ಬೆಳಗಾವಿ, ಕೋವಿಡ್-೧೯ ಲಸಿಕಾಕರಣ ಕಾರ್ಯಕ್ರಮವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಮರ್ಪಕವಾಗಿ ಕೈಗೊಂಡು ನೋಂದಾಯಿತ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ಜ.27) ನಡೆದ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬೀಜ-ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಕೆಲವು ದೂರುಗಳು ಬಂದಿರುತ್ತವೆ. ಈ ಬಗ್ಗೆ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಮುಂಬಯಿ ಯಲ್ಲಿ ಬೆಳಗಾವಿ ಲಡಾಯಿ….!!
ಬೆಳಗಾವಿ-ಮುಂಬೈನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಬೆಳಗಾವಿ ಗಡಿವಿವಾದದ ಕುರಿತು ಸರ್ಕಾರವೇ ರಚಿಸಿದ ಪುಸ್ತಕ ಬಿಡುಗಡೆ ಮಾಡಿ ಮತ್ತೇ ಕಾಲು ಕೆದರಿ ಜಗಳ ಶುರು ಮಾಡಿದ್ದಾರೆ. ಮಹಾರಾಷ್ಟ್ರ ಕರ್ನಾಟಕ ಸೀಮಾವಾದ ಸಂಘರ್ಷ ಅನೀ, ಸಂಕಲ್ಪ ಪುಸ್ತಕ ಬಿಡುಗಡೆಗೊಳಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಮುಗ್ಧ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಪ್ರಚೋದನಾತ್ಮಕ ಪುಸ್ತಕ ಬಿಡುಗಡೆ ಮಾಡಿ ಪ್ರಚೋದನಾಕಾರಿ ಭಾಷಣ ಮಾಡುವ ಮೂಲಕ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ …
Read More »ಮಹಾರಾಷ್ಟ್ರ ಸರ್ಕಾರದಿಂದ ಮತ್ತೇ ಗಡಿ ಕ್ಯಾತೆ….
ಬೆಳಗಾವಿ-ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರದಿಂದ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಖ್ರೆ ಮತ್ತೊಂದು ಕ್ಯಾತೆ ತೆಗೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಕಾಲು ಕೆದರಿ ಜಗಳಕ್ಕೆ ಬರೋಕೆ ಮಹಾರಾಷ್ಟ್ರ ಸಿದ್ಧ ಮಾಡಿಕೊಂಡಿದ್ದು, ಗಡಿ ವಿವಾದಿತ ವಿಚಾರ ಒಳಗೊಂಡ ಪುಸ್ತಕ ಬಿಡುಗಡೆ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಮಹಾರಾಷ್ಟ್ರ ಸರ್ಕಾರದಿಂದಲೇ ಸಿದ್ಧಗೊಂಡಿರೋ ಗಡಿ ವಿವಾದ ಕುರಿತ ಪುಸ್ತಕವನ್ನು ನಾಳೆ ಬಿಡುಗಡೆಯಾಗಲಿದೆ.ವಿಚಾರ ಒಗ್ಗಟ್ಟು ತೋರಿಸಲು ಮಹಾ ನಾಯಕರ …
Read More »ಶ್ರೀರಾಮ ಮಂದಿರ ನಿರ್ಮಾಣಕ್ಕೆ ಎರಡು ಲಕ್ಷ ರೂ ನೀಡಿದ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಎರಡು ಲಕ್ಷ ರೂ ದೇಣಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಭಾರತೀಯ ಜನತಾ ಪಕ್ಷ ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಮಾಡುತ್ತಿದ್ದು,ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಎರಡು ಲಕ್ಷ ರೂ ದೇಣಿಗೆ ನೀಡುವ ಮೂಲಕ ಭಕ್ತಿಯ ಭಂಡಾರ ಹರಿಸಿದ್ದಾರೆ. ದೇಶಾದ್ಯಂತ ಶ್ರೀ ರಾಮ ಮಂದಿರ ನಿರ್ಮಾಣಕ್ಕೊಸ್ಕರ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ …
Read More »ಬೆಳಗಾವಿಯಲ್ಲಿ ಜಿಲಿಟೀನ್ ಸ್ಪೋಟಕ ವಶ..
ಬೆಳಗಾವಿ-ಶಿವಮೊಗ್ಗ ಜಿಲ್ಲೆಯ ಹುಣಸೋಡಿ ಗ್ರಾಮದಲ್ಲಿ ಜಿಲಿಟೀನ್ ಸ್ಪೋಟಕ ಹಲವಾರು ಜನರನ್ನು ಬಲಿ ಪಡೆದ ಬೆನ್ನಲ್ಲಿಯೇ ಬೆಳಗಾವಿ ಆಂತರಿಕ ಭದ್ರತೆ ವಿಭಾಗದ ಪೋಲೀಸರು ಜಿಲಿಟೀನ್ ಸ್ಪೋಟಕ ವಶ ಪಡಿಸಿಕೊಂಡಿದ್ದಾರೆ. ಗೋಕಾಕ ತಾಲ್ಲೂಕಿನ ಕುಲಗೋಡ ಠಾಣಾ ವ್ಯಾಪ್ತಿಯಲ್ಲಿ,ಮನ್ನಿಕೇರಿ ಗ್ರಾಮದ ಹದ್ದಿಯಲ್ಲಿ ಆಂತರಿ ಭದ್ರತಾ ವಿಭಾಗದ ಪೋಲೀಸರು ಪೆಟ್ರೋಲೀಂಗ್ ಮಾಡುವಾಗ ಟ್ರ್ಯಾಕ್ಟರ್ ನಲ್ಲಿ ಜಿಲಿಟೀನ್ ಸ್ಪೋಟಕ ಸಾಗಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ ಜಿಲೀಟೀನ್ ಸಾಗಿಸುತ್ತಿದ್ದ ಓರ್ವನನ್ನು ಬಂಧಿಸಿ 49 ಜಿಲಿಟೀನ್ ಕಡ್ಡಿಗಳು,23 ಈಡಿ ಕೇಬಲ್ …
Read More »ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಮಾಹಿತಿಯೇ ನನಗಿರಲಿಲ್ಲ
ಬೆಳಗಾವಿ-ರೆಸಾರ್ಟ್ ವಾಸ್ತವ್ಯ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದು,ಚಿಕ್ಕಮಗಳೂರು ಪ್ರವಾಸ ಒಂದು ವಾರದ ಮೊದಲೇ ನಿಗದಿಯಾಗಿತ್ತು,ನನ್ನ ಪ್ರವಾಸದ ಮಾಹಿತಿ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಮೊದಲೇ ಕಳುಹಿಸಲಾಗಿತ್ತು,ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಮಾಹಿತಿಯೇ ನನಗಿರಲಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿಹೇಳಿದ್ದಾರೆ. ಗಣರಾಜ್ಯೋತ್ಸವ ಧ್ವಜಾರೋಹಣ ಬಳಿಕ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ ಅವರು,ಆದರೆ ನಮಗೆ ಡ್ಯಾಮೇಜ್ ಆಗುವ ರೀತಿಯಲ್ಲಿ ಮಾಧ್ಯಮಗಳಲ್ಲಿ ವರದಿ ಬಂದವು,ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ನಿರ್ಧಾರಕ್ಕೆ ಬದ್ಧನಾಗಿದ್ದೇನೆ.ಮಾರ್ಚ್ ನಂತರ …
Read More »ಬೆಳಗಾವಿಯಲ್ಲಿ ಪರೇಡ್ ಮಾಡಲು ಗೌಡ್ರು 300 ಟ್ರ್ಯಾಕ್ಟರ್ ತರ್ತಾರಂತೆ…..!!
ಬೆಳಗಾವಿ- ದಿಲ್ಲಿ ಬಾಳ ದೂರ ಐತಿ ಅದಕ್ಕೆ ನಾವು ಬೆಳಗಾವಿಯಲ್ಲೇ ಪರೇಡ್ ಮಾಡ್ತೀವಿ,ಬೆಳಗಾವಿಗೆ ಪರೇಡ್ ಮಾಡಲು 300 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬರ್ತಾವ್ ಎಂದು ರೈತ ಮುಖಂಡ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದ್ದಾರೆ. ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ಖಂಡಿಸಿ ನಾಳೆ ಬೆಳಗಾವಿಯಲ್ಲಿ ಟ್ರ್ಯಾಕ್ಟರ್ ಪರೇಡ್ ಮಾಡುತ್ತೇವೆ,ಕೇವಲ ದೆಹಲಿಯಲ್ಲಿ ಅಷ್ಟೇ ಅಲ್ಲ,ಬೆಳಗಾವಿಯಲ್ಲೂ ಪರೇಡ್ ನಡೆಯಲಿದೆ ಎಂದರು …
Read More »ಇಂದಿನಿಂದ ಬೆಳಗಾವಿ- ನಾಸೀಕ್ ನಡುವೆ ನೇರ ವಿಮಾನ ಸೇವೆ…
ಬೆಳಗಾವಿ:ಎರಡನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಸ್ಟಾರ್ ಏರ್ಲೈನ್ಸ್ ಸಂಸ್ಥೆ ಇಂದಿನಿಂದ ಬೆಳಗಾವಿ-ನಾಸಿಕ್ ಮಾರ್ಗ ಮಧ್ಯೆ ನೇರ ವಿಮಾನ ಸೇವೆ ಆರಂಭಿಸಲಾಗುತ್ತಿದೆ ಎಂದು ಸ್ಟಾರ್ ಏರ್ಲೈನ್ಸ್ ನಿರ್ದೇಶಕ ಶ್ರೇಣಿಕ್ ಘೋಡಾವತ್ ತಿಳಿಸಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇಂದಿನಿಂದಲೇ ವಿಮಾನ ಸೇವೆ ಆರಂಭವಾಗಲಿದೆ. ಉಡಾನ್ ಯೋಜನೆಯಡಿ ಸ್ಟಾರ್ ಏರ್ಲೈನ್ಸ್ ತನ್ನ ಸೇವೆ ವಿಸ್ತರಿಸುತ್ತಿದೆ ಎಂದರು. ಸ್ಟಾರ್ ಏರ್ಲೈನ್ಸ್ ಈಗಾಗಲೇ ಅಹ್ಮದಾಬಾದ್, ಅಜ್ಮೀರ್, ಬೆಂಗಳೂರು, ದೆಹಲಿ, ಬೆಳಗಾವಿ, ಹುಬ್ಬಳ್ಳಿ, ತಿರುಪತಿ, ಇಂದೋರ್, ಕಲಬುರ್ಗಿ, …
Read More »ಮಗನ ಮದುವೆ ಮುಗಿಸಿ ನಾಲ್ಕು ದಿನ ಆಗಿತ್ತು…ಡ್ಯುಟಿ 30 ದಿನ ಮಾತ್ರ ಬಾಕಿ ಇತ್ತು….
ಬೆಳಗಾವಿ- ನಾಲ್ಕು ದಿನದ ಹಿಂದೆಯಷ್ಟೇ ಮಗನ ಮದುವೆ ಮಾಡಿದ ತಾಯಿ ಇಂದು ಮಗ,ಮತ್ತು ಸೊಸೆಯ ಜೊತೆ,ಇಂದು ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಮರಳಿ ಮನೆಗೆ ಬರುವಾಗ ವಿಧಿಯ ಅಟ್ಟಹಾಸ ಎಂತಹದ್ದು ನೋಡಿ ಎಲ್ಲರನ್ನೂ ಬಾರದ ಲೋಕಕ್ಕೆ ಕಳುಹಿಸಿತು… ಬೆಳಗಾವಿಯ ಮಹಿಳಾ ಪೋಲೀಸ್ ಠಾಣೆಯಲ್ಲಿ ಸಬ್ ಇನೆಸ್ಪೆಕ್ಟರ್ ಎಂದು ಕರ್ತವ್ಯ ನಿಭಾಯಿಸುತ್ತಿದ್ದ,ಲಕ್ಷ್ಮೀ ನೆಲವಡೆ ಅವರು ನಿವೃತ್ತಿಯಾಗಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿತ್ತು ಜನೇವರಿ 21 ರಂದು ಮಗ …
Read More »ಬಸ್ ಕಾರು ಮುಖಾಮುಖಿ,ಬೆಳಗಾವಿಯ ನಾಲ್ಕು ಜನರ ಸಾವು…
ಬೆಳಗಾವಿ- ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಚಚಡಿ – ಗೋಂತಮಾರ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಮುಖಾ ಮುಖಿ ಡಿಕ್ಕಿಯಾಗಿದ್ದು, ಬೆಳಗಾವಿ ನಗರದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.. ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಕಾರಣ ಕಾರು ಬಸ್ಸಿನ ಕೆಳಗೆ ಜಿಬ್ಬಿಯಾಗಿತ್ತು,ತಕ್ಷಣ ಮುರುಗೋಡ ಪೋಲೀಸರು ಕ್ರೇನ್ ತರಿಸಿ ಬಸ್ಸಿನಿಂದ ಕಾರನ್ನು ಬೇರ್ಪಡಿಸಿದ ಬಳಿಕ ನಾಲ್ವರು ಮೃತಪಟ್ಟಿರುವ ವಿಷಯ ಗೊತ್ತಾಗಿದೆ. ಬೆಳಗಾವಿಯ ಸಹ್ಯಾದ್ರಿ ನಗರದ …
Read More »ಫೈರೀಂಗ್ ಮಾಡಿ ಅಂಗಡಿ ಲೂಟಿ ಮಾಡುವ ಯತ್ನ ವಿಫಲ….
ಬೆಳಗಾವಿ-ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದ ಅಂಗಡಿಯೊಂದರ ಮಾಲೀಕನ ಮೇಲೆ ಗುಂಡು ಹಾರಿಸಿ,ಹಣ ಲೂಟಿ ಮಾಡುವ ಪ್ರಯತ್ನ ನಡೆಸಿರುವ ಗಂಭೀರ ಪ್ರಕರಣ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶುಕ್ರವಾರ ರಾತ್ರಿ ಬೆಳಗಾವಿಯ ಮಠಗಲ್ಲಿಯ ಹೋಲ್ ಸೇಲ್ ಸ್ಟೇಶನರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಶನಿವಾರ ರಾತ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಮೇಲೆ ಆಗಮಿಸಿದ ಇಬ್ಬರು ದರೋಡೆಕೋರರು,ಅಂಗಡಿಗೆ ಹೋಗಿ ಒಬ್ಬ ಬಿಸ್ಕೀಟ್ ಖರೀಧಿ …
Read More »ಬೆಳಗಾವಿ ಕಡೆ,ಬೆಂಗಳೂರು ನಾಯಕರ ಪಡೆ….!!
ಬೆಳಗಾವಿ- ಬೆಳಗಾವಿಯಲ್ಲಿ ಶಿವಸೇನೆ,ಮತ್ತು ಎಂಈಎಸ್ ಕಿರಿಕ್ ಹೆಚ್ಚಾಗುತ್ತಿದ್ದಂತೆಯೇ,ಬೆಂಗಳೂರಿನ ಕನ್ನಡ ಸಂಘಟನೆಗಳ ನಾಯಕರು ಈಗ ಬೆಳಗಾವಿಯತ್ತ ಮುಖ ಮಾಡಿದ್ದು,ದಿನಕ್ಕೊಂದು ಕನ್ನಡ ಸಂಘಟನೆ ಬೆಳಗಾವಿಗೆ ಆಗಮಿಸಿ ಕನ್ನಡಿಗರ ಬೆಂಬಲಕ್ಕೆ ನಿಲ್ಲುತ್ತಿವೆ. ಇಂದು ಕನ್ನಡದ ರಣಧೀರ ವಾಟಾಳ್ ನಾಗರಾಜ್ ಅವರು ಹಲವಾರು ವರ್ಷಗಳ ಬಳಿಕ,ಹಿರೇಬಾಗೇವಾಡಿ ಟೋಲ್ ದಾಟಿ ಬೆಳಗಾವಿಯ ಚನ್ನಮ್ಮ ಸರ್ಕಲ್ ಗೆ ಆಗಮಿಸಿ,ಹೋರಾಟ ಮಾಡಿ,ಎಂಈಎಸ್ ಮತ್ತು ಶಿವಸೇನೆಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ವಾಟಾಳ್ …
Read More »ಕುಂದಾನಗರಿ ಬೆಳಗಾವಿಗೆ ಗ್ಯಾಲರಿಗಳ ಗರಿ….!!
ಬೆಳಗಾವಿ-ಬೆಳಗಾವಿ ಮಹಾನಗರ ಅಭಿವೃದ್ಧಿಯ ಪಥದಲ್ಲಿ ಸಾಗಿದೆ,ಮಹಾನಗರದ ಎಲ್ಲೆಡೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿರುವ ಸಂಧರ್ಭದಲ್ಲಿ ಬೆಳಗಾವಿಯಲ್ಲಿ ಮಹತ್ವದ ಎರಡು ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಬೆಳಗಾವಿಯ ಮಿಸ್ಟರ್ ಡೆವಲಪ್ಮೆಂಟ್ ಎಂದೇ ಕರೆಯಲ್ಪಡುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಳಗಾವಿ ನಗರದ ವ್ಯಾಕ್ಸೀನ್ ಡಿಪೋದಲ್ಲಿ,ಸಿವಿಲ್ ಏವಿಯೇಶನ್ ಗ್ಯಾಲರಿ ಮತ್ತು ಅತ್ಯಾಧುನಿಕವಾದ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ಪೂಜೆ ನೇರವೇರಿಸು ಮೂಲಕ ಚಾಲನೆ ನೀಡಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಸಿವಿಲ್ ಏವಿಯೇಶನ್ …
Read More »ಮಹಾರಾಷ್ಟ್ರದ 8 ಜನ ಶಿವಸೇನೆ ನಾಯಕರ ವಿರುದ್ಧ ಕೇಸ್
ಬೆಳಗಾವಿ-ಕರ್ನಾಟಕದ ಗಡಿಯಲ್ಲಿ ನುಗ್ಗಿ ಪುಂಡಾಟಿಕೆ ಪ್ರದರ್ಶಿಸಲು ಮುಂದಾಗಿದ್ದ ಮಹಾರಾಷ್ಟ್ರದ 8 ಜನ ಶಿವಸೇನೆ ನಾಯಕರ ವಿರುದ್ಧ ಬೆಳಗಾವಿಯ ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿವಸೇನೆ ಅದ್ಯಕ್ಷ ವಿಜಯ ದೇವಣೆ ಸೇರಿದಂತೆ ಒಟ್ಟು 8 ಜನ ಶಿವಸೇನೆಯ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದ್ದು,ಬೆಳಗಾವಿಗೆ ಬಂದು ಪುಂಡಾಟಿಕೆ ಮಾಡಿ ಹೋದರೆ ಯಾರೂ ಏನೂ ಮಾಡುವದಿಲ್ಲ ಎಂದು ತಿಳಿದುಕೊಂಡಿದ್ದ ಶಿವಸೇನೆಯ ನಾಯಕರಿಗೆ ಬೆಳಗಾವಿ ಪೋಲೀಸರು ಶಾಕ್ ಕೊಟ್ಟಿದ್ದಾರೆ. 1986 …
Read More »ನಾಳೆ ಬೆಳಗಾವಿಯಲ್ಲಿ ಬಿಜೆಪಿಯ ಮಹತ್ವದ ಸಭೆ…
ಬೆಳಗಾವಿ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,ನಾಳೆ ಬೆಳಗಾವಿ ನಗರಕ್ಕೆ ಆಗಮಿಸಲಿದ್ದು ,ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಲಿದೆ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ,ಉಮೇಶ ಕತ್ತಿ ಅವರ ಪ್ರವಾಸದ ಪಟ್ಟಿಯಲ್ಲಿ ನಾಳೆ ನಳೀನ್ ಕುಮಾರ್ ಕಟೀಲು ಅವರು ಮದ್ಯಾಹ್ನ 3-30 ಕ್ಕೆ ನಗರದ ಸಂಕಮ್ ಹೊಟೇಲ್ ನಲ್ಲಿ ಸಭೆ ನಡೆಸಲಿದ್ದು ಈ ಸಭೆಯಲ್ಲಿ ಉಮೇಶ್ ಕತ್ತಿ ಅವರು ಭಾಗವಹಿಸುತ್ತಾರೆ ಎಂದು ತಿಳಿಸಲಾಗಿದೆ. ಬೆಳಗಾವಿ ಬಿಜೆಪಿ ನಾಯಕರ ಸಭೆಯಲ್ಲಿ ಲೋಕಸಭಾ …
Read More »