Breaking News

LOCAL NEWS

ಕನ್ನಡದ ಹಬ್ಬಕ್ಕೆ ಸಜ್ಜಾಗುತ್ತಿದೆ ಕ್ರಾಂತಿಯ ನೆಲ ಬೆಳಗಾವಿ…..!

ಬೆಳಗಾವಿ-ಗಡಿನಾಡ ಗುಡಿ ಕರ್ನಾಟಕದ ಕೀರೀಟ ಗಂಡು ಮೆಟ್ಟಿನ ನೆಲ ಐತಿಹಾಸಿಕ ಕ್ರಾಂತಿಯ ನೆಲ ಈಗ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲು ಸಜ್ಜಾಗುತ್ತಿದೆ ಬೆಳಗಾವಿ ನಗರದ ವೀರಾಣಿ ಚನ್ನಮ್ಮ ವೃತ್ತ , ಸಂಗೊಳ್ಳಿ ರಾಯಣ್ಣ ವೃತ್ತ ,ಜಿಲ್ಲಾಧಿಕಾರಿಗಳ ಕಚೇರಿ ಆವರಣ ಸೇರಿದಂತೆ ನಗರದ  ಎಲ್ಲ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ ಅದಲ್ಲದೆ ನಗರದ ಸಿಪಿಎಡ್ ಮೈದಾನದಲ್ಲಿ ಧ್ವಜಾರೋಹನಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಜಿಲ್ಲಾಧಿಕಾರಿ ಎನ್ ಜೈರಾಮ ಅವರು ಈ ಬಾರಿ ಕನ್ನಡದ …

Read More »

ಆನೆ ತುಳಿತಕ್ಕೆ ಓರ್ವನ ಬಲಿ

ಬೆಳಗಾವಿ-ಆನೆ ತುಳಿತ ಬೊಮ್ಮನಕೊಪ್ಪ ಗ್ರಾಮದ ವಾಸುದೇವ ಮಿರಾಸಿ ನಾಗರಗಾಳಿ ಕಾಡಿನಲ್ಲಿ ಸಾವೊನ್ನೊಪ್ಪಿದ ಘಟನೆ ನಡೆದಿದೆ ನಾಗರಗಾಳಿ ಗ್ರಾಮದ ಗದ್ದೆಗಳಿಗೆ ನುಗ್ಗಿದ ಆನೆಗಳ ಹಿಂಡನ್ನು ಓಡಿಸುವಾಗ ಈ ಘಟನೆ ನಡೆದಿದ್ದು ಈ ಘಟನೆಯಲ್ಲಿ ಇಬ್ಬರು ವನ ಪಾಲಕರೂ ನಾಪತ್ತೆಯಾಗಿದ್ದಾರೆ ಎಂಬ ವಿಷಯ ನಾಗರಗಾಳಿ ಗ್ರಾಮಸ್ಥರನ್ನು ಕಾಡುತ್ತಿದ್ದು ಇದು ಕೇವಲ ವದಂತಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ಸಮಾಧಾನ ಹೇಳುತ್ತಿದ್ದಾರೆ ಡಿಸಿಎಫ್ ಬಿ. ವಿ. ಪಾಟೀಲ ಸ್ಥಳಕ್ಕೆ ದೌಡಾಯಿಸಿದ್ದಾರೆ

Read More »

ಆನೆ ಹಿಂಡು ಓಡಿಸಲು ಕಾಡಿಗೆ ನುಸುಳಿದ ಇಬ್ಬರು ವನಪಾಲಕರ ನಾಪತ್ತೆ

ಬೆಳಗಾವಿ-ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಾಗರಗಾಳಿ ಗ್ರಾಮಕ್ಕೆ ನುಗ್ಗಿದ ಆನೆಗಳ ಹಿಂಡನ್ನು  ಪಟಾಕಿ ಸಿಡಿಸುತ್ತ ಢೋಲು ಬಾರಿಸುತ್ತ ಕಾಡಿಗೆ ನುಗ್ಗಿದ ಿಬ್ಬರು ವನಪಾಲಕರು ನಾಪತ್ತೆಯಾಗಿದ್ದಾರೆ ಶುಕ್ರವಾರ ಮಧ್ಯಾಹ್ನ ಆನೆಗಳ ಹಿಂಡು ನಾಗರಗಾಳಿ ಗ್ರಾದ ಗದ್ದೆಗೆಗಳಿಗೆ ಲಗ್ಗೆ ಇಟ್ಟಿತ್ತು ಈ ಆನೆಗಳ ಹಿಂಡನ್ನು ಮರಳಿ ಕಾಡಿಗೆ ಓಡಿಸಲು ಗ್ರಾಮಸ್ಥರು ವನಪಾಲಕರ ಸಹಾಯದೊಂದಿಗೆ ಪಟಾಕಿ ಸಿಡಿಸುತ್ತ ಢೋಲು ಬಾರಿಸುತ್ತ ಕಾಡಿಗೆ ನುಗ್ಗಿದರು ಗ್ರಾಮಸಥರು ಅರ್ಧ ದಾರಿಯಿಂದ ಗ್ರಾಮಕ್ಕೆ ವಾಪಸ್ ಆಗಿದ್ದು ಆನೆ ಹಿಂಡನ್ನು ಹಿಂಬಾಲಿಸಿ ಕಾಡಿನೊಳಗೆ …

Read More »

ಬೆಳಗಾವಿಯಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಜಾಗೆ ರೆಡಿ..ಬೇಗ ಅನುಮತಿ ಕೊಡಿ..!

ಬೆಳಗಾವಿ-ಕೂಸು ಹುಟ್ಟುವ ಮೊದಲು ಕುಲಾಯಿ ಹೊಲಸಿದ ಹಾಗೆ ಬೆಳಗಾವಿ ಮಹಾನಗರ ಪಾಲಿಕೆ ಮಂಜೂರಾಗದ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ನಗರದ ಗೋವಾ ವೇಸ್ ನಲ್ಲಿರುವ ಪಾಲಿಕಯ ವಾಣಿಜ್ಯ ಸಂಕೀರ್ಣದಲ್ಲಿ ಜಾಗೆಯನ್ನು ಗುರುತಿಸಿದ್ದು ಶುಕ್ರವಾರ ಮೇಯರ್ ಸರೀತಾ ಪಾಟೀಲ ಜಾಗೆಯ ಪರಶೀಲನೆ ನಡೆಸಿದರು ಗೋವಾ ವೇಸ್ ನ ಪಾಲಿಕೆಯ ಕಾಂಪ್ಲೆಕ್ಸನಲ್ಲಿ ಮೂರು ಸಾವಿರ ಸ್ಕ್ವೇರ್ ಫೂಟ್ ಜಾಗೆಯನ್ನು ಮೀಸಲಿಡಲಾಗಿದೆ ಮೇಯರ್ ಸರೀತಾ ಪಾಟೀಲ ಕೆಲವು ತಿಂಗಳ ಹಿಂದೆ  ಬೆಳಗಾವಿಯಲ್ಲಿ    ಪಾಸ್-ಪೋರ್ಟ …

Read More »

ಬೆಳಗಾವಿ ಪೇಟೆಗೆ ಹಬ್ಬದ ರಂಗು… ಎಲ್ಲರಿಗೂ ಖರೀಧಿಯ ಗುಂಗು…!

ಬೆಳಗಾವಿ-ಬೆಳಗಾವಿ ನಗರದ ಪೇಟೆಗೆ ಬೆಳಕಿನ ಹಬ್ಬ ದೀಪಾವಳಿಯ ರಂಗು ಏರಿದೇ.ಹೊಸ ಬಟ್ಟೆ ಸೇರಿದಂತೆ ಹೊಸ ಹೊಸ ಸಾಮುಗ್ರಿಗಳನ್ನು ಖರೀಧಿಸಲು ಜನ ಬೇಳಗಾವಿ ಪೇಟೆಗೆ ದೌಡಾಯಿಸುತ್ತಿದ್ದಾರೆ ದೀಪಾವಳಿ ಹಬ್ಬದ ನಿಮಿತ್ಯ ಹೊಸ ಬಟ್ಟೆ ಖರೀಧಿ ಜೋರಾಗಿಯೇ ನಡೆದಿದಿ ಇನ್ನು ಕೆಲವರು ಆಕಾಶ ಬುಟ್ಟಿ ,ಪಣತಿ, ಹಾಗು ಅಲಂಕಾರಿಕ ವಸ್ತುಗಳು ,ಪೂಜಾ ಸಾಮುಗ್ರಿಗಳ ಖರೀಧಿಯಲ್ಲಿ ನಿರತರಾಗಿದ್ದಾರೆ ಬೆಳಗಾವಿಯ ಗೋಲ್ಡ ಅಂಗಡಿಗಳಲ್ಲಿ ಫುಲ್ ರಶ್.. ಜೊತೆಗೆ ಬೆಳಗಾವಿ ನಗರದ ಬಟ್ಟೆ ಅಂಗಡಿಗಳಲ್ಲಿ ವಿಶೇಷ ರಿಯಾಯತಿಗಳನ್ನು …

Read More »

ಅಂಗವಿಕಲರಿಗೆ ಉಚಿತ ಅಟೋ ಸೇವೆ..ಮಾಡುವ ರಿಕ್ಷಾಚಾಲಕ

ಬೆಳಗಾವಿ: ಕುಟುಂಬ ನಿರ್ವಹಣೆ ಮತ್ತು ಹೊಟ್ಟೆ ಪಾಡಿಗಾಗಿ ಕಳೆದ 6 ವರ್ಷಗಳ ಹಿಂದೆ ಆಟೋ ಖರೀದಿಸಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದ 37 ರ ಹರೆಯದ ವ್ಯಕ್ತಿ ಕಳೆದ ಒಂದು ವರ್ಷದಿಂದ ಅಂಗವಿಕಲರಿಗೆ, ಅಸಹಾಯಕರಿಗೆ ಉಚಿತ ಆಟೋ ಸೇವೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿಯ ರುಕ್ಮಿಣಿ ನಗರದ ಆಶ್ರಯ ಬಡಾವಣೆಯ ಪುಟ್ಟ ಮನೆಯಲ್ಲಿ 7 ಜನರನ್ನೊಳಗೊಂಡ ಕುಟುಂಬದ ಯಜಮಾನನಾಗಿ ಸಮಾಜ ಸೇವೆಯ ಜೊತೆಗೆ ಬದುಕು ಸಾಗಿಸುತ್ತಿರುವ ಅಯೂಬ್ ಅದಮ್‍ಸಾಬ …

Read More »

ಕಂಗ್ರಾಳಿ ಗ್ರಾಮದಲ್ಲಿ ಹಳದಿ ಕುಂಕುಮ ಕಾರ್ಯಕ್ರಮ

ಬೆಳಗಾವಿ-ಬೆಳಗಾವಿ ಗಡಿ ಭಾಗದಲ್ಲಿ ನಡೆಯುವ ಹಳದಿ ಕುಂಕುಮ ಕಾರ್ಯಕ್ರಮ ಸಮಂಧ ಬೆಳೆಸುವ ಕಾರ್ಯಕ್ರಮವಾಗಿದ್ದು ಈ ಅಪರೂಪದ ಕಾರ್ಯಕ್ರಮದಿಂದ ಮಹಿಳಾ ಸಬಲೀಕರಣ ,ಮಾಡಲು ಸಾಧ್ಯವಿದೆ ಈ ಕಾರ್ಯಕ್ರಮ ಮಹಿಳಾ ಶಕ್ತಿಯನ್ನು ಒಗ್ಗೂಡಿಸಲು ಪೂರಕವಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ ಬೆಳಗಾವಿ ಸಮೀಪದ ಬಿ ಕೆ ಕಂಗ್ರಾಳಿ ಗ್ರಾಮದÀ ವಿಠ್ಠಲ ಮಂದಿರದಲ್ಲಿ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮಹಿಳೆಯರಿಗೆ ಹಳದಿ ಕುಂಕುಮ …

Read More »

ಕಲ್ಲಪ್ಪ ಹಂಡಿಬಾಗ್ ಸಹೋದರ ಪೋಲೀಸ್ ಪೇದೆ ಯಲ್ಲಪ್ಪ ನೇಣಿಗೆ ಶರಣು

ಬೆಳಗಾವಿ- ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡು ದುಖ ಮಾಸುವ ಮೊದಲೇ ಆತನ ಸಹೋಧರ ಕುಲಗೋಡ ಠಾಣೆಯ ಪೇದೆ ಯಲ್ಲಪ್ಪ ಕಿತ್ತೂರ ಉತ್ಸವದ ಬಂದೋಬಸ್ತಿ ಮುಗಿಸಿಕೊಂಡು ಮನೆಗೆ ಹೋಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ ಕಲ್ಲಪ್ಪ ಹಂಡಿಬಾಗ್ ಸಹೋದರ ಆತ್ಮಹತ್ಯೆ. ಗೋಕಾಕ್ ತಾಲೂಕಿನ ಕುಲಗೋಡು ಗ್ರಾಮದಲ್ಲಿ ಘಟನೆ. ಪೇದೆ ಯಲ್ಲಪ್ಪ ಹಂಡಿಬಾಗ್ ನೇಣು‌ ಬಿಗಿದುಕೊಂಡು ಆತ್ಮಹತ್ಯೆ. ಕುಲಗೋಡು ಠಾಣೆಯಲ್ಲಿ ಪೇದೆಯಾಗಿದ್ದ ಯಲ್ಲಪ್ಪ. ಘಟನೆಗೆ …

Read More »

ರಾಜ್ಯೋತ್ಸವದ ದಿನ ಬೆಳಗಾವಿ ನಗರದ ಎಲ್ಲ ಹೊಟೆಲಗಳಲ್ಲಿ ಶೇ.25 ರಷ್ಟು ರಿಯಾಯತಿ..!

ಬೆಳಗಾವಿ-ರಾಜ್ಯೋತ್ಸವದ ದಿನ ಬೆಳಗಾವಿ ನಗರದ ಎಲ್ಲ ಹೊಟೆಲ್ ಗಳಲ್ಲಿ ಶೇ,% 25 ರಷ್ಟು ರಿಯಾಯತಿ ನೀಡಲು ಬೆಳಗಾವಿ ನಗರದ ಹೊಟೆಲ್ ಮಾಲೀಕರ ಸಂಘ ಒಪ್ಪಿಗೆ ಸೂಚಿಸಿದೆ ಜಿಲ್ಲಾಧಿಕಾರಿ ಎನ್ ಜೈಎರಾಮ ಅವರು ಗುರುವಾರ ತಮ್ಮ ಕಚೇರಿಯಲ್ಲಿ ಹೊಟೆಲ್ ಮಾಲೀಕರ ಸಂಘದ ಸಭೆ ನಡಿಸಿ ಕರ್ನಾಟಕ ರಾಜ್ಯೋತ್ಸವದ ದಿನ ಗ್ರಾಹಕರಿಗೆ ರಿಯಾಯತಿ ನೀಡಬೇಕು ಎಂದು ಮನವಿ ಮಾಡಿಕೊಂಡಾಗ ಹೊಟೆಲ್ ಮಾಲೀಕರು 25 ರಷ್ಟು ರಿಯಾಯತಿ ನೀಡಲು ಒಪ್ಪಿಗೆ ಸೂಚಿಸಿದರು ಬೆಳಗಾವಿ ಕನ್ನಡ …

Read More »

ಶನಿವಾರ ಬೆಳಗಾವಿಯಲ್ಲಿ ಕನ್ನಡ ‘ ತಮಾಶಾ’ ನಾಟಕ ಪ್ರದರ್ಶನ

ಬೆಳಗಾವಿ-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನೂತನವಾಗಿ ನಿರ್ಮಿಸಿರುವ ‘ತಮಾಶಾ’ ಕನ್ನಡ ಜನಪದ ನಾಟಕದ ಪ್ರದರ್ಶನ ಅ.29 ಶನಿವಾರ ಸಂಜೆ 6 ಗಂಟೆಗೆ ಬೆಳಗಾವಿ ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಮಹಾರಾಷ್ಟ್ರದ ಜನಪ್ರಿಯ ಜನಪದ ಕಲಾಪ್ರಕಾರವಾಗಿರುವ “ತಮಾಶಾ” ನಮ್ಮ ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಒಂದು. 150 ರಿಂದ 200 ವರ್ಷಗಳ ಇತಿಹಾಸವಿರುವ ಈ ಕಲೆ ಕಾಲಕ್ಕನುಗುಣವಾಗಿ ತನ್ನ ಸ್ವರೂಪದಲ್ಲಿ ತಕ್ಕಮಟ್ಟಿನ ಬದಲಾವಣೆ ಮಾಡಿಕೊಳ್ಳುತ್ತ ಬಂದಿದೆ. ಭಕ್ತಿ ಪರಂಪರೆಯಿಂದ,ಹಾಸ್ಯ,ರಂಜನೀಯ ಅಂಶಗಳ ಮಧ್ಯೆಯೇ …

Read More »

ನಾಡವಿರೋಧಿ ಕೃತ್ಯ, ಫೇಸ್ ಬುಕ್ ಕಿಡಗೇಡಿಗಳ ವಿರುದ್ಧ ಪ್ರಕರಣ ದಾಖಲು

 ಬೆಳಗಾವಿ- ಕುಂದಾ ನಗರಿ ಬೆಳಗಾವಿಯಲ್ಲಿ ಪ್ರತಿವರ್ಷ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯುತ್ತಿದೆ. ಈ ಭಾರೀ ಕನ್ನಡದ ಉತ್ಸವ ಆಚರಣೆಗೆ ಅಂತಿಮ ಹಂತದ ಸಿದ್ಧತೆಗಳು ಆರಂಭವಾಗಿವೆ. ಆದರೇ ಎಂಇಎಸ್ ಪುಂಡರು ಉತ್ಸವವನ್ನು ಕಳೆಗುಂದಿಸುವ ಕುತಂತ್ರ ನಡೆಸಿದ್ದಾರೆ. ಫೆಸ್ ಬುಕ್, ವಾಟ್ಸ್ ಆ್ಯಪ್ ಗಳಲ್ಲಿ ನಾಡ ವಿರೋಧ ಫೋಷ್ಟ್ ಮಾಡುವ ಮೂಲಕ ಗಡಿ ತಂಟೆಗೆ ಪ್ರಚೋದನೆ ನೀಡವ ಕೆಲಸಕ್ಕೆ ಕೈಹಾಕಿದ್ದಾರೆ. ಬೆಳಗಾವಿಯಲ್ಲಿ ನವೆಂಬರ್ 1ರಂದು ವಿಜೃಂಭಣೆಯಿಂದ ಕನ್ನಡದ ಹಬ್ಬ ನಡೆಯುತ್ತದೆ. ಇಲ್ಲಿನ …

Read More »

ಬೆಳಗಾವಿಯಲ್ಲಿ ನವಜಾತ ಶಿಶು ಪತ್ತೆ

ಬೆಳಗಾವಿ: ನಗರದ ಶಹಾಪೂರದ ಮಹಾತ್ಮ ಫುಲೆ ಮಾರ್ಗದ ದೇವಸ್ಥಾನ ಸಮೀಪ ಬೆಳೆದಿದ್ದ ಗಿಡಗಂಟಿಗಳಲ್ಲಿ ಆಗತಾನೆ ಹುಟ್ಟಿದ ನವಜಾತ ಗಂಡು ಶಿಶುವನ್ನು ಎಸೆದ ಘಟನೆ ಗುರುವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ. ಬಹುತೇಕ ಈ ಶಿಶುವನ್ನು ಬುಧವಾರ ತಡರಾತ್ರಿಯಲ್ಲಿ ಬಿಟ್ಟು ಹೋಗಲಾಗಿತ್ತು. ಬೆಳಗಾಗುತ್ತಿದ್ದಂತೆ ಹೋಗ ಬರುವ ಜನ ಮಗುವಿನ ರೋದನ ಕೇಳಿ ಗಮನಿಸಿದಾಗ, ನವಜಾತ ಶಿಶು ಕಂಡುಬಂತು. ಸ್ಥಳೀಯ ಕೆಲವರು ಸಮಾಜ ಸೇವಕ ವಿಜಯ ಮೋರೆ ಅವರಿಗೆ ದೂರವಾಣಿ ಕರೆ ಮಾಡಿ …

Read More »

ಯಸೂಫ್ ಕಚ್ಛಿ ಬೆಳಗಾವಿ ಬುಡಾ ಅಧ್ಯಕ್ಷ…!

ಬೆಳಗಾವಿ- ಬೆಳಗಾವಿ ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಯೂಸೂಫ್ ಕಚ್ಛಿ ನೇಮಕವಾಗುವದು ಬಹುತೇಕ ಖಚಿತವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಖಚಿತಪಡಿಸಿವೆ ಶಾಸಕ ಫಿರೋಜ್ ಸೇಠ ಅವರ ಆಪ್ತ ಬೆಂಬಲಿಗರಾಗಿರುವ ಯೂಸೂಫ್ ಕಚ್ಛಿ ಅವರು ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ ಶಾಸಕ ಫಿರೋಜ್ ಸೇಠ ಅವರು ಬುಡಾ ಅಧ್ಯಕ್ಷರನ್ನಾಗಿ ಯೂಸುಫ್ ಕಚ್ಛಿ ಅವರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವ ಹಿನ್ನಲೆಯಲ್ಲಿ ಅವರ ನೇಮಕ ಖಚಿತವೆಂದು ಹೇಳಲಾಗುತ್ತಿದೆ ಬುಧವಾರ ನಿಗಮ …

Read More »

ಬಿ ಎಸ್ ವೈ ಗೆ ಬಿಗ್ ರೀಲೀಫ್..ಬಿಜೆಪಿ ವಲಯದಲ್ಲಿ ಸಂತಸ

ಬೆಳಗಾವಿ -ಗಣಿ ಕಂಪನಿಗೆ ಪರವಾಣಿಗೆ ನೀಡಿದ್ದಕ್ಕೆ ಪ್ರೇರಣಾ ಟ್ರಸ್ಟ ಮೂಲಕ ಕಿಕ್ ಬ್ಯಾಕ್ ಪಡೆದ ಎಲ್ಲ ಐದು ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲ ಆರೋಪಿಗಳನ್ನು ಸಿಬಿಐ ವಿಶೇಷ ಕೋರ್ಟ ಖುಲಾಸೆಗೊಳಿಸಿದ ಹಿನ್ನಲೆಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂತಸ ವ್ಯಕ್ತ ಪಡಿಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಅಭಯ ಪಾಟೀಲ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯ ಕಂಡ …

Read More »

ನಾಡ ವಿರೋಧಿ ಎಂಈಎಸ್ ಕಂಗಾಲು..ಮಹಾರಾಷ್ಟ್ರ ಸರ್ಕಾರದ ದುಂಬಾಲು..!

ಬೆಳಗಾವಿ- ಗಡಿ ಭಾಗದ ಬೆಳಗಾವಿಯಲ್ಲಿ ನಾಡ ವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ಬಂಡವಾಳ ಈಗ ಬಯಲಾಗಿದೆ ಬೆಳಗಾವಿ ನಗರದಲ್ಲಿ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿರುವ ನಾಡ ವಿರೋಧಿಗಳ ಕರಾಳ ದಿನಾಚರಣೆಯ ಸೈಕಲ್ ರ್ಯಾಲಿಗೆ ಜನ ಸೇರದೇ ಕಂಗಾಲಾಗಿರುವ ಎಂಈಎಸ್ ಈಗ ಮಹಾರಾಷ್ಟ್ರದ ಕೊಲ್ಲಾಪೂರದಲ್ಲಿ ನಡೆದ ಮರಾಠಾ ಮೀಸಲಾತಿಯ ಮೌನ ಹೋರಾಟದ ನಕಲು ಮಾಡಲು ಷಡ್ಯಂತ್ರ ನಡೆಸಿದೆ ಬೆಳಗಾವಿಯ ಎಂಈಎಸ್ ನಾಯಕರು ಬುಧವಾರ ರಾತ್ರಿ ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಬೆಳೆಸಲಿದ್ದು ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ …

Read More »