Breaking News

LOCAL NEWS

ಮುಂದಿನ ಅವಧಿಗೂ ಕಾಂಗ್ರೆಸ್ ಅಧಿಕಾರಕ್ಕೆ ಜಾರಕಿಹೊಳಿ ವಿಶ್ವಾಸ

ಬೆಳಗಾವಿ- ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರಿಂದ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಸ್ಥಾಪನೆ ವಿಚಾರ ಜಾತಿವಾರು ಜನಗಣತಿಯಲ್ಲಿ ಹಿಂದುಳಿದವರ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಎಂದು ವರದಿ ಬಂದಿದೆ ಹೀಗಾಗಿ ಬಿಜೆಪಿಯ ಕಣ್ಣು ಇದೀಗ ದಲಿತರು, ಹಿಂದುಳಿದವರ ಕಡೆ ನೆಟ್ಟಿದೆ ವರದಿ ಬಂದ ತಕ್ಷಣ ದಲಿತ ಕಾಲೋನಿಗೆ ತೆರಳಲು ಯಡಿಯೂರಪ್ಪ ಅವರ ಪಕ್ಷದವರಿಗೆ ಆದೇಶ ನೀಡಿದ್ದಾರೆ ಇದು ಅವರ ಮೂರ್ಖತನ ತೋರಿಸುತ್ತದೆ ಎಂದು ಬೆಳಗಾವಿಯಲ್ಲಿ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ …

Read More »

ನಾರಿಮನ್ ಬದಲಾಯಿಸಿ ಕಾವೇರಿ ಉಳಿಸಿ-ಈಶ್ವರಪ್ಪ

ಬೆಳಗಾವಿ-ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣ. ರಾಜ್ಯ ಸರ್ಕಾರದಿಂದ ೧೦ ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ವಕೀಲರ ಅಫಡವೆಟ್ ವಿಚಾರ. ಅಫಡವೆಟ್ ವಿಚಾರ ನನಗೆ ಗೊತ್ತಿಲ್ಲ ಎಂದ ಸಿಎಂ ಹೇಳಿಕೆ ಖಂಡನಿಯವಾಗಿದೆ ಎಂದುವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ ವಕೀಲ ನಾರಿಮನ್ ರಿಂದ ರಾಜ್ಯಕ್ಕೆ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ. ತಕ್ಷಣ ನಾರಿಮನ್ ಬದಲಾಣೆ ಮಾಡಬೇಕು. ಕಾವೇರಿ ನದಿ ನೀರು ಬಿಡುಗಡೆ ವಿಚಾರ. ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿ …

Read More »

ಗಣೇಶ ಹೊಂಡ. ಸೇವೆಗೆ ಸಮರ್ಪಣೆ

ಬೆಳಗಾವಿ -ಬೆಳಗಾವಿ ಮಹಾನಗರ ಪಾಲಿಕೆಯಿಂದ 35 ಲಕ್ಷರೂ ಅನುದಾನ ಖರ್ಚು ಮಾಡಿ ವಡಗಾವಿ ಪ್ರದೇಶದ ನಾಜರ್ ಕ್ಯಾಂಪ್ ಪ್ರದೇಶದಲ್ಲಿ ನಿರ್ಮಿಸಲಾದ ಗಣೇಶ ವಿಸರ್ಜನಾ ಹೊಂಡವನ್ನು ಶಾಸಕ ಸಂಬಾಜಿ ಪಾಟೀಲ ಉದ್ಘಾಟಿಸಿದರು ಮೇಯರ್ ಸರೀತಾ ಪಾಟೀಲ,ಸಂಜಯ ಶಿಂದೆ,ರತನ ಮಾಸೇಕರ ರಮೇಶ ಸೊಂಟಕ್ಕಿ,ಸಂಜಯ ಸವ್ವಾಸೇರಿ ಸೇರಿದಂತೆ ಪಾಲಿಕೆ ಅಭಿಯಂತಕಿ ಲಕ್ಷ್ಮೀ ನಿಪ್ಪಾನಿಕರ ಸೇರಿದಂತೆ ಹಲವಾರು ಜನ ನಗರಸೇವಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು ಶಾಸಕ ಸಂಬಾಜಿ ಪಾಟೀಲ ಮಾತನಾಡಿ ಈ ಪ್ರದೇಶದ ಹೊಂಡದಲ್ಲಿಯೇ ಗಣೇಶ …

Read More »

ಕುಂದಾ ನಗರಿಯಲ್ಲಿ.. ಕಾವೇರಿ ಅನ್ಯಾಯದ ಆಕ್ರೋಶ

ಬಂದ್ ಮಿಶ್ರ ಪ್ರತಿಭಟನೆ…. ಬೆಳಗಾವಿ- ತಮಿಳು ನಾಡಿಗೆ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಇವತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಿಶ್ರ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದ ಬಸ್ ಸಂಚಾರ ಎಂದಿನಂತೆ ಇದ್ದು, ನೆರೆಯ ಗೋವಾ-ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಬೇಕಿದ್ದ ಬಸ್ ಗಳು ಹಾಗೂ ಜಿಲ್ಲೆಯ ಬೇರೆ ಬೇರೆ ಕಡೆಗಳಿಗೆ ತೆರಳಬೇಕಿದ್ದ ಬಸ್ ಗಳು ಎಂದಿನಂತೆ ಸಂಚರಿಸುತ್ತಿವೆ. ಇನ್ನೂ ಖಾಸಗಿ ಬಸ್ ಸಂಚಾರ, ಅಟೋ ಸಂಚಾರದಲ್ಲೂ …

Read More »

ಮೆರಿಟ್ ಆಧಾರದ ಪಾಲಿಕೆಯ ಸ್ಕಾಲರ್‍ಶಿಪ್

ಬೆಳಗಾವಿ-ಬೆಳಗಾವಿ ನಗರದ 1200 ವಿಧ್ಯಾರ್ಥಿಗಳು ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಿದ್ದು ಮೆರಿಟ್ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಒಮ್ಮತದ ನಿದಾರವನ್ನು ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಕೈಗೊಳ್ಳಲಾಯಿತು ಸಭೆಯಲ್ಲಿ ಮಹಾಪೌರ ಸರೀತಾ ಪಾಟೀಲ ಊಪ ಮಹಾಪೌರ ಸಂಜಯ ಶಿಂಧೆ ಸಮೀತಿಯ ಅಧ್ಯಕ್ಷೆ ರೂಪಾ ನೇಸರಕರ ಸೇರಿದಂತೆ ಸಮೀತಿಯ ಸದಸ್ಯರು ಉಪಸ್ಥಿತರಿದ್ದರು ಸ್ಕಾಲರ್ ಶಿಪ್‍ಗಾಗಿ 1200 ಜನ ವಿಧ್ಯಾರ್ಥಿಗಳು ಅರ್ಜಿಸಲ್ಲಿಸಿದ್ದಾರೆ ಆದರೆ ಕೇವಲ 17 …

Read More »

ಯುವ ಶಾಸಕ ಗಣೇಶ ಹುಕ್ಕೇರಿ ಪ್ರಮಾಣವಚನ ಸ್ವೀಕಾರ

ಬೆಳಗಾವಿ-ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಸಂಪುಟ ದರ್ಜೆಯ ಸಂಸದೀಯ ಕಾರ್ಯದರ್ಶಿಯಾಗಿ ಚಿಕ್ಕೋಡಿ ಸದಲಗಾ ಕ್ಷೇತ್ರದ ಯುವ ಶಾಸಕ ಗಣೇಶ ಹುಕ್ಕೇರಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣದಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಸಂಸದ ಪ್ರಕಾಶ ಹುಕ್ಕೇರಿ,ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ ಸೇರಿದಂತೆ ಅನೇಕ ಸಚಿವರುಗಳು ಹಾಗು ಅಧಿಕಾರಿಗಳು ಉಪಸಸ್ಥಿತರಿದ್ದರು

Read More »

ಗಣೇಶ ವಿಸರ್ಜನೆಗೆ ಕಪಿಲೇಶ್ವರ ಹೊಂಡ..ನೈರ್ಮಲ್ಯ ಕುಂಡ..ರೆಡಿ !

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಜಿಮ ಪ್ರಭು ಮತ್ತು ಪಾಲಿಕೆ ಅಧಿಕಾರಿಗಳ ತಂಡ ಹಗಲು ರಾತ್ರಿ ಶ್ರಮಿಸಿ ಗಣೇಶ ವಿಸರ್ಜನೆಗಾಗಿ ನಗರದಲ್ಲಿರುವ ಕಪಿಲೇಶ್ವರ ಹೊಂಡ ಸೇರಿದಂತೆ ಎಲ್ಲ ಹೊಂಡಗಳನ್ನು ಸಜ್ಜುಗೊಳಿಸಿದ್ದಾರೆ ಕಪಿಲೇಶ್ವರ ಹೊಂಡ,ಜಕ್ಕನಕೇರಿ ಹೊಂಡ ವಡಗಾಂವಿ ಕೆರೆ ಕಿಲ್ಲಾ ಕೆರೆಉ ಹೊಂಡ ಸೇರಿದಂತೆ ಎಲ್ಲ ಹೊಂಡಗಳು ಗಣೇಶ ವಿಸರ್ಜನೆಗೆ ರೆಡಿಯಾಗಿವೆ ಜೊತೆಗೆ ನಗರದ ವಿವಿಧ ಭಾಗಗಳಲ್ಲಿ ಗಣೇಶ ವಿರ್ಜನೆಗಾಗಿ ನೈರ್ಮಲ್ಯ ಕುಂಡಗಳನ್ನು ಇರಿಸಲಾಗಿದೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಮಾರ್ಗದರ್ಶನದಲ್ಲಿ …

Read More »

ಕಿಲ್ಲಾ ಕೆರೆಯಲ್ಲಿ ಅತೀ ಎತ್ತರದ ರಾಷ್ಟ್ರಧ್ವಜ.ಬುದ್ಧನ ವಿಗ್ರಹ..ತೇಲಾಡುವ ರೆಸ್ಟೋರೆಂಟ್

ಬೆಳಗಾವಿ-ಬೆಳಗಾವಿ ನಗರದ ಕೋಟೆ ಕೆರೆಯಲ್ಲಿ ಅತೀ ಎತ್ತರದ ರಾಷ್ಟ್ರ ಧ್ವಜ,ಬುದ್ಧನ ವಿಗ್ರಹ, ಜೊತೆಗೆ ತೆಲಾಡುವ ರೆಸ್ಟೋರೆಂಟ್, ಕೆರೆಯ ಸೌಂಧರ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ ರಾಜ್ಯ ಸರ್ಕಾರ ಮಂಜೂರು ಮಾಡಿರುವ ನೂರು ಕೋಟಿ ವಿಶೇಷ ಅನುದಾನದಲ್ಲಿ ಮಹಾನಗರ ಪಾಲಿಕೆ ಈ ಮೂರು ಮಹತ್ವದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು ಛತ್ತೀಸಗಡದಲ್ಲಿ ಅತೀ ಎತ್ತರದ ರಾಷ್ಟ್ರಧ್ವಜ ಇದೆ ಇದೇ ಮಾದರಿಯಲ್ಲಿ ರಾಷ್ಟ್ರದಲ್ಲಿಯೇ ಅತೀ ಎತ್ತರವಾದ ರಾಷ್ಟ್ರಧ್ವಜ ಬೆಳಗಾವಿಯ ಕಿಲ್ಲಾ ಕೆರೆಯಲ್ಲಿ ಹಾರಾಡಲಿದೆ ಹೈದ್ರಾಬಾದಿನ ಕೆರೆಯಲ್ಲಿ ಬೃಹತ್ತ …

Read More »

ಸಮಾನ ಶಿಕ್ಷಣ ನೀತಿ ಜಾರಿಗೆ ಚಿಂತನೆ-ತನ್ವೀರ ಸೇಠ

ಬೆಳಗಾವಿ-ಎಲ್ಲ ಮಕ್ಕಳಿಗೂ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ಸಿಗಬೇಕು ಎನ್ನುವದು ಸರ್ಕಾರದ ಸಂಕಲ್ಪವಾಗಿದೆ ಅದಕ್ಕಾಗಿ ರಾಜ್ಯದಲ್ಲಿ ಸಮಾನ ಶಧಿಕ್ಷಣ ನೀತಿ ಜಾರಿಗೆ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ ತಿಳಿಸಿದ್ದಾರೆ ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನವ್ಹೆಂಬರ ಒಂದು ರಾಜ್ಯೋತ್ಸವದ ದಿನದಂದು ಒಂದು ಹೊಸ ವಿಧಾನಕ್ಕೆ ಚಾಲನೆ ನೀಡಲಿದ್ದೇವೆ.ಖಾಸಗಿ ಕಂಪನಿಗಳ …

Read More »

ಜಲ ಮಂಡಳಿಯ ಹೊಸ ಆಫರ್.. ನಲ್ಲಿ.. ನೀರಿನ ಜೊತೆಗೆ ಎರೆ ಹುಳ ಫ್ರೀ..!

ಬೆಳಗಾವಿ-ಬೆಳಗಾವಿ ಕುಡಿಯುವ ನೀರು ಸರಬರಾಜು ಮಂಡಳಿ ಈಗ ಕುಡಿಯುವ ನೀರಿನ ಜೊತೆಗೆ ಎರೆಹುಳಗಳನ್ನು ಸರಬರಾಜು ಮಾಡುತ್ತಿದೆ ನಗರದ ವಿಜಯನಗರ ಬಡಾವಣೆಯಲ್ಲಿ ನಲ್ಲಿಗಳಲ್ಲಿ ನೀರಿನ ಜೊತೆಗೆ ಎರೆ ಹುಳಗಳು ಬರುತ್ತಿದ್ದು ಇಲ್ಲಿಯ ಜನ ಹೈರಾಣಾಗಿದ್ದಾರೆ ಜಲಮಂಡಳಿ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಯಾವತ್ತೂ ತೆಲೆ ಕೆಡಿಸಿಕೊಂಡಿಲ್ಲ ನೀರು ಕೊಡಿ ಅಂತಾ ಜನ ಕೇಳಿದ್ರೆ ಮಂಡಳಿ ಎರೆ ಹುಳಗಳನ್ನು ಬಿಡುತ್ತಿದ್ದು ಬುಧವಾರ ಬೆಳಿಗ್ಗೆ ವಿಜಯ ನಗರದ ನಿವಾಸಿಗಳಿಗೆ ನಲ್ಲಿ ನೀರಿನ ಜೊತೆಗೆ ಎರೆ …

Read More »

ಬೆಳಗಾವಿ ವಿಟಿಯು ಕುಲಪತಿ ಹುದ್ದೆಗೆ 80 ಜನ ಆಕಾಂಕ್ಷಿಗಳು

ಬೆಳಗಾವಿ-ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯ ಆಗಿರುವ ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲದ ಕುಲಪತಿ ಹುದ್ದೆಗೆ ಒಟ್ಟು 80ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಇದೇ ವಾರದಲ್ಲಿ ಕುಲಪತಿ ನೇಮಕ ಆಗಲಿದೆ ಆರ್ಥಿಕವಾಗಿ ಬಲಾಡ್ಯವಾಗಿರುವ ಬೆಳಗಾವಿಯ ವಿಟಿಯು ಕುಲಪತಿ ಹುದ್ದೆಗೆ ಇದೇ ಮೊದಲ ಬಾರಿ 80 ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ ಕುಲಪತಿ ಹುದ್ದೆಗೆ ಬಂದಿರುವ ಅರ್ಜಿಗಳನ್ನು ಪರಶೀನೆ ಮಾಡುವ ಶೋಧನಾ ಸಮೀತಿ 80 ಜನರಲ್ಲಿ ಎಂಟು ಜನರ ಹೆಸರಗಳನ್ನು …

Read More »

ಪ್ರತಿಷ್ಠಾಪಣೆಗೊಳ್ಳುವ ಮೊದಲೇ ವಿಸರ್ಜನೆಗೊಂಡ ವಿನಾಯಕ

ಬೆಳಗಾವಿ-ಬೆಳಗಾವಿ ನಗರದ ಶ್ರೀ ನಗರದಲ್ಲಿ ಸೋಮವಾರ ರಾತ್ರಿ ಶ್ರೀ ಗಣೇಶನ ಮೂರ್ತಿಯನ್ನು ಅಲ್ಲಿಯ ಸಾರ್ವಜನಿಕ ಗಣೇಶ ಉತ್ಸವ ಮಂಡಳದವರು ಪ್ರತಿಷ್ಠಾಪಿಸಲು ತಂದಾಗ ಮೂರ್ತಿ ವೀರೂಪಗೊಂಡ ಹಿನ್ನಲೆಯಲ್ಲಿ ಮಂಡಳದವರು ಮೂರ್ತಿಯನ್ನು ಪ್ರತಿಷ್ಠಾಪಣೆ ಮಾಡದೇ ಈ ಮೂರ್ತಿಯನ್ನು ಮಂಗಳವಾರ ಮಧ್ಯಾಹ್ನ 12 ಘಂಟೆಗೆ ನಗರದ ಕಿಲ್ಲಾ ಕೆರೆಯಲ್ಲಿ ವಿಸರ್ಜನೆ ಮಾಡಿದ ಘಟಣೆ ನಡೆದಿದೆ ವಿರೂಪಗೊಂಡ ಮೂರ್ತಿಯನ್ನು ಮಂಗಳವಾರ ಮಧ್ಯಾಹ್ನ ನಗರದ ಕಿಲ್ಲಾ ಕೆರೆಯಲ್ಲಿ ವಿಸರ್ಜನೆ ಮಾಡಿದ ಶ್ರೀ ನಗರದ ಸಾರ್ವಜನಿಕ ಗಣೇಶ ಮಂಡಳದ …

Read More »

ಕರಡಿ ದಾಳಿ ಓರ್ವನಿಗೆ ಗಂಭೀರ ಗಾಯ

ಬೆಳಗಾವಿ- ಸಮೀಪದ ಚಂದಗಡ ತಾಲೂಕಿನ ಗ್ರಾಮವೊಂದರಲ್ಲಿ ಕರಡಿಯೊಂದು ದಾಳಿ ಮಾಡಿದ್ದು ಮಾರುತಿ ಲಕ್ಷ್ಮಣ ದೇವನಿ ಎಂಬಾತ ರೈತ ಗಂಭೀರವಾಗಿ ಗಾಯಗೊಂಡಿದ್ದಾನೆ ಆತನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಢೋಂಗಿ ಬಾಬಾ ಪೋಲಿಸರ ವಶಕ್ಕೆ ಬೆಳಗಾವಿ ನಗರದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮುಖ ನೋಡಿ ಭವಿಷ್ಯ ಹೇಳುವದಾಗಿ ಜನರನ್ನು ವಂಚಿಸುತ್ತಿದ್ದ ಭವಿಷ್ಯಗಾರನೊಬ್ಬ ಕಾಕತಿ ಪೋಲಿಸರ ಅತಿಥಿಯಾಗಿದ್ದಾನೆ ಕಾರ್ಮಿಕನಿಗೆ ಗಾಯ ಸಮೀಪದ ಕಾಕತಿ ಗ್ರಾಮದಲ್ಲಿ ನಿರ್ಮಾಣ ವಾಗುತ್ತಿರುವ ಫಾಯ್ ಸ್ಟಾರ್ ಹೊಟೆಲ್ …

Read More »

ಬೆಳಗಾವಿ ನಗರಕ್ಕೆ ಶಿಕ್ಷಣ ಸಚಿವ ತನ್ವೀರ್ ಸೇಠ

ಬೆಳಗಾವಿ- ಶಿಕ್ಷಣ ಸಚಿವ ತನ್ವೀರ್ ಸೇಠ ಅವರು ಮಂಗಳವಾರ ರಾತ್ರಿ ಬೆಳಗಾವಿಗೆ ಆಗಮಿಸಿದ್ದು ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಬುಧವಾರ ಬೆಳಿಗ್ಗೆ 11-00 ಘಂಟೆಯಿಂದ ನಗರದ ಸಕ್ರ್ಯಟ್ ಹೌಸ್ ನಲ್ಲಿ ಸಾರ್ವಜನಿಕರಿಮದ ಅಹವಾಲು ಸ್ವಿಕರಿಸಲಿದ್ದಾರೆ ನಂತರ ಮಧ್ಯಾಹ್ನ ಮೂರು ಘಂಟೆಗೆ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಶೀಲನೆ ನಡೆಸಲಿದ್ದಾರೆ

Read More »

ಗೋವಾ, ಮಹಾರಾಷ್ಟ್ರ ಸಿಎಂ ಗಳಿಗೆ ಕರ್ನಾಟಕದ ಲವ್ ಲೆಟರ್

ಬೆಳಗಾವಿ-ಮಹಾದಾಯಿ ಕಳಸಾ ಬಂಡೂರಿ ನಾಲಾ ಯೋಜನೆಗಳ ಕುರಿತು ಮಹಾರಾಷ್ಟ್ರ ಹಾಗು ಗೋವಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧರಿಸಿದ್ದು ಈ ಕರಿತು ಊಭಯ ರಾಜ್ಯಗಳಿಗೆ ಪತ್ರ ಬರೆದು ಮಾತುಕತೆಗೆ ಸಮಯ ನಿಗದಿ ಮಾಡುವಂತೆ ಕೋರಲಾಗಿದೆ ಮುಖ್ಯಮಂತ್ರಿ ಸಿದಧರಾಮಯ್ಯನವರು ಊಭಯ ರಾಜ್ಯಗಳಿಗೆ ಬರೆದಿರುವ ಈ ಅಪರೂಪದ ಪತ್ರ ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಲಭ್ಯವಾಗಿದೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಊಭಯ ರಾಜ್ಯಗಳಿಗೆ ಪತ್ರ ಬರೆದು ಆಯಾ ರಾಜ್ಯಗಳ …

Read More »