Breaking News

LOCAL NEWS

ಬಾವಿಗೆ ಬಿದ್ದು ಬಾಲಕಿ ಸಾವು, ರೈತನ ಆತ್ಮಹತ್ಯೆ

ಬೆಳಗಾವಿ- ಕಾಲು ಜಾರಿ ಬಾವಿಗೆ ಬಿದ್ದು ಬಾಲಕಿ ಮೃತಪಟ್ಟ ಘಟನೆ ಬೆಳಗಾವಿ ಸಮೀಪದ ಚಂದನಹೊಸೂರ ಗ್ರಾಮದಲ್ಲಿ ನಡೆದಿದೆ ಬೆಳಗಾವಿ ತಾಲೂಕಿನ ಚಂದನಹೊಸೂರು ಗ್ರಾಮದಲ್ಲಿ ಶನಿವಾರ ಘಟನೆ ನಡೆದಿದ್ದು ಮೃತ ಬಾಲಕಿ ಚಂದನಹೊಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮಿ‌ಮೋಹನ‌ ಪಾಟೀಲ(೧೪) ಎಂದು ಗುರುತಿಸಲಾಗಿದೆ ಸಂಜೆ‌ ಬಾವಿಗೆ ನೀರು ತರಲು ಹೋದಾಗ ಈ ದುರ್ಘಟನೆ. ನಡೆದಿದೆ ಎಂದು ತಿಳಿದು ಬಂದಿದೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದ ರೈತ …

Read More »

ಭಾರತ ದೇಶ… ಜೈ.. ಬಸವೇಶ..ಪ್ರತ್ಯೇಕ ಧರ್ಮಕ್ಕಾಗಿ ರಕ್ತದಲ್ಲಿ ಪತ್ರ..

ಬೆಳಗಾವಿ-ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ವಿಚಾರವಾಗಿಬೆಳಗಾವಿಯಲ್ಲಿ ಬಸವ ಸೈನ್ಯ ಕಾರ್ಯಕರ್ತರಿಂದ ವಿನೂತನ ಚಳುವಳಿ ನಡೆಯಿತು ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬೆರದು ಬಸವ ಸೈನಿಕರು ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದರು ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಮಾಡುವಂತೆ ಒತ್ತಾಯ ಮಾಡುವದರ ಜೊತೆಗೆ ರಕ್ತದಲ್ಲಿ ಬಸವಣ್ಣ ವರ ಭಾವಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದರು ಬಸವ ಕಾಲೋನಿಯ ಬಸವಸೈನ್ಯ ಸಂಘಟನೆ ಕಾರ್ಯಕರ್ತರು ತಮ್ಮ ರಕ್ತದಲ್ಲಿ ಬಸವಣ್ಣನವರ ಭಾವ ಚಿತ್ರ ಬಿಡಿಸಿ …

Read More »

ಸೇವಾ ಆಧಾರಿತ ಬಡ್ತಿ, ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸಿ

ಸರ್ಕಾರಿ ನೌಕರರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವಿಷಯಕ್ಕೆ ಸಮಂಧಿಸಿದಂತೆ ಮಾನ್ಯ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಈ ತೀರ್ಪನ್ನು ಯಥಾವತ್ತಾಗಿ ರಾಜ್ಯದಲ್ಲಿ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿ ಅಲ್ಪ ಸಂಖ್ಯಾತ,ಹಿಂದುಳಿದ ಮತ್ತು ಸಾಮಾನ್ಯ ನೌಕರ ಸೇರಿಕೊಂಡು ಅಸ್ತಿತ್ವಕ್ಕೆ ತಂದ ಅಹಿಂಸಾ ಸಂಘಟನೆ ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು ಜಾತಿ ಆಧಾರಿತ ಮೀಸಲಾತಿ ಬಡ್ತಿಯಲ್ಲಿ ಬೇಡ ಸೇವಾ ಆಧಾರಿತ ಬಡ್ತಿಯನ್ನು ರಾಜ್ಯ ಸರ್ಕಾರದ ನೌಕರರಿಗೆ ಕೊಡಬೇಕು ಎಂದು ಮಾನ್ಯ ಸರ್ವೋಚ್ಛ ನ್ಯಾಯಾಲಯ …

Read More »

ರಾಜ್ಯದಲ್ಲಿ ನ್ಯಾಶನಲ್ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ,ಇಲ್ಲಿರುವದು ಸಿದ್ರಾಮಯ್ಯ ಕಾಂಗ್ರೆಸ್- ದೇವೆಗೌಡ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ದೇವೆಗೌಡರು ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕರ್ನಾಟಕದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಇಲ್ಲ. ಇಲ್ಲಿ ಏನೇ ಇದ್ದರೂ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರದಲ್ಲಿದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸಿದ್ರಾಮಯ್ಯ ಪ್ರಾವೇಟ್ ಕಂಪನಿ ಲಿಮಿಟೆಡ್ ಆಗಿದೆ ಎಂದು ದೇವೇಗೌಡರು ಪರೋಕ್ಷವಾಗಿ ಟೀಕಿಸಿದರು ಕುಮಾರಸ್ವಾಮಿ ಸದನದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಮಾತನಾಡಿದ್ರು. ಈ ವರೆಗೂ ಸರ್ಕಾರ …

Read More »

ಪಾಲಿಕೆ ಸಭೆಯಲ್ಲಿ ಶಾಸಕ ಸಂಜಯ ಪಾಟೀಲರ ಮರಾಠಿ ಪ್ರೇಮ

ಬೆಳಗಾವಿ-ನಾಡು, ನುಡಿ ಜಲದ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಬೇಕಿದ್ದ ಬೆಳಗಾವಿ ಬಿಜೆಪಿ ಶಾಸಕ ಸಂಜಯ ಪಾಟೀಲ್ ಮರಾಠಿ ಪ್ರೇಮ್ ಪ್ರದರ್ಶಿಸಿದ್ದಾರೆ. ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಪಾಟೀಲ್ ಮರಾಠಿಯಲ್ಲಿ ಮಾತನಾಡಿದ್ದು, ಶಾಸಕರ ಓಟ್ ಬ್ಯಾಂಕ್ ರಾಜಕಾರಣ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ರಾಜ್ಯದಲ್ಲಿ ೨೦೧೮ ವಿಧಾನಸಭೆ ಚುನಾವಣೆಗೆ ಎಲ್ಲ ಜನಪ್ರತಿನಿಧಿಗಳೂ ತಾಲೀಮ ನಡೆಸಿದ್ದಾರೆ. ಆದ್ರೆ ಕುರ್ಚಿಗಾಗಿ ಬೆಳಗಾವಿ ಶಾಸಕರೊಬ್ಬ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ. ಅತ್ತ ರಾಜ್ಯ ಸರ್ಕಾರ ಕನ್ನಡ …

Read More »

ಐತಿಹಾಸಿಕ ಮಿಲಿಟರಿ ಡೈರಿ ಬಂದ್ ಮಾಡಿದರೆ ಉಗ್ರ ಹೋರಾಟ ಶ್ರೀರಾಮ ಸೇನೆ ಎಚ್ಚರಿಕೆ

  ಬೆಳಗಾವಿ- ಬೆಳಗಾವಿಯಲ್ಲಿ ಶತಮಾನದ ಇತಿಹಾಸ ಹೊಂದಿರುವ ಮಿಲಿಟರಿ ಡೈರಿ ಬಂದ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು ಕೂಡಲೇ ಆದೇಶವನ್ನು ವಾಪಸ್ ಪಡೆಯ ಬೇಕೆಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಒತ್ತಾಯಿಸಿದರು ಪ್ರಮೋದ ಮುತಾಲಿಕ ಅವರ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮ ಸೇನೆಯ ಕಾರ್ಯಕರ್ತರು ಮಿಲಿಟರಿ ಡೈರಿಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡದಂತೆ ಜಿಲ್ಲಾಧಿಕಾರಿಗಳ ಮೂಲಕ ರಕ್ಷಣಾ ಸಚಿವರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಅರ್ಪಿಸಿದರು ಈ ಸಂಧರ್ಭದಲ್ಲಿ …

Read More »

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಇತಿಹಾಸದಲ್ಲಿ ಹೊಸ ಅವಿಷ್ಕಾರ

ಬೆಳಗಾವಿ- ಸ್ವಾತಂತ್ಯ ಸಂಗ್ರಾಮದ ಬೆಳ್ಳಿಚುಕ್ಕೆ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಇತಿಹಾಸದಲ್ಲಿ ಹೊಸ ಸಂಶೋದನೆಯಾಗಿ ಹೊಸ ದಾಖಲೆಗಳು ಲಭಿಸಿವೆ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅವಿವಾಹಿತನಲ್ಲಾ ಅವನಿಗೆ ಮದುವೆಯಾಗಿತ್ತು ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ. ಹೌದು ಕಿತ್ತೂರು ರಾಣಿ ಚನ್ನಮ್ಮನ ಬಲಗೈ ಬಂಟ ಸ್ವಾತಂತ್ರಹೋರಾಟಗರಾ ಸಂಗೊಳ್ಳಿ ರಾಯಣ್ಣನಿಗೆ ಹೆಂಡತಿ ಮಕ್ಳಳು ಸಹ ಇದ್ದರೆಂಬ ದಾಖಲೆಗಳು ಸಿಕ್ಕಿದ್ದು ರಾಯಣ್ಣನಿಗೆ ಒಬ್ಬ …

Read More »

ಬೆಳಗಾವಿಯಲ್ಲಿ ಸಂಬ್ರಮದ ಸ್ವಾತಂತ್ರೋತ್ಸವ

ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿದರು. ಈ‌ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಶತ ೨೯ % ಪ್ರಮಾಣದ ಮಳೆಯ ಕೊರತೆಯಿಂದ ಬಿತ್ತನೆ ತಡವಾಗಿ ಆರಂಭವಾಗಿ ಚಿಕ್ಕೋಡಿ, ರಾಯಬಾಗ ಹಾಗೂ ಸವದತ್ತಿ ತಾಲೂಕಿಗಳಲ್ಲಿ ಬಿತ್ತನೆ ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ. ಈ ಮುಂಗಾರಿನಲ್ಲಿ ಒಟ್ಟು ೬.೪೩ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ ೪.೬೮ ಲಕ್ಷ‌ ಹೆಕ್ಟೇರ್ ಆಗಿದೆ ಎಂದು ಹೇಳಿದರು. ಮುಂಗಾರು ಹಂಗಾಮಿನಲ್ಲಿ …

Read More »

ಕಳಸಾ ಬಂಡೂರಿ ಕಣಿವೆಯಲ್ಲಿ ಹಾರಿತು ತ್ರಿವರ್ಣ ಧ್ವಜ..

ಬೆಳಗಾವಿ- ಕಳಸಾ ಬಂಡೂರಿ ಹೋರಾಟಗಾರರಿಂದ ಮಲಪ್ರಭಾ ಉಗಮಸ್ಥಾನ ಕನಕುಂಬಿಯಲ್ಲಿ ಮದ್ಯ ರಾತ್ರಿ ೧೨ ಗಂಟೆಗೆ ಧ್ವಜಾರೋಹಣ ಮಾಡುವದರ ಮೂಲಕ ಭಾರತದ ಒಕ್ಕೂಟದ ವ್ಯೆವಸ್ಥೆಯಲ್ಲಿ ದೇಶ ಒಂದೇ ಜಲ ಒಂದೇ ಸಮ ಬಾಳು ಸಮ ಪಾಲು ಎನ್ನುವ ಸಂದೇಶವನ್ನು ಕಳಸಾ ಬಂಡೂರಿ ಹೋರಾಟಗಾರರು ನೀಡಿದರು ಬೆಳಗಾವಿ ಜಿಲ್ಲೆ ಖಾನಾಪೂರ್ ತಾಲೂಕಿನ ಕನಕುಂಬಿ ಗ್ರಾಮದಲ್ಲಿ ಉಗಮವಾದ ಮಲಪ್ರಭೆ ನದಿಯ ದಡದಲ್ಲಿ ವಿನೂತನವಾಗಿ ಸ್ವಾತಂತ್ಯೋತ್ಸವನ್ನು ಆಚರಿಸಲಾಯಿತು ಕಳೆದ ಮೂರುವರುಷದಿಂದ ಕಳಸಾ ಬಂಡೂರಿ ಹೋರಾಟ ಮಾಡಿದರೂ …

Read More »

ಅಭಯ ಪಾಟೀಲ ಸಮಂಧಿಯಿಂದ ಜೀವ ಬೆದರಿಕೆ ಆರೋಪ ಡಿಸಿಪಿಗೆ ದೂರು

ಮಾಜಿ ಶಾಸಕ ಅಭಯ ಪಾಟೀಲ ಸಂಬಂಧಿಯಿಂದ ಜೀವ ಬೆದರಿಕೆಯಿದ್ದು,ರಕ್ಷಣೆ ನೀಡುವಂತೆ ಮಹಾನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸೀಮಾ ಲಾಟ್ಕರ್ ಅವರಿಗೆ ನ್ಯಾಯವಾದಿ ಹರ್ಷವರ್ಧನ್ ಪಾಟೀಲ ಸೋಮವಾರ ದೂರು ಸಲ್ಲಿಸಿದ್ದಾರೆ. ಸೋಮವಾರ ಬೆಳಗ್ಗೆ ಆಯುಕ್ತರ ಕಚೇರಿಗೆ ತೆರಳಿದ ಹರ್ಷವರ್ಧನ್ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ ಅವರ ಸಹೋದರನ ಪುತ್ರ ತವನ್ ಪಾಟೀಲ, ೆನ್‌ನಲ್ಲಿ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಜೀವ ಬೆದರಿಕೆಯೊಡ್ಡಿದ್ದು, ನನಗೆ ಭದ್ರತೆ ನೀಡಬೇಕು ಎಂದು ಕೋರಿದರು. ನಂತರ …

Read More »

ಬೆಳಗಾವಿ ಜಿಲ್ಲಾಧಿಕಾರಿಯಾಗಿ ಜಿಯಾವುಲ್ಲಾ ಅಧಿಕಾರ ಸ್ವೀಕಾರ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಜಿಯಾವುಲ್ಲಾ ಅವರು ಇಂದು ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು ಚಿಕ್ಕೋಡಿ ಉಪ ವಿಭಾಗಾಧಿಕಾರಿಯಾಗಿ ತಮ್ಮ ಸೇವಾ ಅವಧಿಯ ಆರಂಭದಲ್ಲಿ ಕಾರ್ಯ ನಿರ್ವಹಿಸಿದ ಅವರು ಬೆಳಗಾವಿ ಜಿಲ್ಲೆಯ ಬಗ್ಗೆ ಅನುಭವ ಹೊಂದಿದ್ದಾರೆ ಮಂಡ್ಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿಯಾವುಲ್ಲಾ ಅವರನ್ನು ಜಯರಾಮ ಅವರ ವರ್ಗಾವಣೆಯಾದ ಬಳಿಕ ಬೆಳಗಾವಿ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ಬುಧವಾರ ಆದೇಶ ಹೊರಡಿಸಿತ್ತು ಬೆಳಗಾವಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರನ್ನು ಪ್ರಭಾರಿ ಜಿಲ್ಲಾಧಿಕಾರಿ …

Read More »

ಬೆಳಗಾವಿಯಲ್ಲಿ ಕೆಸರಿನ ಗದ್ದೆ ಓಟ..ಹಗ್ಗ ಜಗ್ಗಾಟ..ಗಮನ ಸೆಳೆದ ಮೊಸರಿನ ಗಡಿಗೆ ಒಡೆಯುವ ನೋಟ

ಬೆಳಗಾವಿ- ಮಾಜಿ ಶಾಸಕ ಅಭಯ ಪಾಟೀಲ ಸಮಾಜ ಸೇವೆ,ಮತ್ತು ರಾಜಕೀಯದ ಜೊತೆಗೆ ದೇಶಿಯ ಸಂಸ್ಕೃತಿಯ ಉಳಿವಿಗಾಗಿ ವಿವಿಧ ಹಬ್ಬಗಳ ಸಂಧರ್ಭದಲ್ಲಿ ಸಾರ್ವಜನಿಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದಾರೆ ಹೋಳಿ ಹಬ್ಬದ ಸಂಧರ್ಭದಲ್ಲಿ ಹೋಳಿ ಮಿಲನ ನವರಾತ್ರಿ ಹಬ್ಬದ ಸಂಧರ್ಬದಲ್ಲಿ ದಾಂಡಿಯಾ ಸಂಕ್ರಾಂತಿ ಹಬ್ಬದ ಸಂಧರ್ಭದಲ್ಲಿ ಗಾಳಿ ಪಟ ಉತ್ಸವ ಆಯೋಜಿಸಿ ದೇಶೀಯ ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಅಭಯ ಪಾಟೀಲರು ಮಾಡುತ್ತಿರುವದು ವಿಶೇಷ ಸಂಗತಿ ಈಗ …

Read More »

ನಟ ಉಪೇಂದ್ರರ ರಾಜಕೀಯ ವ್ಯಾಖ್ಯಾನದ ಸಂಚಲನ

ಬೆಳಗಾವಿ- ವಿಚಿತ್ರ ಅನ್ನುವ ರೀತಿಯಲ್ಲಿ ಪಾತ್ರಗಳನ್ನು ಸೃಷ್ಟಿಸಿ ಸಮಾಜದ ವಾಸ್ತವ ಸಂಗತಿಗಳನ್ನು ತೀರ ಗಂಭೀರವೂ ಅಲ್ಲ ಹಾಸ್ಯವೂ ಅಲ್ಲದ ಶೈಲಿಯಲ್ಲಿ ಕನ್ನಡ ಸಿನಿಮಾಗಳನ್ನು ನೀಡುತ್ತ ಬಂದ ನಟ ಉಪೇಂದ್ರ ಇದ್ದಕ್ಕಿಂದ್ದಂತೆ ರಾಜಕೀಯ ಪ್ರವೇಶದ ಮಾರ್ಗವೊಂದನ್ನು ಸಾರ್ವಜನಿಕರ ಎದುರು ತೆರೆದಿಟ್ಟು ಗಮನ ಸೆಳೆಯುವಂತೆ ಮಾಡಿದ್ದಾರೆ. ಯಾವತ್ತೂ ಅನುಕೂಲಸ್ಥ ಗೆದ್ದೆತ್ತಿನ ಬಾಲ ಹಿಡಿದು ಸುತ್ತುವ ಎಲೆಕ್ಟ್ರಾನಿಕ ಕೆಲ ಮಾಧ್ಯಮಗಳು ಕರ್ನಾಟಕ ರಾಜಕೀಯ ವಲಯದಲ್ಲಿ ಒಂದು ಹೊಸ ಯುಗವೇ ಆರಂಭವಾಗಿದೆ ಎನ್ನುವಂತೆ  ಎಥಾಪ್ರಕಾರ ತಮ್ಮ …

Read More »

ಬೆಳಗಾವಿಯಲ್ಲಿ ಸೊಳ್ಳೆಗಳ ಜಾಗಿಂಗ್…ಅಭಯ ಪಾಟೀಲರಿಂದ ಖಾಸಗಿ ಫಾಗಿಂಗ್…!

ಬೆಳಗಾವಿ-ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮೀತ ಷಾ ಮತ್ತು ರಾಜ್ಯದ ಎಲ್ಲ ಬಿಜೆಪಿ ನಾಯಕರು ರಾಜಕೀಯ ತಾಲೀಮು ನಡೆಸಿದರೆ ಇತ್ತ ಬೆಳಗಾವಿಯಲ್ಲಿ ಮಾಜಿ ಶಾಸಕ ಅಭಯ ಪಾಟೀಲ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಫಾಗಿಂಗ್ ಮಾಡಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ ಬೆಳಗಾವಿ ನಗರದಲ್ಲಿ ಸೊಳ್ಳೆಗಳ ಕಾಟ ಜಾಸ್ತೀಯಾಗಿ ಅನೇಕ ಜನ ಡೆಂಗ್ಯು ಜ್ವರಕ್ಕೆ ತುತ್ತಾಗಿರುವದನ್ನು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಪರಗಣಿಸದೇ …

Read More »

ಸಿಸಿಬಿ ಪೋಲೀಸರ ದಾಳಿ ಟ್ಯಾಂಕರ್ ನಿಂದ ಡಿಸೈಲ್ ಕದಿಯುತ್ತಿದ್ದ ಚಾಲಕ ಕ್ಲೀನರ್ ಬಂಧನ

ಬೆಳಗಾವಿ: ಸಿಸಿಬಿ ಇನ್ಸ್ಪೇಕ್ಟರ್ ಗಡ್ಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೋಲೀಸರು ಡಿಸೈಲ್ ಟ್ಯಾಂಕರ್ ನಿಂದ ಅಪಾಯಕಾರಿ ರೀತಿಯಲ್ಲಿ ಡಿಸೈಲ್ ಕದಿಯುತ್ತಿದ್ದ ಟ್ಯಾಂಕರ್ ನ ಚಾಲಕ ಮತ್ತು ಕ್ಲೀನರ್ ಬಂಧಸಿದ್ದಾರೆ ಡಿಸೈಲ್ ಟ್ಯಾಂಕರ್ ನಿಂದ ಡಿಸೈಲ್ ಕದಿಯುವ ಸಂಧರ್ಭದಲ್ಲಿ ದಾಳಿ ನಡೆಸಿದ ಪೋಲೀಸರು ಬೆಳಗಾವಿಯ ಅಶೋಕ ನಗರದ ರಾಷ್ಟ್ರೀಯ ಹೆದ್ದಾರಿ ೪ ರ ಬಳಿ ಟ್ಯಾಂಕರ್ ವಶಕ್ಜೆ ಪಡೆದು ಚಾಲಕ ಮತ್ತು ಕ್ಲೀನರ್ ನನ್ನು ಬಂಧಿಸಿದ್ದಾರೆ ಬೆಳಗಾವಿಯಿಂದ ಸಂಕೇಶ್ವರಕ್ಕೆ ಹೋಗಬೇಕಿದ್ದ …

Read More »