Breaking News

LOCAL NEWS

ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿ ಚೋಪ್ರಾ ಬಂಡಾಯ

ಬೆಳಗಾವಿ- ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುವ ಮುನ್ನವೇ ಬಂಡಾಯ ಭುಗಿಲೆದ್ದಿದೆ ಪಕ್ಷದ ಪ್ರಬಲ ಆಕಾಂಕ್ಷಿ ಆನಂದ ಚೋಪ್ರಾ ಅವರಿಗೆ ಕೈ ಟಿಕೆಟ್ ಕೈತಪ್ಪುವ ಭೀತಿಯಿಂದ ಚೋಪ್ರಾ ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ನೀಡಿದ್ದಾರೆ ಟಿಕೆಟ್ ಘೋಷಣೆಯಾಗುವ ಮುನ್ನವೇ ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು ಈ ಕ್ಷೇತ್ರದಲ್ಲಿ ಚೋಪ್ರಾ ಬೆಂಬಲಿಗರು ಸಭೆ ನಡೆಸಿ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕೈ …

Read More »

ಬೆಳಗಾವಿ ದಕ್ಷಿಣದಿಂದ ಅಭಯ ಪಾಟೀಲ,ಉತ್ತರದಿಂದ ಅನೀಲ ಬೆನಕೆ ಫಿಕ್ಸ…!!

ಬೆಳಗಾವಿ- ಬೆಳಗಾವಿ ದಕ್ಷಿಣದಿಂದ ಅಭಯ ಪಾಟೀಲ ಮತ್ತು ಉತ್ತರದಿಂದ ಅನೀಲ ಬೆನಕೆ ಅವರ ಹೆಸರು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದ್ದು ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಬಿಜೆಪಿಯ ಅಧಿಕೃತ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಬೆಳಗಾವಿ ದಕ್ಷಿಣದಿಂದ ಅಭಯ ಪಾಟೀಲರಿಗೆ ಬಿಜೆಪಿ ಟಿಕೆಟ್ ತಪ್ಪಿಸಲು ಬಿಜೆಪಿಯ ಒಂದು ಗುಂಪು ಕಸರತ್ತು ನಡೆಸಿತ್ತು ಆದರೆ ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಅಭಯ ಪಾಟೀಲರ ಹೆಸರನ್ನು ಅಂತಿಮಗೊಳಿಸಿದೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ …

Read More »

ಮೀಸೆ ತಿರುವಿದ ಸಿದ್ರಾಮಯ್ಯ ಬೇರೆ ಕ್ಷೇತ್ರ ಹುಡುಕುತ್ತಿರುವದೇಕೆ- ಅಮೀತ ಷಾ ಪ್ರಶ್ನೆ

ಬೆಳಗಾವಿ ಮೀಸೆ ಮೇಲೆ ಕೈಹಾಕಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ದಿಸುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜನರ ಆಕ್ರೋಶಕ್ಕೆ ಹೆದರಿ ಮೈಸೂರಿನ ಚಾಮುಂಡಿ ಕ್ಷೇತ್ರವನ್ನು ಬದಲಾಯಿಸಿ ಬೇರೆ ಕ್ಷೇತ್ರವನ್ನು ಹುಡುಕಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ಶುಕ್ರವಾರ ಕಿತ್ತೂರಿನ ಚನ್ನಮ್ಮಳ ಮೂರ್ತಿಗೆ ಮಾಲಾರ್ಪಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು. ಮೀಸೆ ತಿರುವಿ ಚಾಮುಂಡಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಜಂಬದಿಂದ ಹೇಳುತ್ತಿದ್ದ ಸಿದ್ದರಾಮಯ್ಯಗೆ ಆ ಕ್ಷೇತ್ರದ ಜನರ ಆಕ್ರೋಶಕ್ಕೆ ಹೆದರಿ ಕ್ಷೇತ್ರ …

Read More »

ಕ್ರಾಂತಿಯ ನೆಲದಲ್ಲಿ ಮತಬೇಟೆಗೆ ಚಾಣಕ್ಯನ ತಂತ್ರ….!!! ವೀರರಾಣಿ, ಕ್ರಾಂತಿವೀರನಿಗೆ ಗೌರವ ಸಮರ್ಪಣೆ

*ರಾಣಿ ಚನ್ನಮ್ಮ , ಸಂಗೊಳ್ಳಿ ರಾಯಣ್ಣನ ಮೇಲಿನ ಗೌರವ ಫಲ ನೀಡುವುದೇ?* ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ನಿನ್ನೆಯಿಂದ ಉತ್ತರ ಕಾರ್ನಾಟಕ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಿನ್ನೆ ಧಾರವಾಡ ಮತ್ತು ಗದಗ ಜಿಲ್ಲೆ ಮುಗಿಸಿಕೊಂಡು ಇಂದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರಚಾರ ಕಾರ್ಯಕೈಗೊಂಡಿದ್ದಾgಷ್ಟಿಂದು ಮುಂಜಾನೆ ಕಿತ್ತೂರಿನಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟಗಾರತಿ ವೀರರಾಣಿ ಚನ್ನಮ್ಮನ ಸ್ಮಾರಕಕ್ಕೆ ಭೆಟ್ಟಿ ನೀಡಿ ಪುಷ್ಟ ಅರ್ಪಿಸಿ ಗೌರವಾರ್ಪಣೆ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತಬೇಟೆ ಆರಂಭ

ಬೆಳಗಾವಿ- ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಸವರಾಜ ಮೇಳೇದ ಅವರು ಇಂದು ತಮ್ಮ ನೂರಾರು ಬೆಂಬಲಿಗರೊಂದಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಆರ್. ಹೆಬ್ಬಾಳಕರ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಗುರುವಾರ ನೂರಾರು ಬೆಂಬಲಿಗರೊಂದಿಗೆ ಲಕ್ಷ್ಮೀ ಆರ್. ಹೆಬ್ಬಾಳಕರ ರವರನ್ನು ಭೇಟಿಯಾದ ಬಸವರಾಜ ಮೇಳೇದ ಮತ್ತು ಅವರ ಬೆಂಬಲಿಗರನ್ನು ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿನಯ ನಾವಲಗಟ್ಟಿ ರವರು ಕಾಂಗ್ರೆಸ್ ಪಕ್ಷದ ಧ್ವಜ ನೀಡಿ …

Read More »

ಸಚಿವ ವಿನಯ ಕುಲಕರ್ಣಿ ವಿರುದ್ಧ ಶಿವಯೋಗಿ ಸ್ವಾಮೀಜಿ ಗರಂ

ಬೆಳಗಾವಿ- ವಿನಯ ಕುಲಕರ್ಣಿ ವಿರುದ್ಧ ಅಪಪ್ರಚಾರ ಮಾಡಿದ ಆರೋಪದ ಮೇಲೆ 2008 ರಲ್ಲಿ ಧಾರವಾಡದ ಮುರುಘಾಮಠದ ಮುಖ್ಯ ಪೀಠಾಧಿಪತಿ ಸ್ಥಾನದಿಂದ ಎತ್ತಂಗಡಿಯಾಗಿ ಮಠದಿಂದ ಹೊರಕಾಲ್ಪಟ್ಡಿದ್ದ ಶಿವಯೋಗಿ ಸ್ವಾಮಿಗಳು ಅನಾರೋಗ್ಯದಿಂದ ಬಳಲುತ್ತಿದ್ದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದಾರೆ ವಿನಯ ಕುಲಕರ್ಣಿ ಅವರಿಗೆ ಮತಹಾಕಬೇಡಿ ಎಂದು ನಾನು ಹೇಳಿದೆ,ಮಠದ ಹೊಲ ಮಾರಾಟ ಮಾಡಿದೆ ,ನನಗೆ ಹೆಂಡತಿ ಮಕ್ಕಳಿದ್ದಾರೆ, ಎಂದು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ವಿನಯ ಕುಲಕರ್ಣಿ ಗುಂಡಾಗಿರಿ ಮಾಡಿ ನನ್ನನ್ನು …

Read More »

ಬಿಜೆಪಿ ಬೆಂಬಲಿಸದಂತೆ ಬಹುಭಾಷಾ ನಟ ಪ್ರಕಾಶ ರೈ ಸಲಹೆ

ಬೆಳಗಾವಿ-ಕೇಂದ್ರದಲ್ಲಿ  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ನೀಡಿದ ಭವರಸೆಗಳನ್ನು ಈಡೇರಿಸದೇ ಕೋಮು ಸಂರ್ಘಗಳು ಹೆಚ್ಚಾಗುವುದಕ್ಕೆ ಕಾರಣವಾಗಿರುವ ಬಿಜೆಪಿ  ಪಕ್ಷಕ್ಕೆ ನಾಗರಿಕರು ಬೆಂಬಲಿಸದಂತೆ ಬಹುಭಾಷಾ ಖ್ಯಾತ ನಟ ಪ್ರಕಾಶ ರೈ ಸಲಹೆ ನೀಡಿದ್ದಾರೆ. ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಸ್ತುತ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುವುದಿಲ್ಲ. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸುವುದು ಖಚಿತ. ಈಗಾಗಲೇ ಬಿಜೆಪಿ ವಿರುದ್ದ …

Read More »

ಗೋಕಾಕಿನಲ್ಲಿ ಅಮೀತ ಷಾ ರೋಡ್ ಶೋ ಕಾಂಗ್ರೆಸ್ ನವರಿಂದ ಬೆದರಿಕೆ ಕರೆ- ಅಂಗಡಿ ಆರೋಪ

ಬೆಳಗಾವಿ ಗೋಕಾಕನಲ್ಲಿ ಅಮಿತ ಶಾ‌ ಬರುತ್ತಾರೆ ಎಂದು ತಿಳಿದ ಕಾಂಗ್ರೆಸ್ ನವರಿಂದ ಬೇದರಿಕೆ‌ ಮೆಸೇಜ್ ಗಳು ಬರುತ್ತಿವೆ. ಜಿಲ್ಲಾ ಚುನಾವಣಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಗೋಕಾಕನಲ್ಲಿ‌ ಬೇರು ಬಿಟ್ಟಿರುವ ಪಿಡಿಒ, ತಹಶಿಲ್ದಾರ ಮೇಲೆ ನಿಗಾವಹಿಸಬೇಕೆಂದು ಸಂಸದ ಸುರೇಶ ಅಂಗಡಿ ಎಚ್ಚರಿಸಿದರು. ಅವರು ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗೋಕಾಕನಲ್ಲಿ ಸರಕಾರಿ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣೆಯುತ್ತಿದ್ದಾರೆ. ಇವರು ಸರಕಾರಿ ನೌಕರರು ಪ್ರಭಾವಿ ನಾಯಕರ ಸೇವಕರೋ ಎಂದು ಹರಿಹಾಯ್ದ ಅವರು …

Read More »

ಬಹುಭಾಷಾ ನಟ ಪ್ರಕಾಶ ರೈ ಇಂದು ಬೆಳಗಾವಿಗೆ

ಬೆಳಗಾವಿ- ಬಹು ಭಾಷಾಬ ಚಲನಚಿತ್ರನಟ ಪ್ರಕಾಶ ರೈ ಇಂದು ಬುಧವಾರ ಬೆಳಗಾವಿಗೆ ಭೇಟಿ ನೀಡಲಿದ್ದಾರೆ ವಿಧಾನಸಭೆ ಚುನಾವಣೆಯ ಸಂಧರ್ಭದಲ್ಲಿ ಪ್ರಕಾಶ ರೈ ಅವರ ಭೇಟಿ ಮಹತ್ವ ಪಡೆದುಕೊಂಡಿದ್ದು ಮಧ್ಯಾಹ್ನ 1 ಘಂಟೆಗೆ ನಗರದ ಕನ್ಬಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಿರುವ ಅವರು ನಂತರ ಬೆಂಗಳೂರಿಗೆ ತೆರಳಲಿದ್ದಾರೆ

Read More »

ಬೆಳಗಾವಿ ಜಿಲ್ಲೆಯಲ್ಲಿ ಖಡಕ್ ಚುನಾವಣಾ ನೀತಿಸಂಹಿತೆ

ಬೆಳಗಾವಿ-ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಬೆಳಗಾವಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆಯನ್ನು ಜಾರಿಗೊಳಿಸಿದ್ದಾರೆ ಕೇಂದ್ರ ಚುನಾವಣಾ ಆಯೋಗ ಚುನಾವಣೆಯ ದಿನಾಂಕ ಪ್ರಕಟಿಸುತ್ತಿದ್ದಂತೆಯೇ ಬೆಳಗಾವಿ ನಗರ ಹಾಗು ಜಿಲ್ಲೆಯಾದ್ಯಂತ ರಾಜಕೀಯ ಪಕ್ಷಗಳ ನಾಯಕರ ಬ್ಯಾನರ್ ಕಟೌಟುಗಳನ್ನು ತೆರವುಗೊಳಿಸಿದ ಜಿಯಾವುಲ್ಲಾ ಅವರು ಜಿಲ್ಲೆಯ ಆಯಕಟ್ಟಿನ ಪ್ರದೇಶಗಳಲ್ಲಿ ಚೆಕ್ ಪೋಸ್ಟಗಳನ್ನು ಸ್ಥಾಪಿಸಿ ಆಕ್ರಮ ಸರಾಯಿ ಸಾಗಾಣಿಕೆ ಆಕ್ರಮ ಹಣ ಸಾಗಾಣಿಕೆ ಸೇರಿದಂತೆ ಹತ್ತು ಹಲವು ಆಕ್ರಮ ಚಟುವಟಿಕೆಗಳಿಗೆ …

Read More »

ಜಗದೀಶ ಮೆಟಗುಡ್ ಗೆ ಕಾಂಗ್ರೆಸ್ ಟಿಕೆಟ್ ಖಚಿತ….!!!!

ಬೆಳಗಾವಿ– ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಸಮೀಪಿಸುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಸುಂಟರಗಾಳಿ ಬೀಸುತ್ತಿದೆ ದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಳ ಪಟ್ಟಿಗೆ ಅಂತಿಮ ಸ್ಪರ್ಷ ನೀಡಲಾಗುತ್ತಿದ್ದು ಬೆಳಗಾವಿ ಜಿಲ್ಲಾಮಂತ್ರಿ ರಮೇಶ ಜಾರಕಿಹೊಳಿ,ಲಕ್ಷ್ಮೀ ಹೆಬ್ಬಾಳಕರ ವಿನಯ ನಾವಲಗಟ್ಟಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ದೆಹಲಿಯಿಂದ ಬುಲಾವ್ ಬಂದಿದ್ದು ಎಲ್ಲ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಸ್ಪರ್ಷ ನೀಡುವ ಕಾರ್ಯ ಕಾಂಗ್ರೆಸ್ ಹೈಕಮಾಂಡ್ ಮಾಡುತ್ತಿದ್ದು …

Read More »

ಕಿತ್ತೂರ ಬಳಿ ಕಾರು ಮರಕ್ಕೆ ಡಿಕ್ಕಿ ಮೈಸೂರ ಮೂಲದ ಮೂವರು ಯುವಕರು ಸ್ಥಳದಲ್ಲೇ ಸಾವು

ಬೆಳಗಾವಿ ಕಿತ್ತೂರ ಹತ್ತಿರ ಸಾಯ0ಕಾಲ 6 ಗಂಟೆ ವೆಳೆಗೆ ಅಪಘಾತ ಸ0ಭವಿಸಿದ್ದು ಐ20 ಕಾರನಲ್ಲಿ ಅತೀ ವೇಗವಾಗಿ ಬೀಡಿ ಕಡೆಯಿಂದ ಕಿತ್ತೂರು ಕಡೆ ಬರುತ್ತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೈಸೂರ ಮೂಲದ ಮೂರು ಜನ ಯುವಕರು ಸ್ಥಳದಲ್ಲೇ ಸಾವನ್ನೊಪ್ಪಿದ್ದು ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಗೋವಾದಿಂದ ಚೆನ್ನಮ್ಮ ಕಿತ್ತೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಇವರು ತಾಲೂಕಿನ ದೇಗುಲಹಳ್ಳಿ ಗ್ರಾಮದ ಹತ್ತಿರದ ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಕಾರ. ರಸ್ತೆ ಬದಿಯ …

Read More »

ಬೈಲಹೊಂಗಲದಲ್ಲಿ ಅಸಮಾಧಾನ ಸ್ಪೋಟ ಯಡಿಯೂರಪ್ಪ ವಿರುದ್ಧ ಕಿಡಿ

ಬೆಳಗಾವಿ- ಬಿಜೆಪಿ ಟಿಕೆಟ್ ಆಕಾಂಕ್ಷಿ ಜಗದೀಶ್ ಮೆಟಗುಡ್ಡಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಜಗದೀಶ ಮೆಟಗುಡ್ ಬೆಂಬಲಿಗರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ ಯಡಿಯೂರಪ್ಪ ಪ್ರತಿಕೃತಿ ಮಾಡಿ ಚಪ್ಪಲಿ ಹಾರ ಹಾಕಿ ಬೈಲಹೊಂಗಲ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಜದೀಶ ಮೆಟಗುಡ್ ಬೆಂಬಲಿಗರು ಬಿಎಸ್ ವೈ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಬೆಂಬಲಿಗರು ಐದು ಸಾವಿರಕ್ಕೂ …

Read More »

ನಿಪ್ಪಾಣಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮೀಸೆ ಮಾವನ ಗುದ್ದಾಟ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣ ಅದಲ್ ಬದಲ್ ಕೈಂಚಿ ಕದಲ್ ಇವರ್ನ ಬಿಟ್ಟು ಇನ್ಯಾರು ಎನ್ನುವ ರೀತಿಯಲ್ಲಿ ನಡೆಯುತ್ತದೆ ಘಟಾನು ಘಟಿ ನಾಯಕರು ತಮ್ಮ ಕ್ಷೇತ್ರಗಳನ್ನು ಬಿಟ್ಟು ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುವ ಗುದ್ದಾಟ ನಡೆಸಿದ್ದಾರೆ ಮಾಜಿ ಸಂಸದ ರಮೇಶ ಕತ್ತಿ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಟುಕೆಟ್ ಗಾಗಿ ಅರ್ಜಿ ಹಾಕಿದ ಬೆನ್ನಲ್ಲಿಯೇ ನಿಪ್ಪಾನಿ ಕ್ಷೇತ್ರದಿಂದ ಸ್ಪರ್ದಿಸಲು ಪ್ರಕಾಶ ಹುಕ್ಕೇರಿ ಕಾಂಗ್ರೆಸ್ ಟಿಕೆಟ್ ಗಾಗಿ ದೆಹಲಿಯಲ್ಲಿ ಲಾಭಿ ನಡೆದಿದ್ದಾರೆಂದು …

Read More »