Breaking News

LOCAL NEWS

ಬೋಗೂರು ಟ್ರ್ಯಾಕ್ಟರ್ ದುರಂತ ಮೃತರ ಕುಟುಂಬಗಳಿಗೆ ಐದು ಲಕ್ಷ ರೂ ಪರಿಹಾರ

ಬೆಳಗಾವಿ- ಖಾನಾಪೂರ ತಾಲ್ಲೂಕಿನ ಬೋಗೂರು ಗ್ರಾಮದಲ್ಲಿ ಟ್ರ್ಯಾಕ್ಟರ್ ಹಳ್ಳಕ್ಕೆ ಬಿದ್ದು ಆರು ಜನರು ಮೃತಪಟ್ಟಿದ್ದು ಮೃತರ ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಲಾ ಐದು ಲಕ್ಷ ರೂ ಪರಿಹಾರ ವಿತರಿಸಿದರು. ಪರಿಹಾರ ವಿತರಣೆ ಮಾಡುವ ಮುನ್ನ ಜಗದೀಶ್ ಶೆಟ್ಟರ್ ಅಪಘಾತ ಸಂಭವಿಸಿದ ಸ್ಥಳವನ್ನು ಪರಶೀಲನೆ ಮಾಡಿದರು. ಬೆಳಗಾವಿ ಜಿಲ್ಲಾಧಿಕಾರಿ,ಬೊಮ್ಮನಹಳ್ಳಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಬೋಗೂರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ …

Read More »

ಫೆ.28, 29 ರಂದು ಬೆಳಗಾವಿಯಲ್ಲಿ ಪ್ರಾದೇಶಿಕ ಉದ್ಯೋಗ ಮೇಳ

ಪೂರ್ವಸಿದ್ಧತೆ ಸಭೆ: ೧೦೦ ಕ್ಕೂ ಅಧಿಕ ಉದ್ಯೋಗದಾತರು ಭಾಗವಹಿಸುವ ನಿರೀಕ್ಷೆ- ಡಾ.ಬೊಮ್ಮನಹಳ್ಳಿ ————————————————————— ನಗರದಲ್ಲಿ ಫೆ.೨೮, ೨೯ರಂದು ಪ್ರಾದೇಶಿಕ ಉದ್ಯೋಗ ಮೇಳ ಬೆಳಗಾವಿ,  ಇದೇ ತಿಂಗಳು ೨೮ ಹಾಗೂ ೨೯ ರಂದು ಬೆಳಗಾವಿ-ಧಾರವಾಡ ಜಿಲ್ಲೆಗಳ ಪ್ರಾದೇಶಿಕ ಉದ್ಯೋಗಮೇಳವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು. ಪ್ರಾದೇಶಿಕ ಉದ್ಯೋಗ ಮೇಳ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಫೆ.೧೬) ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯೋಗಾಂಕ್ಷಿಗಳ …

Read More »

ಎಲ್ಲರಿಗೂ ಸೂರು ಪ್ರಧಾನಿ ಆಶಯ-ಸುರೇಶ ಅಂಗಡಿ

ದಿಶಾ ಸಮಿತಿಯ ತ್ರೈಮಾಸಿಕ ಸಭೆ; ಎಲ್ಲರಿಗೂ ಸೂರು ಪ್ರಧಾನಿ ಆಶಯ —————————————————————— ವಸತಿ ಯೋಜನೆ ಚುರುಕುಗೊಳಿಸಲು ಕೇಂದ್ರ ಸಚಿವ ಸುರೇಶ್ ಅಂಗಡಿ ಸೂಚನೆ ‌ ಬೆಳಗಾವಿ, ಫೆ.೧೫(ಕರ್ನಾಟಕ ವಾರ್ತೆ): ದೇಶದ ಪ್ರತಿ ಕುಟುಂಬಕ್ಕೂ ೨೦೨೨ ರ ವೇಳೆಗೆ ಮನೆ ಒದಗಿಸಬೇಕು ಎಂಬುದು ಪ್ರಧಾನಮಂತ್ರಿಗಳ ಕನಸಾಗಿದೆ. ಆದ್ದರಿಂದ ಎಲ್ಲರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಕಟ್ಟುನಿಟ್ಟಿನ ಸೂಚನೆ ನೀಡಿದರು. …

Read More »

ಜಿಲ್ಲಾಧಿಕಾರಿಗಳ ಕಚೇರಿ ಎದುರು ನೇರೆ ಸಂತ್ರಸ್ತರ ಧರಣಿ

ಬೆಳಗಾವಿ-ಸಮರ್ಪಕ ನೆರೆ ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ನೆರೆ ಸಂತ್ರಸ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು *ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹಿಸಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಧರಣಿ ನಡೆಸಲಾಯಿತು ಧರಣಿಯಲ್ಲಿ ನೂರಾರು ಜನ ಸಂತ್ರಸ್ತರು ಪಾಲ್ಗೊಂಡಿದ್ದರು ಈ ಸಂಧರ್ಭದಲ್ಲಿ ಮಾತನಾಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಎಲ್ಲ ಸಂತ್ರಸ್ತರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗ್ತೀನಿ ,ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡೋಣ ಇಲ್ಲ ಅಂದ್ರೆ ಇಲ್ಲೇ ಟೆಂಟ್‌ …

Read More »

ಸ್ಮಾರ್ಟ್ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ

ಸ್ಮಾರ್ಟ್ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ ಬೆಳಗಾವಿ, ಫೆ.೧೫(ಕರ್ನಾಟಕ ವಾರ್ತೆ): ನಗರದ ಮಿಲನ್ ಹೋಟೆಲ್ ನಿಂದ ಹಿಂಡಲಗಾ ರಸ್ತೆಯ ಗಾಂಧೀಜಿ ಪುತ್ಥಳಿವರೆಗಿನ ಸ್ಮಾರ್ಟ್ ರಸ್ತೆ ಕಾಮಗಾರಿಗೆ ರೈಲ್ವೆ ಇಲಾಖೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಶನಿವಾರ(ಫೆ.೧೫) ಚಾಲನೆ ನೀಡಿದರು. ೧೫.೦೪ ಕೋಟಿ ರೂಪಾಯಿ ವೆಚ್ಚದ ಸ್ಮಾರ್ಟ್ ರಸ್ತೆ ಜತೆಗೆ ವೈಟ್ ಟಾಪಿಂಗ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಗುಣಮಟ್ಟದ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು …

Read More »

ಮೀಸಲಾತಿ ರದ್ದು ಮಾಡಲು ಕೇಂದ್ರ ಸರ್ಕಾರದ ಹುನ್ನಾರ,ಬೆಳಗಾವಿ ಕಾಂಗ್ರೆಸ್ ಆರೋಪ

ಬೆಳಗಾವಿ- ಮಾನ್ಯ ಸರ್ವೋಚ್ಚ ನ್ಯಾಯಾಲಯ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಅಭಿಪ್ರಾಯ ವ್ಯೆಕ್ತ ಪಡಿಸಿದ್ದು ಇದನ್ನು ಮರು ಪರಶೀಲನೆ ಮಾಡುವಂತೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗದ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಗ್ರಾಮೀಣ,ಮತ್ತು ನಗರ ಜಿಲ್ಲಾ ಘಟಕದ ಕಾರ್ಯಕರ್ತರು ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು ಗ್ರಾಮೀಣ ಜಿಲ್ಲಾ ಘಟಕದ ಅದ್ಯಕ್ಷ ವಿನಯ ನಾವಲಗಟ್ಟಿ ಮತ್ತು ನಗರ ಜಿಲ್ಲಾ ಘಟಕದ …

Read More »

ಮಹಾದಾಯಿ ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಿ ಬೆಳಗಾವಿ- ಬೆಂಗಳೂರು ಬೈಕ್ ರ್ಯಾಲಿ,..

ಬೆಳಗಾವಿ- ಮಹಾದಾಯಿ ಯೋಜನೆ ಅನುಷ್ಠಾನ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಬೆಳಗಾವಿಯಿಂದ ಬೆಂಗಳೂರಿನ ವರೆಗೆ ಪ್ರತಿಭಟನಾ ರ್ಯಾಲಿಯನ್ನು ಆರಂಭಿಸಿದೆ. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಸೇರಿದ ಕನ್ನಡ ಸಂಘಟನೆಗಳ ಒಕ್ಕೂಟ, ಹಾಗೂ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಸೇರಿ ,ಮಹಾದಾಯಿ ಯೋಜನೆ ಜಾರಿಯಾಗಲೇಬೇಕು ,ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗಲೇಬೇಕು ಎಂದು ಘೋಷಣೆಗಳನ್ನು ಕೂಗುವ ಮೂಲಕ.ಪ್ರತಿಭಟನಾ ರ್ಯಾಲಿ ಆರಂಭಿಸಿದರು ರಾಷ್ಟ್ರೀಯ ಹೆದ್ದಾರಿಯವರೆಗೆ ಪಾದಯಾತ್ರೆ …

Read More »

ಬೆಳಗಾವಿಯ ಮರಾಠಿ ಸಂಘ,ಸಂಸ್ಥೆಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ 20 ಕೋಟಿ ಡೋನೇಶನ್…!!!

ಕರ್ನಾಟಕದ ಮರಾಠಿ ಸಂಸ್ಥೆಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ 20 ಕೋಟಿ…… ಬೆಳಗಾವಿ- ಗಡಿಭಾಗದ ಬೆಳಗಾವಿ,ನಿಪ್ಪಾಣಿ,ಖಾನಾಪೂರ ಸೇರಿದಂತೆ ಕರ್ನಾಟಕದಲ್ಲಿರುವ ಸರ್ಕಾರಿ ಮರಾಠಿ,ಶಾಲೆಗಳಿಗೆ,ಮರಾಠಿ ಸಂಘ ಸಂಸ್ಥೆಗಳಿಗೆ, ಮರಾಠಿ ಗ್ರಂಥಾಲಯ,ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಸಂಘಟನೆಗಳಿಗೆ ಧನ ಸಹಾಯ ಮಾಡಲು ಮಹಾರಾಷ್ಟ್ರ ಸರ್ಕಾರ ಅರ್ಜಿಗಳನ್ನು ಅಹ್ವಾನಿಸಿದೆ. ಸರ್ಕಾರಿ ಮರಾಠಿ ಶಾಲೆಗಳ ಎಸ್ ಡಿ ಎಂ ಸಿ ಗಳು ಮಹಾರಾಷ್ಟ್ರ ಸರ್ಕಾರದ ಸಹಾಯ ಕೋರಿ ಮಹಾರಾಷ್ಟ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.ಅರ್ಜಿ ಸಲ್ಲಿಸಲು ಫೆಬ್ರುವರಿ 20 ಕೊನೆಯ ದಿನಾಂಕ …

Read More »

ರಾಜಕೀಯದಿಂದ ದೂರ ಉಳಿಯುತ್ತೇನೆ .ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತೇನೆ- ರಮೇಶ್ ಜಾರಕಿಹೊಳಿ

ರಾಜಕೀಯದಿಂದ ಇನ್ನು ದೂರ…! ಜಲ ಸಂಪನ್ಮೂಲಕ್ಕೆ ಆದ್ಯತೆ: ಸಚಿವ ರಮೇಶ್ ಬೆಂಗಳೂರು: ರಾಜ್ಯದ ಜಲ ಸಂಪತ್ತನ್ನು ಉಳಿಸಿ ಸಮರ್ಪಕವಾಗಿ ಬಳಸಲು ತಾವು ಬದ್ಧರಾಗಿರುವುದಾಗಿ ಜಲ ಸಂಪನ್ಮೂಲ ಸಚಿವ ರಮೇಶ್ ಲ.ಜಾರಕಿಹೊಳಿ ಹೇಳಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದ ಅವರು, ಶುಕ್ರವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ ಅವರು, ತಮಗೆ ಈ ಜವಾಬ್ದಾರಿ ವಹಿಸಿದ ಮುಖ್ಯಮಂತ್ರಿಗಳಿಗೆ …

Read More »

ಖಾನಾಪೂರದ ಕಾಡಿನಲ್ಲೂ ಅಭಿವೃದ್ದಿಯ ಕಮಾಲ್ ….!!

ಬೆಳಗಾವಿ-ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡುತ್ತಿದ್ದಾರೆ  .ಕ್ಷೇತ್ರದ ಕಾಡಿನಂಚಿನಲ್ಲಿರುವ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಅವರ ಅನುದಾನದಲ್ಲಿ (ಅಂದಾಜು ವೆಚ್ಚ 75 ಲಕ್ಷ ರೂಪಾಯಿ) ಖಾನಾಪುರ ತಾಲೂಕಿನ ತೋರಲಿ ಕ್ರಾಸ್ ನಿಂದ ಹಬ್ಬನಹಟ್ಟಿಯ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದ್ದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಪ್ರಚಾರದ ಹಂಗಿಲ್ಲದೇ ಕ್ಷೇತ್ರದಲ್ಲಿ ಅಬಿವೃದ್ಧಿಯ ಹೊಳೆ ಹರಿಸುತ್ತಿರುವ ಅಂಜಲಿ ನಿಂಬಾಳ್ಕರ್ ಕಾಡುವಾಸಿಗಳ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ …

Read More »

ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯ ಕತ್ತು ಹಿಸುಕಿದ ಪಾಪಿ ಪತಿ

ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯನ್ನು ಕೊಲೆ ಮಾಡಿದ ಪಾಪಿ ಪತಿ ಬೆಳಗಾವಿ: ಹೆಣ್ಣು ಹಡೆದರೆ ಪಾಪ,ಹಡೆದವಳಿಗೆ ಅದರ ಶಾಪ ಎನ್ನುವಂತೆ ಹೆಣ್ಣು ಹಡೆದ ಹೆಣ್ಣು ಅದೆಷ್ಟೋ ಕಷ್ಟ ಅನುಭವಿಸುತ್ತಾಳೆ,ಕೊನೆಗೆ ಈ ಪಾಪಿ ಸಮಾಜದಲ್ಲಿ ಯಾವ ರೀತಿ ತನ್ನ ಜೀವ ಕೊಡುತ್ತಾಳೆ ಅನ್ನೋದಕ್ಕೆ ಬೆಳಗಾವಿಯಲ್ಲಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿಯಾಗಿದೆ.ಪ್ರೇಮಿಗಳ ದಿನದಂದೇ ಪಾಪಿ ಪತಿಯೊಬ್ಬ ತನ್ನ ಮಡದಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕತ್ತು ಹಿಸುಕಿ ಪತಿಯಿಂದಲೇ ಪತ್ನಿಯ ಹತ್ಯೆಗೈದಿರುವ …

Read More »

ಫೆಬ್ರುವರಿ 20 ರಂದು ಬೆಳಗಾವಿಗೆ ಬರಲಿದೆ ಸಮಾಜವಾದಿ ಸಮಾಗಮ ಯಾತ್ರೆ

ಬೆಳಗಾವಿ- ಭಾರತವನ್ನು ಒಂದುಗೂಡಿಸು,ಸಂವಿಧಾನ ರಕ್ಷಿಸು ಎಂಬ ಘೋಷವಾಕ್ಯದೊಂದಿಗೆ ಜನೇವರಿ 30 ರಿಂದ ದೆಹಲಿಯ ರಾಜಘಾಟದಿಂದ ಆರಂಭವಾದ ಭಾರತ ಪರಿಕ್ರಮ ಯಾತ್ರೆ ಫೆಬ್ರುವರಿ 20 ರಂದು ಬೆಳಗಾವಿಗೆ ಬರಲಿದೆ ಊ ಯಾತ್ರೆಯಲ್ಲಿ ಸಮಾಜವಾದಿ ನಾಯಕರುಗಳಾದ ಅರುಣಕುಮಾರ ಶ್ರೀ ವಾಸ್ತವ, ಸುನೀಲಂ,ಬಿಜೆ ಪಾರೀಕ,ಮೇಧಾ ಪಾಟ್ಕರ್, ಸೇರಿಂದತೆ ಹಲವಾರು ಜನ ಸಮಾಜವಾದಿ ನಾಯಕರು ಈ ಯಾತ್ರೆಯಲ್ಲಿದ್ದಾರೆ ಎಂದು ಸಮಾಜವಾದಿ ಸಮಾಗಮದ ಸಂಯೋಜಕ ಅರವಿಂದ ದಳವಾಯಿ ತಿಳಿಸಿದರು. ಫೆಬ್ರುವರಿ 20 ರಂದು ಈ ಯಾತ್ರೆ ಬೆಳಿಗ್ಗೆ …

Read More »

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಡಿಜಿಟಲ್ ಲೈಬ್ರರಿ

ಬೆಳಗಾವಿ- ಬೆಳಗಾವಿ ನಗರ ಸುಂದರ ನಗರ,ಸ್ಮಾರ್ಟ್ ಸಿಟಿ,ರಾಜ್ಯದ ಎರಡನೇಯ ರಾಜಧಾನಿಯಾಗಿರುವ ನಮ್ಮ ಬೆಳಗಾವಿ ಹೈಟೆಕೆ ಸಿಟಿಯಾಗುತ್ತಿದೆ.ಜೊತೆಗೆ ಮೆಟ್ರೋಪಾಲಿಟಿನ್ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿದೆ. ಬೆಳಗಾವಿ ನಗರದಲ್ಲಿ ಎಲ್ಲಿ ನೋಡಿದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿಯ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆ ಆಗುತ್ತಿವೆ.ಅಶೋಕ ನಗರ,ಹನುಮಾನ ನಗರ ಸೇರಿದಂತೆ ನಗರದ ಇತರ ಭಾಗಗಳಲ್ಲಿ ಹೈಟೆಕ್ ಸ್ವೀಮೀಂಗ್ ಫೂಲ್ ಗಳು,ಒಳಾಂಗಣ ಕ್ರೀಡಾಂಗಣಗಳು ನಿರ್ಮಾಣವಾಗಿದ್ದು,ಮೈದಾನಗಳು ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈಗ …

Read More »

ಬಾಕ್ಸನಲ್ಲಿ ದೊರೆತ ಎರಡು ತಿಂಗಳ ಹೆಣ್ಣು ಮಗು…

ಬೆಳಗಾವಿ- ಎರಡು ತಿಂಗಳ ಹೆಣ್ಣು ಮಗುವನ್ನು ರಟ್ಟಿನ ಬಾಕ್ಸನಲ್ಲಿ ಹಾಕಿ ಅಂಗಡಿ ಎದುರು ಬಿಟ್ಟು ಹೋದ ಘಟನೆ ಬೆಳಗಾವಿಯ ರೈಲು ನಿಲ್ಧಾಣದಲ್ಲಿ ನಡೆದಿದೆ. ಅಂಗಡಿ ಎದುರು ಬಿಟ್ಟು ಹೋದ ಬಾಕ್ಸ್ ನಿಂದ ಮಗು ಅಳುತ್ತಿರುವದನ್ನು ಕೇಳಿ ಅಂಗಡಿಕಾರ ಬಾಕ್ಸ ಬಿಚ್ವಿದಾಗ ಎರಡು ತಿಂಗಳ ಮಗು ಪತ್ತೆಯಾಗಿದೆ. ಜನೇವರಿ 12 ರಂದು ಇದೇ ಮಾದರಿಯಲ್ಲಿ ಅದೇ ಅಂಗಡಿಯ ಎದುರು ಹೆಣ್ಣು ಮಗುವನ್ನು ಬಿಡಲಾಗಿತ್ತು ಇಂದು ಬೆಳಿಗ್ಗೆ ಅದೇ ಜಾಗದಲ್ಲಿ ಮತ್ತೊಂದು ಹೆಣ್ಷು …

Read More »

ಬೆಳಗಾವಿಯ ಈ ಜೋಡಿ ಇಂದಿನ ಯುವ ಪೀಳಿಗೆಗೆ ಮಾದರಿ

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಕುಟುಂಬಳ ಜೋಡಿಯೊಂದು ಸಿಂಪಲ್ ಮದುವೆ ಮಾಡಿಕೊಂಡು ಇಂದಿನ ಯುವ ಪೀಳಿಗೆಗೆ ಸಾಕ್ಷಿಯಾಗಲು ಹೊರಟಿದೆ.ಹಾರು ತುರಾಯಿ ಬ್ಯಾಂಡ್ ಬಾಜಾ ಇಲ್ಲದೇ ಮಹೇಶ್ ಫೌಂಡೇಶನ್ ದಲ್ಲಿ ಆಶ್ರಯ ಪಡೆದಿರುವ ಮಕ್ಕಳೆದುರು ಮದುವೆ ಮಾಡಿಕೊಳ್ಳುತ್ತಿದೆ. ಈ ಅಪರೂಪದ ಸಿಂಪಲ್ ಮದುವೆಗೆ ಬೆಳಗಾವಿಯ ಮಹೇಶ್ ಫೌಂಡೇಶನ್ ಸಾಕ್ಷಿಯಾಗಲಿದ್ದು ,ಬೆಳಗಾವಿಯ ಚಂದ್ರಕಾಂತ ಗವಾನಿ ಮತ್ತು ವೀಣಾ ಅವರ ವಿವಾಹ ಕಾರ್ಯಕ್ರಮ ನಾಳೆ ಮಹೇಶ್ ಫೌಂಡೇಶನ್ ನ ಸಭಾಂಗಣದಲ್ಲಿ ಸರಳವಾಗಿ ನಡೆಯಲಿದೆ. ಈ ಮದುವೆಯ …

Read More »