Breaking News

LOCAL NEWS

ಇನ್ನೂ ನಾಲ್ಕು ದಿನ ಬೆಳಗಾವಿಯ ರವಿವಾರ ಪೇಠೆ ಬಂದ್

  ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಇಂದು ಐದು ಕೊರೋನಾ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬೆಳಗಾವಿಯ ರವಿವಾರಪೇಠೆಯನ್ನು ಸಂಪೂರ್ಣವಾಗಿ ಬಂದ್ ಮಾಡಲು ನಗರ ಪೋಲೀಸ್ ಇಲಾಖೆ ನಿರ್ಧರಿಸಿದೆ . ಬೆಳಗಾವಿಯ ಕ್ಯಾಂಪ್ ಪ್ರದೇಶದ ಮೂವರಿಗೆ,ಮಾಳ ಮಾರುತಿ ಠಾಣೆ ವ್ಯಾಪ್ತಿಯ ಓರ್ವನಿಗೆ ,ಮತ್ತು ಎಪಿ ಎಂ ಸಿ ಠಾಣೆ ವ್ಯಾಪ್ತಿಯ ಏರ್ವನಿಗೆ ಸೊಂಕು ದೃಡವಾದ ಹಿನ್ನಲೆಯಲ್ಲಿ ನಗರ ಪೋಲೀಸ್ ಇಲಾಖೆ ಗಂಭೀರವಾಗಿದ್ದು ನಾಳೆಯಿಂದ ಬೆಳಗಾವಿ ನಗರದಲ್ಲಿ ಖಡಕ್ ಲಾಕ್ …

Read More »

ಶುಕ್ರವಾರ ಬೆಳಗಾವಿಯಲ್ಲಿ ಕೊರೋನಾ ಸ್ಪೋಟ ಮತ್ತೆ ಐವರಿಗೆ ಸೊಂಕು, 41 ಕ್ಕೇರಿದ ಸೊಂಕಿತರ ಸಂಖ್ಯೆ…

ಬೆಳಗಾವಿಯಲ್ಲಿ ಮತ್ತೆ ಐವರಿಗೆ ಕೊರೋನಾ ಸೊಂಕು 41 ಕ್ಕೇರಿದ ಸೊಂಕಿತರ ಸಂಖ್ಯೆ ಬೆಳಗಾವಿ – ಬೆಳಗಾವಿಯಲ್ಲಿ ಕೊರೋನಾ ಮತ್ತೆ ಸ್ಪೋಟಗೊಂಡಿದೆ.ಇಂದು ಮತ್ತೆ ಐವರಿಗೆ ಸೊಂಕು ಪತ್ತೆ ಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 41 ಕ್ಕೇರಿದೆ ಇಂದು ಸಂಜೆ ಬಿಡುಗಡೆಯಾಗಿರುವ ಬುಲಿಟೀನ್ ನಲ್ಲಿ ಐವರಿಗೆ ಸೊಂಕು ಇರುವದು ದೃಡವಾಗಿದ್ದು ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಇಂದು ಕೊರೋನಾ ಸೊಂಕು ಇರುವ ಐದೂ ಜನರು ತಬ್ಲೀಗ್ ಜಮಾತಿನ ನಂಟು ಹೊಂದಿದವರು …

Read More »

ಮಾರ್ಗಸೂಚಿ ಪ್ರಕಾರವೇ ಕ್ವಾರಂಟೈನ್ ವ್ಯವಸ್ಥೆ

  ಬೆಳಗಾವಿ, : ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೋಟೆಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಕ್ವಾರಂಟೈನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ಎಲ್ಲ ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ವೈಯಕ್ತಿಕ ಸ್ವಚ್ಛತೆ ಸೇರಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. …

Read More »

ಬೆಳಗಾವಿಯಲ್ಲಿ ಕೊರೋನಾ ವೈರಾಣು ಪ್ರಯೋಗಾಲಯಕ್ಕೆ ICMR ಹಸಿರು ನಿಶಾನೆ….

ಬೆಳಗಾವಿ- ಬೆಳಗಾವಿಯಲ್ಲಿ ಕೊರೋನಾ ಸೊಂಕು ಪತ್ತೆ ಮಾಡುವ ಲ್ಯಾಬ್ ಆರಂಭಿಸಲು ICMR ಹಸಿರು ನಿಶಾನೆ ನೀಡಿದೆ ಎಂದು ರಾಷ್ಟ್ರದ ಪ್ರತಿಷ್ಠಿತ ಹಿಂದೂ ಇಂಗ್ಲೀಷ್ ಪತ್ರಿಕೆ ಟ್ವಿಟ್ ಮಾಡಿದೆ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಯ ಎದುರಿನ. ರಾಷ್ಟ್ರೀಯ ಪಾರಂಪರಿಕ ಔಷಧಿ ಸಂಶೋಧನಾ ಕೇಂದ್ರದ ಕಟ್ಟಡದಲ್ಲಿ ಈ ಪ್ರಯೋಗಾಲಯ ಆರಂಭವಾಗಲಿದೆ . ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರುಡುತ್ತಿದ್ದು ಕೊರೋನಾ ಸೊಂಕಿತರ ಗಂಟಲು ದ್ರವ ಪರೀಕ್ಷೆ ಇನ್ನು ಮುಂದೆ ತ್ವರಿತವಾಗಿ …

Read More »

ನಾಳೆಯಿಂದ ಬೆಳಗಾವಿಯಲ್ಲಿ ಖಾಕಿ ಖದರ್…..!!!!

ವ್ಯಾಪಕವಾಗಿ ಹರಡುತ್ತಿರುವ ವೈರಸ್…ಬೆಳಗಾವಿ ಪೋಲೀಸ್ ಫುಲ್ ಸೀರಿಯಸ್…..!!!! ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ಬೆಳಗಾವಿ ಪೋಲೀಸರು ಗಂಭೀರವಾಗಿ ಪರಿಗಣಿಸಿದ್ದು ನಾಳೆಯಿಂದ ಅತ್ಯಂತ ಕಟ್ಟು ನಿಟ್ಟಿನ ಲಾಕ್ ಡೌನ್ ಅನುಷ್ಠಾನ ಗೊಳಿಸಲು ನಿರ್ಧರಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 36 ಕ್ಕೆ ಏರಿಕೆ ಆಗುತ್ತಿದ್ದಂತೆಯೇ ತುರ್ತು ಸಭೆ ಕರೆದ ನಗರ ಪೋಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಗಳು,ಬೆಳಗಾವಿ ನಗರ ಹಾಗೂ ಜಿಲ್ಲೆ …

Read More »

ಬೆಳಗಾವಿ ಜಿಲ್ಲೆಯ 243 ಶಂಕಿತರ ರಿಪೋರ್ಟ್ ಬರೋದು ಬಾಕಿ ಇದೆ..

  ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಇಂದು 36 ಕ್ಕೆ ಏರಿದ್ದು ಇನ್ನೂ 243 ಜನರ ರಿಪೋರ್ಟ ಬರುವದು ಬಾಕಿ ಇದೆ 243 ಕೊರೋನಾ ಶಂಕಿತರ ಗಂಟಲು ದ್ರವ ವನ್ನು ಶಿವಮೊಗ್ಗ ಮತ್ತು ಬೆಂಗಳೂರಿನ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು ಜಿಲ್ಲಾಡಳಿತ ರಿಪೋರ್ಟ್ ನಿರೀಕ್ಷೆಯಲ್ಲಿದೆ. ಬೆಳಗಾವಿ ಜಿಲ್ಲಾಡಳಿತ ಹಾಗು ಆರೋಗ್ಯ ಇಲಾಖೆ ಈಗಾಗಲೇ 1947 ಜನರ ಮೇಲೆ ನಿಗಾ ಇಟ್ಟಿದೆ. 356 ಜನ 14 ದಿನದ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ 36 …

Read More »

ಸಂಕೇಶ್ವರ್ ಯಳ್ಳೂರಲ್ಲಿ ಹೈ ಅಲರ್ಟ್….!!!

  ಬೆಳಗಾವಿ, ಏ.೧೬(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಸೋಂಕು ಹರಡುವಿಕೆ ತಡೆಗಟ್ಟುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆದ್ದರಿಂದ ಇದು ಇನ್ನಷ್ಟು ಹರಡದಂತೆ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೋವಿಡ್-೧೯ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಾಲ್ಲೂಕುಗಳ ಅಧಿಕಾರಿಗಳ ಜತೆ ಗುರುವಾರ(ಏ‌.೧೬) ನಡೆದ ವಿಡಿಯೋ ಸಂವಾದದಲ್ಲಿ ಅವರು …

Read More »

ಬೆಳಗಾವಿಯಲ್ಲಿ ಒಂದೇ ದಿನ 17 ಜನರ ರಿಪೋರ್ಟ್ ಪಾಸಿಟೀವ್ 36 ಕ್ಕೇರಿದ ಸೊಂಕಿತರ ಸಂಖ್ಯೆ…

ಬೆಳಗಾವಿಯಲ್ಲಿ ಮತ್ತೆ 17,ಸೊಂಕಿತರ ಪತ್ತೆ 36 ಕ್ಕೇರಿದ ಸೊಂಕಿತರ ಸಂಖ್ಯೆ… ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ರುದ್ರ ನರ್ತನ ನಡೆಸಿದೆ ಇಂದು ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿವಯ ಬೆಳಗಾವಿ ಜಿಲ್ಲೆಯ 17 ಜನರಿಗೆ ಸೊಂಕು ಇರುವದು ದೃಡವಾಗಿದ್ದು ಸೊಂಕಿತರ ಸಂಖ್ಯೆ 36 ಕ್ಕೇರಿದೆ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ 8 ಹಾಗು ರಾಯಬಾಗ ಕುಡಚಿ 7 ಚಿಕ್ಕೋಡಿ ಯಲ್ಲಿ 1 ಬೆಳಗಾವಿ ನಗರ 1 ಹೀಗೆ 17 ಸೊಂಕಿತರು …

Read More »

178 ಶಂಕಿತರ ರಿಪೋರ್ಟ್ ಬರೋದು ಬಾಕಿ ಇದೆ.,.ಎಚ್ಚರ…ಎಚ್ಚರ…ಎಚ್ಚರ….!!!

ಬೆಳಗಾವಿ- ಕೊರೋನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಸಿರಿಯಸ್ ಆಗುತ್ತಾ ಹೊರಟಿದೆ,ಸೊಂಕಿತರ ,18 ಜನ ಸೊಂಕಿತರ ಆರೋಗ್ಯ ಸ್ಥಿರವಾಗಿದ್ದರೂ ಈ ಮಹಾಮಾರಿ ವೈರಸ್ ಜಿಲ್ಲೆಯಲ್ಲಿ ಒಂದು ಬಲಿ ಪಡೆದಿದೆ. ಸೊಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ದಿನನಿತ್ಯ ಕ್ವಾರಂಟೈನ್ ಮಾಡುವ ಕಾರ್ಯ ಹಗಲು ರಾತ್ರಿ ನಡೆದಿದೆ.ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಪ್ರತಿದಿನ ಹಲವಾರು ಜನರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ 178 ಜನರ ರಿಪೋರ್ಟ್ ಬರುವದು …

Read More »

ಕೇಂದ್ರ ಸರ್ಕಾರದ ರೆಡ್ ಝೋನ್ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆ ಸೇರ್ಪಡೆ…

ಬೆಳಗಾವಿ- ಕೊರೋನಾ ಸೊಂಕು ಯಾವ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆಯೋ ಅಂತಹ 170 ಜಿಲ್ಲೆಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಿದ್ದು ಕೇಂದ್ರದ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯೂ ರೆಡ್ ಝೋನ್ ಪಟ್ಟಿಯಲ್ಲಿ ಸೇರಿಕೊಂಡಿದೆ. ಕೇಂದ್ರ ಸರ್ಕಾರ ಕೊರೋನಾ ಸೊಂಕಿಗೆ ಸಮಂಧಿಸಿದಂತೆ, ಕೆಂಪು,ಹಳದಿ,ಮತ್ತು ಹಸಿರು ಹೀಗೆ ಮೂರು ವಲಯಗಳನ್ನಾಗಿ ವರ್ಗೀಕರಿಸಿದ್ದು ರೆಡ್ ಝೋನ್ ಗೆ ಸೇರ್ಪಡೆಯಾಗುವ ರಾಷ್ಟ್ರದ 170 ಜಿಲ್ಲೆಗಳ ಪಟ್ಟಿ ಮಾಡಿದೆ ಕರ್ನಾಟಕದ ಎಂಟು ಜಿಲ್ಲೆಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಎಂಟು ಜಿಲ್ಲೆಗಳಲ್ಲಿ,ಬೆಳಗಾವಿಯೂ ಇದೆ …

Read More »

ಕೊರೋನಾದಿಂದ ಅಜ್ಜಿಯ ಸಾವು,ಹಿರೇಬಾಗೇವಾಡಿಗೆ ದೌಡಾಯಿಸಿದ ಕೇಂದ್ರ ಸಚಿವ

  ಬೆಳಗಾವಿ, : ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿರುವ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಸೋಂಕು ಪತ್ತೆಯಾಗಿರುವುದರಿಂದ ಗ್ರಾಮಸ್ಥರು ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲ್ಪಟ್ಟಿರುವ ಗ್ರಾಮದಲ್ಲಿ ಸರ್ಕಾರದ ನಿರ್ದೇಶನದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೋಂಕು …

Read More »

ಕಿಲ್ಲರ್ ಕೊರೋನಾಗೆ ಬೆಳಗಾವಿಯಲ್ಲಿ ಮೊದಲ ಬಲಿ… ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 19 ಕ್ಕೆ ಏರಿಕೆ

  ಬೆಳಗಾವಿ- ಕಿಲ್ಲರ್ ಕೊರೋನಾಗೆ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ ಹಿರೇಬಾಗೇವಾಡಿ ಗ್ರಾಮದ 85 ವರ್ಷದ ಮುದುಕಿ ಸತ್ತಿದ್ದು ಹೃದಯಾಘಾತದಿಂದ ಅಲ್ಲ ಈ ಅಜ್ಜಿ ಸತ್ತಿದ್ದು ಕಿಲ್ಲರ್ ಕೊರೋನಾದಿಂದ ಎಂಬುದು ಇಂದು ದೃಡವಾಗಿದೆ ಹಿರೇಬಾಗೇವಾಡಿ ಗ್ರಾಮದಲ್ಲಿ ಮೊಮ್ಮಗನ ಸಂಪರ್ಕದಿಂದ ಈ ಅಜ್ಜಿಗೆ ಸೊಂಕು ಹರಡಿತ್ತು ಮುದುಕಿ ಸತ್ತ ಬಳಿಕ ಇವಳ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಇಂದು ಸಂಜೆ ಬಿಡುಗಡೆಯಾದ ಬುಲಿಟೀನ್ ನಲ್ಲಿ ಅಜ್ಜಿಗೆ ಕೊರೋನಾ ಇರುವದು ದೃಡವಾಗಿದೆ. ಅಜ್ಜಿಗೆ …

Read More »

ಬೆಂಗಳೂರಲ್ಲಿ ನೀರಾವರಿ ಮಂತ್ರಿಗಳ ಮೀಟೀಂಗ್…..

ಬೆಂಗಳೂರು- ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬೇಕಾಗಿರುವ ವಿಸ್ತೃತ ಯೋಜನಾ ವರದಿಗಳನ್ನು ಮತ್ತು ದಾಖಲಾತಿಗಳನ್ನು ತುರ್ತಾಗಿ ಸಿದ್ದಪಡಿಸಿಕೊಳ್ಳುವಂತೆ *ಜಲಸಂಪನ್ಮೂಲ ಸಚಿವ ರಾದ ಶ್ರೀ ರಮೇಶ್ ಜಾರಕಿಹೊಳಿ‌* ಅವರು ಸೂಚಿಸಿದ್ದಾರೆ. ವಿಧಾನಸೌಧದ ಜಲಸಂಪನ್ಮೂಲ ಸಚಿವರ ಕಛೇರಿಯಲ್ಲಿ ನಡೆದ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆ ಆಗಬಾರದು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು …

Read More »

ಲಾಕ್ ಡೌನ್ ಮದ್ಯೆಯೂ ಬೆಳಗಾವಿಗೆ ವಿಮಾನ,ಬಂದಿದ್ದೇಕೆ ಗೊತ್ತಾ…..!!!

ಬೆಳಗಾವಿ- ಭಾರತ್ ಲಾಕ್ ಡೌನ್ ಇದ್ದರೂ ಸಹ ತುರ್ತು ಸಂದರ್ಭದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವಿಮಾನ ಆಗಮಿಸಿದೆ. ಸೂರತ್ ನಿಂದ ಬೆಳಗಾವಿಗೆ ಬಂದಿಳಿದ ವಿಮಾನದಲ್ಲಿ ಆಗತಾನೆ ಜನನಿಸಿದ ಮಗುವನ್ನು ಚಿಕಿತ್ಸೆಗೆಂದು ಬೆಳಗಾವಿಗೆ ತರಲಾಗಿದೆ. ರಕ್ಷಣೆ ಧಾವಿಸಿದ ವೈದ್ಯರ ತಂಡ ಮಗುವಿಗೆ ಚಿಕಿತ್ಸೆ ಕೊಡಲು ಬೆಳಗಾವಿಯ ವೈದ್ಯರು ಮದಾಗಿದ್ದಾರೆ. ವಿಶೇಷ ವಿಮಾನ ಮೂಲಕ ಸೂರತನಿಂದ ಪುಟ್ಟ ಮಗು ಜೊತೆಗೆ ವೈದ್ಯರ ತಂಡ ಆಗಮಿಸಿದೆ. ಆಗತಾನೆ ಜನಿಸಿದ ಮಗುವಿನ ಆರೋಗ್ಯದಲ್ಲಿ ಸಮಸ್ಯೆ …

Read More »

ಹಣ್ಣಿನ ರುಚಿ ಸವಿಯಲು ಬಂದವರಿಗೆ ಲಾಠಿ ರುಚಿ ತೋರಿಸಿದ ಪೋಲೀಸರು…..!!!

ಬೆಳಗಾವಿ- ಸೋಸಿಯಲ್ ಡಿಸ್ಟನ್ಸ್ ಕಾಪಾಟಿ ವ್ಯಾಪಾರ ಮಾಡ್ಕೊಳ್ಳಿ ಅಂತಾ ಪೋಲೀಸರು ಎಷ್ಟೇ ಹೇಳಿದ್ರೂ ಜನ ಕೇಳ್ತಾನೇ ಇಲ್ಲ,ಇಂದು ಬೆಳಿಗ್ಗೆ ಬೆಳಗಾವಿಯ ಹೋಲ್ ಸೇಲ್ ಫ್ರುಟ್ ಮಾರ್ಕೆಟ್ ನಲ್ಲಿ ಜನಜಂಗುಳಿಯೇ ಸೇರಿತ್ತು ಮಾಳ ಮಾರುತಿ ಠಾಣೆಯ ಪೋಲೀಸರು ಬಂದು ಲಾಠಿ ಬೀಸಿದ್ರು ಜನ ಓಡಿ ಹೋದ್ರು…… ಬೆಳಗಾವಿ ಜಿಲ್ಲೆಯಲ್ಲಿ 18 ಕೊರೊನಾ ಪ್ರಕರಣ ಪತ್ತೆಯಾದರೂ ಲಾಕ್‌ಡೌನ್‌ಗೆ ಜನ ಡೌಂಟ್ ಕೇರ್ ಅಂತೀದಾರೆ, ಗುಂಪುಗುಂಪಾಗಿ ಹಣ್ಣು ಖರೀದಿಯಲ್ಲಿ ತೊಡಗಿದವರಿಗೆ ಪೋಲೀಸರು ಹಣ್ಣಿನ ರುಚಿ …

Read More »