಲಾಲ್ಬಾಗ್ ಮಾದರಿಯಲ್ಲಿ ಏರ್ಪಡಿಸಲಾಗಿದೆ. ವಿವಿಧ ಮಾದರಿಯ ಫಲ ಪುಷ್ಪಗಳು, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗಳನ್ನು ಕೂಡಾ ನಿರ್ಮಿಸಲಾಗಿದೆ. ಸ್ಥಳೀಯರು ಫಲ ಪುಷ್ಪಗಳ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದೆ ಮಂಗಳಾ …

Read More »

ಬೆಳಗಾವಿ ಜಿಲ್ಲಾಧಿಕಾರಿಗಳ ನಡೆ,ಹಳ್ಳಿಯ ಕಡೆಗೆ…!!

ನ.19 ರಂದು “ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನಡೆ ಸವದತ್ತಿ ತಾಲ್ಲೂಕಿನ ಉಗರಗೊಳ ಹಳ್ಳಿಯ ಕಡೆ” ಬೆಳಗಾವಿ-“ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಶನಿವಾರ (ನವಂಬರ್.19) ಸವದತ್ತಿ ತಾಲ್ಲೂಕಿನ ಉಗರಗೊಳ ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ. ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ದಿಸೆಯಲ್ಲಿ ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಒಂದು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅದೇ ರೀತಿ ಜಿಲ್ಲೆಯ ಎಲ್ಲ …

Read More »

ಸಾಲ ಕೊಟ್ಟ ಅಜ್ಜಿಯನ್ನೇ ಖಲ್ಲಾಸ್ ಮಾಡಿದ ಕಿರಾತಕರು

ಹುಕ್ಕೇರಿ: ಕೊಟ್ಟ ಹಣ ವಾಪಸ್ ಕೊಡದೇ ತಪ್ಪಿಸಿಕೊಳ್ಳಲು ಅಜ್ಜಿಯ ಪ್ರಾಣವನ್ನೇ ತೆಗೆದಿದ್ದ ಕಿರಾತಕರನ್ನು ಪೊಲೀಸರು ಬಂಧಿಸಿರುವ ಘಟನೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ. ಅಕ್ಟೋಬರ‌ 6 ರಂದು ನಡೆದಿದ್ದ ಈ ಕೊಲೆಯ ಹಿಂದಿನ ರಹಸ್ಯ ಈಗ ಬಯಲಾಗಿದೆ. ಮಲ್ಲವ್ವ ಕಮತೆ ಕೊಲೆಯಾದ ವೃದ್ಧೆ. ಶಂಕರ‌ ರಾಮಪ್ಪ ಪಾಟೀಲ‌ ಮತ್ತು ಆತನ ಗೆಳೆಯ ಮಹೇಶ ಸದಾಶಿವ ಕಬಾಡಗೆ ಬಂಧಿತ ಆರೋಪಿಗಳು. ಶಂಕರ ಪಾಟೀಲ‌ನಿಗೆ ವೃದ್ಧೆ ಮಲ್ಲವ್ವ ಅವರ ಬಳಿ …

Read More »

ಕಾಂಗ್ರೆಸ್ ಟೆಕೆಟ್ ಗಾಗಿ ಅರ್ಜಿ ಹಾಕಿದ ರಮೇಶ್…!!

ಬೆಳಗಾವಿ-ವಿಧಾನಸಭೆ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿ ಅಖಾಡಾ ರೆಡಿಯಾಗುತ್ತಿದೆ.ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಹಾಕುವ ಪ್ರಕ್ರಿಯೆ ಜೋರಾಗಿಯೇ ನಡೆದಿದೆ. ಬೆಳಗಾವಿ ಉತ್ತರ ಕ್ಷೇತ್ರದಿಂದ ಈಗಾಗಲೇ ಎಂಟು ಜನ ಅರ್ಜಿ ಹಾಕಿದ್ದಾರೆ. ಇನ್ನೂ ಹಲವಾರು ಜನ ಅರ್ಜಿ ಹಾಕಲು ತಯಾರಿ ನಡೆಸಿದ್ದಾರೆ‌. ಆದ್ರೆ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕೈ ಪಾಳೆಯದಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆದಿವೆ ರಮೇಶ್ ಕುಡಚಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಲಾಗುತ್ತದ್ದರೂ ರಮೇಶ್ ಕುಡಚಿ …

Read More »

19 ರಿಂದ 29ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ..

ಬೆಂಗಳೂರು- ಡಿಸೆಂಬರ್ 19 ರಿಂದ 29ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ಕರೆಯಲಾದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ ಬಳಿಕ‌ ಪತ್ರಕರ್ತರಿಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ.‌ ಕೆ.ಸುಧಾಕರ, ಈ ಬಾರಿ ಬೆಳಗಾವಿಯಲ್ಲಿ 10 ದಿನಗಳ ಕಾಲ‌ ಚಳಿಗಾಲ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು. ಈ ಬಾರಿ ಯಾವುದೇ …

Read More »

ಸಾಹುಕಾರರೇ ನೇರವಾಗಿ ನನ್ನೊಂದಿಗೆ ಚರ್ಚೆಗೆ ಬನ್ನಿ- ಚಕ್ರವರ್ತಿ ಸೂಲಿಬೆಲೆ

ಯಮಕನಮರ್ಡಿ-ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಕುರಿತಾದ ಹೇಳಿಕೆ ನೀಡಿದ ಬೆನ್ನಲ್ಲಿಯೇ ಯಮಕನಮರ್ಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ನೇತ್ರತ್ವದಲ್ಲಿ ಯಮಕನಮರ್ಡಿಯಲ್ಲೇ ನಾನು ಹಿಂದೂ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿದ್ದ ಚಕ್ರವರ್ತಿ ಸೂಲಿಬೆಲೆ ಅವರು ಸತೀಶ್ ಜಾರಕಿಹೊಳಿ ಅವರಿಗೆ ಸಾಹುಕಾರರೇ ನೇರವಾಗಿ ನನ್ನೊಂದಿಗೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ರು. ನಾನು ಹಿಂದೂ ಸಮಾವೇಶದಲ್ಲಿ ಹಿಂದೂ ಧರ್ಮದ ಉರಿತು ಚಕ್ರವರ್ತಿ ಸೂಲಿಬೆಲೆ ಅವರು ಭಾಷಣ …

Read More »

ಗರೀಬಿ ಹಠಾವೋ ಪಕ್ಷದ,ಟಿಕೆಟ್ ಗೆ ಅರ್ಜಿ ಹಾಕಲು ಎರಡು ಲಕ್ಷ ಕೊಡಬೇಕ್ರೀ ಯಪ್ಪಾ…!!

(ಮೆಹಬೂಬ ಮಕಾನದಾರ) ಬೆಳಗಾವಿ- ನಾನು ಚಿಕ್ಕವನಿದ್ದಾಗ,ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಎಂದು ಪ್ರಚಾರ ಮಾಡಿದ್ದನ್ನು ಕೇಳಿದ್ದೆ,ಆದ್ರೆ ಈ ಪಕ್ಷ ಈಗ ಬಡವರ ಪಕ್ಷವಾಗಿ ಉಳಿದಿಲ್ಲ ಯಾಕಂದ್ರೆ ಒಬ್ಬ ಪ್ರಾಮಾಣಿಕ,ಬಡ ಕಾಂಗ್ರೆಸ್ ಕಾರ್ಯಕರ್ತ ಕಾಂಗ್ರೆಸ್ ಟಿಕೆಟ್ ಹಾಕಲು ಈ ಪಕ್ಷದಲ್ಲಿ ಅವಕಾಶವೇ ಇಲ್ಲ. ಹೌದು… ಇದನ್ನು ನಾನು ಹೇಳುತ್ತಿಲ್ಲ,ಯಾರ ಹತ್ತಿರ ಎರಡು ಲಕ್ಷ ರೂ ಇದೆಯೋ ಅವರೇ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಅರ್ಜಿ ಹಾಕಬಹುದು ಎನ್ನುವ ಫರ್ಮಾನು ಹೊರಡಿಸಿದ್ದು ಕರ್ನಾಟಕ …

Read More »

ಟಿಕೆಟ್ ಗಾಗಿ ರಾಜು ಸೇಠ,ಪೀರೋಜ್ ಸೇಠ ಇಬ್ಬರಿಂದಲೂ ಅರ್ಜಿ…!!

ಬೆಳಗಾವಿ-ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮುಸುಕಿನ ಗುದ್ದಾಟ ನಡೆದಿದ್ದು ಮಾಜಿ ಶಾಸಕ ಫಿರೋಜ್ ಸೇಠ,ಮತ್ತು ರಾಜು ಸೇಠ ಇಬ್ಬರೂ ಅರ್ಜಿ ಸಲ್ಲಿಸಿದ್ದು,ಫಿರೋಜ್ ಸೇಠ ಪುತ್ರ ಫೈಜಾನ್ ಸೇಠ ಅವರೂ ಸಹ ಕೆಪಿಸಿಸಿ ಕಚೇರಿಯಿಂದ ಅರ್ಜಿ ಪಡೆದಿದ್ದು,ಇನ್ನುವರೆಗೆ ಅರ್ಜಿ ಸಲ್ಲಿಸಿಲ್ಲ‌. ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿತ್ತು,ಆದ್ರೆ ಇವತ್ತು ಕೊನೆಯ ಕ್ಷಣದಲ್ಲಿ ದಿನಾಂಕ ವಿಸ್ತರಿಸಲಾಗಿದ್ದು, ಪ್ರಮುಖರು ಇವತ್ತೇ ಅರ್ಜಿ ಸಲ್ಲಿಸಿದ್ದು …

Read More »
Sahifa Theme License is not validated, Go to the theme options page to validate the license, You need a single license for each domain name.